Homeಮುಖಪುಟಮಹಿಳಾ ಒಕ್ಕೂಟಕ್ಕೆ ದಶಕದ ಸಂಭ್ರಮ: ಸಂವಿಧಾನವೇ ಉಸಿರು, ಬಹುತ್ವವೇ ಬದುಕು ಕಾರ್ಯಕ್ರಮ

ಮಹಿಳಾ ಒಕ್ಕೂಟಕ್ಕೆ ದಶಕದ ಸಂಭ್ರಮ: ಸಂವಿಧಾನವೇ ಉಸಿರು, ಬಹುತ್ವವೇ ಬದುಕು ಕಾರ್ಯಕ್ರಮ

ಇಂದು ನಾವೆಲ್ಲ ಅನುಭವಿಸುತ್ತಿರುವ ಸ್ವಾತಂತ್ಯ್ರವು ಮಹಿಳಾ ಚಳವಳಿಯ ಫಲವೇ ಆಗಿದೆ.

- Advertisement -
- Advertisement -

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೆ ಹತ್ತು ವರ್ಷ ಪೂರೈಸಿದ ನೆನಪಿನಲ್ಲಿ ಸಂವಿಧಾನವೇ ಉಸಿರು, ಬಹುತ್ವವೇ ಬದುಕು’ ಹೆಸರಿನಲ್ಲಿ ಒಗ್ಗೂಡುವ ಹಬ್ಬ ನಡೆಯಿತು. ಹಲವು ಚಿಂತಕಿಯರು, ಹೋರಾಟಗಾರ್ತಿಯರು ಭಾಗವಹಿಸಿ ಹೋರಾಟದ ಮಹತ್ವದ ಕುರಿತು ಮಾತನಾಡಿದರು.

ಜೆಎನ್‌ಯು ನಿವೃತ್ತ ಪ್ರಾಧ್ಯಾಪಕಿ ಜಾನಕಿ ನಾಯರ್ ಮಾತನಾಡಿ, “ಭಾರತದ ಮಹಿಳಾವಾದಿ ಚಳವಳಿ ಸ್ವತಂತ್ರ ಭಾರತದಲ್ಲಿ ಕಾನೂನು ಮತ್ತು ನ್ಯಾಯದ ನಡುವೆ ಇರುವ ಅಂತರವನ್ನು ಬೆಳಕಿಗೆ ತಂದಿದೆ. ಇಂದಿನ ಸಮಾಜದಲ್ಲಿ ಹಕ್ಕುಗಳ ರಕ್ಷಣೆಗೆ ಸಂಪ್ರದಾಯವೇ ಸಾಕು, ಸಂವಿಧಾನದ ಅಗತ್ಯವೇ ಇಲ್ಲವೆಂಬಂತೆ ಬಲಪಂಥೀಯ ದಾಳಿ ನಡೆಯುತ್ತಿದೆ. ಹೀಗಾಗಿ ಸಂವಿಧಾನವೇ ಬದುಕು ಮತ್ತು ಬಹುತ್ವವೇ ಉಸಿರು ಎಂಬ ಹೋರಾಟ ಹಿಂದೆಂದಿಗಿಂತಲೂ ಇಂದು ಅತ್ಯಗತ್ಯವಿದೆ ಎಂದು ಹೇಳಿದರು.

ಎನ್ಎಫ್‌ಡಿಡಬ್ಲ್ಯೂ ಸಂಘಟನೆಯ ಸ್ಥಾಪಕ ಅಧ್ಯಕ್ಷೆ ರುತ್ ಮನೋರಮಾ ಮಾತನಾಡಿ, “ಇಂದು ನಾವೆಲ್ಲ ಅನುಭವಿಸುತ್ತಿರುವ ಸ್ವಾತಂತ್ಯ್ರವು ಮಹಿಳಾ ಚಳವಳಿಯ ಫಲವೇ ಆಗಿದೆ. ಮಹಿಳೆಯರ ಮೇಲಿನ ಎಲ್ಲ ಬಗೆಯ ದೌರ್ಜನ್ಯಗಳು ಹೆಚ್ಚಾಗಲು ಸಾಮಾಜಿಕ-ಆರ್ಥಿಕ ಪ್ರಾಬಲ್ಯವೇ ಕಾರಣ. ಯುವ ಮಹಿಳೆಯರು ಮನೆಯಿಂದ ಹೊರಬನ್ನಿ, ಅನ್ಯಾಯ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಬೇಕು” ಎಂದು ಕರೆ ನೀಡಿದರು.

“ಕುಟುಂಬ, ಕೆಲಸದ ಸ್ಥಳ, ಸಂಘಟನೆ ಎಲ್ಲೆಡೆ ಜಾತಿ, ಜನಾಂಗೀಯ ಭೇದಗಳಿವೆ. ರಾಜಕೀಯದಲ್ಲಿಯೂ ಇಂತಹ ಭೇದಭಾವಗಳಿವೆ. ದೇಶದೆಲ್ಲೆಡೆ ದ್ವೇಷದ ರಾಜಕಾರಣ ನಡೆಯುತ್ತಿದೆ. ಸಮಾನತೆಯಿಂದ ಮಾತ್ರವೇ ಇದನ್ನು ಹೊಡೆದುರುಳಿಸಲು ಸಾಧ್ಯ.. ಸಮಾನತೆ ಮತ್ತು ಸಾಮಾಜಿಕ ನ್ಯಾಯ ಮಹಿಳೆಯರಿಗೆ ಹುಟ್ಟಿನಿಂದಲೇ ಇರುವ ಹಕ್ಕುಗಳು. ಪ್ರಭುತ್ವವು ಸಂವಿಧಾನ ಮತ್ತು ಮಹಿಳೆಯರ ಹಕ್ಕುಗಳನ್ನು ಗೌರವಿಸಬೇಕು” ಎಂದು ಹೇಳಿದರು.

ಮನೆಯೊಳಗೆ ಹೆಣ್ಣು, ಹೊರಗೆ ಗಂಡು ಎಂಬ ವರ್ಗೀಕರಣದ ಮಾದರಿಗಳನ್ನು ಒಡೆದು ಸಮಾಜದಲ್ಲಿ ಮಹಿಳೆಯರ ರಾಜಕೀಯ ಭಾಗವಹಿಸುವಿಕೆ ಆರಂಭವಾಗಬೇಕು. ಮಹಿಳೆಯ ಜಗತ್ತು ಯಾವಾಗ ಮನೆಯಿಂದ ಆಚೆಗೆ ವಿಸ್ತರಿಸುತ್ತದೆಯೋ ಅಂದು ಮಹಿಳಾ ವಿಮೋಚನೆಯ ಹಾದಿ ತೆರೆದುಕೊಳ್ಳಲಾರಂಭಿಸುತ್ತದೆ ಎಂದು ಲೇಖಕಿ ಎನ್ ಗಾಯತ್ರಿ ಅಭಿಪ್ರಾಯಪಟ್ಟರು.

‘‘ಹೆಣ್ಣಿನ ಅಸ್ಮಿತೆಯನ್ನು ಸ್ಥಾಪಿಸಿಕೊಳ್ಳುವುದು, ಮಹಿಳಾ ಅಜೆಂಡಾಗಳು ರಾಜಕೀಯ ಹೋರಾಟವಾಗಬೇಕು. ಸಂವಿಧಾನದಲ್ಲಿ ಸ್ತ್ರೀ-ಪುರುಷ ಸಮಾನತೆಯ ಬಗ್ಗೆ ಮಾತನಾಡುವಾಗಲು ಸಮಾಜದೊಳಗೆ ಇರುವ ಅಸಮಾನತೆ ವಿರುದ್ಧ ಹೋರಾಟ ಹೇಗೆ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಹೆಣ್ಣಿನ ಅಸ್ಮಿತೆಯನ್ನು ಸ್ಥಾಪಿಸಿಕೊಳ್ಳುವ ಯೋಚನೆ ಮತ್ತು ಚಿಂತನೆ ಬಂದಾಗ ಮಾತ್ರ ಚರಿತ್ರೆಯನ್ನು ದಾಖಲಿಸಬೇಕು ಎನ್ನುವ ಮನೋಭಾವ ಮೂಡಲು ಸಾಧ್ಯ” ಎಂದರು.

“ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಬೇಕು-ಬೇಡ ಎನ್ನುವ ವಿಷಯ ಬಂದಾಗ ಎಲ್ಲ ಪಕ್ಷಗಳಲ್ಲಿರುವ ಮಹಿಳೆಯರು ಮಾತನಾಡುತ್ತಾರೆ. ಆದರೆ, ಅತ್ಯಾಚಾರ, ದೌರ್ಜನ್ಯದ ವಿಷಯ ಬಂದಾಗ ಆ ಮಹಿಳೆಯರು ಧ್ವನಿ ಎತ್ತದೇ ಇರುವುದು ಆಶ್ಚರ್ಯ. ಸಂಸತ್ತಿನಲ್ಲಿ ಮಹಿಳೆಯರು ಹೆಚ್ಚಿರಬೇಕು ಎಂದು ಹೇಳಲಾಗುತ್ತದೆ. ಆದರೆ, ಇರುವ ಮಹಿಳೆಯರು ಧ್ವನಿ ಎತ್ತಿ ಮಾತನಾಡಿದಾಗ ಅವರ ಚಾರಿತ್ರ್ಯವಧೆ ಮಾಡುವ, ನಿಂದಿಸಿರುವ ಹಲವು ಉದಾಹರಣೆಗಳಿವೆ. ಕರ್ನಾಟಕದ ವಿಧಾನಸಭೆಯಲ್ಲಿಯೇ ಜನಪ್ರತಿನಿಧಿಗಳು ಮಹಿಳೆಯರ ಬಗ್ಗೆ ಮಾತನಾಡಿದಾಗ, ಆ ಸಭೆಯಲ್ಲಿದ್ದ ಮಹಿಳೆಯರು ಮೌನವಹಿಸಿದ್ದನ್ನು ನೋಡಬಹುದು. ರಾಜಕೀಯದಲ್ಲಿ ಮಹಿಳೆಯರು ಒಗ್ಗಟ್ಟಿನಿಂದ ಇಂತಹ ದೌರ್ಜನ್ಯಗಳ ವಿರುದ್ಧ ಮಾತನಾಡಬೇಕಿದೆ” ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ವಿವಿಯ ನಿವೃತ್ತ ಕುಲಪತಿ ಸಬಿಹಾ ಭೂಮಿಗೌಡ, “ಜನಸಂಖ್ಯೆಯ ಅರ್ಧದಷ್ಟಿರುವ ನಾವು ಒಂದು ವರ್ಗವಾಗಿ, ಒಂದು ಶಕ್ತಿಯಾಗಲು ಸಾಧ್ಯವಾಗಿಲ್ಲ ಏಕೆ?. ಈ ನಿಟ್ಟಿನಲ್ಲಿ ನಾವೆಲ್ಲರೂ ಮಹಿಳೆಯಾಗಿ ಒಗ್ಗೂಡಲು ಏಕೆ ಸೋತಿದ್ದೇವೆ?. ನಮಗಾಗುತ್ತಿರುವ ಅಡ್ಡಿಯಗಳೇನು?  ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ” ಎಂದರು.

“ಮಹಿಳೆ ಎನ್ನುವ ಏಕೈಕ ಕಾರಣಕ್ಕಾಗಿ ನಾವೆಲ್ಲರೂ ಒಂದುಗೊಡಲು ಈವರೆಗೂ ಸಾಧ್ಯವಾಗಿಲ್ಲ. ಅದಕ್ಕೆ ವಾತಾವರಣ ವಲಯ ಎಲ್ಲವೂ ಕಾರಣ. ನಾವು ಶಕ್ತಿಯಾಗಿ ರೂಪುಗೊಳ್ಳದೇ ಇರಲು ಜಾತಿ, ಧರ್ಮ, ಭಾಷೆ, ಆಹಾರ, ವೃತ್ತಿ, ಶಿಕ್ಷಣ ಹೀಗೆ ನೂರಾರು ಕಂಪಾರ್ಟ್ಮೆಂಟ್‌ಗಳ ಒಳಗೆ ಸಿಲುಕಿದ್ದೇವೆ. ಇವೆಲ್ಲದರಿಂದ ಹೊರಗೆ ಬರಲು ಸಾಧ್ಯವಾದ ದಿನ ನಾವು ಎಲ್ಲರೂ ಒಂದು ಶಕ್ತಿಯಾಗಿ ಕೆಲಸ ಮಾಡಲು ಸಾಧ್ಯ” ಎಂದು ತಿಳಿಸಿದರು.

“ಉಳಿದ ಚಳವಳಿ, ಹೋರಾಟ ವಲಯಗಳಲ್ಲಿ ಶೋಷಕ ವರ್ಗಗಳು ಸ್ಫುಟವಾಗಿ ಕಾಣುವಂತೆ ಮಹಿಳೆಯನ್ನು ಶೋಷಿರುತ್ತಿರುವವರು ಹಾಗೆ ಕಾಣುವುದಿಲ್ಲ. ಏಕೆಂದರೆ, ಇದು ನಮ್ಮ ಭಾವ ಜಗತ್ತಿನ ಒಳಗೆ ಸ್ಥಾಪಿತರಾದವರ ಜೊತೆಗೆ ನಮ್ಮ ನಿರಂತರ ಗುದ್ದಾಟ ಇದೆ. ಆದ್ದರಿಂದಲೇ ಇದು ಕಾಣುವುದಿಲ್ಲ. ನಮ್ಮನ್ನು ಈ ರೀತಿ ಕಟ್ಟಿಹಾಕಿರುವ ಎಲ್ಲ ಗೋಡೆಗಳನ್ನು ಒಡೆದು, ಅರಿವಿನ ಮೂಲಕ ಹೊರಬರಬೇಕಿದೆ” ಎಂದು ಅವರು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಎಚ್.ಎಸ್‌ ಅನುಪಮಾ, ಸುನಂದಾ ಕಡಮೆ, ಸಬಿತಾ ಬನ್ನಾಡಿ, ಮಲ್ಲಿಗೆ, ಆರ್ ಪ್ರತಿಭಾ, ರತಿರಾವ್, ಸುಮನಾ, ವಾಣಿ ಪೆರಿಯೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ; ಮುಸ್ಲಿಮರನ್ನು ಹೊರಗಟ್ಟಲಿಕ್ಕೆ ಇಷ್ಟು ಹುನ್ನಾರ ಬೇಕಿತ್ತೆ?: ಲೇಖಕಿ ಬಾನು ಮುಷ್ತಾಕ್ ಪ್ರಶ್ನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...