ಬಳೆ ಮಾರಾಟ ಮಾಡುತ್ತಿದ್ದ 25 ವರ್ಷದ ಯುವಕನನ್ನು ಸಾರ್ವಜನಿಕರ ಎದುರೇ ಗುಂಪೊಂದು ಕ್ರೂರವಾಗಿ ಥಳಿಸಿದ್ದು, ಅವರ ಬಳಿಯಿದ್ದ 10,000 ರೂಗಳನ್ನು ಕಸಿದುಕೊಂಡು ಹೋಗಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾನುವಾರ ನಡೆದಿದೆ. ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನೂರಾರು ಜನರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ ನಂತರ ತಡರಾತ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
“ಹಲ್ಲೆಗೊಳಗಾದ ಯುವಕ ತನ್ನ ವ್ಯಾಪಾರಕ್ಕಾಗಿ ಸುಳ್ಳು ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಜನರ ಅರಿವಿಗೆ ಬಂದದ್ದರಿಂದ ಅವರ ಮೇಲೆ ದಾಳಿ ನಡೆದಿದೆ” ಎಂದು ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಪೊಲೀಸ್ ತನಿಖೆಯನ್ನು ಉಲ್ಲೇಖಿಸುತ್ತಾ ಹೇಳಿದ್ದಾರೆ. ಘಟನೆಗೆ ಕೊಮು ಬಣ್ಣ ನೀಡಬಾರದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸುತ್ತಿಗೆಯಿಂದ ಕ್ರೂರವಾಗಿ ಥಳಿಸಿದ ಗೋರಕ್ಷಕರು: ಕೈಕಟ್ಟಿ ನೋಡುತ್ತಿದ್ದ ಪೊಲೀಸರು!
ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಂತ್ರಸ್ತ ಯುವಕನನ್ನು ತಸ್ಲೀಮ್ ಎಂದು ಗುರುತಿಸಲಾಗಿದೆ. ಇಂದೋರ್‌ನ ಬಂಗಾಂಗಾ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ದುಷ್ಕರ್ಮಿಗಳ ಗುಂಪು ಥಳಿಸುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ದುಷ್ಕರ್ಮಿಗಳು ಯುವಕನನ್ನು ಸುತ್ತುವರೆದು ಥಳಿಸುತ್ತಿರುವಾಗ ಕೋಮು ನಿಂದನೆ ಭಾಷೆಯನ್ನು ಬಳಸಿರುವುದು ಕಂಡು ಬಂದಿದೆ.
“ನಿಮಗೆ ಬೇಕಾದುದನ್ನು ತೆಗೆದುಕೊಳ್ಳಿ. ಅವನು ಇನ್ನು ಮುಂದೆ ಈ ಪ್ರದೇಶದಲ್ಲಿ ಕಾಣಬಾರದು” ಎಂದು ಒಬ್ಬ ವ್ಯಕ್ತಿ ಬ್ಯಾಗಿನಿಂದ ಬಳೆಗಳನ್ನು ತೆಗೆಯುತ್ತಾ ಹೇಳುತ್ತಾನೆ. ಅದೇ ವ್ಯಕ್ತಿ ಸಾರ್ವಜನಿಕರನ್ನು ಮುಂದೆ ಬಂದು ಯುವಕನನ್ನು ಥಳಿಸುವಂತೆ ಕೇಳುತ್ತಾನೆ. ಇದರ ನಂತರ, ಮೂರರಿಂದ ನಾಲ್ಕು ಜನರು ಯುವಕನಿಗೆ ನಿರ್ದಯವಾಗಿ ಥಳಿಸಿದ್ದಾರೆ.
ಇದನ್ನೂ ಓದಿ: ರಾಯಚೂರು: ಜಾತಿ ಕಾರಣಕ್ಕೆ ಗಲಾಟೆ – ದಲಿತ ಕೇರಿಗೆ ನುಗ್ಗಿ ಮಾರಣಾಂತಿಕ ಹಲ್ಲೆ
“ಅವರು ಮೊದಲು ನನ್ನ ಹೆಸರು ಕೇಳಿದರು. ನಾನು ಹೆಸರು ಹೇಳಿದ ನಂತರ ನನಗೆ ಹೊಡೆಯಲಾರಂಭಿಸಿದ್ದಾರೆ. ನನ್ನ ಬಳಿಯಿದ್ದ 10,000 ರೂ. ದೋಚಿದ್ದಲ್ಲದೆ, ನನ್ನ ಬಳಿಯಿದ್ದ ಬಳೆಗಳು ಮತ್ತು ಇತರ ವಸ್ತುಗಳನ್ನು ನಾಶ ಮಾಡಿದ್ದಾರೆ” ಎಂದು ಸಂತ್ರಸ್ತ ಯುವಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸದಂತೆ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ.
“ನಾವು ದೂರುದಾರರ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಮತ್ತು ತನಿಖೆ ಮಾಡುತ್ತಿದ್ದೇವೆ. ಆದರೆ ಸಾಮಾಜಿಕ ಜಾಲತಾಣದ ಕೋಮು ಪ್ರಚೋದಕ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸದಂತೆ ಜನರೊಂದಿಗೆ ನಾವು ಕೇಳುತ್ತಿದ್ದವೆ. ಸಾಮಾಜಿಕ ಜಾಲತಾಣದ ಅಂತಹ ಪೋಸ್ಟ್‌ಗಳ ಮೇಲೆ ನಾವು ನಿಗಾ ಇಟ್ಟಿದ್ದೇವೆ. ವಿಡಿಯೋದಲ್ಲಿನ ಆರೋಪಿಗಳನ್ನು ಗುರುತಿಸಲಾಗುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಇಂದೋರ್ ಪೂರ್ವ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಅಶುತೋಷ್ ಬಾಗ್ರಿ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದಾಗಿಯು ಸಾಮಾಜಿಕ ಜಾಲತಾಣಗಳಲ್ಲಿ ಘಟನೆ ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, “ಈ ವಿಡಿಯೋ ಅಫ್ಘಾನಿಸ್ತಾನದ್ದಲ್ಲ, ಬದಲಾಗಿ ಭಾರತದ ಮಧ್ಯಪ್ರದೇಶದ ಇಂದೋರ್‌ನದ್ದು. ಯುವಕನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸುತ್ತಾರೆ, ಅವರಿಂದ ಬಳೆಗಳನ್ನು ಲೂಟಿ ಮಾಡುತ್ತಾರೆ. ಯುವಕ ಮಾಡಿದ ಏಕೈಕ ತಪ್ಪೆಂದರೆ ಆತ ಹಿಂದು ಪ್ರದೇಶದಲ್ಲಿ ಬಳೆಗಳನ್ನು ಮಾರಾಟ ಮಾಡಲು ತೆರಳಿದ್ದು” ಎಂದು ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
This video is not from #Afghanistan but from #Indore #MadhyaPradesh, India.
lynching is done in public & looting the goods of a #Muslim selling bangles.
Its only fault is that he went to sell bangles in #Hindu area.pic.twitter.com/sLtyyGycD4— ??????? ?????? ???? (@Bhabanisankar02) August 23, 2021
ಇದನ್ನೂ ಓದಿ: ಭಾರತದ ಪ್ರಜೆಗಳನ್ನು ಅನುಮಾನದಿಂದ ನೋಡುತ್ತಿದೆಯೇ ಸರ್ಕಾರ?