Homeಕರೋನಾ ತಲ್ಲಣಮಹಾರಾಷ್ಟ್ರ: ನಾಸಿಕ್‌ನ ಆಸ್ಪತ್ರೆ ಹೊರಗೆ ಆಮ್ಲಜನಕ ಟ್ಯಾಂಕರ್ ಸೋರಿಕೆ, 22 ಮಂದಿ ಸಾವು

ಮಹಾರಾಷ್ಟ್ರ: ನಾಸಿಕ್‌ನ ಆಸ್ಪತ್ರೆ ಹೊರಗೆ ಆಮ್ಲಜನಕ ಟ್ಯಾಂಕರ್ ಸೋರಿಕೆ, 22 ಮಂದಿ ಸಾವು

- Advertisement -
- Advertisement -

ಮಂಗಳವಾರ ಮಹಾರಾಷ್ಟ್ರದ ನಾಸಿಕ್‌ನ ಆಸ್ಪತ್ರೆಯ ಹೊರಗೆ ಆಮ್ಲಜನಕ ಟ್ಯಾಂಕರ್ ಸೋರಿಕೆಯಾದ ಹಿನ್ನೆಲೆ 22 ಜನರು ಸಾವನ್ನಪ್ಪಿದ್ದಾರೆ. ಆಮ್ಲಜನಕದ ಟ್ಯಾಂಕರ್‌ ಸೋರಿಕೆಯಿಂದಾಗಿ ಸುಮಾರು 30 ನಿಮಿಷಗಳ ಕಾಲ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿತ್ತು.

ನಾಸಿಕ್‌ ನಗರದ ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಇದು ಕೊರೊನಾ ಸೋಂಕಿತ ರೋಗಿಗಳಿಗೆ ಮೀಸಲಾಗಿದೆ. ಸುಮಾರು 150 ರೋಗಿಗಳಿಗೆ ಆಮ್ಲಜನಕದ ಅಗತ್ಯವಿತ್ತು, ಅವರೆಲ್ಲರೂ ವೆಂಟಿಲೇಟರ್‌ಗಳಲ್ಲಿದ್ದರು.

ಮೃತ 11 ಮಂದಿ ಕೊರೊನಾ ಸೋಂಕಿತರು ವೆಂಟಿಲೇಟರ್‌ಗಳಲ್ಲಿದ್ದವರು. ಆಮ್ಲಜನಕದ ಪೂರೈಕೆ ಸ್ಥಗಿತವೇ ಸಾವಿಗೆಮ ಕಾರಣ. ತನಿಖೆ ಬಳಿಕ ತ್ತಷ್ಟು ಮಾಹಿತಿ ದೊರೆಯಲಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

ಇದನ್ನೂ ಓದಿ: ದೇಶದೆಲ್ಲೆಡೆ ಆಮ್ಲಜನಕ ಕೊರತೆ: ಒಂದು ವರ್ಷದಲ್ಲಿ ಭಾರತದ ಆಮ್ಲಜನಕ ರಫ್ತು 700% ಕ್ಕಿಂತ ಹೆಚ್ಚಾಗಿದೆ!

“ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ನಾಸಿಕ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದ 11 ರೋಗಿಗಳು ಸಾವನ್ನಪ್ಪಿದ್ದಾರೆ. ಈ ರೋಗಿಗಳಿಗೆ ಆಮ್ಲಜನಕವನ್ನು ಪೂರೈಸುತ್ತಿದ್ದ ಆಮ್ಲಜನಕ ಟ್ಯಾಂಕರ್‌ನಲ್ಲಿ ಸೋರಿಕೆ ಕಂಡುಬಂದಿದೆ. ಸೋರಿಕೆಯಿಂದಾಗಿ ಆಕ್ಸಿಜನ್ ಪೂರೈಕೆ ಸ್ಥಗಿತವಾಗಿದ್ದು, ಆಸ್ಪತ್ರೆಯಲ್ಲಿದ್ದ 11 ರೋಗಿಗಳ ಸಾವಿಗೆ ಕಾರಣವಾಗಿದೆ” ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ ಎಂದು ಎನ್‌ಡಿಟಿವಿ ಉಲ್ಲೇಖಿಸಿದೆ.

ಆಮ್ಲಜನಕ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿ, ಸುತ್ತಮುತ್ತಲಿನ ಪ್ರದೇಶಗಳನ್ನು ಹೊಗೆಯಿಂದ ಆವರಿಸುವುದನ್ನು ವಿಡಿಯೋಗಳಲ್ಲಿ ನೋಡಬಹುದು. ಆಮ್ಲಜನಕ ಅಗತ್ಯವಿರುವ 80 ರಲ್ಲಿ 31 ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.

ಆಮ್ಲಜನಕ ಸೋರಿಕೆಗೆ ಕಾರಣರಾದ ಜನರಿಗೆ ಶಿಕ್ಷೆಯಾಗಬೇಕು ಎಂದು ಎನ್‌ಸಿಪಿ ನಾಯಕ ಮಜೀದ್ ಮೆಮನ್ ಟ್ವೀಟ್ ಮಾಡಿದ್ದಾರೆ.

“ನಾಸಿಕ್‌ನಲ್ಲಿ ನಡೆದದ್ದು ಭಯಾನಕ ದುರಂತ. 11 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ, ಇದು ತುಂಬಾ ಗೊಂದಲದ ಸಂಗತಿಯಾಗಿದೆ. ಇತರ ರೋಗಿಗಳಿಗೆ ಸರ್ಕಾರ ಸಹಾಯಕ್ಕೆ ನಿಲ್ಲಬೇಕು. ಅಗತ್ಯವಿದ್ದರೆ ಅವರನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ವಿವರವಾದ ವಿಚಾರಣೆ ನಡೆಯಬೇಕು ಎಂದು ನಾವು ಒತ್ತಾಯಿಸುತ್ತೇವೆ” ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.


ಇದನ್ನೂ ಓದಿ: ಆಕ್ಸಿಜನ್‌ಗಾಗಿ ರೋಗಿಗಳು ಕಾಯಬೇಕೆಂದು ಹೇಳುತ್ತೀರಾ?: ಕೇಂದ್ರದ ವಿರುದ್ಧ ಕಿಡಿಕಾರಿದ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...