Homeಕರೋನಾ ತಲ್ಲಣಆಮ್ಲಜನಕ ಕೊರತೆಯಿಂದ ಯಾವುದೆ ಸಾವಾಗಿಲ್ಲ: ಯುಪಿ ಸರ್ಕಾರ

ಆಮ್ಲಜನಕ ಕೊರತೆಯಿಂದ ಯಾವುದೆ ಸಾವಾಗಿಲ್ಲ: ಯುಪಿ ಸರ್ಕಾರ

- Advertisement -
- Advertisement -

ಕೊರೊನಾ ಎರಡನೇ ಅಲೆಯ ಸಮಯದಲ್ಲಿ ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವುಗಳಾಗಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಗುರುವಾರ ವಿಧಾನ ಪರಿಷತ್ತಿಗೆ ತಿಳಿಸಿದೆ. ಆದರೆ ಸರ್ಕಾರದ ಈ ಪ್ರತಿಪಾದನೆಯನ್ನು ಪ್ರತಿಪಕ್ಷಗಳು ತಿರಸ್ಕರಿಸಿವೆ.

ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ 22,915 ರೋಗಿಗಳಲ್ಲಿ ಯಾರೊಬ್ಬರಲ್ಲೂ ‘ಆಮ್ಲಜನಕದ ಕೊರತೆಯಿಂದಾದ ಸಾವು’ ಎಂದು ಮರಣ ಪ್ರಮಾಣಪತ್ರದಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ:‘ಆಮ್ಲಜನಕವನ್ನು ಹೊರಬಿಡುವ ಏಕೈಕ ಪ್ರಾಣಿ ದನ’- ಅಲಹಾಬಾದ್‌ ಹೈಕೋರ್ಟ್ ವಿಚಿತ್ರ ಹೇಳಿಕೆ

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ದೀಪಕ್ ಸಿಂಗ್ ಅವರಿಗೆ ಉತ್ತರಿಸಿದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್, ‘ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ರಾಜ್ಯದಲ್ಲಿ ಯಾವುದೇ ಸಾವು ಸಂಭವಿಸಿಲ್ಲ’ ಎಂದು ಹೇಳಿದ್ದಾರೆ.

ಪೂರಕ ಪ್ರಶ್ನೆಯನ್ನು ಎತ್ತಿರುವ ದೀಪಕ್, ತನ್ನದೇ ಮಂತ್ರಿಗಳು ಆರೋಪಿಸಿದ್ದ ಇದೇ ರೀತಿಯ ಪ್ರಕರಣಗಳ ಬಗ್ಗೆ ಸರ್ಕಾರದ ಬಳಿ ವಿವರಗಳಿವೆಯೇ ಎಂದು ಕೇಳಿದ್ದರು.

“ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಸಾವುಗಳು ಸಂಭವಿಸುತ್ತಿವೆ ಎಂದು ಹಲವು ಸಚಿವರು ಪತ್ರ ಬರೆದಿದ್ದಾರೆ. ಇದಲ್ಲದೇ ಹಲವು ಸಂಸದರು ಕೂಡ ಇಂತಹ ದೂರುಗಳನ್ನು ನೀಡಿದ್ದರು. ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ ಹಲವು ಘಟನೆಗಳು ಬೆಳಕಿಗೆ ಬಂದಿದ್ದವು. ಇಡೀ ರಾಜ್ಯದಲ್ಲಿ ಈ ಸಾವುಗಳ ಬಗ್ಗೆ ಸರ್ಕಾರದ ಬಳಿ ಏನಾದರೂ ಮಾಹಿತಿ ಇದೆಯೇ. ಗಂಗಾನದಿಯಲ್ಲಿ ಮೃತದೇಹಗಳು ಹರಿಯುತ್ತಿದ್ದು, ಆಮ್ಲಜನಕದ ಕೊರತೆಯಿಂದ ಜನರು ನರಳುತ್ತಿರುವುದನ್ನು ಸರ್ಕಾರ ನೋಡಿಲ್ಲವೇ?” ಎಂದು ಅವರು ಕೇಳಿದ್ದರು.

ಇದನ್ನೂ ಓದಿ:ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳ ತನಿಖೆಗೆ ಸಮಿತಿ ರಚಿಸುವಂತೆ ಮತ್ತೊಮ್ಮೆ ಆಗ್ರಹಿಸಿದ ದೆಹಲಿ ಸರ್ಕಾರ

ಇದಕ್ಕೆ ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಜೈ ಪ್ರತಾಪ್, “ಆಸ್ಪತ್ರೆಗೆ ದಾಖಲಾದ ರೋಗಿಯು ಮೃತಪಟ್ಟರೆ ವೈದ್ಯರು ಮರಣ ಪ್ರಮಾಣ ಪತ್ರ ನೀಡುತ್ತಾರೆ. ರಾಜ್ಯದಲ್ಲಿ ಕೊರೊನಾ ಸಂತ್ರಸ್ತರಿಗಾಗಿ ವೈದ್ಯರು ನೀಡಿರುವ 22,915 ಮರಣ ಪ್ರಮಾಣ ಪತ್ರಗಳಲ್ಲಿ ಎಲ್ಲಿಯೂ ‘ಆಮ್ಲಜನಕದ ಕೊರತೆಯಿಂದ ಆದ ಸಾವು’ ಎಂಬ ಉಲ್ಲೇಖವಿಲ್ಲ” ಎಂದು ಅವರು ಹೇಳಿದ್ದಾರೆ.

“ಸಾಂಕ್ರಾಮಿಕ ಸಮಯದಲ್ಲಿ ಹಲವಾರು ಸಾವುಗಳು ಹಲವಾರು ಇತರ ಕಾಯಿಲೆಗಳಿಂದ ಉಂಟಾಗಿವೆ. ಆಮ್ಲಜನಕ ಕೊರತೆಯಾದಾಗ ಸರ್ಕಾರವು ಇತರ ರಾಜ್ಯಗಳಿಂದ ಆಮ್ಲಜನಕವನ್ನು ವ್ಯವಸ್ಥೆ ಮಾಡಿದೆ” ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ:ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೈದ್ಯಕೀಯ ಆಮ್ಲಜನಕ ಬಳಸಿಕೊಂಡ ದೆಹಲಿ: ಸುಪ್ರೀಂ ಕೋರ್ಟ್ ಸಮಿತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...