ಹಿಂದಿ ಕಿರುತೆರೆಯ ಶಕ್ತಿಮಾನ್ ಮತ್ತು ಮಹಾಭಾರತ ಧಾರವಾಹಿಗಳಿಂದ ಹೆಸರುವಾಸಿಯಾದ ನಟ ಮುಖೇಶ್ ಖನ್ನಾ, ಮಹಿಳೆಯರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾರೆ.
“#MeToo ಚಳುವಳಿ ಪ್ರಾರಂಭವಾಗಲು ಕಾರಣ ಮಹಿಳೆಯರು ತಮ್ಮನ್ನು ಪುರುಷರಿಗೆ ಸಮಾನರು ಎಂದು ಭಾವಿಸಲು ಪ್ರಾರಂಭಿಸಿ ಕೆಲಸಕ್ಕೆ ಹೋಗಲು ಶುರು ಮಾಡಿದ್ದು ಎಂದಿದ್ದಾರೆ. ಮಹಿಳೆಯ ಕೆಲಸ ಮನೆ ನಿಭಾಯಿಸುವುದು. ಮಹಿಳೆಯೇ ಬೇರೆ, ಪುರುಷರೇ ಬೇರೆ ಎಂದಿದ್ದಾರೆ.
ಫಿಲ್ಮಿ ಚಾರ್ಚಾಗೆ ನೀಡಿದ ಇತ್ತೀಚಿನ ಸಂದರ್ಶನವೊಂದರ ಅವರ ಮಾತುಗಳಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ, “ಮಹಿಳೆಯರು ಕೆಲಸ ಮಾಡಲು ಪ್ರಾರಂಭಿಸಿದಾಗ #MeToo ಸಮಸ್ಯೆ ಪ್ರಾರಂಭವಾಯಿತು” ಎಂದು ನಟ ಮುಖೇಶ್ ಖನ್ನಾ ಹೇಳುತ್ತಾರೆ.
Actor turned right wing rabble rouser Mukesh Khanna says women going out to work and thinking of being equal to men is cause of #metoo pic.twitter.com/1sZ37GudTy
— Hindutva Watch (@Hindutva__watch) October 30, 2020
ಇದನ್ನೂ ಓದಿ: ತನ್ನ ಮೇಲಿನ METOO ಆರೋಪ ಸುಳ್ಳು ಮತ್ತು ದುರುದ್ದೇಶಪೂರಿತ ಎಂದ ಅನುರಾಗ್ ಕಶ್ಯಪ್
“ಮನೆಯಲ್ಲಿ ತಾಯಿ ಇಲ್ಲದೆ ಮಕ್ಕಳು ಕಷ್ಟಪಡುತ್ತಾರೆ. ಪುರುಷ ಮಾಡಿದ್ದನ್ನೆಲ್ಲಾ ನಾನೂ ಮಾಡುತ್ತೇನೆ ಎಂದು ಮಹಿಳೆ ಹೇಳಲು ಶುರು ಮಾಡಿದ್ದರಿಂದಲೇ ಸಮಸ್ಯೆ ಶುರುವಾಗಿದೆ. ಆದರೆ ಹಾಗಾಗಲ್ಲ. ಮಹಿಳೆ ಮಹಿಳೆಯೇ, ಪುರುಷ ಪುರುಷನೇ ಎಂದು ಮುಖೇಶ್ ಖನ್ನಾ ಮಾತಾಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ.
Didn't know that Shaktiman's biggest weakness was his mindset. https://t.co/zQ1tcPMVZl
— Sahil Shah ?? (@SahilBulla) October 30, 2020
ಟ್ವಿಟರ್ ಬಳಕೆದಾರರೊಬ್ಬರು, “ಶಕ್ತಿಮಾನ್‌ನ ದೊಡ್ಡ ದೌರ್ಬಲ್ಯ ಅವನ ಮನೋಧರ್ಮ ಎಂದು ತಿಳಿದಿರಲಿಲ್ಲ” ಎಂದಿದ್ದಾರೆ.
ಬಾಲ್ಯದಲ್ಲಿ ಆರಾಧಿಸುತ್ತಿದ್ದ ಸೂಪರ್ಹೀರೋ ಮುಖೇಶ್ ಖನ್ನಾ ಈ ರೀತಿಯ ಆಲೋಚನೆಗಳನ್ನ ಹೊಂದಿದ್ದಾರಾ? ಅಂತ ಕಮೆಂಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Painfully realising the fact that many precious time from my childhood went wasted on watching sakthiman aerial ??♂️? https://t.co/D3bzNsjx8s
— Bej ✋ (@bej_2019) October 30, 2020
ಇನ್ನೊಬ್ಬ ನೆಟ್ಟಿಗರು ’ ನನ್ನ ಬಾಲ್ಯದ ಅನೇಕ ಅಮೂಲ್ಯ ಸಮಯಗಳು ಶಕ್ತಿಮಾನ್ ವೀಕ್ಷಣೆಯಲ್ಲಿ ವ್ಯರ್ಥವಾಯಿತು ಎಂಬ ಅಂಶವನ್ನು ಈಗ ನೋವಿನಿಂದ ಅರಿತುಕೊಂಡೆ” ಎಂದಿದ್ದಾರೆ.
ಇದನ್ನೂ ಓದಿ: #Metoo ಅಭಿಯಾನ: ದಿಟ್ಟದನಿಗಳಿಗೆ ಬೆಂಬಲ ಇನ್ನಷ್ಟು ಆಳ, ಅಗಲ ವಿಸ್ತಾರಗೊಳ್ಳಲಿ ಎಂಬ ಆಶಯ!
“You either die a hero or see yourself live long enough to become the villain” https://t.co/MIMNaaybDs
— Andre Borges (@borges) October 30, 2020
ಮುಖೇಶ್ ಖನ್ನಾ ವಿವಾದಾತ್ಮಕ ಹೇಳಿಕೆಗೆ ಹಲವು ಮಂದಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮಹಿಳೆಯರು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುವ ಮೂಲಕ ಮೀ ಟೂ ಅಭಿಯಾನದ ಬಗ್ಗೆ ಇಂತಹ ಹೇಳಿಕೆ ನೀಡಿರುವ ನಟನ ಹೇಳಿಕೆ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಇತ್ತೀಚೆಗೆ, ಮುಖೇಶ್ ಖನ್ನಾ ಕಪಿಲ್ ಶರ್ಮಾ ಶೋ ಬಗ್ಗೆ ಟೀಕೆ ಮಾಡಿ ವಿವಾದದ ಕೇಂದ್ರ ಬಿಂದುವಾಗಿದ್ದರು. ಶೋನಲ್ಲಿ ಭಾಗವಹಿಸಲು ನಿರಾಕರಿಸಿ, ಶೋ ಡಬಲ್ ಮೀನಿಂಗ್ ಪದಗಳಿಂದ ಕೂಡಿದೆ, ಪ್ರತಿ ಕ್ಷಣದಲ್ಲೂ ಅಶ್ಲೀಲತೆಯತ್ತ ತಿರುಗುತ್ತದೆ ಎಂದೆಲ್ಲಾ ಹೇಳಿಕೆ ನೀಡಿದ್ದರು.


