HomeದಿಟನಾಗರFact Check: ಬುರ್ಖಾಧಾರಿ ಮಹಿಳೆಯಿಂದ ಬಾಲಕನ ಅಪಹರಣವೆಂದು ಸುಳ್ಳು ವಿಡಿಯೋ ಹಂಚಿಕೆ

Fact Check: ಬುರ್ಖಾಧಾರಿ ಮಹಿಳೆಯಿಂದ ಬಾಲಕನ ಅಪಹರಣವೆಂದು ಸುಳ್ಳು ವಿಡಿಯೋ ಹಂಚಿಕೆ

- Advertisement -
- Advertisement -

ಬುರ್ಖಾಧಾರಿ ಮಹಿಳೆಯೊಬ್ಬರು ರಸ್ತೆ ಬದಿ ಕುಳಿತಿದ್ದ ಬಾಲಕನನ್ನು ಅಪಹರಿಸಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸುಮಾರು 28 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಬುರ್ಖಾಧಾರಿ ಮಹಿಳೆ ಮತ್ತೊಬ್ಬನ ಸಹಾಯದೊಂದಿಗೆ ಬಾಲಕನನ್ನು ಎತ್ತಿ ಆಟೋದಲ್ಲಿ ಹಾಕಿಕೊಂಡು ಕರೆದೊಯ್ದ ದೃಶ್ಯವಿದೆ. ಇದನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ದ್ವೇಷ ಹರಡುವ ಪ್ರಯತ್ನ ಮಾಡಲಾಗಿದೆ.

‘ನಾವು ಎಲ್ಲಾ ಕಡೆಯಿಂದಲೂ ಎಚ್ಚರವಾಗಿರಬೇಕು’ ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗ್ತಿದೆ.

‘ಅಶುತೋಷ್ ಸಿಂಗ್ ಪಾಮರ್’ ಎಂಬ ಫೇಸ್‌ಬುಕ್ ಬಳಕೆದಾರ ಈ ವಿಡಿಯೋ ಹಂಚಿಕೊಂಡಿದ್ದು, ” ನಾವು ನಾಲ್ಕೂ ಕಡೆಗಳಿಂದ ಎಚ್ಚರವಾಗಿರಬೇಕು. ಅಪಾಯ ನಾವು ಊಹಿಸದಕ್ಕಿಂತ ದೊಡ್ಡದಾಗಿರುತ್ತದೆ” ಎಂದು ಬರೆದುಕೊಂಡಿದ್ದಾರೆ.

ಸದಾ ಕೋಮು ದ್ವೇಷದ ಸುದ್ದಿಗಳನ್ನೇ ಹರಡುವ ಸುದರ್ಶನ್‌ ನ್ಯೂಸ್‌ನ ಸಂತೋಷ್ ಚೌವ್ಹಾಣ್ ಕೂಡ ಈ ವಿಡಿಯೋ ಹಂಚಿಕೊಂಡಿದ್ದು, “ನಾವು ಇಂತಹ ವ್ಯಕ್ತಿಗಳಿಂದ ಮಕ್ಕಳ ಮೇಲೆ ನಿಗಾ ಇಡಬೇಕು” ಎಂದು ಬರೆದುಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ಮೇಲೆ ತಿಳಿಸಿದ ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾವು ಅದರ ಮೂಲವನ್ನು ಹುಡುಕಾಡಿದ್ದೇವೆ. ಮೊದಲು ಗೂಗಲ್‌ನಲ್ಲಿ ಈ ರೀತಿಯ ಘಟನೆಯ ಸುದ್ದಿ ಪ್ರಕಟಗೊಂಡಿದೆಯೇ ಎಂದು ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಜುಲೈ 7,2022ರಂದು ‘ದಿ ಕ್ವಿಂಟ್ ವೆಬ್‌ಸೈಟ್‌’ ಈ ಕುರಿತು ಸುದ್ದಿ ಪ್ರಕಟಿಸಿರುವುದು ಕಂಡು ಬಂದಿದೆ. “Video Showing Burqa-Clad Woman Kidnapping Child Is Staged and From Egypt” ಎಂಬ ಶೀರ್ಷಿಕೆಯ ಸುದ್ದಿಯಲ್ಲಿ, ಬುರ್ಖಾಧಾರಿ ಮಹಿಳೆ ಬಾಲಕನನ್ನು ಅಪಹರಿಸಿದ್ದಾರೆ ಎನ್ನಲಾದ ವಿಡಿಯೋ ಈಜಿಫ್ಟ್‌ ದೇಶದ್ದು ಮತ್ತು ಇದು ಸ್ಕ್ರಿಪ್ಟೆಡ್ ವಿಡಿಯೋ ಎಂದು ತಿಳಿಸಲಾಗಿದೆ.

ದಿ ಕ್ವಿಂಟ್ ಸುದ್ದಿ ಲಿಂಕ್ 

ನಾವು ಇನ್ನಷ್ಟು ಸುದ್ದಿ ಮೂಲಗಳನ್ನು ಹುಡುಕಿದಾಗ, ಈಜಿಫ್ಟ್‌ನ ಮಾಧ್ಯಮಗಳು ಈ ವಿಡಿಯೋ ಕುರಿತು ಸುದ್ದಿ ಮಾಡಿರುವುದು ಕಂಡು ಬಂದಿದೆ.

ಈಜಿಫ್ಟ್‌ನ ‘El Watan’ಎಂಬ ವೆಬ್‌ಸೈಟ್‌ 28 ಜೂನ್‌ 2022ರಂದು ಈ ವಿಡಿಯೋ ಕುರಿತು ಸುದ್ದಿ ಪ್ರಕಟಿಸಿದ್ದು, ಈಜಿಫ್ಟ್‌ನ ಸೋಹಾಗ್‌ ಗೌವರ್ನರೇಟ್‌ ಬುರ್ಖಾಧಾರಿ ಮಹಿಳೆ ಬಾಲಕನನ್ನು ಅಪಹರಿಸಿದ ರೀತಿಯ ವಿಡಿಯೋ ಕ್ರಿಯೇಟ್‌ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಬರೆಯಲಾಗಿದೆ.

ಅಲ್‌ ವತನ್ ಸುದ್ದಿಯ ಲಿಂಕ್ 

ಈಜಿಫ್ಟ್‌ನ ಆಂತರಿಕ ವ್ಯವಹಾರಗಳ ಸಚಿವಾಲಯ 29 ಜೂನ್ 2022ರಂದು ವೈರಲ್‌ ವಿಡಿಯೋವನ್ನು ಹಂಚಿಕೊಂಡಿದ್ದು, ಸೋಹಾಗ್‌ ಗೌವರ್ನರೇಟ್‌ನಲ್ಲಿ ಬುರ್ಖಾಧಾರಿ ಮಹಿಳೆಯೊಬ್ಬರು ಚುಚ್ಚುಮದ್ದು ಚುಚ್ಚಿ ಬಾಲಕನನ್ನು ಅಪಹರಿಸಿದ್ದಾರೆ ಎಂಬ ವಿಡಿಯೋ ಹರಿದಾಡುತ್ತಿದೆ. ಈ ಕುರಿತು ಪರಿಶೀಲನೆ ನಡೆಸಿದಾಗ ಇದು ಕ್ರಿಯೇಟೆಡ್ ವಿಡಿಯೋ ಎಂದು ಗೊತ್ತಾಗಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಬುರ್ಖಾಧಾರಿ ಮಹಿಳೆ ಎನ್ನಲಾದ ವ್ಯಕ್ತಿಯನ್ನು ನೀವು ವಿಡಿಯೋದಲ್ಲಿ ನೋಡಬಹುದು ಎಂದು ತಿಳಿಸಿದೆ.

ಈಜಿಫ್ಟ್‌ ಆಂತರಿಕ ವ್ಯವಹಾರಗಳ ಸಚಿವಾಲಯದ ಇನ್‌ಸ್ಟಾಗ್ರಾಂ ಲಿಂಕ್ 

ಲಭ್ಯ ಮೂಲಗಳ ಮೂಲಕ ನಾವು ನಡೆಸಿದ ಪರಿಶೀಲನೆಯಲ್ಲಿ ವೈರಲ್ ವಿಡಿಯೋ ಭಾರತದಲ್ಲ ಈಜಿಫ್ಟ್‌ನದ್ದು. ಸಾಮಾಜಿಕ ಜಾಲತಾಣದ ಲೈಕ್‌, ಕಮೆಂಟ್‌ಗೋಸ್ಕರ ಈಜಿಫ್ಟ್‌ನ ಸೋಹಾಗ್‌ ಗೌವರ್ನರೇಟ್‌ನ ನಾಲ್ವರು ಯುವಕರು ಸೃಷ್ಟಿಸಿದ ವಿಡಿಯೋ ಇದು ಎಂದು ತಿಳಿದು ಬಂದಿದೆ. ಅಲ್ಲದೆ, ಈ ವಿಡಿಯೋ ಈ ಹಿಂದೆಯೇ ಸುಳ್ಳು ಹೆಸರಿನಲ್ಲಿ ವೈರಲ್ ಆಗಿತ್ತು. ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: Fact Check: ನೌಕಾಪಡೆ ಸಿಬ್ಬಂದಿ ನೀರಿನಾಳದಲ್ಲಿ ಕೇಸರಿ ಧ್ವಜ ಹಾರಿಸಿದ್ದು ನಿಜಾನಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...