Homeಕರೋನಾ ತಲ್ಲಣಸುರಿವ ಮಳೆ, ಸೋರುವ ಟಾರ್ಪಾಲ್‍ಗಳ ನಡುವೆ ಹೈರಾಣಾದ ಬದುಕು: ಭೀಕರ ಸಂಕಷ್ಟದಲ್ಲಿ ಕೊಡಗಿನ ಆದಿವಾಸಿಗಳು

ಸುರಿವ ಮಳೆ, ಸೋರುವ ಟಾರ್ಪಾಲ್‍ಗಳ ನಡುವೆ ಹೈರಾಣಾದ ಬದುಕು: ಭೀಕರ ಸಂಕಷ್ಟದಲ್ಲಿ ಕೊಡಗಿನ ಆದಿವಾಸಿಗಳು

- Advertisement -
- Advertisement -

ಈಗ ಕೊಡಗಿನಲ್ಲಿ ಎಡೆಬಿಡದೇ ಮಳೆ ಸುರಿಯಲು ಶುರುವಾಗಿದೆ. ವಿರಾಜಪೇಟೆ ತಾಲೂಕಿನ ಬಾಳೆಗೋಡುವಿನ ಸರ್ಕಾರಿ ಭೂಮಿಯಲ್ಲಿ ಟಾರ್ಪಾಲ್‍ ಟೆಂಟ್‍ ಹಾಕಿಕೊಂಡು ಬದುಕುತ್ತಿರುವ 25ಕ್ಕೂ ಹೆಚ್ಚು ಆದಿವಾಸಿಗಳ ಕುಟುಂಬಗಳ 150ಕ್ಕೂ ಹೆಚ್ಚು ಸದಸ್ಯರಿಗೆ ಈಗ ಬದುಕೇ ದುರ್ಬರವಾಗಿದೆ.

ಕಳೆದ ವರ್ಷದಿಂದ ಲಾಕ್‍ಡೌನ್‍ ಅವರ ದುಡಿಮೆ ಕಿತ್ತುಕೊಂಡಿದೆ. ಈಗ ಹಸಿವಿನ ಜೊತೆಗೆ, ಮುಗಿಲಿಂದಲೂ, ನೆಲದಿಂದಲೂ ನೀರು ಅವರ ಟೆಂಟ್‍ಗಳನ್ನು ಪ್ರವೇಶಿಸಲು ಆರಂಭಿಸಿದ ಮೇಲೆ ತಮ್ಮ ಮಕ್ಕಳನ್ನು ತಬ್ಬಿಕೊಂಡು ಚಿಂತಾಕ್ರಾಂತರಾಗಿದ್ದಾರೆ.

ಇದ್ದಬದ್ದ ದಿನಸಿಯಲ್ಲಿ ಅಡುಗೆ ಮಾಡಿಕೊಳ್ಳಲೂ ಒದ್ದೆ ನೆಲ ಬಿಡುತ್ತಿಲ್ಲ. ಇವರಿಗೆ ಕನಿಷ್ಠ ಆಹಾರ, ವಸತಿ ಸೌಲಭ್ಯ ಒದಗಿಸಬೇಕಿದ್ದ ಜಿಲ್ಲಾಡಳಿತ, ತಾಲೂಕು ಆಡಳಿತಗಳು ಸರ್ಕಾರಗಳಷ್ಟೇ ಜಡ್ಡುಗಟ್ಟಿ ಹೋಗಿ ಮಾನವೀಯತೆ ಮತ್ತು ಅದಕ್ಕೂ ಮುಖ್ಯವಾಗಿ ತಮ್ಮ ಕರ್ತವ್ಯ ಮರೆತಿವೆ. ಸಂವಿಧಾನ ಒದಗಿಸಿದ ಬದುಕಿನ ಹಕ್ಕನ್ನೇ ಕಿತ್ತುಕೊಳ್ಳುತ್ತಿವೆ.

‘ಮಳೆಯ ನಡುವೆಯೇ ಮೂರು ಪುಟ್ಟ ಮಕ್ಕಳನ್ನು ತಬ್ಬಿಕೊಂಡ ತಾಯಿಯೊಬ್ಬರು, ‘ಸ್ವಲ್ಪ ದಿನದ ಹಿಂದೆ ಬಂದ ಪೊಲೀಸರು, ಆಹಾರದ ವ್ಯವಸ್ಥೆ ಮಾಡಲು ಪಂಚಾಯತಿಗಳಿಗೆ ಹೇಳುವುದಾಗಿ ತಿಳಿಸಿ ಮಾಯವಾದರು. ರೇಷನ್ನೂ ಇಲ್ಲ, ಮಲಗಲು ಜಾಗವೂ ಇಲ್ಲ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರ ಪಕ್ಕದಲ್ಲಿ ನಿಂತಿದ್ದ ಯುವತಿ, ‘ಇಲ್ಲಿ ನಮ್ಮ ಟೆಂಟ್‍ಗಳ ಪಕ್ಕದ ಜಾಗವನ್ನು ತ್ಯಾಜ್ಯ ಗುಡ್ಡೆ ಹಾಕಲು ಬಳಸಿಕೊಳ್ಳುತ್ತಿದ್ದಾರೆ. ಅಂದರೆ, ಹೇಗಾದರೂ ಇಲ್ಲಿಂದ ನಮ್ಮನ್ನು ಒಕ್ಕಲೆಬ್ಬಿಸುವ ಯತ್ನ ನಡೆದಿದೆ’ ಎಂದರು.

ಭೂ-ವಸತಿ ರಹಿತರ ಸಮಸ್ಯೆ

‘ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕುಗಳಲ್ಲಿ ಆದಿವಾಸಿಗಳ ಸುಮಾರು 200 ಹಾಡಿಗಳಿವೆ.. ಭೂಮಿ-ವಸತಿ ಇಲ್ಲದ ಈ ಕುಟುಂಬಗಳು ಹೇಗೋ ಗುಡಿಸಲು ಹಾಕಿಕೊಂಡು ಬದುಕಲು ಹೊರಟರೆ, ಭೂಕುಳಗಳ ಬೆಂಬಲ ಹೊಂದಿರುವ ರಾಜಕಾರಣಿಗಳು, ಅಧಿಕಾರಿಗಳು ಅದಕ್ಕೂ ಬಿಡುತ್ತಿಲ್ಲ’ ಎನ್ನುತ್ತಾರೆ ಭೂಮಿ ಮತ್ತು ವಸತಿ ರಹಿತರ ಹೋರಾಟ ವೇದಿಕೆಯ ರಾಜ್ಯ ಸಮಿತಿ ಸದಸ್ಯ ಮತ್ತು ಕೊಡಗು ಜಿಲ್ಲಾ ಕಾರ್ಯದರ್ಶಿ ಹೇಮಂತ್.

“ಬಾಳೆಗೋಡುವಿಮಲ್ಲಿ ಈಗಿರುವ ಕುಟುಂಬಗಳ ಹಿಂದಿನ ತಲೆಮಾರುಗಳನ್ನು ನಾಗರಹೊಳೆ ಕಾಡಿನಿಂದ ಒಕ್ಕಲೆಬ್ಬಿಸಿ ಅವರನ್ನು ಅತಂತ್ರ ಮಾಡಲಾಗಿತು. ಕಾಡಿನಲ್ಲಿನ ಖಾಲಿ ಜಾಗದಲ್ಲಿ ಅಲ್ಪಸ್ವಲ್ಪ ಉಳುಮೆ ಮಾಡಿಕೊಂಡು ಬದುಕುತ್ತಿದ್ದ ಈ ಕುಟುಂಬಗಳನ್ನು ಅತಂತ್ರ ಮಾಡಲಾಗಿತು. ಇವರೆಲ್ಲ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತ ಅತಂತ್ರವಾಗಿ ಬದುಕುತ್ತ ಬಂದರು’ ಎನ್ನುತ್ತಾರೆ ಹೇಮಂತ್‍.

‘ವನ್ಯಜೀವಿ ಕಾಯ್ದೆಗಳ ಹೆಸರಲ್ಲಿ ಪ್ರಭುತ್ವಗಳು ಈ ಕ್ರೌರ್ಯ ಮೆರೆಯುತ್ತ ಬಂದಿವೆ. ಕಾಡಿನ ಮೂಲನಿವಾಸಿಗಳನ್ನು ಅವರ ನೆಲದಿಂದ ಒಕ್ಕಲೆಬ್ಬಿಸುತ್ತ ಬಂದಿವೆ’ ಎನ್ನುವ ಅವರು, ‘ಬಾಳೆಗೋಡುವಿನಲ್ಲಿ ಈಗಿರುವ 25 ಕುಟುಂಬಗಳು ಹೋರಾಟ ನಡೆಸಿದ ನಂತರ ಅವರ ವಸತಿಗೆ 3 ಎಕರೆ ನಿಗದಿ ಮಾಡಿದ್ದ ಆಡಳಿತವು ನಂತರ ಪಟ್ಟಭದ್ರರ ಹಿತಾಸಕ್ತಿಗಾಗಿ ಅದನ್ನೂ ವಾಪಸ್ ಕಿತ್ತುಕೊಂಡಿತು. ವಿರಾಜಪೇಟೆಯಲ್ಲಿನ ಹಲವಾರು ಹಾಡಿಗಳಲ್ಲಿ ಇದೇ ಪರಿಸ್ಥಿತಿಯಿದೆ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸದ್ಯಕ್ಕೆ ಶಾಶ್ವತ ಪರಿಹಾರದ ಮಾತನ್ನು ಆಮೇಲೆ ನೋಡೋಣ, ಕೂಡಲೇ ಈ ಕುಟುಂಬಗಳಿಗೆ ಕನಿಷ್ಠ ಆಹಾರ ವಸ್ತು ಮತ್ತು ತಾತ್ಕಾಲಿಕ ಸೂರಿನ ವ್ಯವಸ್ಥೆಯನ್ನು ಒದಗಿಸುವುದು ಜಿಲ್ಲಾಡಳಿತ ಮತ್ತು ಸರ್ಕಾರದ ಕನಿಷ್ಠ ಕರ್ತವ್ಯ. ಅಷ್ಟೂ ಆಗದಿದ್ದರೆ ಸರ್ಕಾರ ಸತ್ತಂತೆಯೇ ಲೆಕ್ಕ. ಈ ಸಂಕಷ್ಟ ಕಾಲದಲ್ಲಿ ತಮ್ಮ ಕೈಲಾದಷ್ಟು ನೆರವು ನೀಡುತ್ತಿರುವ ಸಂಘಟನೆಗಳು ಈ ಕುಟುಂಬಗಳನ್ನು ತಲುಪುವಂತಾಗಲಿ ಎಂದು ಆಶಿಸೋಣ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಐದು ವರ್ಷದಲ್ಲಿ ಎಲ್ಲಾ ಬಡವರ ಭೂಮಿ ಕಿತ್ತುಕೊಳ್ಳುತ್ತಾರೆ: ಸಸಿಕಾಂತ್ ಸೆಂಥಿಲ್ ಆತಂಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಖಮೇನಿ ಹತ್ಯೆ ಬಗ್ಗೆ ಮೋದಿ ಸರ್ಕಾರದ ಮೌನ ತಟಸ್ಥವಲ್ಲ, ಬದಲಿಗೆ ಪದತ್ಯಾಗ’: ಸೋನಿಯಾ ಗಾಂಧಿ

ಮಂಗಳವಾರ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಗ್ಗೆ ಮೋದಿಯವರ ಮೌನವು ತಟಸ್ಥವಲ್ಲ, ಬದಲಾಗಿ ತ್ಯಾಗವಾಗಿದೆ...

ಟೆಕ್ಸಾಸ್‌ನಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ನಾಲ್ವರು ಸಾವು

ಟೆಕ್ಸಾಸ್‌ನ ಆಸ್ಟಿನ್ ನಗರದ ಬಾರ್ ಒಂದರ ಹೊರಗಡೆ ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ಅಮೆರಿಕನ್ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಭಯೋತ್ಪಾದನಾ ಕೃತ್ಯವಾಗಿರಬಹುದು ಎಂಬ ಶಂಕೆಯ ಮೇಲೆ ತನಿಖೆ...

ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್ : ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ

ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಜೊತೆ ನಡೆಸುತ್ತಿರುವ ಯುದ್ಧವು ಇದೀಗ ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಮಾರ್ಗಗಳಲ್ಲಿ ಒಂದಾದ 'ಹಾರ್ಮುಜ್ ಜಲಸಂಧಿ'ಗೆ ವ್ಯಾಪಿಸಿದೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು...

ಹುಬ್ಬಳ್ಳಿಯಲ್ಲಿ ವಲಸೆ ಕಾರ್ಮಿಕನ ಎನ್‌ಕೌಂಟರ್ ಪ್ರಕರಣ: ನ್ಯಾಯಾಂಗ ತನಿಖೆಗೆ ಹೈಕೋರ್ಟ್ ಆದೇಶ

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪ ಎದುರಿಸುತ್ತಿದ್ದ ಬಿಹಾರ ಮೂಲದ ವಲಸೆ ಕಾರ್ಮಿಕ ರಿತೇಶ್ ಕುಮಾರ್ ಎನ್‌ಕೌಂಟರ್ ಪ್ರಕರಣವನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಿಂದ ಸ್ವತಂತ್ರ ತನಿಖೆಗೆ ವಹಿಸಿ ಸೋಮವಾರ...

ಇದು ಇರಾಕ್ ಅಲ್ಲ, ಇರಾನ್ ಜೊತೆಗಿನ ಸಂಘರ್ಷ ‘ಅಂತ್ಯವಿಲ್ಲದ ಯುದ್ಧವಲ್ಲ’ : ಅಮೆರಿಕ ರಕ್ಷಣಾ ಕಾರ್ಯದರ್ಶಿ

ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ಅಮೆರಿಕ ನಡೆಸುತ್ತಿರುವ ಜಂಟಿ ದಾಳಿಯು 'ಅಂತ್ಯವಿಲ್ಲದ್ದು' ಅಥವಾ ಸುದೀರ್ಘವಾದುದ್ದಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಸೋಮವಾರ (ಮಾ.2) ತಿಳಿಸಿದ್ದಾರೆ. ಈ ಸಂಘರ್ಷವು ಅನಿರ್ದಿಷ್ಟಾವಧಿಯವರೆಗೆ ಮುಂದುವರಿಯುವುದಿಲ್ಲ...

ಉತ್ತರ ಪ್ರದೇಶ| ಶಾಲಾ ಬಸ್ಸಿನ ನೆಲಹಾಸು ಕುಸಿದು 7 ವರ್ಷದ ಬಾಲಕಿ ಸಾವು; ಇಬ್ಬರ ಬಂಧನ

ಉತ್ತರ ಪ್ರದೇಶದ ಅಲಿಗಢದಲ್ಲಿ ಶಾಲಾ ಬಸ್ಸಿನ ನೆಲಹಾಸು ಕುಸಿದು ಕೆಳಗೆ ಬಿದ್ದ ಏಳು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ಖಾಸಗಿ ಶಾಲೆಯ ವ್ಯವಸ್ಥಾಪಕ ಮತ್ತು ಬಸ್ ಚಾಲಕನನ್ನು ಬಂಧಿಸಲಾಗಿದೆ ಎಂದು...

ಇಸ್ರೇಲ್-ಇರಾನ್ ಸಂಘರ್ಷ: ನವದೆಹಲಿಯಲ್ಲಿ 24×7 ನಿಯಂತ್ರಣ ಕೊಠಡಿ ಸ್ಥಾಪಿಸಿದ ತೆಲಂಗಾಣ

ಹೈದರಾಬಾದ್: ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರ ನಿರ್ದೇಶನಗಳನ್ನು ಅನುಸರಿಸಿ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ಮಧ್ಯಪ್ರಾಚ್ಯದಲ್ಲಿರುವ ತೆಲಂಗಾಣ ನಾಗರಿಕರಿಗೆ ಸಹಾಯ ಮಾಡಲು ನವದೆಹಲಿಯ ತೆಲಂಗಾಣ ಭವನದಲ್ಲಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಪ್ರಯಾಣ...

ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್‌ಗೆ ಡ್ರೋನ್ ದೋಣಿ ಡಿಕ್ಕಿ; ಭಾರತೀಯ ಸಿಬ್ಬಂದಿ ಸಾವು

ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್‌ಗೆ ಮಾನವರಹಿತ ಡ್ರೋನ್ ದೋಣಿ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಇಸ್ರೇಲ್ ಮತ್ತು ಇರಾನ್ ನಡುವಿನ ಹಗೆತನವು ಪ್ರದೇಶದಾದ್ಯಂತ ಉಲ್ಬಣಗೊಳ್ಳುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು ಹಡಗಿನಲ್ಲಿದ್ದ...

ನಾಗ್ಪುರ ಕಾರ್ಖಾನೆ ಸ್ಫೋಟ: ಸ್ಫೋಟಕ ಕಂಪನಿಯ ಒಂಬತ್ತು ನಿರ್ದೇಶಕರ ಬಂಧನ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 18 ಜನರು ಸಾವನ್ನಪ್ಪಿದ್ದು, ಸ್ಫೋಟಕ ತಯಾರಿಕಾ ಕಂಪನಿಯ ಒಂಬತ್ತು ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಇಲ್ಲಿನ ಕಲ್ಮೇಶ್ವರ ಪೊಲೀಸರು ಎಸ್‌ಬಿಎಲ್ ಎನರ್ಜಿ...

ಅಪ್ರಾಪ್ತ ಮಗಳ ಮರ್ಯಾದೆಗೇಡು ಹತ್ಯೆ : ದಂಪತಿಗೆ ಜೀವಾವಧಿ ಶಿಕ್ಷೆ ಖಾಯಂಗೊಳಿಸಿದ ಅಲಹಾಬಾದ್‌ ಹೈಕೋರ್ಟ್

ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ, 2014ರಲ್ಲಿ ತಮ್ಮ ಅಪ್ರಾಪ್ತ ಮಗಳು ಮತ್ತು ಬಾಡಿಗೆದಾರರನ್ನು ಕೊಲೆ ಮಾಡಿದ್ದ ದಂಪತಿಗೆ ಜೀವಾವಧಿ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಖಾಯಂಗೊಳಿಸಿದೆ. ನ್ಯಾಯಮೂರ್ತಿ ಜೆ.ಜೆ. ಮುನೀರ್ ಮತ್ತು ನ್ಯಾಯಮೂರ್ತಿ ವಿನಯ್ ಕುಮಾರ್ ದ್ವಿವೇದಿ...