Homeಅಂಕಣಗಳುಈಚೆಗೆ ಬೆಂಗಳೂರಲ್ಲಿ ಇರಕಾಗ್ತಾಯಿಲ್ಲ ಕಂಡ್ರಿ: ಯಾಹೂ ಜೊತೆ ಕುಮಾರಸ್ವಾಮಿ ಮಾತುಕತೆ

ಈಚೆಗೆ ಬೆಂಗಳೂರಲ್ಲಿ ಇರಕಾಗ್ತಾಯಿಲ್ಲ ಕಂಡ್ರಿ: ಯಾಹೂ ಜೊತೆ ಕುಮಾರಸ್ವಾಮಿ ಮಾತುಕತೆ

- Advertisement -
- Advertisement -

 

ಗಿರೀಶ್ ಕಾರ್ನಾಡ್‍ರವರ ಸಾವಿನ ನಂತರ ನಡೆದುಕೊಂಡ ರೀತಿಗೆ ಅವರ ವೈರಿಗಳೂ ಮೆಚ್ಚಿ ತಲೆದೂಗುತ್ತಿದ್ದಾರಂತಲ್ಲಾ. ಇದರ ನಡುವೆ ವೀರಶೈವರ ಜಾಲತಾಣಗಳು ಕಾರ್ನಾಡರ ಸಾವನ್ನು ಸಂಭ್ರಮಿಸಿದ್ದು ನೋಡಿದ ಲಿಂಗಾಯತರು, ‘ಥೂ ಎಷ್ಟೇ ಆಗಲಿ ಇವುರು ಅಂಥೋರೆಯ’ ಎಂದು ಉದ್ಘಾರ ತೆಗೆದರಂತಲ್ಲಾ. ಅದಿರಲಿ ಈ ವೀರಶೈವರಿಗೇಕೆ ಕಾರ್ನಾಡರ ಸಾವಿಗೆ ಸಂಭ್ರಮಿಸಿದರು ಎಂದು ನೋಡಿದರೆ, ಕಾರ್ನಾಡರ ‘ತಲೆದಂಡ’ ಕೃತಿ ಸಾಕ್ಷ್ಯಾಧಾರಗಳನ್ನು ಒದಗಿಸುತ್ತದಂತಲ್ಲಾ. ಹನ್ನೆರಡನೇ ಶತಮಾನದಲ್ಲಿ ನಡೆದ ಬಸವಣ್ಣನ ಕೊಲೆ ಇಪ್ಪತ್ತೊಂದನೆ ಶತಮಾನದಲ್ಲೂ ಕೆಲವರನ್ನು ಬೆಚ್ಚಿಸುತ್ತದೆ ಎಂದರೆ ಆಶ್ಚರ್ಯ. ಗಾಂಧೀ ಕೊಲೆಯೂ ಹಾಗೇ ಅಲ್ಲವೆ. ಕೊಂದವನು ನಮ್ಮ ಜಾತಿ ಅಲ್ಲ ಎಂದರು. ಪತ್ತೆ ಹಚ್ಚಿ ಹೇಳಿದಾಗ ನಮ್ಮ ಸಂಘದ ಸದಸ್ಯನಲ್ಲ ಎಂದರು. ಅದನ್ನೂ ಪತ್ತೆ ಹಚ್ಚಿದಾಗ ಸಂಘ ತೊರೆದು ಬಹಳ ವರ್ಷವಾಗಿತ್ತು ಎಂದರು. ಎಲ್ಲಾ ಮುಗಿದು ಮರಣ ದಂಡನೆಯಾದಾಗ ಮನುಧರ್ಮದುದ್ದಾರಕ್ಕೆ ಹುತಾತ್ಮನಾದ ಮಹಾತ್ಯಾಗಿ ಎಂದರು. ಅದೆಲ್ಲಾ ಆಗಿ ಮನುಧರ್ಮ ಗ್ರಂಥವನ್ನು ಪುನರ್ಮುದ್ರಣ ಮಾಡುವ ವ್ಯಾಪಾರಿಯಂತೆ ಕಾಣುವ ಮೋದಿ ಪ್ರಧಾನಿಯಾದ ಕೂಡಲೆ ಗೋಡ್ಸೆಗೆ ಗುಡಿಕಟ್ಟಿದರಂತಲ್ಲಾ ಥೂತ್ತೇರಿ.

*****

ಎಡೂರಪ್ಪನ ಜೊತೆ ಇಪ್ಪತ್ತು ತಿಂಗಳು ತೆಕ್ಕೆ ಬಡಿದುಕೊಂಡು ರಾಜ್ಯಾಡಳಿತ ನಡೆಸಿದ ಕುಮಾರಣ್ಣ, ಜನಾನುರಾಗಿ ಆಗಿದ್ದರು. ಅದಕ್ಕೆ ಕಾರಣ, ಅವರ ಗ್ರಾಮ ವಾಸ್ತವ್ಯವಂತೆ. ಆದರೀಗ ಕುಮಾರಣ್ಣ ಮೊದಲಿನ ವರ್ಚಸ್ಸು ಕಳೆದುಕೊಂಡಿದ್ದಾರೆ. ಮಂಡ್ಯದಲ್ಲಿ ಮಗನನ್ನ ಗೆಲ್ಲಿಸಲಾಗಿಲ್ಲ. ತುಮಕೂರಿನಲ್ಲಿ ಅಪ್ಪನನ್ನು ಉಳಿಸಿಕೊಳ್ಳಲಾಗಲಿಲ್ಲ. ಹಾಸನದಲ್ಲಿ ತನ್ನ ಮತ್ಸರಕ್ಕೆ ತುತ್ತಾಗಿರುವ ಭವಾನಿ ಪುತ್ರ ಗೆದ್ದು ಮೆರೆಯುತ್ತಿದ್ದಾನೆ. ಕಾಂಗೈಗಳು ನಂಬಿಕೆಗೆ ಯೋಗ್ಯವಾಗಿ ವರ್ತಿಸುತ್ತಿಲ್ಲ. ಸಿದ್ಧರಾಮಯ್ಯ ಕರ್ಣನಂತೆ ಮಾತನಾಡಿದರೂ ಶಕುನಿಯಾಗಿದ್ದಾರೆ. ಇಂತೆಲ್ಲಾ ತಲೆತಿನ್ನುವ ಸಂಗತಿಗಳಿಂದ ದೂರವಾಗಿ, ನೆಮ್ಮದಿಯಿಂದ ನಾಲ್ಕು ಗಂಟೆ ನಿದ್ದೆ ಮಾಡಬೇಕೆಂದರೆ, ಅದು ಗ್ರಾಮ ವಾಸ್ತವ್ಯದಿಂದ ಮಾತ್ರ ಸಾಧ್ಯ ಎಂದು ಸೂಕ್ತ ಗ್ರಾಮ ಶೋಧನೆಗೆ ತೊಡಗಿರುವಾಗ ಅವರಿಗೆ ಶುಭ ಹಾರೈಸುವುದು ನಮ್ಮ ಕರ್ತವ್ಯ. ಹಾಗಾಗಿ ಫೋನ್ ಮಾಡಿದರೆ ರಿಂಗಾಯ್ತು.
ರಿಂಗ್ ಟೋನ್: ಹಳ್ಳಿಯಾದರೇನು ಶಿವಾ ದಿಳ್ಳಿಯಾದರೇನು ಶಿವಾ ಜನರೆಲ್ಲಾ ಒಂದೇ ಶಿವಾ ಜನರೆಲ್ಲಾ…….
“ಹೇಳ್ರಿ ಯಾಹು ಏನ್ಸಮಾಚಾರ”
“ಸುಮ್ಮನೆ ಮಾತಾಡಬೇಕು ಅನ್ನುಸ್ತು ಸಾರ್.”
“ಒಂದು ಕೆಲಸ ಮಾಡಿ, ನಾನು ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡ್ತಕಂತ ಒಂದು ತೀರ್ಮಾನ ಏನು ತಗೊಂಡಿದ್ದೀನಿ. ಅದರ ಪ್ರಕಾರ ಗ್ರಾಮ ವಾಸ್ತವ್ಯವನ್ನ ಆರಂಭಿಸಬೇಕು ಅನ್ನೊ ತೀರ್ಮಾನದ ಪ್ರಕಾರ ನಡಕೊಳನಾ ಅಂತ ಇದೀನಿ.”
“ಒಳ್ಳೆ ಆಲೋಚನೆ ಸರ್, ಬೇಗ ಹೊರಡಿ.”
“ನೋಡಿ, ನಿಮ್ಮ ಬಾಯಲ್ಲೂ ಅದೇ ಬರ್ತಾಯಿದೆ. ಅಲ್ಲಿ ನಾನು ಗ್ರಾಮ ವಾಸ್ತವ್ಯದ ಜಾಗದಲ್ಲಿ ಮಾತ್ನಾಡಕ್ಕೆ ಯಾರು ಇರಲ್ಲ. ನೀವು ಬಂದ್ರೆ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡ್ತಕಂತ ಕಾರ್ಯಕ್ರಮ ಹಾಯ್ಕಬವುದು.”
“ಸರಿ ಸಾರ್, ಆದ್ರೆ ನಿಮ್ಮ ಗ್ರಾಮ ವಾಸ್ತವ್ಯದಲ್ಲಿ ಭೋಜೇಗೌಡ ಇರ್ತನೆ, ಇನ್ನ ಶಿವರಾಮೇಗೌಡ ಈಗ ನಿರುದ್ಯೋಗಿ ಆಗಿರದ್ರಿಂದ ಅವುನೂ ಇರತನೆ, ಅಲ್ದೆ ಮಧ್ಯೆಮಧ್ಯೆ ಬಾಯಿ ಹಾಕಿ ಯಾರೂ ಮಾತಾಡಕೆ ಬಿಡಲ್ಲ. ಅಂತ ಜಾಗದಲ್ಲಿ ನಾನ್ಯಾಕೆ ಸಾರ್.”
“ನೀವು ಬನ್ನಿ, ಅವುರು ಬೇರೆ ಜಾಗದಲ್ಲಿ ಮನಗತಕ್ಕಂತ ವ್ಯವಸ್ಥೆ ಮಾಡ್ತಿನಿ.”
“ಅದರಗತ್ಯ ಇಲ್ಲ ಸಾರ್, ಶಿವರಾಮೇಗೌಡ ಅವುನ ಕಾರಲ್ಲೇ ಮನಿಕತ್ತನೆ, ಭೋಜೇ ಗೌಡನೂ ಅಂಗೆಯಾ, ಅದಿರ್ಲಿ ತಾವು ಇದ್ದಕ್ಕಿದ್ದಂಗೆ ಗ್ರಾಮ ವಾಸ್ತವ್ಯಕ್ಕೆ ಹೊಂಟಿದ್ಯಾಕೆ.”
“ಈಚೆಗೆ ಬೆಂಗಳೂರಿನಲ್ಲಿ ಇರಕ್ಕಾಗ್ತಾಯಿಲ್ಲ ಕಂಡ್ರಿ.”
“ಇದು ನಿಮ್ಮೊಬ್ಬರ ಸಮಸ್ಯೆ ಅಲ್ಲ ಸಾರ್. ಇಡೀ ಬೆಂಗಳೂರ ಜನಕ್ಕೆ ಅಂಗಾಗ್ಯದೆ.”
“ಅವುರದೇನಾದ್ರು ಆಗ್ಲಿ, ನನ್ನ ಈ ಸಂದರ್ಭದ ಪರಿಸ್ಥಿತಿಯನ್ನ ನೋಡೋದಾದ್ರೆ, ನಾನು ಎಲ್ಲಾದ್ರು ಹೊರಗೋಗಲೇಬೇಕು. ನಾನು ತುಂಬಾ ಭರವಸೆ ಇಟ್ಟಿದ್ದಂತಹ ಮಂಡ್ಯ ಜಿಲ್ಲೆ ಎಮ್ಮೆಲ್ಲೆಗಳು ಮೋಸ ಮಾಡಿದ್ರು. ನಮ್ಮ ಪಕ್ಷದವರೆ ನನಗೆ ತೊಂದರೆ ಕೊಡತಕಂತ ತೀರ್ಮಾನ ತಗೊಂಡ್ರು. ರಾತ್ರೆ ಆದ್ರು ಕೂಡ ಕಾಂಗ್ರೆಸ್‍ನವರು ಮನೆಹತ್ರ ಬಂದು ಏನೇನೊ ಕೇಳ್ತರೆ. ಅವು ಬೆದರಿಕೆ ತರ ಇರತವೆ. ಇನ್ನ ಬಿಜೆಪಿಗಳ ಭಯೋತ್ಪಾದನೆ ಬೇರೆ.”
“ಒಳ್ಳೆ ಪದ ಬಳಸಿದ್ರಿ ಸಾ. ಬಿಜೆಪಿಗಳದು ಯಾವತ್ತೂ ಭಯೋತ್ಪಾದನೆನೆ. ಸಾಬರ ಕಂಡು ಹೆದ್ರಿಕಂಡು ಅಂಗಾಡ್ತವವು.”
“ಅದೇನಾದ್ರು ಆಗ್ಲಿ. ನನ್ನ ಮನಸ್ಸು ಹಾಳಾಗಿರತಕ್ಕಂತ ಈ ಸಮಯದಲ್ಲಿ ಗ್ರಾಮ ವಾಸ್ತವ್ಯ ಸೂಕ್ತ.”
“ಆರೋಗ್ಯ ಹ್ಯಾಗಿದೆ ಸಾ.”
“ಚೆನ್ನಾಗಿದೀನಿ.”
“ಮತ್ತೆ ದೇವೇಗೌಡ್ರು ತುಂಬ ಅಪಾಯದ ಸ್ಥಿತೀಲಿದಾನೆ ಕುಮಾರ ಅಂದ್ರು.”
“ಅದು ಮಂಡ್ಯದಲ್ಲಿ ನಿಖಿಲ್ ನಿಲ್ಲಿಸಬೇಕಾದ್ರೆ, ಏನಾದ್ರು ಒಂದು ಪ್ರಮುಖವಾದ ಕಾರಣ ಬೇಕಾಗಿದ್ದ ಸನ್ನಿವೇಶದಲ್ಲಿ ನಮ್ಮ ತಂದೆ ಹಾಗಂದಿದ್ರು.”
“ಥೂ.. ಏನಾಯ್ತು ಗೊತ್ತ ಸಾರ್, ನೀವು ಕಾಂಗ್ರೆಸ್‍ನಿಂದ ಮಂಜೇಗೌಡ ಅಂತ ಕೊಂಡಕೊಂಡ್ರಲ್ಲ ಅವುನೇನು ಮಾಡಿದ ಗೊತ್ತೇ, ಕುಮಾರಣ್ಣ ಜಾಸ್ತಿ ದಿನ ಇರದಿಲ್ಲ. ನಿಖಿಲ್‍ಗೆ ಓಟು ಮಾಡಿ ಅಂತ ಇಡೀ ಜಿಲ್ಲೇಲಿ ಹೇಳಿಕಂಡು ತಿರುಗಿದ. ಅಂಗಾಗಿ ಜನ ನಿಮ್ಮ ಬಗ್ಗೆ ಕ್ಯಟ್ಟ ನಿರೀಕ್ಷೆಲವುರೆ.”
“ಇರ್ಲಿ ಬಿಡಿ, ಜನ ನಮ್ಮ ಬಗ್ಗೆ ಅಂಗನ್ನಕಂಡ್ರೆ ನನ್ನ ಆಯಸ್ಸು ಜಾಸ್ತಿಯಾಯ್ತದಂತೆ, ನಮ್ಮ ತಂದೆ ಹಾಗೇಳತಿದ್ರು.”
“ಗ್ರಾಮ ವಾಸ್ತವ್ಯದಲ್ಲಿ ಏನು ಮಾಡ್ತಿರಿ ಸಾರ್.”
“ನಮ್ಮ ಅಧಿಕಾರಿಗಳು ನಾನು ಆಯ್ಕೆ ಮಾಡಿದ ಗ್ರಾಮಕ್ಕೆ ಹೋಗಿ ಒಂದು ಮನೇನ ವಶಕ್ಕೆ ತಗೊಳ್ತರೆ. ಅಲ್ಲಿ ನನ್ನ ವಾಸ್ತವ್ಯಕ್ಕೆ ಏನೇನು ಬೇಕೊ ಅದನ್ನ ಅರೇಂಜ್ ಮಾಡ್ತರೆ. ನಾನು ಆ ಮನೆ ಜನಗಳ ಜೊತೆ ಕುಳಿತು ಊಟ ಮಾಡ್ತಿನಿ, ಚರ್ಚೆ ಮಾಡ್ತಿನಿ. ಈ ಗ್ರಾಮದ ಅಭಿವೃದ್ಧಿ ಹೇಗೆ ಮಾಡಬೇಕು ಅನತಕ್ಕಂತ ಸಲಹೆ ಕೇಳ್ತಿನಿ.”
“ಒಳ್ಳೆ ಕಾರ್ಯಕ್ರಮ ಸಾರ್, ಆದ್ರು ಕರ್ನಾಟಕದಲ್ಲಿ 28 ಸಾವಿರ ಹಳ್ಳಿಗಳಿವೆ ಅವುಗಳ ಅಭಿವೃದ್ಧಿ ಹೇಗೆ.”
“ಇಪ್ಪತ್ತೆಂಟು ಸಾವಿರ ಹಳ್ಳಿಗಳಿಗೂ ಹೋಗಿ ನಾನು ಗ್ರಾಮ ವಾಸ್ತವ್ಯ ಮಾಡಕ್ಕಾಗಲ್ಲ.”
“ಅಷ್ಟು ದಿನ ಇರಬೇಕಲ್ಲ ಸಾ ನೀವು.”
“ಇರದರ ಪ್ರಶ್ನೆ ಅಲ್ಲ. ಗ್ರಾಮಗಳನ್ನ ಹೇಗೆ ಅಭಿವೃದ್ಧಿ ಮಾಡಬೇಕು ಅನತಕ್ಕಂತ ವಿಷಯಗಳನ್ನ ವಿಧಾನಸೌಧದಲ್ಲಿ ಕುಳಿತು ಚರ್ಚೆಮಾಡದಕ್ಕಿಂತ ಗ್ರಾಮಕ್ಕೆ ಹೋದ್ರೆ ಒಳ್ಳೆದಲವೆ.”
“ಸರಿ, ವಿಧಾನಸೌಧದ ರಾಶಿ ಫೈಲ್‍ಗಳ ನೋಡದ್ಯಾವಾಗ ನೀವು.”
“ಅದಕ್ಕೆಲ್ಲಾ ಜನ ಇದಾರೆ.”
“ನಿಮ್ಮ ಕುಟುಂಬದಲ್ಲಾ.”
“ನಮ್ಮ ಕುಟುಂಬ ಅಂದ್ರು ತಪ್ಪಾಗಲಾರ್ದು. ಯಾಕೆ ಅಂದ್ರೆ ನಮ್ಮ ಕುಟುಂಬದಲ್ಲಿ ಕೆಎಎಸ್ ಅಧಿಕಾರಿಯಾಗಿದ್ದವುರು ಇದಾರೆ. ಸತತ ಮಂತ್ರಿಗಳಾಗಿದ್ದವರು ಇದಾರೆ. ಮಾಜಿ ಪ್ರಧಾನಿಗಳಿದಾರೆ. ಆದ್ರಿಂದ ಆಡಳಿತ ನಡೆಸತಕ್ಕಂತ ವಿಷಯದಲ್ಲಿ ನಮಗೆ ಯಾವ ಭಯವೂ ಇಲ್ಲ.”
“ಗ್ರಾಮಾಭಿವೃದ್ಧಿ ಬಗ್ಗೆ ಒಂದೆರಡು ಸಲಹೆ ಕೊಡ್ಳ ಸಾರ್.”
“ಕೊಡಿ, ನಾವು ದನಕಾಯೋ ಹುಡುಗನಿಂದ್ಲೂ ಸಲಹೆ ತಗೊಳ್ತಿವಿ.”
“ನಾನು ಕುರಿಕಾದಿದ್ದೆ ಸಾ.”
“ಇನ್ನೂ ಒಳ್ಳೆದಲವ, ನಾವು ದನಕಾದಿದ್ದೊ, ನೀವು ಕುರಿಕಾದಿದ್ರಿ. ಆದ್ರಿಂದ ನಾವಿಬ್ರು ಅಣ್ಣತಮ್ಮಂದಿರಿದ್ದಂಗೆ.”
“ಏನಿಲ್ಲ ಸಾರ್, ಗ್ರಾಮದ ಉದ್ದಾರ ಒಂದು ನಾಲ್ಕಾರು ಸಮಸ್ಯೆನ ಒಳಗೊಂಡದೆ ಸಾರ್. ರಸ್ತೆ, ಕರೆಂಟು, ಕುಡಿಯೋ ನೀರು, ಒಳ್ಳೆ ಸ್ಕೂಲು ಇಷ್ಟೆ ಸಾರ್.”
“ಅದಕ್ಕೆ ನಾನು ಸ್ಕೂಲಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಹೊರಟಿರೋದು.”
“ಒಳ್ಳೆ ತೀರ್ಮಾನ ಸಾರ್, ಒಂಥರ ಐತಿಹಾಸಿಕ ತೀರ್ಮಾನ.”
“ಐತಿಹಾಸಿಕ ಯಾಕ್ರಿ?”
“ನೀವು ಎಡೂರಪ್ಪನ ಜೊತೆ ಸರಕಾರ ಮಾಡಿದಾಗ ಗ್ರಾಮ ವಾಸ್ತವ್ಯಕ್ಕೆ ಹೊರಟಿದ್ರಿ. ಆಯ್ಕೆ ಮಾಡಿದ ಊರಿನ ಮಹಿಳೆ ನಿಮಗಾಗಿ ಬೆಡ್ ರೂಮನ ಶೃಂಗಾರ ಮಾಡಿದ್ಲು ಇದು ಗೊತ್ತಾಗಿ ನೀವು ಐಬಿಗೆ ಓಡಿದ್ರಿ ಅಲವ ಸಾರ್.”
“ಹೌದು ಕಂಡ್ರೀ.”
ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...