Homeಮುಖಪುಟಮಣಿಪುರ ಸಂಘರ್ಷ: ಎಡಿಟರ್ಸ್ ಗಿಲ್ಡ್ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರು

ಮಣಿಪುರ ಸಂಘರ್ಷ: ಎಡಿಟರ್ಸ್ ಗಿಲ್ಡ್ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರು

- Advertisement -
- Advertisement -

ಮಣಿಪುರ ಹಿಂಸಾಚಾರದ ಕುರಿತು ಅಲ್ಲಿಯ ಕೆಲವು ಪತ್ರಕರ್ತರು ಏಕಪಕ್ಷೀಯವಾಗಿ ವರದಿ ಮಾಡಿದ್ದಾರೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಸತ್ಯಶೋಧನಾ ತಂಡ ಶನಿವಾರ ವರದಿ ಬಿಡುಗಡೆ ಮಾಡಿದೆ. ಈ ವರದಿಗೆ ಸಂಬಂಧಿಸಿದಂತೆ ಸತ್ಯಶೋಧನಾ ತಂಡದ ಮೂವರ ವಿರುದ್ಧ ಮಣಿಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66Aಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದರೂ ಸಹ ಪೊಲೀಸರು ಜಾರಿಯಲ್ಲಿಟ್ಟಿದ್ದಾರೆ. ಅನೇಕ ಸಂದರ್ಭಗಳಲ್ಲಿ, ಈ ನಿಬಂಧನೆಯ ಅಡಿಯಲ್ಲಿ ಯಾರನ್ನೂ ವಿಚಾರಣೆಗೆ ಒಳಪಡಿಸಬಾರದು ಎಂದು ನ್ಯಾಯಾಲಯವು ನಿರ್ದೇಶಿಸಿದೆ.

”ಆಕ್ಷೇಪಾರ್ಹ ಮತ್ತು ಬೆದರಿಕೆಯ” ಪೋಸ್ಟಗಳನ್ನು ಆನ್‌ಲೈನ್ ಬರೆಯುವ ವ್ಯಕ್ತಿಗಳನ್ನು ಬಂಧಿಸಲು ಮತ್ತು ಜೈಲಿನಲ್ಲಿಡಲು ಸರ್ಕಾರಕ್ಕೆ ಸೆಕ್ಷನ್ 66A ಅಡಿಯಲ್ಲಿ ಅಧಿಕಾರವನ್ನು ನೀಡಿದೆ.

ಸತ್ಯಶೋಧನಾ ತಂಡದ ಮೂವರ ವಿರುದ್ಧ ”ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸುವುದು  ಅಥವಾ ಅಪವಿತ್ರಗೊಳಿಸುವುದು, ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಉದ್ದೇಶಪೂರ್ವಕವಾಗಿ ಮಾತನಾಡುವುದು ಮತ್ತು ಸಾರ್ವಜನಿಕವಾಗಿ ಗಲಭೆಗೆ ಪ್ರಚೋದಿಸುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವರದಿಯ ಲೇಖಕರಾದ ಸೀಮಾ ಗುಹಾ, ಭರತ್ ಭೂಷಣ್, ಸಂಜಯ್ ಕಪೂರ್ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷೆ ಸೀಮಾ ಮುಸ್ತಫಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವರದಿಯು “ಸುಳ್ಳು, ಮತ್ತು ಪ್ರಾಯೋಜಿತ” ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ. ವರದಿಯಲ್ಲಿನ ಫೋಟೋವು ಕುಕಿ ಮನೆಯಿಂದ ಹೊಗೆ ಏರುತ್ತಿದೆ ಎಂದು ತಪ್ಪಾಗಿ ಹೇಳಲಾಗಿದೆ, ಆದರೆ ಅದು ವಾಸ್ತವವಾಗಿ ಅರಣ್ಯ ಅಧಿಕಾರಿಯ ಕಚೇರಿಯಾಗಿದೆ. ವರದಿಯು ಸುಳ್ಳು ಮತ್ತು ಕುಕಿ ಉಗ್ರಗಾಮಿಗಳಿಂದ ಪ್ರಾಯೋಜಿತವಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್: ಯುದ್ಧಭೂಮಿ ಮಣಿಪುರದ ಚದುರಿದ ಚಿತ್ರಗಳು

ವರದಿ ಏನು ಹೇಳಿದೆ?

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಕುರಿತು ವರದಿಗಾರಿಕೆ ಮಾಡುವಾಗ ಅಲ್ಲಿಯ ಪತ್ರಕರ್ತರು ಏಕಪಕ್ಷೀಯ ವರದಿಗಳನ್ನು ಬರೆದಿದ್ದರು ಎಂದು ಶನಿವಾರ ಬಿಡುಗಡೆಗೊಂಡ ಎಡಿಟರ್ಸ್ ಗಿಲ್ಡ್‌ನ ಸತ್ಯಶೋಧನಾ ತಂಡವು ತನ್ನ ವರದಿಯಲ್ಲಿ ಹೇಳಿದೆ.

ಸಾಮಾನ್ಯ ಸಂದರ್ಭಗಳಲ್ಲಿ ಪತ್ರಿಕೆಗಳ ಸಂಪಾದಕರು ಅಥವಾ ಸ್ಥಳೀಯಾಡಳಿತದ ಸ್ಥಳೀಯ ಬ್ಯೂರೊಗಳ ಮುಖ್ಯಸ್ಥರು, ಪೊಲೀಸರು ಮತ್ತು ಭದ್ರತಾ ಪಡೆಗಳು ಈ ವರದಿಗಳನ್ನು ಪುನರ್‌ಪರಿಶೀಲಿಸುತ್ತಾರೆ. ಆದರೆ ಸಂಘರ್ಷದ ಸಮಯದಲ್ಲಿ ಇದು ಸಾಧ್ಯವಾಗಿರಲಿಲ್ಲ ಎನ್ನುವುದನ್ನು ವರದಿಯು ಗಮನಿಸಿದೆ.

ಮೈತಿಗಳು ಮತ್ತು ಕುಕಿಗಳ ನಡುವೆ ಘರ್ಷಣೆಗಳು ಆರಂಭಗೊಂಡಿದ್ದ ಮೇ ಮೊದಲ ವಾರದಲ್ಲಿ ರಾಜ್ಯದಲ್ಲಿ ಇಂಟರ್ನೆಟ್ ನಿಷೇಧ ಹೇರಲಾಗಿದ್ದರಿಂದ ಮಣಿಪುರದಿಂದ ವರದಿಗಾರಿಕೆ ಕಷ್ಟವಾಗಿತ್ತು. ಯಾವುದೇ ಸಂವಹನ ಸೌಲಭ್ಯಗಳಿಲ್ಲದೆ ಸಂಗ್ರಹಿಸಲಾಗಿದ್ದ ಸ್ಥಳೀಯ ಸುದ್ಧಿಗಳು ಪರಿಸ್ಥಿತಿಯ ಸಮತೋಲಿತ ನೋಟವನ್ನು ನೀಡುವಷ್ಟಿರಲಿಲ್ಲ ಎನ್ನುವುದನ್ನು ಎಡಿಟರ್ಸ್ ಗಿಲ್ಡ್ ಕಂಡುಕೊಂಡಿದೆ.

ಮೇ 3ರಂದು ಘರ್ಷಣೆಗಳು ಆರಂಭಗೊಂಡ ಬಳಿಕ ಚುರಾಚಂದ್ರಪುರ,ಕಾಂಗ್‌ಪೊಕ್ಪಿ ಮತ್ತು ತೆಂಗನೌಪಾಲ್‌ನಂತಹ ಕುಕಿ ಬಹುಸಂಖ್ಯಾತ ಜಿಲ್ಲೆಗಳಿಂದ ತಳಮಟ್ಟದ ವರದಿಗಾರಿಕೆ ನಡೆದಿರಲಿಲ್ಲ ಎಂದು ಮೂವರು ಸದಸ್ಯರ ಸತ್ಯಶೋಧನಾ ತಂಡವು ಹೇಳಿದೆ. ಮೇ ಮಧ್ಯಭಾಗದಿಂದ ಗುಡ್ಡಗಾಡು ಜಿಲ್ಲೆಗಳಲ್ಲಿಯ ತಮ್ಮ ಪ್ರತಿನಿಧಿಗಳು ಫೋನ್ ಕರೆಗಳಿಗೆ ಉತ್ತರಿಸುವುದನ್ನೂ ನಿಲ್ಲಿಸಿದ್ದರು ಎಂದು ಪತ್ರಕರ್ತರು ತನಗೆ ತಿಳಿಸಿದ್ದರು ಎಂದು ಎಡಿಟರ್ಸ್ ಗಿಲ್ಡ್‌ನೊಂದಿಗೆ ಮಾತನಾಡಿದ ಇಂಫಾಲ್‌ನ ಹಿರಿಯ ಸಾಮಾಜಿಕ ಧುರೀಣರೋರ್ವರು ಹೇಳಿದರು.

ಇಂಫಾಲ್‌ನಲ್ಲಿಯ ಸಂಪಾದಕರು ಪರಸ್ಪರರೊಂದಿಗೆ ಸಮಾಲೋಚನೆಗಳನ್ನು ನಡೆಸಿ ಸಾಮಾನ್ಯ ನಿರೂಪಣೆಯನ್ನು ಒಪ್ಪಿಕೊಳ್ಳುವುದರೊಂದಿಗೆ ಸಾಮೂಹಿಕವಾಗಿ ಕಾರ್ಯ ನಿರ್ವಹಿಸಿದ್ದರು. ಅದಾಗಲೇ ಉದ್ವಿಗ್ನಗೊಂಡಿದ್ದ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಲು ಅವರು ಬಯಸಿರಲಿಲ್ಲ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.

ಆದಾಗ್ಯೂ ಜನಾಂಗೀಯ ಹಿಂಸಾಚಾರದ ಸಂದರ್ಭದಲ್ಲಿ ಇಂತಹ ಕಾರ್ಯ ವಿಧಾನದ ಲೋಪವೆಂದರೆ ಅದು ಸುಲಭವಾಗಿ ಸಾಮಾನ್ಯ ಜನಾಂಗೀಯ ನಿರೂಪಣೆಯನ್ನು ರೂಪಿಸುತ್ತದೆ ಹಾಗೂ ಯಾವುದನ್ನು ವರದಿ ಮಾಡಬೇಕು ಮತ್ತು ಯಾವುದನ್ನು ತಡೆಹಿಡಿಯಬೇಕು ಎಂದು ನಿರ್ಧರಿಸುವ ಮೂಲಕ ಪತ್ರಿಕೋದ್ಯಮ ತತ್ತ್ವಗಳ ಸಾಮೂಹಿಕ ಕುಸಿತಕ್ಕೆ ಕಾರಣವಾಗುತ್ತದೆ ಎಂದು ತಂಡದ ವರದಿಯು ಹೇಳಿದೆ.

ಮಾಧ್ಯಮಗಳು ನಕಲಿ ಸುದ್ದಿಗಳನ್ನು ವರದಿ ಮಾಡಿದ್ದ ಮತ್ತು ತಪ್ಪುಮಾಹಿತಿಗಳನ್ನು ಹರಡಿದ್ದ 10ಕ್ಕೂ ಹೆಚ್ಚಿನ ನಿದರ್ಶನಗಳನ್ನು ಬೆಟ್ಟು ಮಾಡಿರುವ ಎಡಿಟರ್ಸ್ ಗಿಲ್ಡ್, ಇಂಫಾಲ ಮಾಧ್ಯಮಗಳಲ್ಲಿ ಮಾತ್ರ ಪ್ರಕಟಗೊಳ್ಳುವ ಸುಳ್ಳುಸುದ್ದಿಗಳ ಮೂಲಕ ಜನಾಂಗೀಯ ವಿಭಜನೆಯು ಹಂತಹಂತವಾಗಿ ಆಳಗೊಳ್ಳುತ್ತಿರುವುದು ಈಗ ಗೋಚರಿಸುತ್ತಿದೆ ಎಂದು ಹೇಳಿದೆ.

ಇಂಫಾಲನಲ್ಲಿಯ ಮಾಧ್ಯಮಗಳು ಭದ್ರತಾ ಪಡೆಗಳನ್ನು,ವಿಶೇಷವಾಗಿ ಅಸ್ಸಾಂ ರೈಫಲ್ಸನ್ನು ದೂಷಿಸಿದ್ದವು ಎಂದು ಹೇಳಿರುವ ವರದಿಯು,ರಾಜ್ಯ ಸರಕಾರವು ಸಹ ಅಸ್ಸಾಂ ರೈಫಲ್ಸ್ ವಿರುದ್ಧ ಎಫ್‌ಐಆರ್ ದಾಖಲಿಸಲು ಮಣಿಪುರ ಪೋಲಿಸರಿಗೆ ಅವಕಾಶ ನೀಡುವ ಮೂಲಕ ಈ ದೂಷಣೆಯನ್ನು ಮೌನವಾಗಿ ಬೆಂಬಲಿಸಿತ್ತು. ಸರಕಾರದ ಒಂದು ಕೈಗೆ ಇನ್ನೊಂದು ಕೈ ಏನು ಮಾಡುತ್ತಿದೆ ಎನ್ನುವುದು ತಿಳಿದಿರಲಿಲ್ಲ ಅಥವಾ ಇದು ಉದ್ದೇಶಪೂರ್ವಕ ಕ್ರಮವಾಗಿತ್ತು ಎನ್ನುವುದನ್ನು ಇದು ಸೂಚಿಸುತ್ತಿದೆ ಎಂದು ಬೆಟ್ಟು ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಬಂಗಾಳದಲ್ಲಿ ಮಾತ್ರ ಎರಡು ಹಂತದ ಮತದಾನ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ...

ಫ್ಲಿಪ್‌ಕಾರ್ಟ್‌ನಿಂದ 1 ರೂ.ಗೆ ಹಾಲು ಮಾರಾಟ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಮುಲ್‌ ಆಗ್ರಹ

ಫ್ಲಿಪ್‌ಕಾರ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ 1 ರೂ.ಗೆ ಲೀಟರ್‌ ಹಾಲನ್ನು ಮಾರಾಟ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ, ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ...

“ಮಕ್ಕಳ ಹಂತಕನನ್ನು ಹುಡುಕಿ ಹತ್ಯೆ ಮಾಡುತ್ತೇವೆ” : ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂಬ ಇಸ್ರೇಲ್ ಸ್ಪಷ್ಟನೆ ಬೆನ್ನಲ್ಲೆ ಐಆರ್‌ಜಿಸಿ ಹೇಳಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿರುವುದಾಗಿ ವರದಿಯಾಗಿದೆ. ನೆತನ್ಯಾಹು ಅವರ ಹತ್ಯೆಯ ವದಂತಿಗಳನ್ನು ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ, ಐಆರ್‌ಜಿಸಿ ಈ...

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...