ಮೂರು ದಿನಗಳ ಕೇರಳ ರಾಜ್ಯದ ವಯನಾಡು ಪ್ರವಾಸದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಲಪ್ಪುರಂನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಕೊರೊನಾ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿರುವ ಹಿನ್ನೆಲೆ ತಮ್ಮ ಸಂಸದೀಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡಿದ್ದ ಸಹೋದರಿಯರಿಗೆ ನೆರವಾದರು.
ಕಳೆದ ಮೂರು ದಿನಗಳಲ್ಲಿ, ಕೇರಳ ರಾಜ್ಯದಲ್ಲಿ ಮಲಪ್ಪುರಂನಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ. ಭಾನುವಾರ 1,399, ಶನಿವಾರ 1,519 ಮತ್ತು ಶುಕ್ರವಾರ 1,025 ಪ್ರಕರಣಗಳು ವರದಿಯಾಗಿವೆ.
ಜಿಲ್ಲಾಧಿಕಾರಿಗಳ ಸಭೆ ಬಳಿಕ ರಾಹುಲ್ ಗಾಂಧಿ, ಕಳೆದ ವರ್ಷ ಮಲಪ್ಪುರಂನ ಕವಲಪ್ಪರ ಭೂಕುಸಿತದಲ್ಲಿ ಪೋಷಕರು ಮತ್ತು ಮನೆಯನ್ನು ಕಳೆದುಕೊಂಡಿದ್ದ ಕಾವ್ಯ ಮತ್ತು ಕಾರ್ತಿಕಾ ಎಂಬ ಸಹೋದರಿಯರಿಗೆ ಹೊಸ ಮನೆಯ ಕೀ ಹಸ್ತಾಂತರಿಸಿದರು.
ಇದನ್ನೂ ಓದಿ: ಒಂದು ಸ್ವತಂತ್ರ ಮಾಧ್ಯಮವನ್ನು ನನಗೆ ಕೊಡಿ, ಮರುಕ್ಷಣ ಈ ಸರ್ಕಾರ ಅಧಿಕಾರದಲ್ಲಿರುವುದಿಲ್ಲ: ರಾಹುಲ್ ಗಾಂಧಿ
Shri @RahulGandhi hands over the keys and documents of the new house built for Kavya and Karthika – two sisters who lost their family & their home in the devastating Kavalappara landslide last year. #RahulGandhiInWayanad pic.twitter.com/vLvauixVuG
— Congress (@INCIndia) October 19, 2020
ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರಿ ಮಳೆಯಿಂದಾಗಿ ಮಳಪ್ಪುರಂನ ಕವಲಪ್ಪರ ಮತ್ತು ವಯನಾಡ್ ಜಿಲ್ಲೆಯ ಪುತ್ತುಮಾಲದಲ್ಲಿ ಜರುಗಿದ ಭೂಕುಸಿತಗಳು ಕೇರಳದ ಎರಡು ಪ್ರಮುಖ ಭೂಕುಸಿತಗಳಾಗಿವೆ. ಈ ದುರಂತದಲ್ಲಿ ಕನಿಷ್ಠ 113 ಜನರು ಸಾವನ್ನಪ್ಪಿದ್ದಾರೆ.
ಈ ದುರ್ಘಟನೆಯಲ್ಲಿ ಪೋಷಕರೊಂದಿಗೆ, ಇರಲು ಮನೆ ಕೂಡ ಇಲ್ಲದಂತೆ ಎಲ್ಲವನ್ನು ಕಳೆದುಕೊಂಡಿದ್ದ ಸಹೋದರಿಯರಿಗೆ ರಾಹುಲ್ ಗಾಂಧಿ ಹೊಸ ಮನೆ ನಿರ್ಮಿಸಿಕೊಟ್ಟಿದ್ದು, ಇಂದು ವಯನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯ ಕೀಯನ್ನು ನೀಡಿದ್ದಾರೆ.
ಈ ಹಿಂದೆ ಕೂಡ ರಾಹುಲ್ ಗಾಂಧಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟಿದ್ದ ಸಂತ್ರಸ್ತೆ ನಿರ್ಭಯಾ ಅವರ ಕಿರಿಯ ಸಹೋದರರ ವಿದ್ಯಾಭ್ಯಾಸದ ಖರ್ಚು ನೋಡಿಕೊಂಡಿದ್ದು, ಆತ ಬಯಸಿದಂತೆ ಪೈಲಟ್ ತರಬೇತಿಯನ್ನು ಕೊಡಿಸಿದ್ದರು. ತರಬೇತಿ ಮುಗಿಸಿ ಖಾಸಗಿ ವಿಮಾನಯಾನ ಸಂಸ್ಥೆಗೆ ಕೆಲಸಕ್ಕೆ ಸೇರಿದ್ದಾರೆ.
ಅಂದು ಕೂಡ ನಿರ್ಭಯಾ ಪೋಷಕರು ರಾಹುಲ್ ಗಾಂಧಿಗೆ ಧನ್ಯವಾದ ಹೇಳಿದ್ದರು. ದುಖಃದಿಂದ ಬಳಲುತ್ತಿದ್ದ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ ಎಂದು ತಿಳಿಸಿದ್ದರು.


