HomeದಿಟನಾಗರFact Check: ನೌಕಾಪಡೆ ಸಿಬ್ಬಂದಿ ನೀರಿನಾಳದಲ್ಲಿ ಕೇಸರಿ ಧ್ವಜ ಹಾರಿಸಿದ್ದು ನಿಜಾನಾ?

Fact Check: ನೌಕಾಪಡೆ ಸಿಬ್ಬಂದಿ ನೀರಿನಾಳದಲ್ಲಿ ಕೇಸರಿ ಧ್ವಜ ಹಾರಿಸಿದ್ದು ನಿಜಾನಾ?

- Advertisement -
- Advertisement -

ಭಾರತೀಯ ನೌಕಾಪಡೆ ಸಿಬ್ಬಂದಿ ಹನುಮಂತನ ಚಿತ್ರ ಇರುವ ಕೇಸರಿ ಧ್ವಜವನ್ನು ನೀರಿನಾಳದಲ್ಲಿ ಪ್ರದರ್ಶಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೋ ಹಂಚಿಕೊಂಡಿರುವ ಹಲವು ಎಕ್ಸ್‌, ಫೇಸ್‌ಬುಕ್ ಬಳಕೆದಾರರು “ಭಾರತೀಯ ನೌಕಾಪಡೆಯಿಂದ, ಜೈ ಶ್ರೀರಾಮ್”ಎಂದು ಬರೆದುಕೊಂಡಿದ್ದಾರೆ.

ಅಯೋಧ್ಯೆ ರಾಮಮಂದಿರದ ಉದ್ಘಾಟನೆಯ ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ.

ಫ್ಯಾಕ್ಟ್‌ಚೆಕ್ : ಮೇಲೆ ತಿಳಿಸಿದ ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಪ್ರಯತ್ನವನ್ನು ನಾನುಗೌರಿ.ಕಾಂ ಮಾಡಿದೆ. ಇದಕ್ಕಾಗಿ ನಾವು ಮೊದಲು “Scuba Diver Hanuman Flag” ಎಂದು ಕೀ ವರ್ಡ್‌ ಸರ್ಚ್‌ ಮಾಡಿದ್ದೇವೆ. ಈ ವೇಳೆ ಜನವರಿ 19,2024ರಂದು ಪ್ರೆಸ್‌ ಟ್ರಸ್ಟ್‌ ಆಫ್ ಇಂಡಿಯಾ (ಪಿಟಿಐ) ಈ ಎಕ್ಸ್‌ನಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಿರುವುದು ಕಂಡು ಬಂದಿದೆ.

ಗುಜರಾತ್‌ನ ಶಿವಾಜಿಪುರ ಬೀಚ್‌ನಲ್ಲಿ ಸ್ಕೂಬಾ ಡೈವರ್ ಒಬ್ಬರು ನೀರಿನಾಳದಲ್ಲಿ ಹನುಮನ ಚಿತ್ರ ಇರುವ ಕೇಸರಿ ಧ್ವಜ ಹಾರಿಸಿರುವುದು ಎಂದು ಪಿಟಿಐ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಭಾರತೀಯ ನೌಕಾಪಡೆ ಕೇಸರಿ ಧ್ವಜ ಹಾರಿಸಿದೆ ಎಂದು ಹೇಳಿಲ್ಲ.

ಜನವರಿ 19,2024ರಂದು ‘ಗುಜರಾತಿ ಜಾಗರಣ್‌’ ವೆಬ್‌ಸೈಟ್‌ ಕೂಡ ಇದೇ ವಿಡಿಯೋವನ್ನು ಪ್ರಕಟಿಸಿದ್ದು, ಕರ್ಮಾನ್‌ಬಾ ಚಮ್ದಿಯಾ ಎಂಬ ಎಂಬ ಸ್ಕೂಬಾ ಡೈವರ್ ಧ್ವಜ ಹಾರಿಸಿದ್ದಾರೆ ಎಂದು ವರದಿ ಮಾಡಿದೆ. ಎಲ್ಲಿಯೂ ಭಾರತೀಯ ನೌಕಾಪಡೆ ಧ್ವಜ ಹಾರಿಸಿದ್ದಾಗಿ ಹೇಳಿಲ್ಲ.

ವಿವಿಧ ಮೂಲಗಳ ಮಾಹಿತಿ ಅನುಸರಿಸಿ ನಾವು ನಡೆಸಿದ ಪರಿಶೀಲನೆಯಲ್ಲಿ ನೀರಿನಾಳದಲ್ಲಿ ಕೇಸರಿ ಧ್ವಜ ಹಾರಿಸಿದ್ದು ಭಾರತೀಯ ನೌಕಾಪಡೆಯಲ್ಲ ಬದಲಾಗಿ ಒಬ್ಬರು ಸ್ಕೂಬಾ ಡೈವರ್‌ ಎಂಬುವುದು ಖಚಿತವಾಗಿದೆ.

ಇದನ್ನೂ ಓದಿ : Fact Check: ರಾಮ ಭಕ್ತರ ಮೇಲೆ ದಾಳಿ ಮಾಡಿದವರನ್ನು ಪೊಲೀಸರು ಮನೆಗೆ ನುಗ್ಗಿ ಎಳೆದೊಯ್ದಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...