Homeಮುಖಪುಟಗರ್ಭಪಾತ ಕಾನೂನು: ಮತ್ತೆ ಚರ್ಚೆಯ ಮುನ್ನಲೆಯಲ್ಲಿ..

ಗರ್ಭಪಾತ ಕಾನೂನು: ಮತ್ತೆ ಚರ್ಚೆಯ ಮುನ್ನಲೆಯಲ್ಲಿ..

- Advertisement -
- Advertisement -

ದೇಹ ನಿನ್ನದು, ಗರ್ಭ ನಿನ್ನದು ಆದರೆ ಗರ್ಭಪಾತ ಮಾಡುವ/ಮಾಡಿಸುವ ಅಧಿಕಾರ ನಿನಗಿಲ್ಲ. ಅಂದರೆ ಹೆಣ್ಣಿನ ದೇಹ ಅವಳದಾದರೂ ಅದರ ಮೇಲೆ ಅವಳಿಗೆ ಸಂಪೂರ್ಣ ಹಕ್ಕಿಲ್ಲ. ಈ ಗರ್ಭಪಾತ ಎಂಬುದು ಮುಂದುವರಿದ, ಮುಂದುವರಿಯುತ್ತಿರುವ ಅಥವಾ ಅತ್ಯಂತ ಸಂಪ್ರದಾಯಸ್ಥ ದೇಶಗಳು ಎನಿಸಿಕೊಂಡಲ್ಲಿ ಕೂಡ ಸಮಾನವಾಗಿ ಅಗಾಗ ಚರ್ಚೆಗೆ ಗ್ರಾಸವಾಗುವ ವಿಷಯ.

ಮನುಷ್ಯರು ಎಚ್ಟೇ ಮುಂದುವರಿದರೂ Reproduction ಅಥವಾ ಸಂತಾನೋತ್ಪತ್ತಿ ಕ್ರಿಯೆಯನ್ನು ಧಾರ್ಮಿಕ ಮತ್ತು ಸಾಮಾಜಿಕ ದೃಷ್ಟಿಕೋನದಿಂದಲೇ ಹೆಚ್ಚಾಗಿ ನೋಡುವುದರಿಂದ ಆ ಕ್ರಿಯೆಯ ಸುತ್ತ ನೂರಾರು ಚರ್ಚೆಗಳು ಮತ್ತು ವಿವಾದಗಳು ಹೆಣೆದುಕೊಂಡಿರುತ್ತವೆ. ಅಂಥ ಚರ್ಚೆ ಮತ್ತು ವಿವಾದಗಳು ಆಯಾ ಕಾಲ ದೇಶದ ಗಡಿಗಳನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದರೆ ಅದರ ಪ್ರಸ್ತುತತೆ ಮತ್ತು ಅಗತ್ಯಗಳ ಬಗ್ಗೆ ಮುಕ್ತ ಚರ್ಚೆಯಾಗುವ ಅವಶ್ಯಕತೆ ಹೆಚ್ಚಾಗಿದೆ ಎಂದರ್ಥ.

ಇತ್ತೀಚೆಗೆ ಅಮೆರಿಕದ ಸುಪ್ರೀಂಕೋರ್ಟ್ ಗರ್ಭಪಾತ ಕಾನೂನನ್ನು ತೆಗೆದು ಹಾಕಿದಾಗ ಎಷ್ಟೋ ಜನ ’ಅಮೆರಿಕದಂತಹ ದೇಶದಲ್ಲಿ ಇದು ಸಾಧ್ಯವೇ?’ ಎಂದು ಆಶ್ಚರ್ಯಪಟ್ಟರು. ಅದಕ್ಕೆ ಕಾರಣವೂ ಇದೆ. ಒಂದು ಅತ್ಯಂತ ಮುಂದುವರೆದ ದೇಶ, ಉತ್ತಮ ಆಧುನಿಕ ಜೀವನಶೈಲಿಗೆ ಹೆಸರಾದ ದೇಶ ಎಂದು ಗುರುತಿಸಲ್ಪಡುವ ಅಮೆರಿಕದಲ್ಲಿ ಇಂಥ ಪುರೋಗಾಮಿ ಕಾನೂನು ಬರಬಹುದೇ ಎಂದು ಜನ ಆಶ್ಚರ್ಯಪಡುವುದು ಸಹಜ. ಆದರೆ ಈ ಬದಲಾವಣೆಗೆ ಮುನ್ನುಡಿ ಬರೆದಿದ್ದು 2016ರಲ್ಲಿ ಅಮೆರಿಕ ಅಧ್ಯಕ್ಷ ಚುನಾವಣೆಯ ಸಮಯದಲ್ಲಿ. ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಅಧ್ಯಕ್ಷೀಯ ಚುನಾವಣಾ ಪ್ರಣಾಳಿಕೆಯಲ್ಲಿ 1973ರಿಂದ ಜಾರಿಗೆ ಬಂದ ಗರ್ಭಪಾತ ಕಾನೂನನ್ನು ತೆಗೆದುಹಾಕುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೇ ಅಧಿಕಾರಕ್ಕೆ ಬಂದ ಕೂಡಲೇ ಸುಪ್ರೀಂಕೋರ್ಟಿಗೆ 3 ಹೊಸ ಜಡ್ಜ್‌ಗಳ ನೇಮಕ ಮಾಡಿದ್ದರು. ಅದರ ಪರಿಣಾಮವಾಗಿಯೇ ಇತ್ತೀಚೆಗೆ 1973ರಲ್ಲಿ ರೋ ವರ್ಸಸ್ ವೇಡ್ ಕೇಸಿನ ಮೂಲಕ ನೀಡಲಾಗಿದ್ದ ಗರ್ಭಪಾತದ ಸ್ವಾತಂತ್ರ್ಯವನ್ನು ತಿರಸ್ಕರಿಸಿ ಪರಿಸ್ಥಿತಿಯನ್ನು ದಶಕಗಳಷ್ಟು ಹಿಂದಕ್ಕೆ ಒಯ್ಯಲಾಗಿದೆ.

ಅಮೆರಿಕದಲ್ಲಿ ಮೊದಲಿನಿಂದಲೂ ಗರ್ಭಪಾತ ಎಂಬುದು ಅತ್ಯಂತ ಚರ್ಚಾಹ ವಸ್ತು. ಸಂಪ್ರದಾಯವಾದಿಗಳು ಮತ್ತು ಲಿಬರಲ್ಸ್‌ಗಳ ನಡುವೆ ಈ ಚರ್ಚೆ ನಡೆಯುತ್ತಲೇ ಇರುತ್ತದೆ. ಸಂಪ್ರದಾಯವಾದಿಗಳು ಮಕ್ಕಳನ್ನು/ಗರ್ಭವನ್ನು ದೇವರ ಆಶೀರ್ವಾದ ಎಂದು ಬಗೆದರೆ, ಲಿಬರಲ್ಸ್ ’ಮಹಿಳೆಗೆ ಸಂವಿಧಾನಾತ್ಮಕವಾಗಿ ತನ್ನ ದೇಹದ ಮೇಲೆ ಸಂಪೂರ್ಣ ಹಕ್ಕಿದೆ’ ಎನ್ನುತ್ತಾರೆ.

ಅಮೆರಿಕದ ಸುಪ್ರೀಂಕೋರ್ಟ್ ಗರ್ಭಪಾತಕ್ಕೆ ಅವಕಾಶ ನೀಡಿದ ಹಳೆಯ ತೀರ್ಪನ್ನು ತೆಗೆದು ಹಾಕಿದ ಕೂಡಲೇ 13 ರಾಜ್ಯಗಳು ಈ ತೀರ್ಪನ್ನು ತಕ್ಷಣವೇ ಒಪ್ಪಿಕೊಂಡು ಅನುಷ್ಠಾನಕ್ಕೂ ತಂದವು. ಸಂಪ್ರದಾಯವಾದಿಗಳಾದ ರಿಪಬ್ಲಿಕನ್ ಬಹುಮತ ಇರುವ ರಾಜ್ಯಗಳು ಬಹುತೇಕ ಇದನ್ನು ಇರುವಂತೆಯೇ ಸ್ವೀಕರಿಸಿ ತಕ್ಷಣದಿಂದಲೇ ಜಾರಿಗೆ ತಂದವು.

ಅಮೆರಿಕದ ಮಹಿಳಾ ಹೋರಾಟಗಾರರು, ಲಿಬರಲ್ಸ್ ಹಾಗೂ ತೀರ್ಪಿನ ಬಗ್ಗೆ ಅಸಮಾಧಾನವಿರುವವರೆಲ್ಲ ’ನನ್ನ ದೇಹ ನನ್ನ ಸ್ವಾತಂತ್ರ್ಯ’ ಎಂಬ ಘೋಷಣೆಯೊಂದಿಗೆ ವಿಶ್ವದಾದ್ಯಂತ ತಮ್ಮ ಈ ನಿಲುವಿಗೆ ಸಮರ್ಥನೆಯನ್ನು ಮತ್ತು ಬೆಂಬಲವನ್ನು ಬಯಸುತ್ತಿದ್ದಾರೆ. ಒಟ್ಟಿನಲ್ಲಿ ಗರ್ಭಪಾತ ಎಂಬ ವಿಷಯ ವೈಜ್ಞಾನಿಕ ಮತ್ತು ವೈಯಕ್ತಿಕ ಪರಿಧಿಯನ್ನು ಬಿಟ್ಟು ಬೇರೆಯದೇ ಲೋಕ ಪ್ರವೇಶಿಸಿದೆ.

ಗರ್ಭಪಾತ ವಿರೋಧಿ ಧೋರಣೆಗಳು ಸ್ಪಷ್ಟವಾಗಿ ಕಾಣಲು ಪ್ರಾರಂಭವಾಗುವುದು 19ನೇ ಶತಮಾನದಲ್ಲಿ. ಯುರೋಪಿನ ದೇಶಗಳು ವಿಶ್ವದಾದ್ಯಂತ ತಮ್ಮ ವಸಾಹತುಗಳನ್ನು ಸ್ಥಾಪಿಸುತ್ತ ಹೋದಂತೆ ತಮ್ಮ ಕಾನೂನು ವ್ಯವಸ್ಥೆಯನ್ನೂ ಕೊಂಡೊಯ್ದರು. ಆ ಕಾನೂನುಗಳಲ್ಲಿ ಕೆಲವೊಂದು ಅವರ ಧಾರ್ಮಿಕ ವಿಚಾರಧಾರೆಗಳಿಗೆ ಪೂರಕವಾಗಿದ್ದು ಅದಕ್ಕೆ ಕಾನೂನಿನ ಚೌಕಟ್ಟನ್ನು ಒದಗಿಸಲಾಯಿತು. ಆದರೆ ಕ್ರಮೇಣ ಜನ ಹಾಗೂ ದೇಶಗಳ ಬದಲಾದ ರಾಜಕೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಸುರಕ್ಷಿತ ಗರ್ಭಪಾತ ಎನ್ನುವ ಹೊಸ ತತ್ವ ರೂಪುಗೊಂಡಿತು. ಆದರೆ ಹೆಚ್ಚುಕಮ್ಮಿ ಕ್ರಿಶ್ಚಿಯಾನಿಟಿ ತರಹವೇ ಆದರೂ ಅದಕ್ಕಿಂತ ತೀವ್ರವಾಗಿ ಗರ್ಭಪಾತವನ್ನು ವಿರೋಧಿಸುವ ಧರ್ಮವೆಂದರೆ ಇಸ್ಲಾಂ. ಕೇವಲ ’ಟ್ಯುನಿಸಿಯಾ ಮತ್ತು ಯುಎಇ’ಗಳಲ್ಲಿ ಮಾತ್ರ 120 ದಿನಗಳ ಒಳಗಿನ ಗರ್ಭವನ್ನು ತೆಗೆಸಬಹುದು. ಇದನ್ನು ಹೊರತುಪಡಿಸಿ ಯಾವುದೇ ಇಸ್ಲಾಮಿಕ್ ದೇಶಗಳಲ್ಲಿ ಗರ್ಭಪಾತಕ್ಕೆ ಅವಕಾಶವಿಲ್ಲ. ಕೆಲವು ವರ್ಷಗಳ ಹಿಂದೆ ಐರ್ಲೆಂಡಿನಲ್ಲಿ ಭಾರತದ ದಂತ ವೈದ್ಯೆ ಸವಿತಾ ಹಾಲಪ್ಪನವರ್ ಎಂಬುವವರು ಗರ್ಭಧಾರಣೆಯಲ್ಲಿ ತೊಂದರೆಯಾಗಿ ಗರ್ಭಪಾತಕ್ಕೆ ಅರ್ಜಿ ಸಲ್ಲಿಸಿದಾಗ ಅದು ಇಂಥದೇ ಕಾನೂನಿನ ತೊಡಕುಗಳಿಗೆ ಸಿಕ್ಕು ಅದಕ್ಕೆ ಅವಕಾಶ ಸಿಗದೆ ಗರ್ಭದಲ್ಲಿ ನಂಜು ಹರಡಿ ಅವರು ಮೃತಪಟ್ಟ ಘಟನೆ ನಡೆದಿತ್ತು. ಇದು ಗರ್ಭಪಾತ ಕಾನೂನುಗಳನ್ನು ಬಹಳ ಚರ್ಚೆಗೆ ಒಳಪಡುವಂತೆ ಮಾಡಿತ್ತು. ಆದರೆ ಅದರ ಕಾನೂನು ಪರಿಹಾರಕ್ಕೆ ಬಹಳ ಕಾಲ ಬೇಕಾಯಿತು.

ಜಗತ್ತಿನ ಬಹುತೇಕ ದೇಶಗಳು ಕೆಲವೊಂದು ನಿರ್ದಿಷ್ಟ ಕಾರಣಗಳಿಗಾಗಿ ಗರ್ಭಪಾತಕ್ಕೆ ಅವಕಾಶ ನೀಡುತ್ತವೆ ಮತ್ತು ಕೆಲವು ನಿರ್ದಿಷ್ಟ ಅವಧಿಯವರೆಗೆ ನೀಡುತ್ತವೆ. ಅವುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಎಂದರೆ ತಾಯಿಯ ಜೀವಕ್ಕೆ ಅಪಾಯವಿದ್ದಲ್ಲಿ ಎಂಬುದು; ಇನ್ನುಳಿದಂತೆ ಹುಟ್ಟಲಿರುವ ಮಗುವಿನ ಅಂಗವೈಕಲ್ಯ, ಬೆಳವಣಿಗೆಯ ಕೊರತೆ, ಸಾಮಾಜಿಕ ಆರ್ಥಿಕ ಕಾರಣಗಳು ಮುಂತಾದವು.

ಆದರೆ ಈ ರೀತಿಯ ನಿರ್ಬಂಧಗಳು ಕಾನೂನುಬಾಹಿರ ಗರ್ಭಪಾತಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಸರ್ವೆಗಳು ಹೇಳುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸರ್ವೇ ಪ್ರಕಾರ ಯಾವುದೇ ಪ್ರತಿಬಂಧಗಳಿಲ್ಲದೆ ಗರ್ಭಪಾತಕ್ಕೆ ಅವಕಾಶವಿರುವ ಮತ್ತು ಅದನ್ನು ಅಪರಾಧಿತವಲ್ಲದ (Decriminalised) ಕ್ರಿಯೆ ಎಂದು ಪರಿಗಣಿಸಿರುವ ದೇಶಗಳಲ್ಲಿ ’ಗರ್ಭಪಾತದ ಸಮಯದಲ್ಲಿ ಮಹಿಳೆಯ ಸಾವಿನ ಸಂಖ್ಯೆ ’೦’ (ಶೂನ್ಯ) ಇದೆ. ಕೆನಡಾ ಅಂಥ ಒಂದು ದೇಶ. ಗರ್ಭಪಾತಕ್ಕೆ ಕಾನೂನಿನ ಸುರಕ್ಷೆ ಇರುವುದರಿಂದ ಅಲ್ಲಿ ಕದ್ದು ಮುಚ್ಚಿ ಗರ್ಭ ಎಸಗುವ ಅಥವಾ ಅನಾರೋಗ್ಯಕರವಾದ ಹಾಗೂ ಸುರಕ್ಷಿತವಲ್ಲದ ಕಾನೂನುಬಾಹಿರ ಗರ್ಭಪಾತ ಕೇಂದ್ರಗಳಿಗೆ ಹೋಗುವ ಪ್ರಮೇಯವೇ ಇರುವುದಿಲ್ಲ.

ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿಯೂ ಗರ್ಭಪಾತಕ್ಕೆ ಮೇಲೆ ಹೇಳಿದ ಕಾರಣಗಳ ರೀತಿಯಲ್ಲಿಯೇ ಅವಕಾಶವಿದೆ. ಗರ್ಭಧಾರಣೆಯ ಮೊದಲ ಕೆಲವಾರಗಳಲ್ಲಿ ನಿರ್ದಿಷ್ಟವಾದ ಕಾರಣಗಳಿದ್ದರೆ ಗರ್ಭಪಾತವನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ಮಾಡಬಹುದು. 20 ವಾರಗಳಿಗಿಂತ ಹೆಚ್ಚಿದ್ದರೆ ನ್ಯಾಯಾಲಯದ ಅನುಮತಿಯಿಂದಲೇ ಮಾಡಬೇಕು.

ಇಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಏಳುವ ಪ್ರಶ್ನೆ ಎಂದರೆ ಈ ಎಲ್ಲ ಪ್ರಕ್ರಿಯೆಲ್ಲಿ ಗರ್ಭ ಧರಿಸಿದ ಮಹಿಳೆಯ ಪಾತ್ರ ಏನು? ಮೂಲಭೂತ ಸ್ವಾತಂತ್ರ್ಯ ಎಂಬ ಪರಿಕಲ್ಪನೆಯಲ್ಲಿ ಅವಳಿಗೆ ತನ್ನ ದೇಹದ ಮೇಲೆ ಹಕ್ಕಿಲ್ಲವೆ? ಎಂಬುದು.

ಇನ್ನೊಂದು ಪ್ರಶ್ನೆ, ಕೇವಲ ಗರ್ಭಪಾತಕ್ಕೆ ಅವಕಾಶ ಇದೆ ಎಂಬ ಕಾರಣಕ್ಕೆ ಜನ ಅನವಶ್ಯಕವಾಗಿ ಗರ್ಭಪಾತ ಮಾಡಿಸುತ್ತಾರಾ? ಎಂಬುದು.

ಈ ಎರಡನೇ ಪ್ರಶ್ನೆಯನ್ನೇ ಮೊದಲು ನಮ್ಮ ದೇಶದ ಹಿನ್ನೆಲೆಯಲ್ಲಿ ನೋಡಿದರೆ “ಹೌದು ದುರುಪಯೋಗ ಆಗುತ್ತದೆ” ಎನ್ನಬಹುದು. ಗಂಡು ಮಕ್ಕಳಿಂದಲೇ ವಂಶೋದ್ಧಾರ ಎನ್ನುವ ಜನರ ಮಧ್ಯೆ ಹೆಣ್ಣು ಭ್ರೂಣವನ್ನು ತೆಗೆಸುವ ಲಕ್ಷಾಂತರ ಪ್ರಕರಣಗಳು ನಮ್ಮ ಎದುರಿಗಿವೆ. ಗರ್ಭಧರಿಸಿದ ಮಹಿಳೆಯ ಆರೋಗ್ಯ ಕೆಲವು ಬಾರಿ ಪ್ರಾಣಕ್ಕೆ ಕುತ್ತು ಉಂಟಾಗುವ ಸಂದರ್ಭಗಳೂ ಇವೆ. ಭಾರತದಂತಹ ದೇಶದಲ್ಲಿ ಇದಕ್ಕೆ ಕಾನೂನಿನ ಸ್ಪಷ್ಟ ಚೌಕಟ್ಟು ಮತ್ತು ಪರಿಭಾಷೆಯ ಅಗತ್ಯ ಖಂಡಿತವಾಗಿಯೂ ಇದೆ. ಇನ್ನು ಮೊದಲನೆಯ ಪ್ರಶ್ನೆಗೆ ಬಂದರೆ ಮಹಿಳೆಗೆ ಖಂಡಿತವಾಗಿಯೂ ಈ ಮೇಲೆ ಹೇಳಲಾದ ಕಾರಣಗಳ ಹೊರತಾಗಿಯೂ ತನ್ನ ದೇಹದ ಮೇಲೆ ಸ್ವಾತಂತ್ರ್ಯ ಹೊಂದುವ ಅಗತ್ಯವಿದೆ. ಗರ್ಭಧಾರಣೆಯನ್ನು ಕೇವಲ ಪುರುಷಪ್ರಧಾನ ವ್ಯವಸ್ಥೆಯ ಕಣ್ಣಿನಿಂದ ನೋಡುವುದನ್ನು ಬಿಟ್ಟು ಬದಲಾಗುತ್ತಿರುವ ಕಾಲಮಾನದಲ್ಲಿ ಮಹಿಳೆಯ ಅಗತ್ಯ ಮತ್ತು ಮನಸ್ಥಿತಿಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಅಗತ್ಯ ಹಿಂದೆಗಿಂತಲೂ ಹೆಚ್ಚಿದೆ.,

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ತಂದೆ ಮತ್ತು ಮೂವರು ಹೆಣ್ಣುಮಕ್ಕಳು; ದ್ವೇಷದ ರಂಗಭೂಮಿಯಲ್ಲಿ ಒಂದು ಹಳೆಯ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...