ಆಮ್ಲಜನಕ ಮತ್ತು ರೆಮ್‌ಡೆಸಿವಿರ್‌ನ ಪೂರೈಕೆಗೆ ಬೇಕಾಗಿ 24×7 ಗಂಟೆಗಳ ವಾರ್‌ರೂಮ್ ಸ್ಥಾಪಿಸಿಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಬುಧವಾರ ಹೇಳಿದ್ದಾರೆ. ಕೊರೊನಾ ಸೋಂಕು ರಾಜ್ಯದಲ್ಲಿ ತೀವ್ರ ರೀತಿಯಲ್ಲಿ ಹರಡುತ್ತಿದೆ. ಹಲವು ರಾಜ್ಯಗಳು ವೈದ್ಯಕೀಯ ಆಮ್ಲಜನಕ ಮತ್ತು ರೆಮ್‌ಡೆಸಿವಿರ್ ಕೊರತೆಯ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಹೇಳಿಕೊಂಡಿದೆ.
ಇದನ್ನೂ ಓದಿ: ರೋಣಾ ವಿಲ್ಸನ್ ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸುಳ್ಳು ದೋಷಾರೋಪಣೆ ಸೇರಿಸಲಾಗಿದೆ: ಹೊಸ ಸಾಕ್ಷ್ಯಗಳ ವರದಿ
ವಾರ್ ರೂಮ್‌ನ ತಂಡವು ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಸುಧಾಕರ್ ಹೇಳಿದ್ದು, ‘ರೋಗಿಗಳಿಗೆ ಆಮ್ಲಜನಕ ಮತ್ತು ರೆಮ್‌ಡೆಸಿವಿರ್‌ನ ಪೂರೈಕೆ, ಅವಶ್ಯಕತೆ, ಲಭ್ಯತೆಯ ಮಾಹಿತಿಯನ್ನು ಸಂಗ್ರಹಿಸಲು ಹಾಗೂ ಒದಗಿಸಲು ಈ ವಾರ್ ರೂಂ ಆರಂಭಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಚಿವ ಸುಧಾಕರ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಾಹಿತಿ ನೀಡಿದ್ದಾರೆ.
In order to ensure timely & sufficient supply of Oxygen and #Remdesivir a 24/7 war room has been established with staff working round the clock in 3 shifts.
ಆಕ್ಸಿಜನ್ ಮತ್ತು ರೆಮಿಡಿಸಿವಿರ್ ಪೂರೈಕೆಗೆ 24/7 ವಾರ್ ರೂಮ್ ಸ್ಥಾಪಿಸಲಾಗಿದ್ದು, ಸಿಬ್ಬಂದಿಗಳು 3 ಪಾಳಿಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. pic.twitter.com/cwnfytDEwk
— Dr Sudhakar K (@mla_sudhakar) April 21, 2021
ರಾಜ್ಯದಲ್ಲಿ ಮಂಗಳವಾರ ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿದ್ದು, ನೈಟ್ ಕರ್ಫ್ಯೂ ಅನ್ನು ಧೀರ್ಘಗೊಳಿಸಲಾಗಿದೆ. ಜೊತೆಗೆ ವಾರಾಂತ್ಯದಲ್ಲಿ ಸಂಪೂರ್ಣ ಕರ್ಫ್ಯೂ ಹೇರಲಾಗುತ್ತದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ.
ಇದನ್ನೂ ಓದಿ: ಲಸಿಕೆಯ ಬೆಲೆ ಘೋಷಿಸಿದ ಸೀರಮ್-ಕೇಂದ್ರಕ್ಕಿಂತ ರಾಜ್ಯಕ್ಕೆ ಹೆಚ್ಚು ಬೆಲೆ ನಿಗದಿ; ಕಾಂಗ್ರೆಸ್ ಆರೋಪ
ವಿಡಿಯೊ ನೋಡಿ: ಕೇಳು ದೊರೆಯೆ ಕತೆಯನ್ನ.. ಅನ್ನ ಹಾಕುವ ಅರಸರಿಗಾದ ಅನ್ಯಾಯದ ಈ ಕತೆಯನ್ನ.. ರಚನೆ ಮತ್ತು ಹಾಡುಗಾರಿಗೆ ಮೈಲಾರಪ್ಪ ಬೂದಿಹಾಳ