Homeಪುಸ್ತಕ ವಿಮರ್ಶೆಅರಸು ಕುರನ್ಗರಾಯ: ಮರೆತ ದಾರಿಗಳನ್ನು ಕೂಡಿಸುವ ಕೊಂಡಿ

ಅರಸು ಕುರನ್ಗರಾಯ: ಮರೆತ ದಾರಿಗಳನ್ನು ಕೂಡಿಸುವ ಕೊಂಡಿ

- Advertisement -
- Advertisement -

ಡಾ.ರವಿಕುಮಾರ್ ನೀಹ ಅವರ ಸಂಶೋಧನಾ ಕೃತಿಯಾದ ’ಅರಸು ಕುರನ್ಗರಾಯ’ ಮರೆತ ದಾರಿಗಳನ್ನು ಕೂಡಿಸುವ ಕೊಂಡಿಯಾಗಿದೆ. ಮೂಲತಃ ಉಪನ್ಯಾಸಕರಾದ ರವಿಕುಮಾರ್ ಸಂಶೋಧಕರೂ ಆಗಿರುವುದರಿಂದ ತಮ್ಮ ಜಿಲ್ಲೆಯ ಜಾನಪದ ನಿಧಿಯೇ ಆಗಿರುವ ಕುರನ್ಗರಾಯನ ಇತಿಹಾಸಕ್ಕೆ ಕೈಚಾಚಿದ್ದಾರೆ. ಮರೆತ ದಾರಿಗಳನ್ನು ಕೂಡಿಸುವ ಮಹತ್ಕಾರ್ಯದಲ್ಲಿ ರವಿಕುಮಾರ್ ಅವರ ಬೊಗಸೆ ತುಂಬುವಷ್ಟು ಕುರನ್ಗರಾಯ ದಕ್ಕಿದ್ದಾನೆ. ಆ ಮೂಲಕ ಕನ್ನಡ ನೆಲದ ಮಹೋನ್ನತ ಚರಿತ್ರೆಯೊಂದು ಅಕ್ಷರಗಳಲ್ಲಿ ದಾಖಲಾಗಲು ಸಾಧ್ಯವಾಗಿದೆ.

ಭಾರತದ ಚರಿತ್ರೆಯು ಉಳ್ಳವರ ಮತ್ತು ಉನ್ನತ ಜಾತಿಗಳ ’ಹೆಗ್ಗಳಿಕೆ’ಯ ದಾಖಲೆಯಷ್ಟೇ ಆಗಿದೆಯೆಂಬುದನ್ನು ಕೆಲವರಾದರೂ ಸಂಶೋಧಕರು ಕಂಡುಕೊಂಡು, ಅದು ಬದಲಾಗಬೇಕೆಂದ ಎಚ್ಚರ ವಹಿಸಿದ್ದಾರೆ. ಆದರೂ, ಇಡೀ ದೇಶದ ನೆಲದ ಮಣ್ಣಿನ ಕಣಕಣದಲ್ಲೂ ಬೆರೆತಿರುವ ನಮ್ಮ ತಳ ಸಮುದಾಯಗಳ ನಿಜದ ಚರಿತ್ರೆ ಅಕ್ಷರಕ್ಕೆ ದಕ್ಕಿಯೂ ದಕ್ಕದ ಹಾಗೆ ಸವಾಲು ಹಾಕುತ್ತಲೇ ಇದೆ. ಅಂಥಾ ನಿಜದ ಚರಿತ್ರೆ ಅರಸು ಕುರನ್ಗರಾಯನದು.

ತುಮಕೂರು ಜಿಲ್ಲೆಯಲ್ಲಿ ಗಿಡಮೂಲಿಕೆಗಳಿಗೆ ಹೆಸರಾದ ಸಿದ್ಧರಬೆಟ್ಟದ ಸುತ್ತಲಿನ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದ ಕುರನ್ಗರಾಯನೆಂಬ ರಾಜ ಆ ಬೆಟ್ಟದ ದಕ್ಷಿಣ ದಿಕ್ಕಿನಲ್ಲೊಂದು ಕೋಟೆ ಕಟ್ಟಿಸಿ ಬಹಳಷ್ಟು ವರ್ಷಗಳ ಕಾಲ ರಾಜ್ಯಭಾರ ನಡೆಸಿದ್ದಾನೆ. ಈತ ತುಮಕೂರು, ಮಧುಗಿರಿ ಮತ್ತು ಕೊರಟಗೆರೆ ಭಾಗದಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಮಾದಿಗ ಸಮುದಾಯಕ್ಕೆ ಸೇರಿದವನೆಂಬುದು ವಿಶೇಷ ಸಂಗತಿ. ಭಾರತದ ಚಾತುರ್ವರ್ಣ ವ್ಯವಸ್ಥೆಯು ಪ್ರತಿಪಾದಿಸುತ್ತಿದ್ದ ಮೌಲ್ಯಗಳಿಗೆ ವಿರುದ್ಧವಾಗಿ ಕನ್ನಡ ನೆಲದಲ್ಲಿ ನಡೆದಿರಬಹುದಾದ ಮಹತ್ ಕ್ರಾಂತಿಗಳಿಗೆ ಕುರನ್ಗರಾಯ ಒಂದು ಉದಾಹರಣೆ. ಸಿದ್ಧರಬೆಟ್ಟದ ಸುತ್ತಲಿನ ಭಾಗದಲ್ಲಿ ಕುರನ್ಗರಾಯನ ಕುರಿತ ಲಾವಣಿಗಳು ಪ್ರಚಲಿತದಲ್ಲಿವೆ ಎಂದರೆ ಅವನ ಕೀರ್ತಿ ಎಷ್ಟರಮಟ್ಟಿಗಿನದ್ದು ಎಂಬುದು ಅರ್ಥವಾಗುತ್ತದೆ.

ಕುರನ್ಗರಾಯ ಆಳುತ್ತಿದ್ದ ಭೂಭಾಗ ಸಿದ್ಧರು ಬದುಕಿದ ಪ್ರದೇಶವಾಗಿತ್ತು. ಬಹುದೊಡ್ಡ ಶ್ರಮಣ ಪರಂಪರೆಯ ನೆಲೆವೀಡನ್ನು ಆಳುತ್ತಿದ್ದ ರಾಜನೊಬ್ಬ ವೈದಿಕ ಸಂಸ್ಕೃತಿಯ ಚಾತುರ್ವರ್ಣ ಪದ್ಧತಿಯಾಚೆಗೆ, ಜನರೊಪ್ಪುವ ಹಾಗೆ, ಜನರ ಬಾಯಲ್ಲಿ ಲಾವಣಿಯಾಗುವ ಹಾಗೆ ಬದುಕಿದ್ದನೆಂಬುದು ನಮ್ಮ ನೆಲವು ಒಂದು ಕಾಲಕ್ಕೆ ಅನನ್ಯವಾದ ಸೌಹಾರ್ದ ಪರಂಪರೆಯೊಂದರ ಭಾಗವೆಂಬುದನ್ನು ಅರ್ಥಮಾಡಿಸುತ್ತದೆ. ಕರ್ನಾಟಕದಲ್ಲಿ ಸಿದ್ಧರ ಕಾಲವೆಂದು ಗುರುತಿಸುವ ಹದಿನೇಳು-ಹದಿನೆಂಟನೇ ಶತಮಾನದಲ್ಲಿ ಕುರನ್ಗರಾಯ ಆಳಿರಬಹುದೆಂದು ಹಲವು ಐತಿಹಾಸಿಕ ಮತ್ತು ಪೌರಾಣಿಕ ದಾಖಲೆಗಳ ಆಧಾರದ ಮೇಲೆ ರವಿಕುಮಾರ್ ಊಹಿಸಿದ್ದಾರೆ. ಹೈದರಾಲಿಯು ಕುರನ್ಗರಾಯನ ಆಡಳಿತಾವಧಿಯಲ್ಲಿ ಸಿದ್ಧರಬೆಟ್ಟಕ್ಕೆ ಬಂದು ಸಿದ್ಧರ ದರ್ಶನ ಪಡೆದನೆಂಬುದಕ್ಕೆ ಐತಿಹ್ಯಗಳಿವೆ. ಮಾದಿಗ ಸಮುದಾಯದ ರಾಜನೊಬ್ಬ ಆಳುತ್ತಿರುವ ಪ್ರದೇಶದ ಬಗ್ಗೆ ಹೈದರಾಲಿಗೆ ಇದ್ದಿರಬಹುದಾದ ಸ್ನೇಹಪರ ಕಾಳಜಿಯ ಕುರಿತು ಆ ಪ್ರದೇಶದಲ್ಲಿ ಲಾವಣಿಗಳಿವೆ. ಆತನು ತಮ್ಮ ಪ್ರದೇಶಕ್ಕೆ ಬಂದಾಗ ದನದ ಮಾಂಸದ ಅಡುಗೆ ಮಾಡಿ ಬಡಿಸಿದ ಬಗ್ಗೆ ವಿವರಗಳಿವೆ ಎಂದರೆ ಹೈದರ್ ಮತ್ತು ಕುರನ್ಗರಾಯನ ಸ್ನೇಹಸಂಬಂಧ ಎಷ್ಟು ಸಾವಯವ ಎನ್ನುವುದು ಅರ್ಥವಾಗುತ್ತದೆ. ಅಲ್ಲದೆ ಕುರನ್ಗರಾಯ ಆ ಭಾಗದಲ್ಲಿ ಪರಿಚಯಿಸಿದ್ದ ತೊಗಲಕಾಸು (ಚರ್‍ಮದ ನಾಣ್ಯ) ಚಲಾವಣೆಯ ಬಗ್ಗೆ ಹೈದರಾಲಿ ಪ್ರಶಂಸೆಯ ಮಾತುಗಳನ್ನಾಡಿರುವ ಕುರಿತು ವಿವರಗಳು ಸಿಕ್ಕುತ್ತವೆ.

ಡಾ.ರವಿಕುಮಾರ್ ನೀಹ

ಹೈದರಾಲಿ ಮತ್ತು ಕುರನ್ಗರಾಯನ ಈ ’ಅವೈದಿಕ ಪ್ರೀತಿ’ಯ ಕಾರಣದಿಂದ ಈ ದಲಿತರಾಜನನ್ನು ಭಾರತೀಯ ಇತಿಹಾಸ ಹೊರಗೇ ಇಟ್ಟಿದೆ. ಓ.ನಾಗರಾಜ್ ಅವರು ಬರೆದಿರುವ ’ಕುರಂಗರಾಜ ವೈಭವ’ ಎನ್ನುವ ಕಾದಂಬರಿಯೊಂದಿದ್ದು, ಅದು ಕುರನ್ಗರಾಯನ ಬಗೆಗಿನ ಜನರ ನಂಬಿಕೆಗಳನ್ನು ಆಧರಿಸಿದೆ. ರವಿಕುಮಾರ್ ನೀಹ ಈ ಜನರ ನಂಬಿಕೆಗಳಿಂದಲೇ ಇತಿಹಾಸದೊಳಗೆ ಪ್ರವೇಶಿಸಿದರೂ, ಸಂಶೋಧನೆಯ ಅಧ್ಯಯನ ಕ್ರಮದಿಂದ ಬಹಳಷ್ಟು ಅಕೆಡೆಮಿಕ್ ಕೃತಿಗಳನ್ನು, ಗೆಜೆಟಿಯರ್‌ಗಳನ್ನೂ ಅಭ್ಯಸಿಸಿ ತಮ್ಮ ಕೃತಿಯನ್ನು ಬೆಳೆಸಿದ್ದಾರೆ. ಈ ಮೂಲಕ ಇತಿಹಾಸದಲ್ಲಿ ಮುಚ್ಚಿ ಹೋಗಿರುವ ದಲಿತರ ಆಡಳಿತದ ಪದರುಗಳನ್ನು ಬಿಡಿಸಲು ಕಾರಣರಾಗಿದ್ದಾರೆ. ಕ್ಷತ್ರಿಯ ಧರ್ಮವೆಂದು ತಳಜಾತಿಗಳ ರಾಜ್ಯಾಡಳಿತದ ಸಾಧ್ಯತೆಗಳನ್ನೇ ಮುಚ್ಚಿಹಾಕಿದ ವೈದಿಕ ಇತಿಹಾಸವು ಅದಲಿತ ರಾಜರ ಬಗೆಗೂ ವಸ್ತುನಿಷ್ಠ ದಾಖಲೆಗಳನ್ನು ಮಾಡಿಲ್ಲ. ಒನಕೆ ಓಬವ್ವರಂತಹ ದಲಿತ ಹೋರಾಟಗಾರ್ತಿಯ ಬಗೆಗಿನ ಪ್ರಾದೇಶಿಕ ನಂಬಿಕೆಗಳನ್ನೂ ಅಪಮಾನಿಸುವಂತೆ ’ಕೆಲಸದವಳಾಗಿ’ ಬಿಂಬಿಸಿದ ಇತಿಹಾಸ ನಮ್ಮದು. ಇದರ ಭಾಗವಾಗಿಯೇ ಕನ್ನಡಿಗರ ಮನೆಮನೆಗಳಲ್ಲಿ ಅಭಿಮಾನವಿರಿಸಿಕೊಳ್ಳಬೇಕಿದ್ದ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕುರಿತ ಇತಿಹಾಸವನ್ನು ತಿರುಚಲಾಗುತ್ತಿದೆ. ಇಂತ ಇತಿಹಾಸದ ಉಬ್ಬುಶಿಲ್ಪಗಳಂಥ ದಾಖಲೆಗಳ ಒಳನುಗ್ಗಿ ರವಿಕುಮಾರ್ ಫಲವತ್ತಾದ ಸೌಹಾರ್ದವೂ, ಅವೈದಿಕವೂ, ಸಹಿಷ್ಣುವೂ ಆದ ದಲಿತ ಪರಂಪರೆಯ ಕಾರುಣ್ಯದ ನಿಜಕತೆಯನ್ನು ಹೆಕ್ಕಿದ್ದಾರೆ ಹಾಗೂ ಸಂಶೋಧಕರಿಗೆ ಮಾದರಿಯಾದ ಒಂದು ಮೇಲ್ಪಂಕ್ತಿಯನ್ನು ಹಾಕಿದ್ದಾರೆ.

ತಮ್ಮ ತಾಯಿ ಕುರನ್ಗರಾಯನ ಕುರಿತು ಹೇಳಿದ ಒಂದು ಕತೆಯ ಜಾಡನ್ನು ಹಿಡಿದು ಆ ಪ್ರದೇಶಕ್ಕೆ ಪ್ರವೇಶಿಸಿದ ರವಿ ಕನ್ನಡ ನಾಡಿನಲ್ಲಿ ಸಮಾಧಿಯಾಗಿರಬಹುದಾದ ದಲಿತರ ಮಹತ್ತರ ಇತಿಹಾಸದ ಶೋಧನಾ ಕಾರ್ಯವನ್ನು ಉದ್ಘಾಟಿಸಿದ್ದಾರೆ. ಈಗಾಗಲೇ ಬಹಳಷ್ಟು ವಿದ್ವಾಂಸರು ಈ ರೀತಿಯ ಸಂಶೋಧನೆಯನ್ನು ಕೈಗೊಂಡಿರುವರಾದರೂ ದಲಿತ ಸಂಶೋಧಕರ ಕಣ್ಣೋಟಕ್ಕೆ ದಕ್ಕುವ ದಾಖಲೆಗಳು ಹೊಸಹಾದಿಯನ್ನು ತೋರಬಲ್ಲವು.

ಶರಣರು ಬಾಳಿ ಹೋದ ಕನ್ನಡದ ನೆಲದಲ್ಲಿ ದಲಿತ ರಾಜನೊಬ್ಬ ಯುದ್ಧ ಮಾಡದೆ, ಯಾರನ್ನೂ ಒತ್ತೆಯಾಗಿಸಿಟ್ಟುಕೊಳ್ಳದೆ, ಲೋಲುಪನಾಗದೆ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಇತಿಹಾಸವನ್ನು ಡಾ.ರವಿಕುಮಾರ್ ನೀಹ ನಮ್ಮೆದುರು ತೆರೆದಿಟ್ಟಿದ್ದಾರೆ. ಅವರು ಸಂಶೋಧನೆಗೆ ತೊಡಗಿದ ಭೂಪ್ರದೇಶದಲ್ಲಿ ಕೊರಮ ಜಾತಿಯಂತಹ ಸಣ್ಣ ಸಮುದಾಯಗಳ ರಾಜರೂ ಆಳಿರುವ ಬಗ್ಗೆ ಕುರುಹುಗಳಿವೆ. ಇದನ್ನು ರವಿಕುಮಾರ್ ಸಮರ್ಥವಾಗಿ ಗುರುತಿಸಿದ್ದಾರೆ. ಆ ಮೂಲಕ ನಿಜವಾದ ಭಾರತ ಚರಿತ್ರೆಗೆ
ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಮುಂದಡಿಯಿಟ್ಟಿದ್ದಾರೆ. ಅವರ ಸಂಶೋಧನೆಯ ’ಅರಸು ಕುರನ್ಗರಾಯ’ ಕನ್ನಡಿಗರೆಲ್ಲರೂ ಓದಲೇಬೇಕಾದ ಕೃತಿಯಾಗಿದೆ.

ಹುಲಿಕುಂಟೆ ಮೂರ್ತಿ

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ, ಕನ್ನಡ ಅಧ್ಯಾಪಕರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಗಳಲ್ಲಿ ಕ್ರಿಯಾಶೀಲರು. ‘ನೀಲಿ ಗ್ಯಾನ’ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.


ಇದನ್ನೂ ಓದಿ: ಪುಸ್ತಕ ಪರಿಚಯ; ಕಾಣೆಯಾಗಿದ್ದಾರೆ ಸಂಪಾದಕರು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಬಂಗಾಳದಲ್ಲಿ ಮಾತ್ರ ಎರಡು ಹಂತದ ಮತದಾನ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ...

ಫ್ಲಿಪ್‌ಕಾರ್ಟ್‌ನಿಂದ 1 ರೂ.ಗೆ ಹಾಲು ಮಾರಾಟ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಮುಲ್‌ ಆಗ್ರಹ

ಫ್ಲಿಪ್‌ಕಾರ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ 1 ರೂ.ಗೆ ಲೀಟರ್‌ ಹಾಲನ್ನು ಮಾರಾಟ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ, ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ...

“ಮಕ್ಕಳ ಹಂತಕನನ್ನು ಹುಡುಕಿ ಹತ್ಯೆ ಮಾಡುತ್ತೇವೆ” : ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂಬ ಇಸ್ರೇಲ್ ಸ್ಪಷ್ಟನೆ ಬೆನ್ನಲ್ಲೆ ಐಆರ್‌ಜಿಸಿ ಹೇಳಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿರುವುದಾಗಿ ವರದಿಯಾಗಿದೆ. ನೆತನ್ಯಾಹು ಅವರ ಹತ್ಯೆಯ ವದಂತಿಗಳನ್ನು ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ, ಐಆರ್‌ಜಿಸಿ ಈ...

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...