Homeಅಂತರಾಷ್ಟ್ರೀಯದೇಹದ ವಾಸನೆ ಗ್ರಹಿಸಿ ಕೊರೋನಾ ಸೋಂಕು ಪತ್ತೆಹಚ್ಚುವ ಉಪಕರಣಗಳನ್ನು ಕಂಡು ಹಿಡಿದ ಬ್ರಿಟನ್‌

ದೇಹದ ವಾಸನೆ ಗ್ರಹಿಸಿ ಕೊರೋನಾ ಸೋಂಕು ಪತ್ತೆಹಚ್ಚುವ ಉಪಕರಣಗಳನ್ನು ಕಂಡು ಹಿಡಿದ ಬ್ರಿಟನ್‌

- Advertisement -
- Advertisement -

ದೇಶದಲ್ಲಿ ಕೊರೋನಾ ಸಾಂಕ್ರಾಮಿಕದ ಎರಡನೇಯ ಅಲೆಯ ಪ್ರಭಾವ ಸಾಕಷ್ಟು ಇಳಿಮುಖವಾಗಿದೆ. ಅನೇಕ ನಗರಗಳು ಲಾಕ್‌ ಡೌನ್‌ ನಿಂದ ತೆರೆದುಕೊಳ್ಳುತ್ತಿವೆ. ಈ ನಡುವೆ ಜನರ ಓಡಾಟದಿಂದ ಮತ್ತಷ್ಟು ಸೋಂಕು ಹೆಚ್ಚಳವಾಗುವ ಆತಂಕವನ್ನು ತಜ್ಞರು ಹೊರಹಾಕಿದ್ದಾರೆ. ಕೊರೋನಾ ವ್ಯಾಕ್ಸಿನೇಶನ್‌ ಕೂಡ ಸೋಂಕು ನಿಯಂತ್ರಣಕ್ಕೆ ಸಹಾಯ ಮಾಡುವ ಇನ್ನೊಂದು ಅಸ್ತ್ರ. ವ್ಯಾಕ್ಸಿನೇಶನ್‌ ಜೊತೆಗೆ ಕೊರೋನಾ ಸೋಂಕಿತರನ್ನು ಅಂತರದಿಂದಲೇ ಗುರುತಿಸಿ ಕ್ವಾರಂಟೈನ್‌ ಅಥವಾ ಐಸೋಲೇಶನ್‌ ವ್ಯವಸ್ಥೆ ಮಾಡಲು ಸಾಧ್ಯವಾದರೆ? ಹೌದು ಬ್ರಿಟನ್‌ ಒಂದು ಇಂತಹ ತಂತ್ರಜ್ಞಾನದ ಸಂಶೋಧನೆಯಲ್ಲಿ ತೊಡಗಿದೆ. ಸಾರ್ವಜನಿಕ ಪ್ರದೇಶದಲ್ಲಿರುವ ಕೊರೋನಾ ಸೋಂಕಿತರನ್ನು ಪತ್ತೆಹಚ್ಚುವ ವಿಶೇಷ ಸ್ಕಾನಿಂಗ್‌ ತಂತ್ರಜ್ಞಾನವನ್ನು ಬ್ರಿಟನ್‌ ಮೂಲದ ಕಂಪನಿಯೊಂದು ಅಭಿವೃದ್ಧಿಪಡಿಸುತ್ತಿದೆ. ಈ ತಂತ್ರಜ್ಞಾನ ಉಪಕರಣಕ್ಕೆ ಕೋವಿಡ್‌ ಅಲರಾಮ್‌ ಎಂದು ಹೆಸರಿಸಲಾಗಿದೆ.

ಈ ವಿಶೇಷ ಕೋವಿಡ್‌ ಅಲರಾಮ್‌ ಜನನಿಬಿಡ ಮಾರುಕಟ್ಟೆ, ನಗರಗಳ ಬೀದಿಯಲ್ಲಿ ದೂರದಿಂದಲೇ ಜನರ ದೇಹವನ್ನು ಪರೀಕ್ಷಿಸಲು ಶಕ್ತವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಂತರದಿಂದಲೇ ದೇಹದಲ್ಲಿರುವ ವೈರಸ್‌ ಲಕ್ಷಣವನ್ನು ಪತ್ತೆ ಹಚ್ಚಿ ಇದು ಅಲರಾಮ್‌ ನೀಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದರೆ ವೈರಸ್‌ನ ಜೀವರಾಸಾಯನಿಕ ಕ್ರಿಯೆಯಿಂದ ಆ ವ್ಯಕ್ತಿಯ ದೇಹದಲ್ಲಿ ವಿಭಿನ್ನವಾದ ವಾಸನೆ ಉತ್ಪತ್ತಿಯಾಗುತ್ತದೆ. ಈ ವಾಸನೆಯನ್ನು ಕಂಡು ಹಿಡಿಯುವ ಸೆನ್ಸಾರ್‌ಗಳನ್ನು ಅಭಿವೃದ್ಧಿಡಿಸಿದ್ದೇವೆ ಎಂದು ಲಂಡನ್‌ ಸ್ಕೂಲ್‌ ಆಫ್‌ ಹೈಜಿನ್‌ ಎಂಡ್‌ ಟ್ರೋಪಿಕಲ್‌ ಮೆಡಿಸಿನ್ಸ್‌ ( LSHTM) ಸಂಸ್ಥೆಯ ವಿಜ್ಞಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ಅಧಿಕಾರ ಕಳೆದುಕೊಂಡ ನೆತನ್ಯಾಹು: ನಫ್ತಾಲಿ ಬೆನೆಟ್ ಇಸ್ರೇಲ್‍ನ ಹೊಸ ಪ್ರಧಾನಿ

LSHTM ಮತ್ತು ಡರ್ಹಾಮ್‌ ವಿಶ್ವವಿದ್ಯಾಲಯದ  ರೋಬೋ ಸೈಂಟಿಫಿಕ್‌ ಲಿಮಿಟೆಡ್‌ ಎಂಬ ಬಯೋಟೆಕ್‌ ಕಂಪನಿಗಳು ಜಂಟಿಯಾಗಿ ಈ ಸಂಶೋಧನೆಯನ್ನು ನಡೆಸುತ್ತಿವೆ. ಈ ಸಂಬಂಧ ಒರ್ಗಾನಿಕ್‌ ಸೆಮಿಕಂಡಕ್ಟಿಂಗ್ ಸೆನ್ಸರ್‌ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದುವರೆಗಿನ ಪರೀಕ್ಷೆಗಳು ಅತ್ಯಂತ ನಿಖರವಾದ ಫಲಿತಾಂಶಗಳನ್ನು ನೀಡಿವೆ. ಈ ಉಪಕರಣ ಕೊರೋನಾ ಟೆಸ್ಟಿಂಗ್‌ಗೆ ಸಂಬಂಧಿಸಿದಂತೆ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದೆ ಎಂದು  ಲಂಡ್‌ ಸ್ಕೂಲ್‌ ಆಫ್‌ ಹೈಜಿನ್‌ನ ವಿಜ್ಞಾನಿ ಪ್ರೊಫೆಸರ್‌ ಜೇಮ್ಸ್‌ ಲೋಗಾನ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಸೆನ್ಸಾರ್‌ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದರೆ ಸಾರ್ವಜನಿಕ ಪ್ರದೇಶಗಳಲ್ಲಿ ಯಶಸ್ವಿಯಾಗಿ ಅಳವಡಿಸಬಹುದು. ಇದು ಅಷ್ಟೊಂದು ದುಬಾರಿ ಬೆಲೆಯ ಉಪಕರಣವಲ್ಲ. ಮುಂದೆ ಸಂಭವಿಸಬಹುದಾದ ಇತರ ಸೋಂಕುಗಳನ್ನು ಈ ಉಪಕರಣದಿಂದ ಪತ್ತೆಹಚ್ಚಲು ಸಾಧ್ಯವಿದೆ ಎಂದು ಜೇಮ್ಸ್‌ ಲೋಗಾನ್‌ ಅಭಿಪ್ರಾಯಪಡುತ್ತಾರೆ.

ಇದುವರೆಗೆ ಈ ತಂತ್ರಜ್ಞಾನದಿಂದ 54 ಜನರಲ್ಲಿ 27 ಜನರು ಕೋವಿಡ್‌ ಸೋಂಕಿಗೆ ಒಳಗಾಗಿರುವುದನ್ನು ಪತ್ತೆ ಹಚ್ಚಲಾಗಿದೆ. ವ್ಯಕ್ತಿಗಳು ಸೋಂಕು ಲಕ್ಷಣ ಹೊಂದಿರದಿದ್ದರೂ ಈ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿದ್ದೇವೆ. ಸಾಕ್ಸ್‌ ಸೇರಿದಂತೆ ವಿವಿಧ ಸೂಕ್ಷ್ಮಾತಿ ಸೂಕ್ಷ್ಮ ವಾಸನೆಯನ್ನು ಉಪಕರಣ ಗುರುತಿಸಿ ಕೊರೋನಾ ಸೋಂಕು ಇರುವುದನ್ನು ಪತ್ತೆಹಚ್ಚಿದೆ.  ನಾವು ಆರಂಭದಲ್ಲಿ ಕೋವಿಡ್‌ ಸೋಂಕಿತರಲ್ಲಿ ವಿಭಿನ್ನವಾದ ವಾಸನೆಯೊಂದು ಇರುವುದನ್ನು ಮತ್ತು ಸೋಂಕು ಇಲ್ಲದಿರುವವರಲ್ಲಿ ಅಂತಹ ಯಾವುದೇ ವಾಸನೆ ಇಲ್ಲದಿರುವುದನ್ನು ಕಂಡುಕೊಂಡೆವು. ನಮ್ಮ ಅಧ್ಯಯನವು ಈ ಸೂಕ್ಷ್ಮ ವಾಸನೆಯನ್ನು ಗ್ರಹಿಸುವ ಸೆನ್ಸರ್‌ ಒಂದನ್ನು ರೂಪಿಸುವ ಪ್ರಯತ್ನಕ್ಕೆ ತೊಡಗಿದೆವು. ಅದು ಯಶಸ್ವಿಯಾಗಿದೆ. ಬೇರೆ ಎಲ್ಲಾ ರೀತಿಯ ಟೆಸ್ಟಿಂಗ್‌ ವಿಧಾನಗಳಿಗಿಂತ ನಮ್ಮ ಕೋವಿಡ್‌ ಅಲಾರಾಮ್‌ ಟೆಸ್ಟಿಂಗ್‌ ವಿಧಾನವು  ನಿಖರವಾಗಿರುವುದು ಕಂಡುಬಂದಿದೆ. 100%  ಸರಿಯಾದ ಫಲಿತಾಂಶವನ್ನು ನಾವು ಪಡೆದಿದ್ದೇವೆ ಎಂದು ರೋಬೋಸೈಂಟಿಫಿಕ್‌ ಸಂಸ್ಥೆಯು ಹೇಳಿದೆ.

ರೋಬೋ ಸೌಂಟಿಫಿಕ್‌ ಸಂಸ್ಥೆಯು ಈ ತಂತ್ರಜ್ಞಾನದ ಸಹಾಯದಿಂದ ಎರಡು ರೀತಿಯ ಉಪಕರಣವನ್ನು ತಯಾರಿಸಲು ಹೊರಟಿದೆ. ಒಂದು ಕೈಯಲ್ಲಿ ಹಿಡಿದುಕೊಳ್ಳಬಹುದಾದ ಸಣ್ಣ ಉಪಕರಣ. ಮತ್ತೊಂದು ಕೋಣೆಯಲ್ಲಿ ಅಳವಡಿಸಬಹುದಾದ ಟೆಸ್ಟಿಂಗ್‌ ಉಪಕರಣ. ಈ ಉಪಕರಣಗಳನ್ನು ಹೆಚ್ಚಾಗಿ ಸ್ಕೂಲ್‌, ವಿಮಾನಗಳು, ಸರ್ಕಾರಿ ಬಸ್‌ಗಳು, ಕಚೇರಿಗಳು, ಕಂಪನಿಗಳು ಸೇರಿ ಹಲವುಕಡೆ ಪರಿಣಾಮಕಾರಿಯಾಗಿ ಕೊರೋನಾ ಟೆಸ್ಟ್‌ಗೆ ಬಳಸಿಕೊಳ್ಳಬಹುದು ಎಂದು ಕಂಪನಿಯು ತಿಳಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಈ ಉಪಕರಣಗಳಿಂದ ಅತ್ಯಂತ ಸುಲಭವಾಗಿ ಕೊರೋನಾ ಪರೀಕ್ಷೆಯನ್ನು ನಡೆಸಬಹುದಾಗಿದೆ. ಆಟೋಮೇಟಿಕ್‌ ತಂತ್ರಜ್ಞಾನವಾಗಿರುವುದರಿಂದ ಕೊರೋನಾ ಟೆಸ್ಟಿಂಗ್‌ ನಡೆಸಲು ಹೆಚ್ಚಿನ ಜನರ ಅವಶ್ಯಕತೆಯೂ ಇಲ್ಲ. ಜನರು ಸ್ವಯೋ ಪ್ರೇರಿತರಾಗಿ ಪರೀಕ್ಷೆಗೆ ಒಳಗಾಗಿ ತಮಗೆ ತಾವೇ ಫಲಿತಾಂಶವನ್ನು ತಿಳಿದುಕೊಳ್ಳುವ ವ್ಯವಸ್ಥೆ ಇದಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಕೋವಿಡ್‌ ಸೋಂಕಿತರನ್ನು ಪತ್ತೆಹಚ್ಚಿ ಅಲಾರ್ಮ್‌ ನೀಡಲು ಈ ಉಪಕರಣ ಅತ್ಯಂತ ಸಹಾಯಕಾರಿಯಾಗಲಿದೆ ಎಂದು ರೋಬೋ ಸೈಂಟಿಫಿಕ್‌ ಸಂಸ್ಥೆ ಮಾಹಿತಿ ನೀಡಿದೆ.

ಒಟ್ಟಿನಲ್‌ ಕೊರೋನಾ ಟೆಸ್ಟಿಂಗ್‌ ಕೂಡ ಅತ್ಯಂತ ಅಪಾಯಕಾರಿ ಕೆಲಸವಾಗಿರುವ ನಮ್ಮ ದೇಶದಲ್ಲಿ ಇಂತಹ ಆಟೋಮ್ಯಾಟಿಕ್‌ ಉಪಕರಣಗಳ ಅವಶ್ಯಕತೆ ಇದೆ. ಟೆಸ್ಟಿಂಗ್‌ ಕೂಡ ಸಾಧ್ಯವಿಲ್ಲದಷ್ಟು ಬೃಹತ್‌ ಜನಸಂಖ್ಯೆಯ ಭಾರತದಲ್ಲಿ ಇಂತಹ ಸ್ವಯಂಚಾಲಿತ ತಂತ್ರಜ್ಞಾನ ವ್ಯವಸ್ಥೆಗಳು ಹೆಚ್ಚು ಉಪಯೋಗಕ್ಕೆ ಬರುತ್ತವೆ. ಆದರೆ ಈ ಕೋವಿಡ್‌ ಅಲಾರಾಮ್‌ ತಂತ್ರಜ್ಞಾನ ಬ್ರಿಟನ್‌ನಲ್ಲಿ ಅಭಿವೃದ್ಧಿಗೊಂಡು ಭಾರತಕ್ಕೆ ಬರಲು ಎಷ್ಟು ಕಾಲ ಬೇಕಾಗಬಹದು ಎಂಬುದು  ತಿಳಿದಿಲ್ಲ.


ಇದನ್ನೂ ಓದಿ :ಎಲ್‌‌ಜೆಪಿಯಲ್ಲಿ ಬಂಡಾಯ; ಸೇಡು ತೀರಿಸುತ್ತಿದ್ದಾರೆಯೆ ನಿತೀಶ್ ಕುಮಾರ್‌?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...