Homeಮುಖಪುಟಸಕ್ರಿಯ ರಾಜಕಾರಣ ತೊರೆದ ಕೇರಳ ಬಿಜೆಪಿಯ ಸಿಎಂ ಅಭ್ಯರ್ಥಿ ಇ. ಶ್ರೀಧರನ್‌!

ಸಕ್ರಿಯ ರಾಜಕಾರಣ ತೊರೆದ ಕೇರಳ ಬಿಜೆಪಿಯ ಸಿಎಂ ಅಭ್ಯರ್ಥಿ ಇ. ಶ್ರೀಧರನ್‌!

- Advertisement -
- Advertisement -

ಬಿಜೆಪಿ ಸೇರಿದ ಒಂದೇ ವರ್ಷದೊಳಗೆ ‘ಮೆಟ್ರೋಮ್ಯಾನ್’ ಖ್ಯಾತಿಯ ಇ. ಶ್ರೀಧರನ್ ಅವರು ಸಕ್ರಿಯ ರಾಜಕೀಯವನ್ನು ತೊರೆದಿದ್ದಾರೆ. ಡಿಸೆಂಬರ್ 16 ರ ಗುರುವಾರದಂದು ಕೇರಳದ ಮಲಪ್ಪುರಂನಲ್ಲಿ ಅವರು ತಮ್ಮ ನಿಲುವನ್ನು ಘೋಷಿಸಿದ್ದಾರೆ. ಏಪ್ರಿಲ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನಿಂದ ತಾನು ಪಾಠ ಕಲಿತಿದ್ದಾಗಿ ಅವರು ಹೇಳಿದ್ದಾರೆ.

“ನಾನು ಎಂದಿಗೂ ರಾಜಕಾರಣಿಯಾಗಿರಲಿಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿಲ್ಲ ಎಂದರೆ ನಾನು ರಾಜಕೀಯವನ್ನು ಬಿಟ್ಟುಬಿಡುತ್ತೇನೆ ಎಂದು ಅರ್ಥವಲ್ಲ” ಎಂದು ಅವರು ಸಕ್ರಿಯ ರಾಜಕೀಯದಿಂದ ನಿರ್ಗಮಿಸುವಾಗ ಹೇಳಿದ್ದಾರೆ.

ಇದನ್ನೂ ಓದಿ:ಕೇರಳದಲ್ಲಿ ಬಿಜೆಪಿ ಕಿಂಗ್‌ಮೇಕರ್‌ ಆಗಲಿದೆ – ರಾಜ್ಯ ಬಿಜೆಪಿ ನಾಯಕ ಇ. ಶ್ರೀಧರನ್‌

ಇ. ಶ್ರೀಧರನ್ ಅವರು ರಾಜಕೀಯ ಪ್ರವೇಶಿಸುವಾಗ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು ಮತ್ತು ಕೇರಳ ರಾಜಕೀಯದಲ್ಲಿ ಮಹತ್ತರದ ಪಾತ್ರವನ್ನು ವಹಿಸಲು ಆಸಕ್ತಿಯನ್ನು ವ್ಯಕ್ತಪಡಿಸಿದ್ದರು.

“ನಾನು ಸೋತಾಗ ನಿರಾಸೆಯಾಯಿತು. ಆದರೆ ಪರವಾಗಿಲ್ಲ. ಈಗ ಆ ಕಾಲಮಿತಿ ಕಳೆದಿದೆ. ನಾನು ಆಯ್ಕೆಯಾಗಿದ್ದರೆ ನಾನು ಎಂಎಲ್‌ಎ ಆಗುತ್ತಿದ್ದೆ. ಆದರೆ ಒಬ್ಬನೇ ಶಾಸಕನಾಗಿ ಏನೂ ಮಾಡಲಾಗುತ್ತಿರಲಿಲ್ಲ” ಎಂದು ಅವರು ಹೇಳಿದ್ದಾರೆ.

“ನನಗೆ ಈಗ 90 ವರ್ಷ. ನನ್ನನ್ನು ರಾಜಕೀಯಕ್ಕೆ ಮತ್ತಷ್ಟು ತಳ್ಳುವುದು ಅಪಾಯಕಾರಿ. ನನಗೆ ಈಗ ರಾಜಕೀಯದ ಕನಸು ಇಲ್ಲ. ಸೇವೆ ಮಾಡಲು ನನಗೆ ರಾಜಕೀಯ ಅಗತ್ಯವಿಲ್ಲ. ನಾನು ಈಗಾಗಲೇ ಮೂರು ಟ್ರಸ್ಟ್‌ಗಳ ಮೂಲಕ ಅದನ್ನು ಮಾಡುತ್ತಿದ್ದೇನೆ” ಎಂದು ಶ್ರೀಧರನ್ ತಿಳಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಇ. ಶ್ರೀಧರನ್ ಅವರು ಪಾಲಕ್ಕಾಡ್ ಕ್ಷೇತ್ರದಲ್ಲಿ ಹಾಲಿ ಶಾಸಕ ಶಾಫಿ ಪರಂಬಿಲ್ ವಿರುದ್ಧ 3,859 ಮತಗಳಿಂದ ಸೋತಿದ್ದಾರೆ. ಕೇರಳದಲ್ಲಿ ಕನಿಷ್ಠ 35 ಸ್ಥಾನಗಳಲ್ಲಿ ಗೆಲುವಿನ ಆಸೆಯಿಂದ ಏಪ್ರಿಲ್ 2 ರ ವಿಧಾನಸಭಾ ಚುನಾವಣೆಯಲ್ಲಿ ಸೆಣಸಿದ್ದ ಬಿಜೆಪಿ ಮತ್ತು ಮೈತ್ರಿ ಪಕ್ಷಗಳು ಈ ಹಿಂದೆ ಇದ್ದ ಏಕೈಕ ಕ್ಷೇತ್ರವನ್ನೂ ಕಳೆದುಕೊಂಡಿತ್ತು. ‘ಮೆಟ್ರೋಮ್ಯಾನ್’ ಶ್ರೀಧರನ್ ಮತ್ತು ಪಕ್ಷದ ರಾಜ್ಯ ಮುಖ್ಯಸ್ಥ ಕೆ. ಸುರೇಂದ್ರನ್ ಸೇರಿದಂತೆ ಅದರ ಎಲ್ಲಾ ಪ್ರಮುಖ ಸ್ಪರ್ಧಿಗಳು ಸೋತಿದ್ದರು.

ಇದನ್ನೂ ಓದಿ: ಕೇರಳ ಬಿಜೆಪಿ ರೈಲಿನಲ್ಲಿ ಮೆಟ್ರೋಮ್ಯಾನ್: ಪ್ಯಾಸೆಂಜರ್‌ಗಳಿಲ್ಲ, ರೆಡ್ ಸಿಗ್ನಲ್‌ಗಳೇ ಎಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...