Homeಕರ್ನಾಟಕಲವ್ ಯೂ ರಚ್ಚು ಶೂಟಿಂಗ್ ದುರಂತ: ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

ಲವ್ ಯೂ ರಚ್ಚು ಶೂಟಿಂಗ್ ದುರಂತ: ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

‘ಲವ್ ಯೂ ರಚ್ಚು’ ಸಿನಿಮಾ ಚಿತ್ರಿಕರಣದ ವೇಳೆ ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಸೇರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ವರು ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಶಂಕರ್ ಎಸ್ ರಾಜ್​ ನಿರ್ದೇಶನದಲ್ಲಿ ಅಜಯ್ ರಾವ್​ ಹಾಗೂ ರಚಿತಾ ರಾಮ್​ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ ಲವ್​ ಯೂ ರಚ್ಚು. ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣ ರಾಮನಗರ ತಾಲೂಕಿನ ಜೋಗನದೊಡ್ಡಿ ಬಳಿಯ ಖಾಸಗಿ ರೆಸಾರ್ಟ್ ಬಳಿ ನಡೆಯುತಿತ್ತು. ಸಾಹಸ ದೃಶ್ಯಗಳನ್ನು ಶೂಟ್ ಮಾಡುವಾಗ ದುರಂತ ಸಂಭವಿಸಿತ್ತು.

ತಮಿಳುನಾಡು ಮೂಲದ 28 ವರ್ಷದ ಫೈಟರ್‌ ವಿವೇಕ್‌ಗೆ ಶೂಟಿಂಗ್ ವೇಳೆ​ ‍ಹೈ ಟೆನ್ಶನ್ ವೈರ್‌ ತಗುಲಿ ಮೃತಪಟ್ಟಿದ್ದರು. ವಿವೇಕ್ ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಪ್ರೇಕ್ಷಕನ ವ್ಯಾಖ್ಯಾನದಿಂದಲೇ ಸೃಷ್ಟಿಯಾಗುವ ಆಂಡ್ರೆಯವರ ಅಮೂರ್ತ ಸಿನಿಮಾಗಳು

ದುರಂತದ ಹಿನ್ನೆಲೆ ನಿರ್ದೇಶಕ ಶಂಕರ್​ ರಾಜ್​ ಎ1, ನಿರ್ಮಾಪಕ ಗುರು ದೇಶಪಾಂಡೆ ಎ2, ಚಿತ್ರದ ಸಾಹಸ ನಿರ್ದೇಶಕ ವಿನೋದ್ ಕುಮಾರ್ ಎ3, ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಎ4 ಹಾಗೂ ಕ್ರೇನ್ ಆಪರೇಟರ್ ಮಹದೇವ್ ಎ5 ಎಂದು ಐವರ ವಿರುದ್ಧ ಬಿಡದಿ ಪೋಲಿಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದೆ.

ಇವರ ಪೈಕಿ ನಿರ್ದೇಶಕ ಶಂಕರ್ ಎಸ್​ ರಾಜು, ಫೈಟ್ ಮಾಸ್ಟರ್ ವಿನೋದ್ ಕುಮಾರ್ ಮತ್ತು ಕ್ರೇನ್ ಆಪರೇಟರ್ ಮಹಾದೇವ್, ಜಮೀನು‌ ಮಾಲೀಕ ಪುಟ್ಟರಾಜು ಎಂಬುವವರನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಕೋರ್ಟ್ ಆದೇಶಿಸಿದೆ.

2016 ರ ನವೆಂಬರ್‌ನಲ್ಲಿ ದುನಿಯಾ ವಿಜಯ್ ನಟನೆಯ ‘ಮಾಸ್ತಿ ಗುಡಿ’ ಚಿತ್ರದ ಶೂಟಿಂಗ್ ವೇಳೆ ಇಬ್ಬರು ಖಳನಟರಾದ ಅನಿಲ್, ಉದಯ್ ಪ್ರಾಣ ಕಳೆದುಕೊಂಡಿದ್ದ ದುರ್ಘಟನೆ ರಾಮನಗರದ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ನಡೆದಿತ್ತು. ಹೆಲಿಕಾಫ್ಟರ್ ನಿಂದ 100ಕ್ಕೂ ಹೆಚ್ಚು ಅಡಿ ಎತ್ತರದಿಂದ ಹಾರಿದ್ದ ಅನಿಲ್ ಮತ್ತು ಉದಯ್ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ದುರಂತ ಸಾವಿಗೀಡಾಗಿದ್ದರು.


ಇದನ್ನೂ ಓದಿ: ಲವ್‌ ಯೂ ರಚ್ಚು ಶೂಟಿಂಗ್ ವೇಳೆ ದುರಂತ: ವಿದ್ಯುತ್ ತಂತಿ ತಗುಲಿ ಫೈಟರ್‌ ವಿವೇಕ್ ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...