ಉದ್ಯಮಿ ಜಗದೀಶ್ ಗುಡಗುಂಟಿ ಮತ್ತು ಡಾ.ಕೆ.ಕೃಷ್ಣಪ್ರಸಾದ್

ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ‘ನಾಡೋಜ’ ಪ್ರಶಸ್ತಿ ಈ ಬಾರಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಸಕ್ಕರೆ ಕಾರ್ಖಾನೆಯ ಮಾಲೀಕ ಜಗದೀಶ್ ಗುಡಗುಂಟಿ ಅವರನ್ನು ಆಯ್ಕೆ ಮಾಡುವ ಮೂಲಕ ವಿವಾದಕ್ಕೆ ಈಡಾಗಿದೆ. ಇವರ ಜೊತೆಗೆ ಕಣ್ಣಿನ ವೈದ್ಯ ಡಾ.ಕೆ.ಕೃಷ್ಣಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಬಾರಿ ಉದ್ಯಮಿ ಒಬ್ಬರಿಗೆ ಪ್ರತಿಷ್ಠಿತ ನಾಡೋಜ ಗೌರವ ನೀಡುವ ಮೂಲಕ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ವಿವಿಯ ಹಲವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ನಾಡೋಜ ಗೌರವ ಹಲವು ವಿವಾದಗಳಿಗೆ ಎಡೆಮಾಡಿಕೊಟ್ಟಿತ್ತು.

’ನಾಡೋಜ’ ವಿವಾದದ ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಹಂಪಿ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ ಟಿ. ಆರ್ ಚಂದ್ರಶೇಖರ್, “ಪ್ರಶಸ್ತಿ ಅಂದರೆ ಲಾಬಿ ಅನ್ನೋದು ಕಾಮನ್ ಆಗಿದೆ. ಆದರೆ ಈ ಸಲ ಅಕ್ಷರ ಲೋಕಕ್ಕೆ ಸಂಬಂಧಿಸದ ಬಂಡವಾಳಶಾಹಿ ಒಬ್ಬರಿಗೆ ನಾಡೋಜ ನೀಡುರುವುದು ಹಂಪಿ ಕನ್ನಡ ವಿವಿಯಲ್ಲಿ ಮೌಲ್ಯಗಳ ಕುಸಿತ ಯಾವ ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದಿದ್ದಾರೆ.

ಇದನ್ನೂ ಓದಿ: ಹಿರಿಯ ಸಾಹಿತಿ, ನಾಡೋಜ ಹಂಪನಾರನ್ನು ಠಾಣೆಗೆ ಕರೆಸಿ ಪೊಲೀಸ್ ವಿಚಾರಣೆ: ವ್ಯಾಪಕ ಖಂಡನೆ

“ದೂರದರ್ಶನ ನಿರ್ದೇಶಕರಾಗಿದ್ದ ಮಹೇಶ್ ಜೋಶಿ ಮತ್ತು ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರಿಗೆ ಕೂಡ ನಾಡೋಜ ನೀಡಲಾಗಿದೆ. ಕೊನೆ ಪಕ್ಷ ಈ ಇಬ್ಬರಿಗೆ ಸಾಹಿತ್ಯ-ಸಂಸ್ಕೃತಿ ಜೊತೆಗೆ ಒಂದು ಮಟ್ಟದ ನಂಟಿತ್ತು. ಅವರು ಸರ್ಕಾರಿ ಮಟ್ಟದಲ್ಲಿ ಪ್ರಭಾವ ಬಳಸಿ ನಾಡೋಜ ಪಡೆದಿದ್ದರು. ಆದರೆ ಈ ಸಲ ಮೊಟ್ಟಮೊದಲ ಬಾರಿಗೆ ಬಂಡವಾಳಶಾಹಿ ಒಬ್ಬರಿಗೆ ನಾಡೋಜ ನೀಡುವ ಮೂಲಕ ಹಂಪಿ ವಿವಿ ದೊಡ್ಡ ತಪ್ಪು ಮಾಡಿದೆ” ಎಂದು ಆರೋಪಿಸಿದ್ದಾರೆ.

“ನಾಡೋಜ ಇರಲಿ, ಯಾವ ಪ್ರಶಸ್ತಿಯೂ ಇಂದು ಹಣ, ಲಾಬಿ ಮತ್ತು ಅಧಿಕಾರಗಳಿಂದ ಮುಕ್ತವಾಗಿಲ್ಲ. ನಾಡೋಜ ಉದ್ಯಮಿಯೊಬ್ಬರ ಕಿಸೆಗೆ ಹೋದರೆ ನಕ್ಕು ಸುಮ್ಮನಾಗಬೇಕು ಅಷ್ಟೇ.” -ಡಾ.ಚಂದ್ರ ಪೂಜಾರಿ, ವಿಶ್ರಾಂತ ಅಧ್ಯಾಪಕ, ಹಂಪಿ ವಿವಿ

ಈಗ ನಾಡೋಜ ಪ್ರಶಸ್ತಿಗೆ ಆಯ್ಕೆಯಾಗಿರುವ ಸಕ್ಕರೆ ಕಾರ್ಖಾನೆ ಮಾಲೀಕ ಜಗದೀಶ್ ಗುಡಗುಂಟಿ, ಕೇವಲ ಉದ್ಯಮಿಯಲ್ಲ. ಅವರು ಜಮಖಂಡಿಯಿಂದ ಕಳೆದ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್‌ಗೆ ಪ್ರಯತ್ನ ಪಟ್ಟಿದ್ದರು. ಹೀಗಾಗಿ ಆಡಳಿತ ಪಕ್ಷದ ನಾಯಕರೊಬ್ಬರಿಗೆ ಪ್ರಶಸ್ತಿ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಇದನ್ನೂ ಓದಿ: ಸೂಪರ್‌ ಸ್ಟಾರ್ ರಜನಿಕಾಂತ್‌ಗೆ ಒಲಿದ 2019ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ವಿಜಯಪುರ, ಬಾಗಲಕೋಟೆಗಳಲ್ಲಿ ಇಂಡಸ್ಟ್ರಿ ಹೊಂದಿರುವ ಇವರನ್ನು ಬಳ್ಳಾರಿ ಜಿಲ್ಲೆಯಲ್ಲಿರುವ ಇರುವ ಕನ್ನಡ ವಿಶ್ವವಿದ್ಯಾಲು ಹುಡುಕಿದೆ ಎಂದು ಹಲವು ವಿದ್ಯಾರ್ಥಿಗಳು ವ್ಯಂಗ್ಯವಾಡಿದ್ದಾರೆ.

 “ಅಯ್ಯೋ, ಪ್ರಶಸ್ತಿ ಅಂದರೆ ಲಾಬಿ ಅನ್ನುವಂತಹ ವಾತಾವರಣದ ಮಧ್ಯೆ ಕನ್ನಡದ ಪ್ರಾತಿನಿಧಿಕ ವಿವಿಯ ನಾಡೋಜ ಪ್ರಶಸ್ತಿ ಉದ್ಯಮಿಯೊಬ್ಬರಿಗೆ ಸಿಕ್ಕಿದ್ದು ಇವತ್ತು ವಿವಿಗಳು ತಲುಪುತ್ತಿರುವ ನೈತಿಕ ಅಧಿಪತನಕ್ಕೆ ಸಾಕ್ಷಿ.”ಸಿ.ಎನ್ ರಾಮಚಂದ್ರನ್, ವಿಮರ್ಶಕರು


ಇದನ್ನೂ ಓದಿ: ‘ಬಿರಿಯಾನಿ’ ಚಿತ್ರ ಬಿಡುಗಡೆಗೆ ಥಿಯೇಟರ್ ಮಾಲೀಕರ ಹಿಂದೇಟು: ಮಲಯಾಳಂ ನಿರ್ದೇಶಕನ ಆಕ್ರೋಶ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here