Homeಮುಖಪುಟರಾಜಸ್ಥಾನ: ಪಾಕಿಸ್ತಾನಕ್ಕೆ ಹೋಗು ಎಂದು ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ, ಐವರ ಬಂಧನ

ರಾಜಸ್ಥಾನ: ಪಾಕಿಸ್ತಾನಕ್ಕೆ ಹೋಗು ಎಂದು ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ, ಐವರ ಬಂಧನ

- Advertisement -
- Advertisement -

ರಾಜಸ್ಥಾನದ ಅಜ್ಮೀರ್‌ನಲ್ಲಿ ಐದು ಜನರ ಗುಂಪೊಂದು ಮುಸ್ಲಿಂ ವ್ಯಕ್ತಿಯೊಬ್ಬರನ್ನು ಥಳಿಸಿ ಪಾಕಿಸ್ತಾನಕ್ಕೆ ಹೋಗುವಂತೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯನ್ನು ಥಳಿಸಿ ಆತನ ಕುಟುಂಬದವರನ್ನು ನಿಂದಿಸಲಾಗಿತ್ತು.

ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಲಿತ್ ಶರ್ಮಾ (40), ಸುರೇಂದ್ರ (32), ತೇಜಪಾಲ್ (27), ರೋಹಿತ್ ಶರ್ಮಾ(32), ಮತ್ತು ಶೈಲೇಂದ್ರ (31) ಎಂಬ  ಐದು ಮಂದಿ ಆರೋಪಿಗಳನ್ನು ಸೆಕ್ಷನ್ 151 ಸಿಆರ್‌ಪಿಸಿ ಅಡಿಯಲ್ಲಿ ಬಂಧಿಸಲಾಗಿದೆ.

ಆರೋಪಿಗಳು ಮುಸ್ಲಿಂ ವ್ಯಕ್ತಿಗೆ, “ನೀವು ಉತ್ತರ ಪ್ರದೇಶದಿಂದ ಏಕೆ ಬಂದಿದ್ದೀರಿ? ನೀವು ಚಿನ್ನದ ಆಭರಣಗಳನ್ನು ಕದ್ದಿದ್ದಿರಿ. ನಿಮ್ಮದು ಒಂದು ಗ್ಯಾಂಗ್ ಇದೆ. ನೀವು ಒಂದು ಕೆಲಸ ಮಾಡಿ. ಪಾಕಿಸ್ತಾನಕ್ಕೆ ಹೋಗಿ” ಎಂದು ಭಿಕ್ಷೆ ಬೇಡುತ್ತಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ. ವೀಡಿಯೊದಲ್ಲಿ, ಒಬ್ಬ ಆರೋಪಿಯು ಸಂತ್ರಸ್ತೆಯ ಜೊತೆಗಿದ್ದ ಹುಡುಗನ ತಲೆಗೆ ಕಾಲಿನಿಂದ ಒದೆಯುವುದನ್ನು ಸಹ ಕಾಣಬಹುದು.

ಇದನ್ನೂ ಓದಿ: ಮುಸ್ಲಿಂ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ, ಆರೋಪಿಗಳಿಗೆ 24 ಗಂಟೆಯೊಳಗೆ ಜಾಮೀನು!

“ಆಗಸ್ಟ್ 20 ರಂದು (ಶುಕ್ರವಾರ) ಚಿತ್ರೀಕರಿಸಲಾದ ವಿಡಿಯೋದಲ್ಲಿ ಭಿಕ್ಷುಕರನ್ನು ಕೆಲವು ವ್ಯಕ್ತಿಗಳು ಥಳಿಸಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಾಗದಿದ್ದರೂ, ನಾವು ಘಟನೆಯನ್ನು ಗಮನಿಸಿದ್ದೇವೆ. ತನಿಖೆಗೆ ಆದೇಶಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದರು.

“ತನಿಖೆಯ ಸಮಯದಲ್ಲಿ, ಬಲಪಂಥೀಯ ಸಂಘಟನೆ ವಿಶ್ವ ಹಿಂದೂ ಪರಿಷತ್‌ನ ಸದಸ್ಯ ಎನ್ನಲಾಗಿರುವ ಲಲಿತ್ ಶರ್ಮಾ, ಇತರ ನಾಲ್ಕು ಜನರೊಂದಿಗೆ ಭಿಕ್ಷುಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ನಮಗೆ ತಿಳಿಯಿತು. ಆತನನ್ನು ಆಗಸ್ಟ್ 20 ರಂದು ಬಂಧಿಸಲಾಯಿತು. ಮರುದಿನ ಇತರ ನಾಲ್ವರನ್ನು ಬಂಧಿಸಲಾಯಿತು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು” ಎಂದಿದ್ದಾರೆ.

’ಸಂತ್ರಸ್ತ ವ್ಯಕ್ತಿ ಕೆಲವು ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರಿಂದ ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದೇವೆ. ಗುರುತು ಸಿಗದಿರಲು ಅವರು ಭಿಕ್ಷೆ ಬೇಡುತ್ತಿದ್ದರು’ ಎಂದು ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಐವರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.


ಇದನ್ನೂ ಓದಿ: ಮುಸ್ಲಿಂ ಬಳೆ ವ್ಯಾಪಾರಿ ಮೇಲೆ ಗುಂಪು ಹಲ್ಲೆ; ಸುಳ್ಳು ಹೆಸರು ಹೇಳಿದ್ದಕ್ಕೆ ಥಳಿಸಿದ್ದಾರೆ ಎಂದ ಸಚಿವ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...