Homeಮುಖಪುಟಮಸೀದಿ ವಾಸ್ತು ಶೈಲಿಗಳೂ, ಪೊಳ್ಳು ವಾದಗಳೂ!

ಮಸೀದಿ ವಾಸ್ತು ಶೈಲಿಗಳೂ, ಪೊಳ್ಳು ವಾದಗಳೂ!

- Advertisement -
- Advertisement -

ಮಂಗಳೂರು ತಾಲೂಕಿನ ಮಳಲಿಪೇಟೆಯಲ್ಲಿರುವ ಒಂಬೈನೂರು ವರ್ಷಗಳ ಹಿಂದಿನ ಪುರಾತನ ಮಸೀದಿಯ ಕುರಿತಂತೆ ಯಾವೊಂದು ಆಧಾರವೂ ಇಲ್ಲದೇ ಭಜರಂಗದಳದ ಕೆಲವು ಕಾರ್ಯಕರ್ತರು ಅದೊಂದು ದೇವಸ್ಥಾನವಾಗಿತ್ತು ಎಂದು ಕ್ಲೈಮ್ ಮಾಡಹೊರಟಿವೆ. ಅವರಿಗೆ ಕನ್ನಡದ ಕೆಲ ಮಾಧ್ಯಮಗಳು ಕೂಡಾ ಬಿಟ್ಟಿ ಪ್ರಚಾರವನ್ನೂ ಕೊಡುತ್ತಿವೆ. ಈ ನಿಟ್ಟಿನಲ್ಲಿ ಇತಿಹಾಸ ಮತ್ತು ವಾಸ್ತುಶಿಲ್ಪಗಳ ಆಧಾರದಲ್ಲಿ ಒಂದೆರಡು ವಿಚಾರಗಳನ್ನು ಸಂಕ್ಷಿಪ್ತವಾಗಿ ನೋಡೋಣ.

ವಿಶ್ವ ಸಂಚಾರಿ ವಿದ್ವಾಂಸ ಮತ್ತು ಇತಿಹಾಸಕಾರ ಇಬ್ನ್ ಬತೂತ ತನ್ನ ‘ರಿಹ್ಲತ್ ಇಬ್ನ್ ಬತೂತ’ ಗ್ರಂಥದಲ್ಲಿ ಸ್ಪಷ್ಟವಾಗಿ ದಾಖಲಿಸಿದಂತೆ ಮಂಗಳೂರಿನಲ್ಲಿ ಸುಮಾರು‌ 1350 ವರ್ಷಗಳ ಹಿಂದಿನಿಂದ ಮುಸ್ಲಿಮರು ವಾಸಿಸುತ್ತಿದ್ದಾರೆ ಮತ್ತು ಇಸ್ಲಾಮಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿತ್ತು. ಇಬ್ನ್ ಬತೂತರ ಮಾತಿಗೆ ಪೂರಕವೆಂಬಂತೆ 1350 ವರ್ಷಗಳಿಗೂ ಪುರಾತನವಾದ ಮಸೀದಿಯೊಂದು ಮಂಗಳೂರಿನ ಬಂದರ್‌ನಲ್ಲಿದೆ. ಇದು ಭಾರತದ ಐದನೇ ಮಸೀದಿ ಮತ್ತು ಈಗಿನ ಕರ್ನಾಟಕ ಪ್ರಾಂತ್ಯದ ಎರಡನೇ ಮಸೀದಿ. ಹಾಗಾದರೆ ಭಾರತದ ಮಸೀದಿಗಳ ಆರಂಭ ಎಲ್ಲಿಂದ ಆಯಿತು ಎಂದು ನೋಡುತ್ತಾ ಚರ್ಚೆ ಮುಂದುವರಿಸೋಣ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಭಾರತಕ್ಕೆ ಇಸ್ಲಾಂ ಧರ್ಮ ಪ್ರವೇಶಿಸಿದ್ದು ಕೇರಳದ ತ್ರಿಶೂರು ಜಿಲ್ಲೆಯ ಮೂಲಕ. ಆಗ ಮಲಬಾರ್ ಪ್ರಾಂತ್ಯವನ್ನು ಚೇರಮಾನ್ ಪೆರುಮಾಳ್ ರಾಜನು ಆಳುತ್ತಿದ್ದ. ಚೇರಮಾನ್ ಪೆರುಮಾಳರ ಕಾಲದ ಇತಿಹಾಸವನ್ನು ನೋಡಿದರೆ ಭಾರತಕ್ಕೆ ಇಸ್ಲಾಂ ಧರ್ಮ 1400 ವರ್ಷಗಳ ಹಿಂದೆಯೇ ಬಂದಿರುವುದಕ್ಕೆ ಬಲವಾದ ಪುರಾವೆ ಸಿಗುತ್ತದೆ.

ಇದನ್ನೂ ಓದಿ: ಮಂಗಳೂರು: ಮಳಲಿಪೇಟೆಯ ಪ್ರಾಚೀನ ಮಸೀದಿಯನ್ನು ದೇವಸ್ಥಾನ ಎಂದು ಸುಳ್ಳು ಹಬ್ಬಿಸಿದ ಕನ್ನಡ ಮಾಧ್ಯಮಗಳು

ಮುಸ್ಲಿಮರು ಎಲ್ಲೇ ನೆಲೆ ನಿಂತರೂ ತಮ್ಮ ಆರಾಧನೆಗಾಗಿ ಒಂದು ಮಸೀದಿ ನಿರ್ಮಿಸುವುದು ಅವರ ವಾಡಿಕೆ. ಅದರಂತೆಯೇ ಅರೇಬಿಯಾದಿಂದ ಭಾರತಕ್ಕೆ ಬಂದ ಇಸ್ಲಾಮಿಕ್ ಮಿಶನರಿಗಳು ಮೊಟ್ಟ ಮೊದಲು ತ್ರಿಶೂರ್ ಜಿಲ್ಲೆಯ ಕೊಡಂಗಲ್ಲೂರು ಕಡಲ ಕಿನಾರೆಯಲ್ಲಿ ಮಸೀದಿಯನ್ನು ನಿರ್ಮಿಸಿತು. ಆ ಬಳಿಕ ಕೇರಳದಲ್ಲಿ ಮತ್ತೆರಡು ಮಸೀದಿಗಳನ್ನು ನಿರ್ಮಿಸಿದ ಮಿಶನರಿ ತಂಡವು ಉತ್ತರದತ್ತ ಸಾಗಿ ಬಂದು ಈಗಿನ ಕರ್ನಾಟಕ ರಾಜ್ಯದ ಬಾರಕೂರಿನಲ್ಲಿ ಒಂದು ಮಸೀದಿಯನ್ನು ನಿರ್ಮಿಸಿತು. ಆ ಬಳಿಕ ಅಲ್ಲಿಂದ ಮಂಗಳೂರಿಗೆ ಬಂದು ಇನ್ನೊಂದು ಮಸೀದಿಯನ್ನು ನಿರ್ಮಿಸಿತು.

ಇವುಗಳು ಕ್ರಮವಾಗಿ ಭಾರತದ ನಾಲ್ಕು ಮತ್ತು ಐದನೆಯ ಮಸೀದಿಗಳಾದರೆ, ಕ್ರಮವಾಗಿ ಕರ್ನಾಟಕದ ಮೊದಲ ಮತ್ತು ಎರಡನೆಯ ಮಸೀದಿಗಳಾಗಿರುತ್ತವೆ. ಇವುಗಳಲ್ಲಿ ಬಾರಕೂರು ಮಸೀದಿಯಲ್ಲಿ ಅದರ ಪ್ರಾಚೀನತೆಗೆ ಸಂಬಂಧಿಸಿದ ಕುರುಹುಗಳನ್ನು ಸಂರಕ್ಷಿಸಿಡದೇ ಇದ್ದುದು ವಿಷಾದದ ಸಂಗತಿ. ಕಾಲ ಕಾಲಕ್ಕೆ ತಕ್ಕಂತೆ ಮರು ನಿರ್ಮಾಣ ಮಾಡುತ್ತಾ ಹೋದಂತೆ ಪ್ರಾಚೀನ ಕುರುಹುಗಳನ್ನು ಸಂಪೂರ್ಣವಾಗಿ ತೆಗೆದು ಹೊಸ ನಿರ್ಮಾಣಗಳನ್ನೇ ರಚಿಸಲಾಗಿದೆ. ಆದರೆ ಮಂಗಳೂರು ಬಂದರ್‌ನಲ್ಲಿರುವ ಮಸೀದಿಯ ಪ್ರಾಚೀನ ಕುರುಹುಗಳನ್ನು ಸಂರಕ್ಷಿಸುತ್ತಲೇ ಮರು ನಿರ್ಮಾಣ ಮಾಡಿರುವುದು ಪ್ರಶಂಸಾರ್ಹ.

ಇಬ್ನ್ ಬತೂತ ತನ್ನ ‘ರಿಹ್ಲತ್ ಇಬ್ನ್ ಬತೂತ’ದಲ್ಲಿ ಮಂಗಳೂರನ್ನು ಮಂಜರೂರ್ ಎಂದು ದಾಖಲಿಸಿದ್ದಾರೆ. ಈ ಮಸೀದಿಗೆ ಹಿಂದಿನಿಂದಲೂ ಮಂಗಳೂರಿನ ಬ್ಯಾರಿ ಮುಸ್ಲಿಮರು ಬೆಲಿಯೆ ಪಳ್ಳಿ (ದೊಡ್ಡ ಮಸೀದಿ) ಎನ್ನುತ್ತಿದ್ದರು. ಈ ಮಸೀದಿಯ ಸೌಂದರ್ಯ ಕಂಡು ಟಿಪ್ಪು ಸುಲ್ತಾನರು ಬೆರಗಾಗಿದ್ದರು. 1790ರ ಸುಮಾರಿಗೆ ಮಸೀದಿಯ ಮರು ನಿರ್ಮಾಣ ಕಾರ್ಯವನ್ನು ಅವರು ಮಾಡಿಸಿದರು.

ಟಿಪ್ಪು ಸುಲ್ತಾನ್ ಮರು ನಿರ್ಮಾಣ ಮಾಡಿಸಿದಾಗ ಬಹುತೇಕ ಪ್ರಾಚೀನ ಸಂರಚನೆಗಳನ್ನು ಹಾಗೆಯೇ ಸಂರಕ್ಷಿಸಿಟ್ಟು, ತನ್ನ ಕಾಲದ ಶ್ರೇಷ್ಠ ವಾಸ್ತುಶಿಲ್ಪ ಮಾದರಿಯನ್ನು ಅದಕ್ಕೆ ಜೋಡಿಸಿದರು. ಅದಕ್ಕಾಗಿ ಟಿಪ್ಪು ಮೈಸೂರು ಮತ್ತು ಮಲಬಾರ್‌ನಿಂದ ವಾಸ್ತುಶಿಲ್ಪಿಗಳನ್ನು ಕರೆಸಿದ್ದರು. ಇದರ ಕೆಲವೆಡೆ ಇಂಡೋ -ಅರೆಬಿಕ್ ಆರ್ಕಿಟೆಕ್ಟ್ ಮಾದರಿಯು ಎದ್ದು ಕಾಣುತ್ತಿದ್ದರೆ, ಮತ್ತೆ ಕೆಲವೆಡೆ ದ್ರಾವಿಡಿಯನ್ ಸ್ವರೂಪದ ವಾಸ್ತುಶಿಲ್ಪ ಮಾದರಿಯೂ ಇದರಲ್ಲಿವೆ. ಈ ಮಸೀದಿಯ ಸೌಂದರ್ಯಕ್ಕೆ ಮಾರು ಹೋಗಿ ಟಿಪ್ಪು ಇದಕ್ಕೆ ಮಸ್ಜಿದ್-ಎ-ಝೀನತ್ ಬಕ್ಷ್ ಎಂದು ಮರು ನಾಮಕರಣ ಮಾಡಿದರು. ಆದರೆ ಸ್ಥಳೀಯ ಬ್ಯಾರಿಗಳು ಇಂದಿಗೂ ಅದನ್ನು ‘ಬೆಲಿಯೆ ಪಳ್ಳಿ’ ಎನ್ನುತ್ತಾರೆ. ಒಂದೊಮ್ಮೆ ಇದನ್ನು ಬ್ಯಾರಿಗಳು ‘ಸುಲ್ತಾನ್ ಪಳ್ಳಿ’ ಎಂದೂ ಕರೆಯುತ್ತಿದ್ದರು.

ಇದನ್ನೂ ಓದಿ:Exclusive: ಮಸೀದಿ ಸುತ್ತಲಿನ ಹಿಂದೂ ವ್ಯಾಪಾರಿಗಳ ಮನದ ಮಾತು 

ಆ ಬಳಿಕ ಮಂಗಳೂರಿನಲ್ಲಿ ನಿಧಾನಕ್ಕೆ ಮುಸ್ಲಿಮರ ಸಂಖ್ಯೆ ಏರುತ್ತಲೇ ಹೋಯಿತು. ನಿಧಾನಕ್ಕೆ ಅಲ್ಲೊಂದು ಇಲ್ಲೊಂದು ಮಸೀದಿಗಳು ನಿರ್ಮಾಣವಾಗತೊಡಗಿದವು. ಹಾಗೆ ನಿರ್ಮಿತಿಗೊಂಡ ಮಸೀದಿಗಳಲ್ಲಿ ಕೆಲವು ಮಸೀದಿಗಳು ತಮ್ಮ ಮೂಲಸ್ವರೂಪಗಳನ್ನು ಉಳಿಸಿಕೊಂಡಿವೆ. ಕಾಲ ಕಾಲಕ್ಕೆ ದುರಸ್ತಿ, ನವೀಕರಣ ಪ್ರಕ್ರಿಯೆಗಳು ನಡೆಯುತ್ತಾ ಬಂದರೂ ಮೂಲ ಸ್ವರೂಪಕ್ಕೆ ಅಡ್ಡಿ ಬಾರದಂತೆ ಕೆಲ ಮಸೀದಿಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ. ಇನ್ನು ಕೆಲವು ಮಸೀದಿಗಳಲ್ಲಿ ಅವುಗಳ ಪ್ರಾಚೀನತೆಗೆ ಸಾಕ್ಷಿಯಾಗಿ ಕೆಲವು ಪುರಾತನ ಸಂರಚನೆ ಮತ್ತು ಪುರಾತನ ಪಾರ್ಶ್ವಗಳನ್ನು ಮಾತ್ರ ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಹಾಗೆ ಪುರಾತನ ವಾಸ್ತುಶಿಲ್ಪಕ್ಕೆ, ಸಂರಚನೆಗೆ ಎಳ್ಳಷ್ಟೂ ಧಕ್ಕೆ ಬಾರದಂತೆ ಯಥಾವತಾಗಿ ಉಳಿಸಲಾದ ಜಿಲ್ಲೆಯ ಕೆಲವು ಪ್ರಮುಖ ಮಸೀದಿಗಳು ಇ‌ಂತಿವೆ.
– ಝೀನತ್ ಬಕ್ಷ್ ಮಸೀದಿ
-ಪೊಳಲಿ ಮಸೀದಿ
-ಪೇರ ಮಸೀದಿ
– ಅಜಿಲಮೊಗರು ಮಸೀದಿ
-ಅಮ್ಮುಂಜೆ ಮಸೀದಿ
-ವಿಟ್ಲ ಪರ್ತಿಪಾಡಿ ಮಸೀದಿ
-ಅಮ್ಮೆಂಬಳ ಮಸೀದಿ
-ಮತ್ತು ಪ್ರಸ್ತುತ ಚರ್ಚೆಯಲ್ಲಿರುವ ‘ಮಳಲಿ ಪೇಟೆ ಮಸೀದಿ’ ಅಥವಾ ಬ್ಯಾರಿಗಳ ಭಾಷೆಯ ‘ಮನಾಲ್‌ಡೊ ಪಳ್ಳಿ’.

ಇವಿಷ್ಟು ಮಸೀದಿಗಳಲ್ಲಿ ಹೊರಗಿಂದ ನೋಡುವಾಗಲೇ ಅಟ್ಟದ ಮಾದರಿಯ ಸಂರಚನೆಗಳು ಎದ್ದು ಕಾಣುವುದು ಪೊಳಲಿ, ಅಮ್ಮುಂಜೆ ಮತ್ತು ಮಳಲಿ ಮಸೀದಿಯಲ್ಲಿ ಮಾತ್ರ. ಈ ಸಂರಚನೆಯನ್ನು ಹಿಡಿದುಕೊಂಡು ಇದು ದೇವಸ್ಥಾನವಾಗಿತ್ತು ಎಂದು ಮಳಲಿ ಮಸೀದಿಯ ವಿಚಾರದಲ್ಲಿ ಕೆಲ ಹಿಂದೂತ್ವವಾದಿಗಳು ವಿವಾದ ಹುಟ್ಟಿಸಲು ಯತ್ನಿಸುತ್ತಿವೆ.

ಈ ತ್ರಿಭುಜಾಕೃತಿಯ ‘ಅಟ್ಟ’ ಮಾದರಿಯ ಮರದ ಕಲಾತ್ಮಕ ರಚನೆ ಭಾರತದ ಮೊಟ್ಟ ಮೊದಲ ಮಸೀದಿಯಾದ ಚೇರಮಾನ್ ಮಸೀದಿಯ ಮೂಲ ಸ್ವರೂಪದಲ್ಲೇ ಇತ್ತು. ಮತ್ತು ಅದರ ಹಳೇ ಫೋಟೋಗಳು ಇಂದಿಗೂ ಅಂತರ್ಜಾಲದಲ್ಲಿ ಲಭ್ಯವಿದೆ. ಮಾತ್ರವಲ್ಲದೇ ಕೇರಳದ ಇನ್ನೂ ಅನೇಕ ಪುರಾತನ ಮಸೀದಿಗಳ ಮೂಲ ಸ್ವರೂಪದಲ್ಲಿ ಅಂತಹ ಸಂರಚನೆಗಳಿತ್ತು. ಉದಾಹರಣೆಗೆ: ಕಾಸರಗೋಡಿನ ಮಾಲಿಕ್ ದೀನಾರ್ ಮಸೀದಿ, ಪೊನ್ನಾನಿ ಮಸೀದಿ ಇತ್ಯಾದಿಗಳು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರಾಯಚೂರಿನಲ್ಲಿ ಏಕ್ ಮಿನಾರ್ ಮಸೀದಿ ಕೆಡವಿದಾ‌ಗ ಶಿವನ ದೇವಾಲಯ ಪತ್ತೆಯಾಯಿತೆ?

ಅಂತಹ ತ್ರಿಭುಜಾಕೃತಿಯ ಅಟ್ಟ ಮಾದರಿಯ ರಚನೆಗಳು ಪುರಾತನ ಹಿಂದೂ ದೇವಸ್ಥಾನಗಳಲ್ಲಿಯೂ ಇತ್ತು. ಆದುದರಿಂದ ಇದು ಹಿಂದೆ ದೇವಸ್ಥಾನವಾಗಿತ್ತು ಎಂಬ ವಾದ ಮೂರ್ಖತನದ ಪರಮಾವಧಿ. ಭಾರತದ ಮೊದಲ ಹಂತದ ಮಸೀದಿಗಳನ್ನು ಕಟ್ಟಿಸಿದವರು ಅರಬ್ ಮೂಲದ ಪ್ರವಾದಿ ಅನುಚರರೇ ಆಗಿದ್ದರೂ ಕೂಡಾ ನಿರ್ಮಾಣ ಕಾರ್ಯದಲ್ಲಿ ಕಾರಕೂನರಾಗಿ, ಶಿಲ್ಪಿಗಳಾಗಿ ದುಡಿದವರು ಇಲ್ಲಿನ ಆ ಕಾಲದ ಹಿಂದೂಗಳು. ಕೇರಳದ ಮತ್ತು ದಕ್ಷಿಣ ಕನ್ನಡದ ಪುರಾತನ ಮಸೀದಿಗಳಲ್ಲಿ ಮಿಶ್ರ ವಾಸ್ತುಶಿಲ್ಪ ಕಾಣಸಿಗುವುದು ಸರ್ವೇ ಸಾಮಾನ್ಯ. ಅವು ಇಂಡೋ- ಇಸ್ಲಾಮಿಕ್ ಮತ್ತು ದ್ರಾವಿಡಿಯನ್. ಇಲ್ಲಿನ ಮುಸ್ಲಿಮರು ಮೂಲತಃ ಶೂದ್ರ-ದಲಿತರೇ ಆದುದರಿಂದ ಸಾಂಸ್ಕೃತಿಕವಾಗಿ ಅವರು ತಮ್ಮ ಅಸಲಿಯತ್ತನ್ನು ಇಸ್ಲಾಮಿಗೂ ಹಿಡಿದುಕೊಂಡು ಬಂದಿದ್ದಾರೆ.

ಇನ್ನು ಹಳೇ ದೇವಸ್ಥಾನ ಮತ್ತು ಮಸೀದಿಗಳ ರಚನೆಯಲ್ಲಿ ಕೆಲವು ಸಾಮ್ಯತೆಗಳಿವೆ. ಆದರೆ ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ. ದೇವಸ್ಥಾನಗಳಿಗೆ ಅಳವಡಿಸುವಂತಹ ಕಲಶ. ದೇವಸ್ಥಾನದ ಕಲಶವನ್ನು ಹೋಲುವ ಪುಟ್ಟ ಮಿನಾರೆಟ್‌ಗಳನ್ನು ಮಸೀದಿಗಳ ಮಾಡಿನ ಎರಡು ಬದಿಗಳಿಗೆ ಹಿಂದೆ ಅಳವಡಿಸಲಾಗುತ್ತಿತ್ತು.ಕಲಶಕ್ಕಿಂತ ಗಾತ್ರದಲ್ಲಿ ಚಿಕ್ಕದಾದರೂ ಎಲ್ಲೋ ಒಂದು‌ ಕಡೆ ಕಲಶವನ್ನು ಹೋಲುತ್ತದೆಂದ ಮಾತ್ರಕ್ಕೆ ಇದು ಹಿಂದೆ ದೇವಸ್ಥಾನವಾಗಿತ್ತು ಎಂಬ ಹುಚ್ಚಿಗೆ ಏನೆನ್ನಬೇಕು..?

ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುರಾತನ ಮಸೀದಿಗಳಲ್ಲಿ ಒಳ ಮಸೀದಿ ಎಂಬ ಒಂದು ಭಾಗವಿತ್ತು. ಅದು ಹೇಗೆಂದರೆ ಮಸೀದಿಯ ವಿಶಾಲ ಪ್ರಾಂಗಣದ ಮುಂಭಾಗದಲ್ಲಿರುವ ಒಂದು ಕೋಣೆ. ಆ ಕೋಣೆಯ ಮೂರು ಬದಿಯ ಗೋಡೆಗಳಿಗೆ ತಲಾ ಮೂರರಂತೆ ಒಟ್ಟು ಒಂಬತ್ತು ಬಾಗಿಲುಗಳು. ಈ ಒಳ ಮಸೀದಿಗಳು ಸ್ವಲ್ಪ ಮಟ್ಟಿಗೆ ದೇವಸ್ಥಾನಗಳ ಗರ್ಭಗುಡಿಯನ್ನು ಹೋಲುತ್ತದೆ. ಆದರೆ ದೇವಸ್ಥಾನಗಳ ಗರ್ಭಗುಡಿಗೆ ಈ ರೀತಿ ಒಂಬತ್ತು ಬಾಗಿಲುಗಳಿರುತ್ತಿರಲಿಲ್ಲ.

ಒಂದೆರಡು ಶಿಲ್ಪಕಲಾ ಸಾಮ್ಯತೆಗಳನ್ನು ಹಿಡಿದು ಇದು ಹಿಂದೆ ದೇವಸ್ಥಾನವಾಗಿತ್ತು ಎನ್ನುವವರು, ಸಾಮ್ಯತೆಯಿಲ್ಲದ ಹತ್ತಾರು ಆಕೃತಿಗಳಿಗೆ ಏನೆನ್ನುತ್ತಾರೆ..?

ನಮ್ಮ ದಕ್ಷಿಣ ಕನ್ನಡದ ಎರಡನೇ ಹಂತದ ಕೆಲವು ಪ್ರಮುಖ ಮಸೀದಿಗಳೆಂದು ನನ್ನ ಅಧ್ಯಯನದ ಸಂದರ್ಭದಲ್ಲಿ ಕೆಲವು ಮಸೀದಿಗಳನ್ನು ಪಟ್ಟಿ ಮಾಡಿರುವೆ. ಪೊಳಲಿ, ಅಮ್ಮುಂಜೆ, ಮಳಲಿ, ಪೇರ ಮಸೀದಿ, ವಳವೂರು, ಅಕ್ಕರಂಗಡಿ, ಅಜಿಲಮೊಗರು, ವಿಟ್ಲ ಪರ್ತಿಪಾಡಿ, ಕಲ್ಲೇಗ, ಪಡುಮಲೆ ಇತ್ಯಾದಿಗಳು. (ಈ ಪಟ್ಟಿಗೆ ಇನ್ನೂ ಹಲವು ಮಸೀದಿಗಳು ಒಳಪಡಬೇಕಾಗಿತ್ತಾದರೂ ನಾನು ಪ್ರಾಚೀನ ಆಕೃತಿಗಳನ್ನು ಉಳಿಸಿಕೊಂಡವುಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಿರುವೆ)

ಇದನ್ನೂ ಓದಿ: ವಾರಣಾಸಿಗೆ ಪ್ರಧಾನಿ ಮೋದಿ ಭೇಟಿ: ಮಸೀದಿಗೆ ಕೇಸರಿ ಬಣ್ಣ ಬಳಿದ ಅಧಿಕಾರಿಗಳು!

ಇವುಗಳಲ್ಲೆಲ್ಲಾ ಸರ್ವೇ ಸಾಮಾನ್ಯವಾದ ಕೆಲವು ಕಲಾತ್ಮಕ ಮತ್ತು ಕೆತ್ತನೆ ಕೆಲಸಗಳಿವೆ. ಅವುಗಳಲ್ಲಿ ಚಕ್ರಾಕೃತಿಯ ರಚನೆಗಳು. ಈ ಚಕ್ರಾಕೃತಿಯ ರಚನೆಗಳಿಗೆ ಸಿಲ್ವರ್ ಅಥವಾ ಗೋಲ್ಡನ್ ಪೈಂಟ್ ಬಳಿಯಲಾಗಿರುವುದನ್ನು ನಾನು ಗಮನಿಸಿರುವೆ. ಬಂಟ್ವಾಳದ ಅಕ್ಕರಂಗಡಿ ಮತ್ತು ವಳವೂರು ಎಂಬಲ್ಲಿನ ಮಸೀದಿಗಳಲ್ಲಿ ಚಕ್ರಾಕೃತಿಯ ರಚನೆಗಳಿಗೆ ವುಡ್ ಪಾಲಿಶ್ ಮಾಡಿ ಎಣ್ಣೆ ಬಳಿಯಲಾಗಿದೆ. ಚಕ್ರದಂತಹ ರಚನೆಗಳು ದೇವಸ್ಥಾನಗಳಲ್ಲಿ ಕಾಣಸಿಗುತ್ತವಾದರೂ ಮಸೀದಿಗಳಲ್ಲಿ ಕಾಣಸಿಗುವ ಚಕ್ರಾಕಾರದ ಅನೇಕ ರಚನೆಗಳೊಳಗೆ ಇಸ್ಲಾಮಿಕ್ ಕ್ಯಾಲಿಗ್ರಫಿಯಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ತಿಳಿದು ಬರುತ್ತದೆ.

ಕೆಲವು ತಜ್ಞರ ಪ್ರಕಾರ ಮಳಲಿ ಮಸೀದಿಯ ವಾಸ್ತು ಶಿಲ್ಪಗಳು ಹದಿನೈದು ಅಥವಾ ಹದಿನೈದನೆಯ ಶತಮಾನದ್ದು. ಇದು ಸತ್ಯವಾಗಿರಲೂಬಹುದು. ಆದರೆ ಎಲ್ಲಾ ರಚನೆಗಳೂ ಹದಿನೈದು ಹದಿನಾರನೆಯ ಶತಮಾನದ ಮಾಡೆಲ್ ಎನ್ನಲಾಗದು.

ಯಾವುದೇ ಕಲಾತ್ಮಕ ರಚನೆಗಳು ಕಾಲ ಕಾಲಕ್ಕೆ ಮಾಡಲಾಗುವ ನವೀಕರಣಗಳ ಸಂದರ್ಭಗಳಲ್ಲಿ ಬದಲಾಗುತ್ತದೆ.ಅವೆಲ್ಲವೂ ಹದಿನೈದು ಮತ್ತು ಹದಿನಾರನೆಯ ಶತಮಾನದ ಜನಪ್ರಿಯ ಮಾದರಿಯನ್ನು ಅಪ್ಪಿಕೊಂಡು ಒಪ್ಪಿಕೊಂಡು ಮುಂದೆ ಆ ಕಲಾತ್ಮಕ ರಚನೆಗಳನ್ನು ಬದಲಿಸದೇ ಇದ್ದಿರಲೂ ಬಹುದು. ಟಿಪ್ಪು ಸುಲ್ತಾನರು ನವೀಕರಿಸಿದ ಮಂಗಳೂರಿನ ಬಹುತೇಕ ಮಸೀದಿಗಳಲ್ಲಿ ಝೀನತ್‌ ಬಕ್ಷ್ ಮಸೀದಿಯ ಕಲಾ ಮಾದರಿಗಳು ಕಾಣಸಿಗುತ್ತವೆ. ಅದಕ್ಕೆ ನಾನು ಸನಿಹದಿಂದ ಕಂಡ ಉದಾಹರಣೆ ಅಮ್ಮೆಂಬಳ ಮಸೀದಿ.

ಕಲೆ, ವಾಸ್ತು-ಶಿಲ್ಪ ಇತ್ಯಾದಿಗಳ ಕುರಿತ ಕನಿಷ್ಠ ಪರಿಜ್ಞಾನವೂ ಇಲ್ಲದವರು ಮಾತ್ರ ಯಾವುದೋ ಒಂದು‌‌ ಪುಟ್ಟ ಸಾಮ್ಯತೆಯನ್ನು ಹಿಡಿದುಕೊಂಡು ಇದು ಹಿಂದೆ ದೇವಸ್ಥಾನವಾಗಿತ್ತೆಂದು ವಾದಿಸಲು ಸಾಧ್ಯ. ಇಂತವರ ದುಷ್ಟ ಹುನ್ನಾರಗಳನ್ನು ನಾಡಿನ ಜನರೇ ಸೋಲಿಸಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...