ಮಧ್ಯಪ್ರದೇಶದ ಇಂದೋರ್‌ನಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದ 34 ವರ್ಷದ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ (ಹಸಿರು ಶೀಲಿಂಧ್ರ) ಕಂಡು ಬಂದಿದೆ. ಕಪ್ಪು ಫಂಗಸ್, ಬಿಳಿ ಫಂಗಸ್ ಮತ್ತು ಹಳದಿ ಫಂಗಸ್ ಜೊತೆಗೆ ಈಗ ಹಸಿರು ಫಂಗಸ್ ಸೇರಿಕೊಂಡಿದೆ.
ಗ್ರೀನ್ ಫಂಗಸ್ ಪತ್ತೆಯಾದ ಕೂಡಲೇ ಆ ವ್ಯಕ್ತಿಯನ್ನು ಏರ್ ಆ್ಯಂಬುಲೆನ್ಸ್ ಮೂಲಕ ಮುಂಬೈನ ಹಿಂದೂಜಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಇಂದೋರ್‌ನ ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ.
ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಮೊದಲಿಗೆ ಬ್ಲಾಕ್ ಫಂಗಸ್ ಕಾಣಿಸಿಕೊಂಡಿತು. ಬಳಿಕ ವೈಟ್ ಫಂಗಸ್, ನಂತರ ಯೆಲ್ಲೋ ಫಂಗಸ್ ಪತ್ತೆಯಾಗಿತ್ತು. ಈಗ ಹೊಸದಾಗಿ ಗ್ರೀನ್ ಫಂಗಸ್ ಕಾಣಿಸಿಕೊಳ್ಳಲು ಶುರುವಾಗಿದೆ. ವರದಿಗಳ ಪ್ರಕಾರ ಮಧ್ಯಪ್ರದೇಶದಲ್ಲಿ ಮೊದಲ ಪ್ರಕರಣ ಇದಾಗಿದೆ.
ಇದನ್ನೂ ಓದಿ: ದೇಹದ ವಾಸನೆ ಗ್ರಹಿಸಿ ಕೊರೋನಾ ಸೋಂಕು ಪತ್ತೆಹಚ್ಚುವ ಉಪಕರಣಗಳನ್ನು ಕಂಡು ಹಿಡಿದ ಬ್ರಿಟನ್
ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ವ್ಯಕ್ತಿಗೆ ಬ್ಲ್ಯಾಕ್ ಫಂಗಸ್ ಲಕ್ಷಣಗಳು ಕಂಡು ಬಂದಿದ್ದವು. ಅದೇ ಅನುಮಾನದ ಮೇರೆಗೆ ತಪಾಸಣೆಗೆ ಒಳಪಡಿಸಲಾಗಿತ್ತು. ಆದರೆ ಆತನ ಶ್ವಾಸಕೋಸಗಳು ಹಾಗೂ ರಕ್ತದಲ್ಲಿ ಹಸಿರು ಶಿಲೀಂಧ್ರ ಪತ್ತೆಯಾಗಿದೆ ಎಂದು ಶ್ರೀ ಅರಬಿಂದೋ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(SAIMS) ವಿಭಾಗದ ಮುಖ್ಯಸ್ಥ ಡಾ.ರವಿ ದೋಸಿ ಹೇಳಿದ್ದಾರೆ.
’ರೋಗಿಯು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಅವರ ಶ್ವಾಸಕೋಶಕ್ಕೆ 90% ಸೋಂಕು ಇರುವುದರಿಂದ ಅವರನ್ನು ಮುಂಬೈನ ಹಿಂದೂಜಾ ಆಸ್ಪತ್ರೆಗೆ ಸಾಗಿಸಲಾಗಿದೆ. ದೇಶದಲ್ಲಿ ಇಂತಹ ಪ್ರಕರಣಗಳ ಬಗ್ಗೆ ನನಗೆ ತಿಳಿದಿಲ್ಲ. ಮಧ್ಯಪ್ರದೇಶದಲ್ಲಿ ಹಸಿರು ಶಿಲೀಂಧ್ರದ ಮೊದಲ ಪ್ರಕರಣ ಇದಾಗಿದೆ” ಎಂದಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಇದುವರೆಗೆ ಕಪ್ಪು, ಬಿಳಿ ಮತ್ತು ಹಳದಿ ಶಿಲೀಂಧ್ರಗಳ ಪ್ರಕರಣಗಳು ಮಾತ್ರ ವರದಿಯಾಗಿವೆ ಎಂದು ವರದಿಗಳು ಸೂಚಿಸಿವೆ. ಕೋವಿಡ್‌ನಿಂದ ಗುಣಮುಖರಾದ ಜನರಲ್ಲಿ ಹಸಿರು ಶಿಲೀಂಧ್ರ ಸೋಂಕಿನ ಸ್ವರೂಪವು ಇತರೆ ರೋಗಿಗಳಿಗಿಂತ ಭಿನ್ನವಾಗಿದೆಯೇ ಎಂಬ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಡಾ.ರವಿ ದೋಸಿ ತಿಳಿಸಿದ್ದಾರೆ.
ಇದನ್ನೂ ಓದಿ: ಉದ್ದ ಕೂದಲು ಬಿಟ್ಟ ಕಾರಣಕ್ಕೆ ಪಾಕಿಸ್ತಾನದ ಕಲಾವಿದನನ್ನು ಬಂಧಿಸಿದ ಪೊಲೀಸರು! ತೀವ್ರ ಖಂಡನೆ


