ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಮತ್ತು ಕ್ರಮೇಣ ಇದು ಉತ್ತರ ಪ್ರದೇಶ ಮತ್ತು ಬಿಹಾರದಂತಹ ಮಾಫಿಯಾ ಆಡಳಿತದ ರಾಜ್ಯವಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ನಿನ್ನೆ ಆರೋಪಿಸಿದ್ದರು. ಮಾಫಿಯಾ ರಾಜ್ ಹೇಳಿಕೆಗೆ ಜನ ಟ್ವಿಟ್ಟರ್‌ನಲ್ಲಿ ದಿಲೀಪ್ ಘೋಷ್‌ಗೆ ಧನ್ಯವಾದ ಸಲ್ಲಿಸಿ ವ್ಯಂಗ್ಯವಾಡಿದ್ದಾರೆ.
‘ಪಶ್ಚಿಮ ಬಂಗಾಳವು ಉತ್ತರ ಪ್ರದೇಶ ಮತ್ತು ಬಿಹಾರದಂತಹ ಮಾಫಿಯಾ-ರಾಜ್ ವ್ಯವಸ್ಥೆಗೆ ಜಾರುತ್ತಿದೆ. ಸ್ಟೆನ್‌ಗನ್ ಬಳಸಿ ಪೊಲೀಸ್ ಠಾಣೆಯ ಮುಂದೆಯೇ ಕೌನ್ಸಿಲರ್‌ನನ್ನು ಗುಂಡಿಕ್ಕಿ ಕೊಂದಿದ್ದು ನಾಚಿಕೆಗೇಡಿನ ಘಟನೆ’ ಎಂದು ಘೋಷ್ ಹೇಳಿದ್ದರು. ಉತ್ತರ 24 ಪರಗಣ ಜಿಲ್ಲೆಯ ತಿತಾಗರ್‌ನಲ್ಲಿ ಬಿಜೆಪಿ ನಾಯಕ ಮನೀಶ್ ಶುಕ್ಲಾ ಅವರನ್ನು ಗುಂಡಿಟ್ಟು ಕೊಂದಿದ್ದನ್ನು ಉಲ್ಲೇಖಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ತೃಣಮೂಲ ಕಾಂಗ್ರೆಸ್, ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶ ಮತ್ತು ಬಿಹಾರ ಎರಡು ರಾಜ್ಯಗಳಲ್ಲಿ ಮಾಫಿಯಾ-ರಾಜ್ ಅಸ್ತಿತ್ವದಲ್ಲಿದೆ ಎಂದು ಒಪ್ಪಿಕೊಳ್ಳುವುದು ಒಳ್ಳೆಯ ಬೆಳವಣಿಗೆ ಎಂದು ವ್ಯಂಗ್ಯವಾಡಿತ್ತು.
ಇದನ್ನೂ ಓದಿ: ’ಯುಪಿ, ಬಿಹಾರದಂತೆ ಪ.ಬಂಗಾಳವೂ ಮಾಫಿಯಾ ರಾಜ್ಯವಾಗುತ್ತಿದೆ’- ಬಿಜೆಪಿ ನಾಯಕ
“ಬಿಜೆಪಿ ಆಡಳಿತದ ಯುಪಿ ಮತ್ತು ಬಿಹಾರದಲ್ಲಿ ಮಾಫಿಯಾ ರಾಜ್ ಅಸ್ತಿತ್ವದಲ್ಲಿದೆ ಎಂದು ಅವರು ಒಪ್ಪಿಕೊಂಡಿರುವುದು ಒಳ್ಳೆಯದು. ಒಮ್ಮೆಯಾದರೂ ಅವರು ಸತ್ಯವನ್ನು ಮಾತನಾಡಿದ್ದಕ್ಕೆ ನಮಗೆ ಸಂತೋಷವಾಗಿದೆ ”ಎಂದು ಟಿಎಂಸಿಯ ಹಿರಿಯ ಮುಖಂಡ ಮತ್ತು ಸಚಿವ ಫಿರ್ಹಾದ್ ಹಕೀಮ್ ವ್ಯಂಗ್ಯವಾಡಿದ್ದರು.
ಟ್ವಿಟ್ಟರ್‌ನಲ್ಲಿ ಬಿಜೆಪಿ ನಾಯಕನ ಹೇಳಿಕೆಯನ್ನು ಟ್ಯಾಗ್ ಮಾಡಿ ಹಲವು ಮಂದಿ ’ಯುಪಿ ಮತ್ತು ಬಿಹಾರದಲ್ಲಿ ಮಾಫಿಯಾ ರಾಜ್ ಆಡಳಿತವಿದೆ ಎಂದು ಸತ್ಯ ನುಡಿದಿದ್ದಕ್ಕೆ ಥ್ಯಾಂಕ್ಯೂ ದಿಲೀಪ್ ಘೋಷ್’ ಎಂದಿದ್ದಾರೆ.
Thank You Dilip Ghosh for speaking truth that UP and Bihar are ruled by Mafia.#HathrasHorror https://t.co/u8lo6y1Fig
— Worried Citizen/चिन्तित नागरिक (@WorriedCtizen) October 6, 2020
#dilipghosh admitted truth about bjp https://t.co/2SKzmGajkl
— ?hibendu?odder ? (@Imtony_26) October 6, 2020
ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಟ್ವಿಟ್ ಮಾಡಿ ’ದಿಲೀಪ್ ಘೋಷ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತು ಬಿಹಾರದ ನಿತೀಶ್ ಕುಮಾರ್ ಸರ್ಕಾರದಲ್ಲಿ ಮಾಫಿಯಾ ರಾಜ್ ನಡೆಯುತ್ತಿದೆ ಎಂದು ಒಪ್ಪಿಕೊಂಡಿರುವುದಕ್ಕೆ ಧನ್ಯವಾದ’ ಎಂದಿದ್ದಾರೆ.
.@DilipGhoshBJP का बहुत-बहुत आभार यह मानने के लिए कि उत्तर प्रदेश में @myogiadityanath और बिहार में इनके गठबंधन के सहयोगी @NitishKumar ने माफिया राज को कायम रखा है। ?https://t.co/btcUNfJir0
— Abhishek Banerjee (@abhishekaitc) October 6, 2020
Great realisation from BJP state President Dilip Ghosh that they have turned UP and Bihar into Mafia Raj….
Modi ji are you listening?????? You state President is calling your governance as Mafia Raaj….. Great but true…
Thanks Dilip Ghosh for recognising true BJP …. https://t.co/BnboEWufEt
— Singh Manoj K (@singhmk72) October 6, 2020
I don't think this is slip of tongue, It's a kind of protest…
Diluda deliberately did,registering his unhappiness regarding promotion of Mukul Roy.. https://t.co/DZU2eiUOHw— Raja banerjee (@Rajaban74609782) October 6, 2020
ಕೆಲ ಮೂಲಗಳ ಪ್ರಕಾರ ಮುಕುಲ್ ರಾಯ್ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಲು ದಿಲೀಪ್ ಘೋಷ್ ಹೀಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.


