Homeಮುಖಪುಟಒಂದೇ ದಿನ 61 ಜನ ಗುಣಮುಖ: ಕೇರಳದಲ್ಲೀಗ ಕೇವಲ 34 ಪ್ರಕರಣಗಳು!

ಒಂದೇ ದಿನ 61 ಜನ ಗುಣಮುಖ: ಕೇರಳದಲ್ಲೀಗ ಕೇವಲ 34 ಪ್ರಕರಣಗಳು!

ಸತತ ಮೂರು ದಿನಗಳಿಂದ ಶೂನ್ಯ ಕೊರೊನಾ ಪ್ರಕರಣಗಳನ್ನು ದಾಖಲಿಸುವ ಮೂಲಕ ಕೇರಳ ಹೊಸ ದಾಖಲೆ ಸೃಷ್ಟಿಸಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಮಾದರಿ ರಾಜ್ಯವಾಗಿದೆ.

- Advertisement -
- Advertisement -

ದೇಶದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳಿದ್ದ ಕೇರಳದಲ್ಲಿ ಸತತ ಮೂರನೇ ದಿನ ಯಾವುದೇ ಕೊರೊನಾ ಪಾಸಿಟಿವ್‌ ಪ್ರಕರಣ ದಾಖಲಾಗಿಲ್ಲ. ಅಷ್ಟು ಮಾತ್ರವಲ್ಲದೇ ಇಂದು 61 ಜನರು ಕೊರೊನಾದಿಂದ ಗುಣಮುಖ ಹೊಂದಿ ಡಿಸ್ಚಾರ್ಜ್‌ ಆಗಿದ್ದಾರೆ. ಈಗ ಸದ್ಯಕ್ಕೆ ಅಲ್ಲಿರುವ ಸಕ್ರಿಯ ಸೋಂಕಿತರು ಕೇವಲ 34 ಜನ.

ಸೋಮವಾರ ಕೇರಳದಲ್ಲಿ ಸಂಗ್ರಹಿಸಿದ ಶಂಕಿತರ ಎಲ್ಲಾ ಮಾದರಿಗಳು ಪರೀಕ್ಷೆಯಲ್ಲಿ ಋಣಾತ್ಮಕವಾಗಿ ವರದಿಯಾಗುವ ಮೂಲಕ ಕೊರೊನಾ ವಿರುದ್ದ ಹೋರಾಟದಲ್ಲಿ ಕೇರಳ ಮಹತ್ತರವಾದ ಮೈಲಿಗಲ್ಲು ಸಾಧಿಸಿದೆ.

ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 61 ಮಂದಿ ಸೋಮವಾರ ರೋಗದಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಕೇವಲ 34 ಜನರು ಮಾತ್ರ ಉಳಿದಿದ್ದಾರೆ ಎಂದು ಹೇಳಿದ್ದಾರೆ.

ಈವರೆಗೆ ಕೇರಳದಲ್ಲಿ 499 ಕೊರೊನಾ ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ 462 ಜನರು ಗುಣಮುಖರಾಗಿದ್ದಾರೆ. ಮೂವರು ಮರಣ ಹೊಂದಿದ್ದಾರೆ. ಒಟ್ಟು ವೀಕ್ಷಣೆಯಲ್ಲಿರುವ 21,724 ಜನರಲ್ಲಿ, 213,52 ಜನರನ್ನು ಮನೆ ಸಂಪರ್ಕತಡೆಯಲ್ಲಿ ಇಡಲಾಗಿದ್ದು ಉಳಿದ 372 ಜನರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕೊರೊನಾ ಪರೀಕ್ಷೆಗಳಿಗೆ ಕಳುಹಿಸಲಾದ ಒಟ್ಟು 33,010 ಮಾದರಿಗಳಲ್ಲಿ 32,315 ಋಣಾತ್ಮಕವಾಗಿವೆ.

ಕೇರಳ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ಪ್ರಕರಣಗಳು ವರದಿಯಾಗಿದ್ದವು, ಆದರೆ ಇತ್ತೀಚಿನ ಸುದ್ದಿಯಂತೆ ತಿರುವನಂತಪುರಂ, ಕೋಳಿಕೋಡ್, ಮಲಪ್ಪುರಂ ಮೂರು ಜಿಲ್ಲೆಗಳು ಕೊರೊನಾ ಮುಕ್ತ ಜಿಲ್ಲೆಗಳಾಗಿ ಘೋಣೆಯಾಗಿವೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳದಲ್ಲಿ 84 ಹಾಟ್‌ಸ್ಪಾಟ್‌ಗಳಿದ್ದು, ಸೋಮವಾರ ಹಾಟ್‌ಸ್ಪಾಟ್ ಪಟ್ಟಿಗೆ ಯಾವುದೇ ಹೊಸ ಸೇರ್ಪಡೆ ಮಾಡಲಿಲ್ಲ ಎಂದಿರುವ ಅವರು, ಭಾರತದಾದ್ಯಂತ 1.65 ಲಕ್ಷಕ್ಕೂ ಹೆಚ್ಚು ಜನರು ಕೇರಳಕ್ಕೆ ಮರಳಲು ಬಯಸುತ್ತಿದ್ದು, ಇದರಲ್ಲಿ ಕರ್ನಾಟಕವೂ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ಇದುವರೆಗೆ 28,272 ಜನರು ಪಾಸ್‌ಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈವರೆಗೆ 5,470 ಪಾಸ್‌ಗಳನ್ನು ವಿತರಿಸಲಾಗಿದೆ ಎನ್ನಲಾಗಿದೆ. ಅಲ್ಲದೆ ಸೋಮವಾರ ಮಧ್ಯಾಹ್ನದವರೆಗೆ 515 ಜನರು ಕೇರಳ ತಲುಪಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಕೇರಳ ಅಂತರರಾಜ್ಯ ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲುಗಳನ್ನು ವ್ಯವಸ್ಥೆಗೊಳಿಸಿದ್ದು ಅದರಲ್ಲೆ, ಭಾರತದ ಇತರ ಭಾಗಗಳಲ್ಲಿ ಸಿಲುಕಿರುವ ಕೇರಳಿಗರನ್ನು ಮರಳಿ ತರಲು ಈ ರೈಲುಗಳನ್ನು ಬಳಸಬೇಕು ಎಂದು ಪಣರಾಯಿ ತಿಳಿಸಿದ್ದಾರೆ.

ಕೇರಳದಿಂದ ಸೋಮವಾರ 13,518 ಅಂತರರಾಜ್ಯ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿದ್ದಾರೆ.


ಇದನ್ನೂ ಓದಿ: ಕೊರೊನಾ ವಿರುದ್ಧದ ಸಮರದಲ್ಲಿ ಕೇರಳ ಸರ್ಕಾರ ಮತ್ತು ಜನತೆಯ ಪ್ರಬುದ್ಧತೆ


ವಿಡಿಯೊ ನೋಡಿ: ಸದ್ದು , ಈ ಸುದ್ದಿಗಳೇನಾಗಿದೆ ??


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗೋ: 5 ತಿಂಗಳಲ್ಲಿ 600 ಕ್ಕೂ ಹೆಚ್ಚು ಜನರಿಗೆ ಮರಣದಂಡನೆ; 1,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ; ವಿಶ್ವಸಂಸ್ಥೆ 

ಆಫ್ರಿಕಾ ಖಂಡದಲ್ಲಿ ಎರಡನೇ ಅತಿ ದೊಡ್ಡ ದೇಶವಾಗಿರುವ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವು ಹದಗೆಡುತ್ತಿರುವ ಮಾನವೀಯ ಮತ್ತು ಮಾನವ ಹಕ್ಕುಗಳ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಶಸ್ತ್ರ ಗುಂಪುಗಳು, ವಿದೇಶಿ ಹಸ್ತಕ್ಷೇಪ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲಿನ...

60 ದಿನಗಳಿಗಾಗುವಷ್ಟು ಕಚ್ಚಾ ತೈಲ ಸಂಗ್ರಹವಿದೆ, 1 ತಿಂಗಳ ಎಲ್‌ಪಿಜಿ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ: ಕೇಂದ್ರ ಸರ್ಕಾರ

ಭಾರತದ ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಪೂರೈಕೆ ಪರಿಸ್ಥಿತಿ ಸಂಪೂರ್ಣವಾಗಿ ಸುರಕ್ಷಿತ ಹಾಗೂ ನಿಯಂತ್ರಣದಲ್ಲಿದೆ ಎಂದು ಸರ್ಕಾರ ಗುರುವಾರ ಪ್ರತಿಪಾದಿಸಿದೆ. "ಉದ್ದೇಶಪೂರ್ವಕವಾಗಿ ದುರುದ್ದೇಶಪೂರಿತ, ಸಂಘಟಿತ ತಪ್ಪು ಮಾಹಿತಿಯ ಅಭಿಯಾನದಿಂದ ನಿವಾಸಿಗಳು ಮೋಸಹೋಗಬಾರದು" ಎಂದು ಎಚ್ಚರಿಸಿದೆ. "ಭಾರತವು...

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್ ನೋಟಿಸ್

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ದಾಖಲಾಗಿರುವ ಮುಡಾ ಭೂ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ 'ಬಿ ರಿಪೋರ್ಟ್' / ಮುಕ್ತಾಯ ವರದಿಯನ್ನು ವಿಚಾರಣಾ ನ್ಯಾಯಾಲಯ ಸ್ವೀಕರಿಸುವುದನ್ನು ಪ್ರಶ್ನಿಸಿ ಸ್ನೇಹಮಯಿ...

ದೆಹಲಿ| ಹೊಸ ಮಸೂದೆ ವಿರೋಧಿಸಿ ಟ್ರಾನ್ಸ್‌ಜೆಂಡರ್ ಸಮುದಾಯದಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ

ಹೊಸದಾಗಿ ಪರಿಚಯಿಸಲಾದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು. "ಹೊಸ ಮಸೂದೆ ನಮ್ಮ ಹಕ್ಕುಗಳು ಮತ್ತು ಘನತೆಯನ್ನು...

ವಂದೇ ಭಾರತ್ ಪ್ರಯಾಣಿಕನಿಗೆ ಕೊಟ್ಟ ಮೊಸರಿನಲ್ಲಿ ಜೀವಂತ ಹುಳುಗಳು ಪತ್ತೆ; ಮಾರಾಟಗಾರನಿಗೆ ದಂಡ

ಪಾಟ್ನಾ-ಟಾಟಾನಗರ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕನೊಬ್ಬನಿಗೆ ನೀಡಿದ ಪ್ಯಾಕ್ ಮಾಡಿದ ಮೊಸರಿನಲ್ಲಿ ಹುಳುಗಳು ಕಂಡುಬಂದ ನಂತರ ರೈಲ್ವೆ ಇಲಾಖೆ ಮಾರಾಟಗಾರನ ನಡುವಿನ ಒಪ್ಪಂದವನ್ನು ರದ್ದುಗೊಳಿಸಿದ್ದಿ, ಕಂಪನಿಗೆ 50 ಲಕ್ಷ ರೂ. ದಂಡ...

ಮಹಾರಾಷ್ಟ್ರ: ಪ್ರತಿಷ್ಠಿತ ಶಾಲೆಯಲ್ಲಿ ಶಿಕ್ಷಕಿಗೆ ಲೈಂಗಿಕ ಕಿರುಕುಳ ಆರೋಪ: ಶಾಲಾ ಟ್ರಸ್ಟಿಯ ಮಗ ಬಂಧನ

ಮಹಾರಾಷ್ಟ್ರದ ಡೊಂಬಿವ್ಲಿಯ ಸಾಗವ್ ಪ್ರದೇಶದ ಪ್ರಸಿದ್ಧ ಶಾಲೆಯಲ್ಲಿ ಶಾಲಾ ಟ್ರಸ್ಟಿಯ ಮಗ ಶಿಕ್ಷಕಿಯೊಬ್ಬರಿಗೆ ಅಶ್ಲೀಲ ಸಂದೇಶಗಳು ಮತ್ತು ವಿಡಿಯೋಗಳನ್ನು ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅದಲ್ಲದೇ ಶಿಕ್ಷಕಿಯನ್ನು ದೈಹಿಕ ಸಂಬಂಧಕ್ಕಾಗಿ ಪೀಡಿಸಿರುವ ಆರೋಪದ ಮೇಲೆ...

ಒಂದೂವರೆ ವರ್ಷದ ಪ್ಯಾಲೆಸ್ತೀನಿಯನ್ ಮಗುವಿಗೆ ಸಿಗರೇಟ್‌ನಿಂದ ಸುಟ್ಟು, ಮೊಳೆ ಚುಚ್ಚಿ ಚಿತ್ರಹಿಂಸೆ ಕೊಟ್ಟ ಇಸ್ರೇಲಿ ಸೈನಿಕರು

ಗಾಝಾದ ಪ್ಯಾಲೆಸ್ತೀನಿಯನ್ ವ್ಯಕ್ತಿಯೊಬ್ಬರಿಂದ ಬಲವಂತವಾಗಿ ತಪ್ಪೊಪ್ಪಿಗೆ ಪಡೆಯಲು, ಅವರ 18 ತಿಂಗಳ ಮಗುವಿಗೆ ಇಸ್ರೇಲಿ ಸೈನಿಕರು ತೀವ್ರ ಚಿತ್ರಹಿಂಸೆ ಕೊಟ್ಟಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ಸೋಮವಾರ (ಮಾ.23) ವರದಿ ಮಾಡಿವೆ. ಮಾರ್ಚ್ 21ರಂದು...

ಇಂಧನ ಕೊರತೆ ವದಂತಿ; ಕಾಶ್ಮೀರದ ಪೆಟ್ರೋಲ್‌ ಬಂಕ್‌ಗಳಲ್ಲಿ ಖರೀದಿಗೆ ಮುಗಿಬಿದ್ದ ಜನ

ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದ ಇಂಧನ ಕೊರತೆಯ ವದಂತಿಗಳು ಹರಡುತ್ತಿದ್ದಂತೆ ಗುರುವಾರ ಕಾಶ್ಮೀರದಾದ್ಯಂತ ಪೆಟ್ರೋಲ್ ಪಂಪ್‌ಗಳು ಭಾರಿ ಜನದಟ್ಟಣೆಯಾಯಿತು; ಭೀತಿಯಿಂದ ಜನ ಖರೀದಿಗೆ ಮುಗಿಬಿದ್ದರು. ಇಂಧನ ಸರಬರಾಜು ಸಾಕಷ್ಟು ಲಭ್ಯವಿದೆ ಎಂದು ಅಧಿಕಾರಿಗಳು...

ರಾಮ ಮಂದಿರವನ್ನು ಎಂದಿಗೂ ವಿರೋಧಿಸಿಲ್ಲ; ಅದಕ್ಕಾಗಿ ದೇಣಿಗೆ ನೀಡಿದ್ದೇನೆ: ದಿಗ್ವಿಜಯ ಸಿಂಗ್

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಗುರುವಾರ ಅಯೋಧ್ಯೆಗೆ ತೆರಳಿ ರಾಮ ಜನ್ಮಭೂಮಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. "ನಾನು ರಾಮಮಂದಿರ ನಿರ್ಮಾಣವನ್ನು ಎಂದಿಗೂ ವಿರೋಧಿಸಿಲ್ಲ, ದೇವಾಲಯ ಟ್ರಸ್ಟ್‌ಗೆ ದೇಣಿಗೆ...

ಮೀಸಲಾತಿ ವಿರೋಧಿ ಹೇಳಿಕೆ: ಖಾಸಗಿ ಆಸ್ಪತ್ರೆಯಲ್ಲಿ ಸೋನಿಯಾ ಗಾಂಧಿ ಚಿಕಿತ್ಸೆ ಬಗ್ಗೆ ಪ್ರಶ್ನಿಸಿದ ಬಿಜೆಪಿ ಸಂಸದನಿಗೆ ಕಾಂಗ್ರೆಸ್ ತಿರುಗೇಟು

ಗುರುವಾರ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆಯನ್ನು ಪ್ರಶ್ನಿಸುವ ಮೂಲಕ ತಮ್ಮ ಮೀಸಲಾತಿ ವಿರೋಧಿ ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಅವರ...