Homeಮುಖಪುಟದೆಹಲಿ ಶಾಸಕರ ವೇತನ 90 ಸಾವಿರಕ್ಕೆ ಏರಿಕೆ, ಆದರೂ ದೇಶದಲ್ಲಿ ಕಡಿಮೆ ಸಂಬಳ ಪಡೆಯುವ ಶಾಸಕರಿವರು!

ದೆಹಲಿ ಶಾಸಕರ ವೇತನ 90 ಸಾವಿರಕ್ಕೆ ಏರಿಕೆ, ಆದರೂ ದೇಶದಲ್ಲಿ ಕಡಿಮೆ ಸಂಬಳ ಪಡೆಯುವ ಶಾಸಕರಿವರು!

- Advertisement -
- Advertisement -

ಕೇಂದ್ರ ಸರ್ಕಾರವು ಅನುಮೋದಿಸಿದ ದೆಹಲಿ ನಗರದ ಶಾಸಕರ ಪರಿಷ್ಕೃತ ವೇತನವನ್ನು ದೆಹಲಿ ಸರ್ಕಾರವು ಸ್ವೀಕರಿಸಿದ್ದು, ಇದರ ಅಡಿಯಲ್ಲಿ ವೇತನ ಮತ್ತು ಭತ್ಯೆ ಸೇರಿ ತಿಂಗಳಿಗೆ 90,000 ರೂಪಾಯಿಗಳನ್ನು ಶಾಸಕರು ಪಡೆಯಲಿದ್ದಾರೆ.

ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಅನುಸಾರವಾಗಿ ಶಾಸಕರ ವೇತನ ಹೆಚ್ಚಳಕ್ಕೆ ದೆಹಲಿ ಸಂಪುಟ ಸಭೆ ಮಂಗಳವಾರ ಅನುಮೋದನೆ ನೀಡಿದೆ ಎಂದು ಸರ್ಕಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

“ಕೇಂದ್ರದ ಪ್ರಸ್ತಾವನೆಯಂತೆ ಶಾಸಕರ ವೇತನ ಹೆಚ್ಚಳಕ್ಕೆ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಕ್ಯಾಬಿನೆಟ್ ಅನುಮೋದನೆ ನೀಡಿದೆ. ದೆಹಲಿ ಶಾಸಕರು ಕೇವಲ 30,000 ಸಾವಿರ ಸಂಬಳ ಪಡೆಯುತ್ತಾರೆ.  ದೆಹಲಿಯ ಶಾಸಕರು ಭಾರತದಾದ್ಯಂತ ಕಡಿಮೆ ಸಂಬಳ ಪಡೆಯುವ ಶಾಸಕರಾಗಿ ಮುಂದುವರಿಯಲಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಳೆದ 10 ವರ್ಷಗಳಿಂದ ದೆಹಲಿ ಶಾಸಕರ ಸಂಬಳ ಮತ್ತು ಭತ್ಯೆಯನ್ನು ಹೆಚ್ಚಿಸಿರಲಿಲ್ಲ. ಶಾಸಕರ ಮೂಲ ಮಾಸಿಕ ವೇತನ 12,000 ರೂಪಾಯಿ, ಭತ್ಯೆಗಳು ಸೇರಿ 54,000 ಸಾವಿರ ರೂಪಾಯಿ ಪಡೆಯುತ್ತಿದ್ದರು. ಈಗ ಭತ್ಯೆ ಮತ್ತು ಸಂಬಳ ಸೇರಿ 90,000 ಸಾವಿರ ಪಡೆಯಲಿದ್ದಾರೆ.

ಇದನ್ನೂ ಓದಿ: ಪದ್ಮ ಪ್ರಶಸ್ತಿ: ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಶಿಫಾರಸ್ಸು ಮಾಡಲಿರುವ ದೆಹಲಿ ಸರ್ಕಾರ

 

“ದೆಹಲಿಯಲ್ಲಿ ಜೀವನ ವೆಚ್ಚ ಗಣನೀಯವಾಗಿ ಏರಿಕೆಯಾಗಿದ್ದರೂ, ಕೇಂದ್ರವು ವಿಧಿಸಿರುವ ನಿರ್ಬಂಧವು ದೆಹಲಿಯ ಶಾಸಕರನ್ನು ದೇಶದ ಅತ್ಯಂತ ಕಡಿಮೆ ಆದಾಯದ ಶಾಸಕರಲ್ಲಿ ಒಬ್ಬರನ್ನಾಗಿಸಿದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳ ಶಾಸಕರು ಸುಮಾರು 1.5 ಲಕ್ಷ ವೇತನ ಪಡೆಯುತ್ತಾರೆ. ಇದು  ದೆಹಲಿಯ ಶಾಸಕರು ಗಳಿಸುವ ಮೊತ್ತಕ್ಕಿಂತ 2 ಪಟ್ಟು ಹೆಚ್ಚು. 2011 ರಿಂದ ದೆಹಲಿಯ ಶಾಸಕರ ಸಂಬಳ ಏರಿಕೆಯಾಗಿಲ್ಲ. ದೆಹಲಿಯ ಶಾಸಕರು ಇತರ ರಾಜ್ಯಗಳ ಶಾಸಕರ ವೇತನ ಸರಿಸಮಾನವಾಗಿರಬೇಕು ಎಂದು ದೆಹಲಿ ಸರ್ಕಾರ MHA ಗೆ ಮನವಿ ಮಾಡಿತ್ತು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಒಟ್ಟು 90,000 ರೂಪಾಯಿಗಳಲ್ಲಿ 30,000 ಮೂಲ ವೇತನ, 25,000 ಕ್ಷೇತ್ರ ಭತ್ಯೆ, 15,000 ಸೆಕ್ರೆಟರಿಯಟ್ ಭತ್ಯೆ, ದೂರವಾಣಿ ಮತ್ತು ಸಾರಿಗೆಗಾಗಿ ತಲಾ 10,000 ರೂಪಾಯಿಗಳನ್ನು ಒಳಗೊಂಡಿದೆ ಎಂದು ಸರ್ಕಾರ ತಿಳಿಸಿದೆ.

ಈ ಪ್ರಸ್ತಾವನೆಯು ಕಳೆದ ಐದು ವರ್ಷಗಳಿಂದ ಕೇಂದ್ರದ ಬಳಿಯಿತ್ತು. ಮೂಲ ವೇತನವನ್ನು 54,000 ರೂ.ಗೆ ಏರಿಸಲು ದೆಹಲಿ ಸರ್ಕಾರ ಕೋರಿತ್ತು. ಆದರೆ, ಒಕ್ಕೂಟ ಸರ್ಕಾರ ಮೂಲ ವೇತನವನ್ನು 30,000 ರೂ.ಗೆ ನಿರ್ಬಂಧಿಸಿದೆ ಎಂದು ದೆಹಲಿ ಸರ್ಕಾರವು ಸಂಪುಟ ಸಭೆಯ ನಂತರ ಹೇಳಿಕೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: ಡೇಟಾಖೋಲಿ; ಉತ್ತರದ ದೆಹಲಿಯ ಪ್ರಶ್ನಾರ್ಥಕ ರಾಜಪ್ರತಿನಿಧಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...