Homeಮುಖಪುಟಮೋದಿ ಸರ್ಕಾರಕ್ಕೆ ಅಧಿಕ ಲಸಿಕೆ ಬೇಕಾಗಿದೆ: ಆದರೆ ಮಾಡೆರ್ನಾಕ್ಕೆ ಆಸಕ್ತಿಯಿಲ್ಲ, ಫಿಜರ್ ಷರತ್ತು ವಿಧಿಸುತ್ತಿದೆ!

ಮೋದಿ ಸರ್ಕಾರಕ್ಕೆ ಅಧಿಕ ಲಸಿಕೆ ಬೇಕಾಗಿದೆ: ಆದರೆ ಮಾಡೆರ್ನಾಕ್ಕೆ ಆಸಕ್ತಿಯಿಲ್ಲ, ಫಿಜರ್ ಷರತ್ತು ವಿಧಿಸುತ್ತಿದೆ!

- Advertisement -
- Advertisement -

ಸೋಂಕಿನ ಹೊಸ ಮತ್ತು ಹೆಚ್ಚು ಆಕ್ರಮಣಕಾರಿ ಅಲೆಯನ್ನು ನಿಭಾಯಿಸಲು ಹೆಚ್ಚಿನ ವಿದೇಶಿ ಕೋವಿಡ್-19 ಲಸಿಕೆಗಳನ್ನು ಭಾರತಕ್ಕೆ ತರುವ ಪ್ರಯತ್ನದಲ್ಲಿ ಮೋದಿ ಸರ್ಕಾರ ತೊಡಗಿದೆ. ಹಲವಾರು ಲಸಿಕೆ ತಯಾರಿಕೆ ಕಂಪನಿಗಳಿಗೆ ಸರ್ಕಾರ ಆಹ್ವಾನ ನೀಡಿದೆ. ಆದರೆ ಇದು ಕಾರ್ಯರೂಪಕ್ಕೆ ಬರಲು ಸಮಯ ತೆಗೆದುಕೊಳ್ಳಬಹುದು ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಫಿಜರ್ ನಷ್ಟ ಪರಿಹಾರ ಬಾಂಡ್‌ಗೆ ಸಹಿ ಮಾಡುವಂತೆ ಕೇಳುವ ಸಾಧ್ಯತೆಯಿದೆ ಮತ್ತು ಮಾಡರ್ನಾ ತನ್ನ “ಕೈಗಳು ತುಂಬಿದೆ’ ಸಾಕಷ್ಟು ಆರ್ಡರ್‌ಗಳಿವೆ ಎಂದು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

ಅಮೆರಿಕ, ಬ್ರಿಟನ್, ಯುರೋಪ್, ಜಪಾನ್‌ಗಳಲ್ಲಿ ಅಥವಾ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತತೆ ಪಡೆದ ಲಸಿಕೆಗಳಿಗೆ ತುರ್ತು ಪರವಾನಗಿ ನೀಡಲು ಸರ್ಕಾರ ಮಂಗಳವಾರ ಅನುಮತಿ ನೀಡಿತು.

ರಾಹುಲ್ ಗಾಂಧಿ ಈ ಕ್ರಮ ಕೈಗೊಳ್ಳಲು ಹಲವು ಸಲ ಸರ್ಕಾರವನ್ನು ಒತ್ತಾಯಿಸಿದ ನಂತರ ಮಂಗಳವಾರ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.

ಅಮೆರಿಕದ ಫಾರ್ಮಾ ದೈತ್ಯ, ಭಾರತದಲ್ಲಿ ತನ್ನ ಲಸಿಕೆಯ ತುರ್ತು ಬಳಕೆ ದೃಢೀಕರಣಕ್ಕಾಗಿ (ಇಯುಎ) ಅರ್ಜಿ ಸಲ್ಲಿಸಿತ್ತು. ಆದರೆ ಈ ವರ್ಷದ ಆರಂಭದಲ್ಲಿ ತನ್ನ ಅರ್ಜಿಯನ್ನು ಹಿಂತೆಗೆದುಕೊಂಡಿದೆ. ಮೂಲಗಳ ಪ್ರಕಾರ, ನಷ್ಟ ಪರಿಹಾರ ಬಾಂಡ್‌ಗಳಿಗೆ ಸಹಿ ಹಾಕಲು ಭಾರತ ಸರ್ಕಾರ ನಿರಾಕರಿಸಿದ್ದು ಇದಕ್ಕೆ ಕಾರಣ ಎನ್ನಲಾಗಿದೆ. ಲಸಿಕೆ ಯಾವುದೇ ಅಡ್ಡಪರಿಣಾಮಗಳಿಗೆ ಕಾರಣವಾದರೆ ಕಂಪನಿಯ ಮೇಲೆ ಮೊಕದ್ದಮೆ ಹೂಡದಂತೆ ರಕ್ಷಿಸುವ ಕಾನೂನು ಬಾಂಡ್‌ಗಳು ಇವಾಗಿವೆ.

ಈ ಮಧ್ಯೆ, ಜಾನ್ಸನ್ & ಜಾನ್ಸನ್ ಭಾರತಕ್ಕೆ ಬರಲು ಉತ್ಸುಕವಾಗಿದೆ. ಅದು ಇತ್ತೀಚೆಗೆ ಕೇಂದ್ರೀಯ ಔಷಧಿ ಪ್ರಮಾಣಿಕೆ ನಿಯಂತ್ರಣ ಸಂಸ್ಥೆಗೆ (ಸಿಡಿಎಸ್‌ಸಿಒ) ಮಾಹಿತಿ ನೀಡಿ ಕ್ಲಿನಿಕಲ್ ಟ್ರಯಲ್ಸ್ ಯೋಜನೆ ಆರಂಭಿಸುವುದಾಗಿ ತಿಳಿಸಿದೆ. ಆದರೆ ಜಾನ್ಸನ್ & ಜಾನ್ಸನ್ ಸಿಂಗಲ್-ಡೋಸ್ ಲಸಿಕೆ ಪಡೆದ ಹಲವರು ಮಹಿಳೆಯರ ಮೇಲೆ ಅಡ್ಡಪರಿಣಾಮಗಳು ಉಂಟಾದ ನಂತರ ಅದರ ಬಳಕೆಯನ್ನು ತಕ್ಷಣ ತಾತ್ಕಾಲಿಕವಾಗಿ ನಿಲ್ಲಿಸಲು ಅಮೆರಿಕ ಸರ್ಕಾರ ಕರೆ ನೀಡಿದ್ದರಿಂದ ಕಂಪನಿ ತೊಂದರೆಗೆ ಸಿಲುಕಿದೆ.

ಫಿಜರ್ ತನ್ನ ಲಸಿಕೆಯನ್ನು ಭಾರತಕ್ಕೆ ಕಳುಹಿಸುವ ಒಪ್ಪಂದಕ್ಕೆ ಒಪ್ಪುವ ಮೊದಲು ನಷ್ಟ ಪರಿಹಾರ ಬಾಂಡ್‌ಗೆ ಸಹಿ ಹಾಕಬೇಕು ಎಂದು ಷರತ್ತು ವಿಧಿಸಿದೆ ಎನ್ನಲಾಗಿದೆ.
“ಫಿಜರ್ ತನ್ನ ಕೋವಿಡ್ -19 ಲಸಿಕೆಯನ್ನು ಪೂರೈಸುತ್ತಿರುವ ಪ್ರತಿ ದೇಶದೊಂದಿಗೆ ನಷ್ಟ ಪರಿಹಾರ ಬಾಂಡ್‌ಗೆ ಸಹಿ ಹಾಕಿದೆ. ಬಾಂಡ್‌ಗೆ ಸಹಿ ಹಾಕಲು ಭಾರತ ಒಪ್ಪಿಕೊಂಡಾಗ ಮಾತ್ರ ಬೆಲೆಗಳ ಚರ್ಚೆ ಪ್ರಾರಂಭವಾಗುತ್ತದೆ ”ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಜನವರಿಯಲ್ಲಿ, ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರವು, ಯಾವುದೇ ಗಂಭೀರ ಅಡ್ಡಪರಿಣಾಮಗಳು ಅಥವಾ ಪ್ರತಿಕೂಲ ಪ್ರತಿಕ್ರಿಯೆಗಳ ಸಂದರ್ಭದಲ್ಲಿ ಯಾವುದೇ ಹೊಣೆಗಾರಿಕೆಯಿಂದ ನಷ್ಟ ಪರಿಹಾರ ಅಥವಾ ವಿನಾಯಿತಿ ನೀಡುವ ಪ್ರಸ್ತಾಪವನ್ನು ಸರ್ಕಾರ ಹೊಂದಿಲ್ಲ ಎಂದು ಹೇಳಿದೆ.

“ಜಾಗತಿಕವಾಗಿ, ಹೆಚ್ಚಿನ ದೇಶಗಳು ಲಸಿಕೆ ತಯಾರಕರ ಜೊತೆಗೆ ಬಾಂಡ್‌ಗಳಿಗೆ ಸಹಿ ಹಾಕಿವೆ.. ಭಾರತವು ಇದನ್ನು ಇಲ್ಲಿವರೆಗೆ ಮಾಡಿಲ್ಲ.. ನಾವು ಈಗಲಾದರೂ ಇದನ್ನು ಮಾಡಬೇಕು. ನಿರ್ದಿಷ್ಟ ತಯಾರಕರಿಗೆ ಬದಲು ಎಲ್ಲ ತಯಾರಕರೊಂದಿಗೂ ಬಾಂಡ್‌ಗಳಿಗೆ ಸಹಿ ಮಾಡಬೇಕು ಎಂದು ವೆಲ್ಲೂರು ಆಸ್ಪತ್ರೆಯ ಲಸಿಕಾ ತಜ್ಞ ಗಗನದೀಪ್ ಹೇಳಿದ್ದಾರೆ.

ಮಾಡರ್ನಾ ಭಾರತಕ್ಕೆ ಪ್ರವೇಶಿಸಲು ಉತ್ಸುಕವಾಗಿಲ್ಲ

ಲಸಿಕೆ ತಯಾರಕರು ಲಭ್ಯವಿರುವ ಸಾಮರ್ಥ್ಯಗಳನ್ನು ಆಧರಿಸಿ ತಮ್ಮ ಕಾರ್ಯತಂತ್ರಗಳನ್ನು ವಿನ್ಯಾಸಗೊಳಿಸುವ ಸಾಧ್ಯತೆಯಿದೆ ಮತ್ತು ಅವರು ಸಾಕಷ್ಟು ಗಾತ್ರವನ್ನು ಹೊಂದಿರುವ ಭಾರತೀಯ ಮಾರುಕಟ್ಟೆಗೆ ಎಷ್ಟು ಒದಗಿಸಬೇಕು ಎಂದು ಲೆಕ್ಕ ಹಾಕುತ್ತಾರೆ.
ಮಾಡರ್ನಾದ ವಕ್ತಾರ ರೇ ಜೋರ್ಡಾನ್ ಅವರು ದಿ ಪ್ರಿಂಟ್‌ಗೆ ಪ್ರತಿಕ್ರಿಯೆ ನೀಡಿ, “ಪೂರೈಕೆಯ ಬಗ್ಗೆ ಯಾವುದೇ ಸಂಭಾವ್ಯ ಚರ್ಚೆಗಳು ಅಥವಾ ಮಾತುಕತೆಗಳ ಬಗ್ಗೆ ಪ್ರತಿಕ್ರಿಯೆಯನ್ನು ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್) ಅಡಿಯಲ್ಲಿರುವ ಸೆಂಟರ್ ಫಾರ್ ಸೆಲ್ಯುಲರ್ ಮತ್ತು ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ) ಲಸಿಕೆಯನ್ನು ಭಾರತಕ್ಕೆ ತರಲು ಕಳೆದ ಆರು ತಿಂಗಳಿನಿಂದ ಅಮೆರಿಕದ ಮಾಡರ್ನಾ ಕೊತೆ ಮಾತುಕತೆ ನಡೆಸುತ್ತ ಬಂದಿದೆ.

“ಹಲವಾರು ತಿಂಗಳುಗಳ ಕಾಲ ಅವರೊಂದಿಗೆ ಮಾತನಾಡುತ್ತಿದ್ದರೂ, ಕಂಪನಿಯು ತನ್ನ ಕೋವಿಡ್ -19 ಲಸಿಕೆಯನ್ನು ಭಾರತದಲ್ಲಿ ತರಲು ನಿಜವಾಗಿಯೂ ಉತ್ಸುಕವಾಗಿಲ್ಲ. ಬಹುಶಃ ಅವರ ಕೈಗಳು ಪೂರ್ಣವಾಗಿರುವುದರಿಂದ ಅಂದರೆ ಆರ್ಡರ್‌ಗಳು ಹೆಚ್ಚು ಇರುವುದರಿಂದ ಹೀಗಾಗಿರಬಹುದು. ಈಗ ವಿದೇಶಿ ಲಸಿಕೆಗಳಿಗೆ ತ್ವರಿತ ಪರವಾನಗಿ ನೀಡಲು ಸರ್ಕಾರ ಒಪ್ಪಿದ ನಂತರ, ಮರಳಿ ಸಿಎಸ್‌ಐಆರ್ ಮೂಲಕ ಮಾಡೆರ್ನಾವನ್ನು ಭಾರತಕ್ಕೆ ತರಲು ಯತ್ನಿಸಬಹುದು” ಎಂದು ಸಿಎಸ್‌ಐಆರ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಂಪನಿಯು ಈಗಾಗಲೇ ಸಹಿ ಮಾಡಿರುವ ಬದ್ಧ ಆರ್ಡರ್‌ಗಳ ಪೂರೈಕೆ ಒಪ್ಪಂದಗಳನ್ನು ಮಾಡರ್ನಾ ತನ್ನ ಇಮೇಲ್‌ನಲ್ಲಿ ಪಟ್ಟಿ ಮಾಡಿದೆ. ಅಮೆರಿಕ, ಯುರೋಪಿಯನ್ ಒಕ್ಕೂಟ, ಕೆನಡಾ, ಕೊರಿಯಾ, ಜಪಾನ್, ಸ್ವಿಟ್ಜರ್ಲೆಂಡ್, ಕೊಲಂಬಿಯಾ, ಇಸ್ರೇಲ್, ತೈವಾನ್, ಸಿಂಗಾಪುರ್ ಮತ್ತು ಕತಾರ್ ದೇಶಗಳಿಗೆ ಪೂರೈಕೆ ಆರ್ಡರ್‌ಗಳು ಒಟ್ಟು 1,000 ಮಿಲಿಯನ್ (100 ಕೋಟಿ) ಪ್ರಮಾಣವನ್ನು ಮೀರಿವೆ ಎನ್ನಲಾಗಿದೆ.

ಅಮೆರಿಕದಲ್ಲಿ ಮಾಡರ್ನಾ ಲಸಿಕೆ ಎರಡು ಡೋಸ್‌ಗಳಿಗೆ 30 ಡಾಲರ್ (2,250 ರೂ.) ದರ ಹೊಂದಿದೆ. “ಮಾಡರ್ನಾ ನಮ್ಮೊಂದಿಗೆ ಬಂದು ನಮ್ಮ ಫಾರ್ಮಾ ಕಂಪೆನಿಗಳಿಗೆ ಇಲ್ಲಿ ಲಸಿಕೆ ತಯಾರಿಸಲು ಅವಕಾಶ ನೀಡಿದರೆ ಭಾರತದಲ್ಲಿ ಎಂ-ಆರ್‌ಎನ್‌ಎ ಲಸಿಕೆಯ ಬೆಲೆ ಸಾಕಷ್ಟು ಕಡಿಮೆಯಾಗಲಿದೆ. ಈ ತಂತ್ರಜ್ಞಾನವು ತುಂಬಾ ಸರಳವಾಗಿದೆ ಮತ್ತು ಉತ್ಪಾದನೆಯನ್ನು ಪ್ರಾರಂಭಿಸಲು 8-9 ತಿಂಗಳು ಬೇಕಾಗಬಹುದು”ಎಂದು ಸಿಎಸ್‌ಐಆರ್ ತಿಳಿಸಿದೆ.

ಕೃಪೆ: ದಿ ಪ್ರಿಂಟ್


ಇದನ್ನೂ ಓದಿ: ಕೊರೊನಾ ಲಸಿಕೆ ಪೇಟೆಂಟ್‌ ಬಿಟ್ಟುಬಿಡಲು ನೊಬೆಲ್ ಪ್ರಶಸ್ತಿ ವಿಜೇತರು, ವಿಶ್ವದ ಮಾಜಿ ನಾಯಕರಿಂದ ಜೋ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...