17 ವರ್ಷದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮುಂಬೈನ ಜೆಜೆ ಮಾರ್ಗ ಪೊಲೀಸರು 16 ವರ್ಷದ ಟಿಕ್‌ಟಾಕ್ ಸ್ಟಾರ್ ಮತ್ತು ಆತನ ಇಬ್ಬರು ಸ್ನೇಹಿತರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಟಿಕ್‌ಟಾಕ್ ಸ್ಟಾರ್ ಆಗಿರುವ 17 ವರ್ಷದ ಸಂತ್ರಸ್ತೆಯ ಖಾಸಗಿ ವಿಡಿಯೊಗಳನ್ನು ಮಾಡಿ, ವೈರಲ್ ಮಾಡುವ ಬೆದರಿಕೆಯನ್ನು ಆರೋಪಿಗಳು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಫೋಕ್ಸೋ (Protection of Children from Sexual Offences Act 2012)ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ; ಮಕ್ಕಳ ಸುರಕ್ಷತೆ ಪೋಷಕರ ಕರ್ತವ್ಯ ಎಂದ ಗೋವಾ ಸಿಎಂ!
ಟಿಕ್‌ಟಾಕ್ ವಿಡಿಯೋ ಮಾಡುವ ಸಲುವಾಗಿ ಅಪ್ರಾಪ್ತೆ ಆರೋಪಿಯನ್ನು ಭೇಟಿಯಾಗಿದ್ದಳು. 2020 ರಿಂದ ಇಬ್ಬರು ಸ್ನೇಹಿತರಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ತಮ್ಮ ನಡುವಿನ ಸಂಬಂಧವನ್ನು ಕೊನೆಗೊಳಿಸಲು ಬಯಸಿದ್ದರಿಂದ ಇಬ್ಬರ ನಡುವೆ ಆಗಾಗ್ಗೆ ಜಗಳ ಉಂಟಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
“ಬಾಲಕಿಗೆ ತಿಳಿಯದಂತೆ ಆರೋಪಿಯು ಇಬ್ಬರ ಖಾಸಗಿ ಕ್ಷಣಗಳಲ್ಲಿನ ಆಕೆಯ ಹಲವಾರು ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ. ಒಂದು ವೇಳೆ ಆಕೆ ಸಂಬಂಧವನ್ನು ಮುಂದುವರಿಸಲು ನಿರಾಕರಿಸಿದರೆ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ” ಎಂದು ಜೆಜೆ ಮಾರ್ಗ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವಾರ, ಆಕೆ ನೀಡಿದ್ದ ಉಡುಗೊರೆಗಳನ್ನು ಹಿಂದಿರುಗಿಸುವ ನೆಪದಲ್ಲಿ ಆಕೆಯನ್ನು ತನ್ನ ಮನೆಗೆ ಕರೆದು ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ತನ್ನ ಇಬ್ಬರು ಸ್ನೇಹಿತರೊಂದಿಗೆ ಆಕೆಯ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಅಪ್ರಾಪ್ತೆ ತನ್ನ ತಾಯಿಗೆ ಸಂಪೂರ್ಣ ಘಟನೆಯನ್ನು ತಿಳಿಸಿದ್ದಾರೆ. ಬಳಿಕ ಇಬ್ಬರೂ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಜೀನ್ಸ್ ಧರಿಸಿದ್ದಕ್ಕೆ ಬಾಲಕಿಯನ್ನು ಕೊಂದ ಅಜ್ಜ ಮತ್ತು ಚಿಕ್ಕಪ್ಪಂದಿರು


