Homeಚಳವಳಿರೈತ ಹೋರಾಟದ ನೆಲದಲ್ಲಿ ಹತ್ಯೆ: ಮೃತ ವ್ಯಕ್ತಿಯ ಗ್ರಾಮಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದ ಕೊಲೆ...

ರೈತ ಹೋರಾಟದ ನೆಲದಲ್ಲಿ ಹತ್ಯೆ: ಮೃತ ವ್ಯಕ್ತಿಯ ಗ್ರಾಮಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದ ಕೊಲೆ ಆರೋಪಿ

- Advertisement -
- Advertisement -

ದೆಹಲಿಯ ಸಿಂಘು ಗಡಿಯಲ್ಲಿ ಕಳೆದ ವಾರ ಹತ್ಯೆಯಾದ ದಲಿತ ಯುವಕ ಲಖ್ಬೀರ್‌ ಸಿಂಗ್‌ ಅವರ ಚೀಮಾ ಕಲಾನ್ ಗ್ರಾಮಕ್ಕೆ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಿಹಾಂಗ್ ಸಿಖ್ ಸರಬ್ಜಿತ್ ಸಿಂಗ್ ಪದೇ ಪದೇ ಭೇಟಿ ನೀಡಿರುವದನ್ನು ಗ್ರಾಮದ ನಿವಾಸಿಗಳು ದೃಢಪಡಿಸಿದ್ದಾರೆ.

ಕಳೆದ ತಿಂಗಳಲ್ಲಿ ಹಲವು ಬಾರಿ ನಿಹಾಂಗ್‌ ಸಿಖ್‌ಗಳು ಚೀಮಾ ಕಲಾನ್ ಗ್ರಾಮಕ್ಕೆ ಭೇಟಿ ನೀಡಿದ್ದರು ಎಂಬ ವಿಷಯ ಹೊರಬಂದಿದೆ. ಹತ್ಯೆಯಾ‌ದ ಮೂರು ದಿನಗಳ ಮೊದಲು ಲಖ್ಬೀರ್ ಸಿಂಗ್‌, ಬೊಲೆರೊ ಕ್ಯಾಂಪರ್ ಕಾರಿನಲ್ಲಿ ಇಬ್ಬರು ನಿಹಾಂಗ್‌ಗಳೊಂದಿಗೆ ಕಾಣಿಸಿಕೊಂಡಿರುವುದಾಗಿ ಗ್ರಾಮದ ನಿವಾಸಿಗಳು ತಿಳಿಸಿದ್ದಾರೆ.

ಕಳೆದ ಎರಡು ಮೂರು ತಿಂಗಳುಗಳಿಂದ ಕೊಲೆ ಆರೋಪಿ ಸರಬ್ಜಿತ್ ಸಿಂಗ್, ಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೊಲೆರೊ ಕ್ಯಾಂಪರ್ ಕಾರು ಓಡಿಸುತ್ತಿದ್ದನ್ನು ದೃಡಪಡಿಸಿದ್ದಾರೆ. ಜೊತೆಗೆ ಮೃತ ಲಖ್ಬೀರ್ ಸಿಂಗ್ ಸಹೋದರಿ ರಾಜ್ ಕೌರ್ ಕೂಡ ತನ್ನ ಸಹೋದರ ಸಿಂಘು ಗಡಿಗೆ ತಾನಾಗಿಯೇ ಹೋಗಲು ಸಾಧ್ಯವಿಲ್ಲ. ಅಲ್ಲಿ ಯಾರೋ ಆಮಿಷವೊಡ್ಡಿದ್ದರು ಎಂದು ನಿರಂತರವಾಗಿ ಹೇಳಿಕೆ ನೀಡಿದ್ದಾರೆ ಎಂದು ದಿ ಕಾರವಾನ್ ವರದಿ ಮಾಡಿದೆ.

ಇದನ್ನೂ ಓದಿ: ಲಖ್ಬೀರ್ ಹತ್ಯೆ ಪ್ರಕರಣ: ರೈತ ಸಂಘಟನೆಗಳ‌ ಹೊಣೆಯ ಕುರಿತು ಎರಡು ನೋಟಗಳು

ಬಂಧಿತ ಆರೋಪಿ ಸರಬ್ಜಿತ್ ಸಿಂಗ್‌ ಹತ್ಯೆಯ ಜವಾಬ್ದಾರಿಯನ್ನು ವಹಿಸಿಕೊಂಡು ಅಕ್ಟೋಬರ್ 15 ರ ರಾತ್ರಿ ಪೊಲೀಸರಿಗೆ ಶರಣಾಗಿದ್ದರು. ಮರುದಿನ, ಇನ್ನೊಬ್ಬ ನಿಹಾಂಗ್ ಸಿಖ್ ನರೇನ್ ಸಿಂಗ್ ಅಮೃತಸರದ ಅಮರ್ಕೋಟ್ ಗ್ರಾಮದಲ್ಲಿ ಪೊಲೀಸರಿಗೆ ಶರಣಾದ ನಂತರ ಆತನನ್ನು ಬಂಧಿಸಲಾಗಿತ್ತು.

“ದಲಿತ ಯುವಕ ಲಖ್ಬೀರ್‌ ಸಿಂಗ್ ಗ್ರಂಥವನ್ನು ಅಪವಿತ್ರಗೊಳಿಸಿದ್ದನ್ನು ನರೇನ್ ಸಿಂಗ್ ನೋಡಿಲ್ಲ. ಆತ ಕೇವಲ ಸರಬ್ಜಿತ್ ಸಿಂಗ್‌ ಮಾತಿನಂತೆ ನಡೆದುಕೊಂಡಿರುವುದಾಗಿ ತಿಳಿಸಿದ್ದಾರೆ” ಎಂದು ನರೇನ್ ಸಿಂಗ್‌ರನ್ನು ಬಂಧಿಸಿದ ಅಮೃತಸರ ಗ್ರಾಮಾಂತರ ಠಾಣೆಯ ಹಿರಿಯ ಅಧೀಕ್ಷಕ ರಾಕೇಶ್ ಕೌಶಲ್ ಹೇಳಿದ್ದಾರೆ.

ಮತ್ತೊಬ್ಬ ಚೀಮಾ ಕಲಾನ್ ಗ್ರಾಮದ ನಿವಾಸಿ ಮಾತನಾಡಿ, ಈ ಮೊದಲು ಸರಾಯಿ ಅಮಾನತ್ ಖಾನ್ ಪೊಲೀಸ್ ಠಾಣೆಯ ಬಳಿ ಸುಮಾರು ಮೂರು ತಿಂಗಳ ಹಿಂದೆ ಗ್ರಾಮದಲ್ಲಿ ಸರಬ್ಜಿತ್ ಅವರನ್ನು ನೋಡಿದ್ದಾಗಿ ಮಾಹಿತಿ ನೀಡಿದ್ದಾರೆ.

“ಬಂಧನದಲ್ಲಿರುವ ಈ ಬಾಬಾ ಜೀ ಸರಬ್ಜಿತ್ ಸಿಂಗ್ ಅವರನ್ನು ನಾವು ನಮ್ಮ ಹಳ್ಳಿಯಲ್ಲಿ ಮೊದಲೇ ನೋಡಿದೆವು. ನಿನ್ನೆ, ನಾನು ಈ ವ್ಯಕ್ತಿಯ ವೀಡಿಯೋವನ್ನು ನೋಡುತ್ತಿದ್ದಾಗ ಎಲ್ಲ ನೆನಪಾಯಿತು. ಹಳ್ಳಿಯಲ್ಲಿ ಈ ಮನುಷ್ಯ ಯಾರದೋ ಕಾರನ್ನು ಓಡಿಸುವುದನ್ನು ನಾನು ನೋಡಿದ್ದೆ. ಆದರೆ, ಅದು ಯಾರ ಕಾರು ಎಂದು ನನಗೆ ತಿಳಿದಿಲ್ಲ” ಎಂದಿದ್ದಾರೆ.

ಮೃತನ ಕುಟುಂಬಸ್ಥರು ಮತ್ತು ಚೀಮಾ ಕಲಾನ್ ಗ್ರಾಮಸ್ಥರು

ಇದನ್ನೂ ಓದಿ: ಸಿಂಘು ಗಡಿಯಲ್ಲಿ ಲಖ್ಬೀರ್‌‌ ಹತ್ಯೆ ಪ್ರಕರಣ: ಹರಿಂದರ್‌‌‌ ಸಿಂಗ್‌‌ ಬರಹ

ಹಳ್ಳಿಯ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿದ್ದ ಲಂಗರ್ ಹಾಲ್ ಹತ್ತಿರ ಅನೇಕ ಸಂದರ್ಭಗಳಲ್ಲಿ ಅನೇಕ ಗ್ರಾಮಸ್ಥರು ಸರಬ್ಜಿತ್ ಸಿಂಗ್‌ರನ್ನು ನೋಡಿದ್ದಾರೆ ಎಂದು ನಿವಾಸಿಗಳು ತಿಳಿಸಿದ್ದಾರೆ. ಹಳ್ಳಿಯ ಹೊರ ಭಾಗದಲ್ಲಿ   ಕೈ-ಪಂಪ್‌ ಬಳಿ ಸರಬ್ಜಿತ್ ಸ್ನಾನ ಮಾಡುವುದನ್ನು ಸ್ಥಳೀಯರು ಸಹ ಗಮನಿಸಿದ್ದಾರೆ. ಕೆಲವು ಗ್ರಾಮಸ್ಥರು ಸರಬ್ಜಿತ್ ತಮ್ಮ ಹಳ್ಳಿಗೆ ಬಂದ ನಂತರ ತಮ್ಮ ಕೂದಲನ್ನು ಬೆಳೆಯಲು ಆರಂಭಿಸಿದ್ದರು. ಅವರು ಗುಜರಾತಿ, ಮರಾಠಿ ಮತ್ತು ಇತರ ಕೆಲವು ಭಾಷೆಗಳನ್ನು ಮಾತನಾಡುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಅಕ್ಟೋಬರ್ 12 ರಂದು ಲಖ್ಬೀರ್ ಹತ್ತಿರದ ಧಾನ್ಯ ಮಾರುಕಟ್ಟೆಗೆ ಕೆಲಸಕ್ಕಾಗಿ ಹೋಗಿದ್ದರು. ಆದರೆ, ಮದ್ಯವ್ಯಸನಿಯಾಗಿದ್ದ ಅವರಿಗೆ ಕೆಲಸ ಮಾಡಲು ಅಲ್ಲಿನ ಗುರುಶಿಖ್ ಎಂದು ಕರೆಸಿಕೊಳ್ಳುವವರು ಬಿಡಲಿಲ್ಲ. ನಂತರ ಅವರು ಅಲ್ಲಿದಂ ವಾಪಾಸ್ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಲಖ್ಬೀರ್‌ನನ್ನು ಕರೆದುಕೊಂಡು ಹೋಗಿ ಕಾರಿನಲ್ಲಿ ಕುಳಿತಿದ್ದ ನಿಹಾಂಗ್‌ಗಳ ಬಳಿಗೆ ಬಿಟ್ಟರ ಎಂದು ಸ್ಥಳೀಯರು ಹೇಳಿದ್ದಾರೆ. ಆ ರಾತ್ರಿ ಲಖ್ಬೀರ್‌ ಸಿಂಗ್‌ ಗೋಶಾಲೆಯಲ್ಲಿ ಜಾನುವಾರುಗಳಿಗೆ ಆಹಾರವನ್ನು ನೀಡುವುದನ್ನು ನೋಡಿದ್ದೇವೆ ಎಂದಿದ್ದಾರೆ.

ಮರುದಿನ ಬೆಳಿಗ್ಗೆ, ಲಖ್ಬೀರ್ ಸಿಂಗ್ ಧಾನ್ಯ ಮಾರುಕಟ್ಟೆಯಲ್ಲಿ ಕೆಲಸ ಮಾಡುವುದನ್ನು ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುವ ಹಳ್ಳಿಯ ನಿವಾಸಿ ಅಮೃತಪಾಲ್ ಸಿಂಗ್ ನೋಡಿದ್ದಾರೆ. “ನಾನು ಅವನನ್ನು ದೂರದಿಂದ ನೋಡಿದೆ” ಎಂದು ಅಮೃತಪಾಲ್ ಹೇಳಿದ್ದಾರೆ. ಅವರೇ ಹಳ್ಳಿಯಲ್ಲಿ ಕೊನೆಯ ಬಾರಿಗೆ ಲಖ್ಬೀ‌ರ್‌ ಸಿಂಗ್‌ ಅವರನ್ನು ನೋಡಿದವರು. ಲಖ್ಬೀ‌ರ್‌ ಸಿಂಗ್‌ ಅಕ್ಟೋಬರ್ 14 ರ ರಾತ್ರಿ ಸಿಂಘು ಗಡಿಯನ್ನು ಹೇಗೆ ತಲುಪಿದರು ಎಂಬುದು ಯಾರಿಗೂ ತಿಳಿದಿಲ್ಲ.

ಒಟ್ಟಾರೆ, ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ರೈತರ ಪ್ರತಿಭಟನೆಯನ್ನು ಮುರಿಯಲು ಸರ್ಕಾರ ನಡೆಸುತ್ತಿರುವ ಪಿತೂರಿ ಎಂದಿರುವ ರೈತರ ಆರೋಪಕ್ಕೆ ಈ ಎಲ್ಲಾ ಘಟನೆಗಳು ಸಾಕ್ಷಿಯಾಗುತ್ತಿವೆ. ಇದರ ಜೊತೆಗೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ನಿಹಾಂಗ್ ಮುಖ್ಯಸ್ಥ ಬಾಬಾ ಅಮನ್ ಸಿಂಗ್, ಬಿಜೆಪಿ ಕಿಸಾನ್ ಮೋರ್ಚಾದ ಸುಖ್ಮೀಂದರ್ ಪಾಲ್ ಸಿಂಗ್ ಗ್ರೇವಾಲ್ ಜುಲೈ ಅಂತ್ಯದಲ್ಲಿ ಸಭೆ ನಡೆಸಿದ್ದು ಕೂಡ ಬೆಳಕಿಗೆ ಬಂದಿದೆ.

ಘಟನೆ ಬಗ್ಗೆ, ಲಖ್ಬೀರ್‌ ಸಿಂಗ್‌ ಬಗ್ಗೆ ಎಲ್ಲಿಯೂ ಮಾತನಾಡದಂತೆ ಸ್ಥಳೀಯ ರಾಜಕೀಯ ವ್ಯಕ್ತಿಗಳು ಮತ್ತು ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂದು ಗ್ರಾಮದ ಮಾಜಿ ಸರ್ಪಂಚ್ ಆಗಿದ್ದ ಸೋನು ಚೀಮಾ ಆರೋಪಿಸಿದ್ದಾರೆ.


ಇದನ್ನೂ ಓದಿ: ರೈತ ಹೋರಾಟ ನೆಲದಲ್ಲಿ ಹತ್ಯೆ: ಬಿಜೆಪಿ ಸಚಿವರೊಂದಿಗೆ ಆರೋಪಿತ ನಿಹಾಂಗ್ ಗುಂಪಿನ ಮುಖ್ಯಸ್ಥ ಸಭೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...