Homeಮುಖಪುಟರಾಹುಲ್ ಗಾಂಧಿ ಅನರ್ಹತೆ: ಒಂದು ದೇಶ, ಒಂದು ಕಾಯ್ದೆ, ನ್ಯಾಯ ಮಾತ್ರ ಬೇರೆಬೇರೆ

ರಾಹುಲ್ ಗಾಂಧಿ ಅನರ್ಹತೆ: ಒಂದು ದೇಶ, ಒಂದು ಕಾಯ್ದೆ, ನ್ಯಾಯ ಮಾತ್ರ ಬೇರೆಬೇರೆ

- Advertisement -
- Advertisement -

ರಾಹುಲ್ ಗಾಂಧಿ ವಿರುದ್ಧ ಗುಜರಾತ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ನ್ಯಾಯಾಧೀಶರು ತೀರ್ಪು ನೀಡಿ 2 ವರ್ಷ ಶಿಕ್ಷೆ ವಿಧಿಸಿದ್ದು ನಂತರ ಅತ್ಯಂತ ತೀವ್ರಗತಿಯಲ್ಲಿ ಲೋಕಸಭೆಯ ಸೆಕ್ರೆಟೆರಿಯಟ್ ಅವರ ಸ್ಥಾನವನ್ನು ಅನರ್ಹಗೊಳಿಸಿದ್ದು ದೇಶದಾದ್ಯಂತ ತೀವ್ರ ಗಂಭೀರವಾದ ಕೆಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಕಳೆದ ಕೆಲವು ವರ್ಷಗಳಲ್ಲಿ ಮೊದಲ ಬಾರಿಗೆ ಬಹುತೇಕ ವಿರೋಧ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಒಮ್ಮತದಿಂದ ಈ ಬೆಳವಣಿಗೆಗಳನ್ನು ಖಂಡಿಸುತ್ತಿರುವುದು ಕೆಲವರಿಗೆ ಧನಾತ್ಮಕ ಬೆಳವಣಿಗೆಯಂತೆ ಕಂಡರೆ, ಇನ್ನೂ ಕೆಲವರಿಗೆ ’ನೋಡಿದ್ರಾ ಆಡಳಿತ ಪಕ್ಷದ ಪವರ್ ಏನು’ ಎಂದು ಎದೆತಟ್ಟಿ ಹೇಳುವಂತೆ ಮಾಡಿದೆ. ಇದರ ಮಧ್ಯೆ ವಕೀಲರುಗಳು, ಕಾನೂನು ತಜ್ಞರು ಮುಂತಾದವರು ತಮ್ಮ ಪ್ರಖರ ವಾಕ್ ಚಾತುರ್ಯದಿಂದ ಮಾನನಷ್ಟ ಕಾಯ್ದೆ, ಪ್ರಜಾಪ್ರತಿನಿಧಿ ಕಾಯ್ದೆ, ಸಂವಿಧಾನದ ಬಗ್ಗೆ ಹಲವು ಬಗೆಯ ವ್ಯಾಖ್ಯಾನಗಳು, ರಾಹುಲ್ ಮಾತಿನಲ್ಲಿನ ವ್ಯಾಕರಣ ಆಧರಿಸಿ ಅದನ್ನು ಅನ್ವಯಿಸುವ, ಮಾತಾಡಿದ ಜಾಗ ಹಾಗೂ ಮೊಕದ್ದಮೆ ಹೂಡಿದ ಜಾಗಗಳ ಬಗ್ಗೆ ಕಾನೂನಿನ ಅನ್ವಯಿಕೆಯ ಬಗ್ಗೆ ವ್ಯಾಖ್ಯೆಗಳು, ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯ ತುಲನೆ ಮಾಡಿ ತಮ್ಮದೇ ವಿಶಿಷ್ಟ ತೀರ್ಮಾನಗಳನ್ನು ಹಾಕುತ್ತಿದ್ದಾರೆ. ಆದರೆ ವಿಷಯ ಇಷ್ಟು ಮಾತ್ರವೇ? ಇದು ಕೇವಲ ಕಾನೂನಿನ ಒಂದು ಗೋಜಲು ಮಾತ್ರವೆ? ಅಥವಾ ವಿರೋಧ ಪಕ್ಷಗಳು ಹೇಳುವಂತೆ ಕೇವಲ ರಾಜಕೀಯವೆ?

ಈ ಕೇಸಿನ ಸಂಪೂರ್ಣ ಹಿನ್ನೆಲೆ ಹಾಗೂ ರಾಜಕೀಯದ ಹಲವು ದೃಷ್ಟಿಕೋನಗಳಿಂದ ಇದನ್ನು ನೋಡುತ್ತಾ ಹೋದರೆ ’ದ್ವೇಷ ಮತ್ತು ಸೇಡಿನ ರಾಜಕಾರಣ’ ಮತ್ತು ಅದನ್ನು ಸಾಧಿಸಲು ಸಂವಿಧಾನಾತ್ಮಕ ಸಂಸ್ಥೆಗಳ ವ್ಯವಸ್ಥಿತ ಬಳಕೆ ಹಾಗೂ ಅದಕ್ಕಾಗಿ ಯೋಜನಾಬದ್ಧ ಪ್ರಣಾಳಿಕೆಗಳು ನಿಚ್ಚಳವಾಗಿ (ನೋಡುವ ಮನಸ್ಸಿದ್ದವರಿಗೆ) ಕಂಡುಬರುತ್ತವೆ. ಪ್ರಜಾತಂತ್ರ ಹೇಗೆ ಹಂತಹಂತವಾಗಿ ತನ್ನ ಶಕ್ತಿ ಕಳೆದುಕೊಳ್ಳುತ್ತಾ ಬಂದು, ಇಂದು ಕೊನೆಯುಸಿರೆಳೆಯುವ ಸ್ಥಿತಿಗೆ ಬಂದುನಿಂತಿದೆ ಎಂಬುದು (ಇನ್ನೂ ವಿಚಾರಿಸುವ ಶಕ್ತಿ ಉಳಿಸಿಕೊಂಡವರಿಗೆ) ಅರಿವಿಗೆ ಬರುತ್ತದೆ.

ಕೇಸಿನ ಹಿನ್ನೆಲೆ

2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ಭಾಷಣ ಮಾಡುತ್ತ ರಾಹುಲ್ ಗಾಂಧಿ ಅವರು ಮೋದಿ ಉಪನಾಮ ಹೊಂದಿದ ನೀರವ್ ಮೋದಿ, ಲಲಿತ್ ಮೋದಿ ಮತ್ತು ನರೇಂದ್ರ ಮೋದಿ ಅವರನ್ನು ಇನ್ನು ಸಮೀಕರಿಸುತ್ತ “ಅದ್ಹೇಗೆ ಈ ಎಲ್ಲಾ ಕಳ್ಳರ ಹೆರಲ್ಲೂ ಮೋದಿ ಇದೆ” ಎಂದಿದ್ದರು. ಮತ್ತೆ ಅದನ್ನು ಬಿಡಿಸಿ ಹೇಳುತ್ತಾ, ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ಮಾಡಿ ದೇಶದಿಂದ ಓಡಿಹೋದ ನೀರವ್ ಮೋದಿ, ಲಲಿತ್ ಮೋದಿ ಜೊತೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಸೇರಿಸಿದ್ದರು.

ಈ ಭಾಷಣವನ್ನು ಆಧರಿಸಿ ಗುಜರಾತ್‌ನ ಶಾಸಕ ಪೂರ್ಣೇಶ್ ಮೋದಿ ಎನ್ನುವ ವ್ಯಕ್ತಿ ಸೂರತ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಸಲ್ಲಿಸಿದ್ದ. ಆತನ ಪ್ರಕಾರ ರಾಹುಲ್ ಗಾಂಧಿ ಸಕಲ ಮೋದಿ ಸಮುದಾಯವನ್ನು ಅಪಮಾನ ಮಾಡಿದ್ದರು.ಈ ಕೇಸಿನ ಅತ್ಯಂತ ಕುತೂಹಲಕಾರಿ ಅಂಶವೆಂದರೆ, ಬಹುತೇಕ ಕ್ರಿಮಿನಲ್ ಕೇಸುಗಳಲ್ಲಿ ಅಪರಾಧಿಯಾದವರು ಹೈಕೋರ್ಟ್‌ಗೆ ಹೋಗಿ ಕೇಸಿಗೆ ಅಥವಾ ತನಿಖೆಗೆ ತಡೆಯಾಜ್ಞೆ ತರುತ್ತಾರೆ. ಆದರೆ ಇಲ್ಲಿ ದೂರುದಾರ ಪೂರ್ಣೇಶ್ ಮೋದಿಯೇ ಹೈಕೋರ್ಟ್‌ನಲ್ಲಿ ತನ್ನ ಕೇಸಿಗೆ ತಾನೇ ತಡೆಯಾಜ್ಞೆ ತರುತ್ತಾರ. ಸುಮಾರು ಒಂದು ವರ್ಷ ಕೇಸು ನಿಂತ ಸ್ಥಿತಿಯಲ್ಲಿಯೇ ಇರುತ್ತದೆ. ಇದಕ್ಕೆ ಕಾರಣವೆಂದರೆ, ಪ್ರಕರಣ ದಾಖಲಾದ ನಂತರ ರಾಹುಲ್ ಗಾಂಧಿ ಕೋರ್ಟಿಗೆ ಹಾಜರಾಗಿ ತಮ್ಮ ಹೇಳಿಕೆ ನೀಡಿ ಹೋದ ನಂತರ, ಮತ್ತೆ ಪ್ರತಿ ವಿಚಾರಣೆಗೆ ಅವರನ್ನು ಕರೆಸುವಂತೆ ಸಲ್ಲಿಸಿದ್ದ ದೂರುದಾರರ ಮನವಿಯನ್ನು ಅಂದಿನ ನ್ಯಾಯಾಧೀಶರು ತಿರಸ್ಕರಿಸಿ ಕೇಸಿನ ವಾದ ಮಂಡಿಸುವಂತೆ ಆದೇಶಿಸಿದ್ದರು.

ಈ ವರ್ಷ ಫೆಬ್ರವರಿಯಲ್ಲಿ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅದಾನಿ ಹಾಗೂ ಪ್ರಧಾನಿ ಮೋದಿ ನಡುವಿನ ಸಂಬಂಧ ಹಾಗೂ ಅದಾನಿ ಕಂಪನಿಗಳಿಗೆ ಶೆಲ್ ಕಂಪನಿಗಳಿಂದ ಹರಿದು ಬಂದ ಹಣದ ಬಗ್ಗೆ ತೀಕ್ಷ್ಣ ವಾಗ್ದಾಳಿ ಮಾಡಿದಾಗ ಅದಕ್ಕೆ ಹರಿದುಬಂದ ಬೆಂಬಲದ ಪ್ರತಿಕ್ರಿಯೆಗಳು ಬಿಜೆಪಿಗೆ ಅಷ್ಟೊಂದು ಅನುಕೂಲಕರವಾಗಿರಲಿಲ್ಲ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ರಾಹುಲ್ ಗಾಂಧಿಯನ್ನು ’ಪಪ್ಪು’ ಎಂದು ಬಿಂಬಿಸಲು ವ್ಯಯಿಸಿದ ನೂರಾರು ಕೋಟಿ ರೂಪಾಯಿಗಳ ದೊಡ್ಡ ಮಟ್ಟದ ಶ್ರಮ ನೀರಿನಲ್ಲಿ ಕೊಚ್ಚಿಹೋದಂತೆ ವ್ಯರ್ಥವಾಗಿಬಿಡಬಹುದೇನೋ ಎಂಬ ಅಳುಕು ಕೂಡ ಶುರುವಾಗುತ್ತಿತ್ತು. ಲೋಕಸಭೆಯ ದಾಖಲೆಗಳಿಂದ ಅವರು ಆಡಿದ ಮಾತುಗಳನ್ನೇನೋ ತೆಗೆದುಹಾಕಲಾಯಿತು. ಆದರೆ ಅವರ ಮತ್ತೆ ಲೋಕಸಭೆಯಲ್ಲಿ ಮಾತೇ ಆಡದಂತೆ ಮಾಡುವತ್ತ ಹೆಚ್ಚಿನ ಗಮನ ಹರಿಸಲಾಯಿತು. ಒಂದೇ ವಾರದೊಳಗೆ ಫೆಬ್ರವರಿ 16ರಂದು ಗುಜರಾತ್‌ನ ಪೂರ್ಣೇಶ್ ಮೋದಿ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆಯನ್ನು ತೆರವುಗೊಳಿಸಿದರು. ಫೆಬ್ರವರಿ 27ರಂದು ಪ್ರಕರಣ ಪುನಃ ಪ್ರಾರಂಭವಾಯಿತು. ಕೇವಲ 25 ದಿನಗಳಲ್ಲಿ ಪ್ರಕರಣ ಮುಗಿದು 23.03.2023ರಂದು ರಾಹುಲ್ ಗಾಂಧಿ ತಪ್ಪಿತಸ್ಥ ಎಂಬ ತೀರ್ಮಾನದ ಜೊತೆಗೆ ಅವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಯಿತು ಮತ್ತು ಮರುದಿನ 24.03.2023 ರಂದು ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು.

ಇದನ್ನೂ ಓದಿ: ‘ಗಾಂಧಿ ತತ್ವಗಳಿಗೆ ಎಸಗಿದ ದೊಡ್ಡ ದ್ರೋಹ’: ರಾಹುಲ್ ಅಮಾನತ್ತಿಗೆ ಅಮೆರಿಕ ಸಂಸದರಿಂದ ಖಂಡನೆ

ಕಾನೂನು ಮತ್ತು ಅನ್ವಯಿಸಿದ ರೀತಿ

ರಾಹುಲ್ ಗಾಂಧಿಯವರನ್ನು ಐಪಿಸಿ ಕಲಂ 499 ಮತ್ತು 500ರ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ ಒಬ್ಬ ವ್ಯಕ್ತಿಗೆ ನೀಡಬಹುದಾದ ಗರಿಷ್ಠ ಶಿಕ್ಷೆ 2 ವರ್ಷ ಅಥವಾ ದಂಡ ಅಥವಾ ಎರಡೂ ಎಂದಿದ್ದು ರಾಹುಲ್ ಗಾಂಧಿಗೆ ಈ ಕಲಂ ವಿಧಿಸುವ ಗರಿಷ್ಠ ಶಿಕ್ಷೆಯನ್ನು ವಿಧಿಸಲಾಗಿದೆ.

ಕ್ರಿಮಿನಲ್ ಕೇಸುಗಳಲ್ಲಿ ಸಾಮಾನ್ಯವಾಗಿ ಗಮನಿಸುವಂತೆ, ಅಪರಾಧದ ಗಂಭೀರತೆ ಅಪರಾಧಿಯ ಹಿನ್ನೆಲೆ ಮತ್ತು ಮೊದಲ ಬಾರಿ ತಪ್ಪೆಸಗಿದವರಿಗೆ ಸಿಗಬಹುದಾದ ರಿಯಾಯಿತಿ ಯಾವುದನ್ನೂ ಪರಿಗಣಿಸಿದಂತೆ ತೋರಿಲ್ಲ. ಯಾವ ಲಾಭವೂ ರಾಹುಲ್ ಗಾಂಧಿಯವರಿಗೆ ಸಿಕ್ಕಿಲ್ಲ. ಇದರ ಬಗ್ಗೆ ಸ್ವಲ್ಪ ವಿವರವಾಗಿ ಅವಲೋಕಿಸಿದಾಗ ಕೆಲವು ಗಂಭೀರ ಅಂಶಗಳು ಗೋಚರಿಸುತ್ತವೆ.

ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8ರ ಪ್ರಕಾರ ಯಾವುದೇ ವ್ಯಕ್ತಿಗೆ 2 ವರ್ಷಕ್ಕೆ ಕಡಿಮೆ ಇಲ್ಲದಂತೆ ಶಿಕ್ಷೆ ಆದರೆ ಆ ವ್ಯಕ್ತಿ ಅನರ್ಹಗೊಳ್ಳುತ್ತಾನೆ.

ಪೂರ್ಣೇಶ್ ಮೋದಿ

ಅಕಸ್ಮಾತ್ ಶಿಕ್ಷೆ 1 ವರ್ಷ 10 ತಿಂಗಳಾದರೂ ಈ ಕಾಯ್ದೆ ಅನ್ವಯಿಸುವುದಿಲ್ಲ. ಇದೇ ಪ್ರಜಾಪ್ರತಿನಿಧಿ ಕಾಯ್ದೆಯ ಅಡಿಯಲ್ಲಿ 30 ದಿನಗಳ ಅವಕಾಶವನ್ನು ಮೇಲ್ಮನವಿ ಸಲ್ಲಿಸಲು, ಈಗ ಆಯ್ಕೆಯಾಗಿರುವ ಜನಪ್ರತಿನಿಧಿಗಳಿಗೆ ನೀಡಿದ್ದರೂ 2013ರಲ್ಲಿ ’ಲಿಲ್ಲಿ ಥಾಮಸ್ ವರ್ಸಸ್ ಭಾರತ ಒಕ್ಕೂಟ’ ಕೇಸಿನಲ್ಲಿ ಅದನ್ನು ಅಸಂವಿಧಾನಿಕ ಎಂದು ರದ್ದು ಮಾಡಲಾಗಿರುವುದರಿಂದ, ಕೂಡಲೇ ಜಾರಿಗೆ ಬರುವಂತೆ ಸದಸ್ಯತ್ವವನ್ನು ಅನರ್ಹಗೊಳಿಸಲಾಗುತ್ತದೆ. 2013ರಲ್ಲಿ ಯುಪಿಎ ಸರ್ಕಾರ ಈ ತೀರ್ಪನ್ನು ತೊಡೆದುಹಾಕಲು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿಯವರೇ ವಿರೋಧಿಸಿದ್ದರು ಎಂಬುದು ವಿಪರ್ಯಾಸ.

ಇನ್ನು ಮಾನನಷ್ಟ ಎಂಬ ಮೊಕದ್ದಮೆಯ ಒಳಹೊರಗುಗಳನ್ನು ನೋಡಿದರೆ ಮತ್ತದೇ ವ್ಯಾಖ್ಯಾನಗಳ ಹಾವಳಿ. ರಾಹುಲ್ ಗಾಂಧಿ ಏಕೆ ಈ ಎಲ್ಲ ಕಳ್ಳರ ಹೆಸರುಗಳಲ್ಲಿ ಮೋದಿ ಇದೆ ಎಂದು ಹೇಳಿ, ನಂತರ ನೀರವ್ ಮೋದಿ, ಲಲಿತ್ ಮೋದಿ ಮತ್ತು ನರೇಂದ್ರ ಮೋದಿ ಹೆಸರುಗಳನ್ನು ತೆಗೆದುಕೊಂಡ ಮೇಲೆ, ಮೂಲಭೂತವಾಗಿ ಮೊಕದ್ದಮೆ ಹೂಡುವ ಅವಕಾಶ ಇರುವುದು ಈ ಮೂವರಿಗೆ ಮಾತ್ರ. ಅಕಸ್ಮಾತ್ ಮೋದಿ ಎಂಬ ಉಪನಾಮ ಇರುವವರೆಲ್ಲ ಕಳ್ಳರೆಂದು ಹೇಳಿದ್ದರೆ, ಪೂರ್ಣೇಶ್ ಮೋದಿಯೂ ಕೇಸ್ ಹಾಕಬಹುದಾಗಿತ್ತು. ಕಾಯ್ದೆಯ ಪ್ರಕಾರ ಒಂದು ಕಂಪನಿ, ಸಂಘ ಅಥವಾ ಒಂದು ನಿರ್ದಿಷ್ಟ ಗುಂಪನ್ನು ಉದ್ದೇಶಿಸಿ ಹೇಳಿದಾಗಲೂ ಇದು ಅನ್ವಯವಾಗುತ್ತದೆ. ಪೂರ್ಣೇಶ್ ಮೋದಿ ಇಲ್ಲಿ ಯಾವುದೇ ಗುಂಪನ್ನು ಪ್ರತಿನಿಧಿಸುವುದಿಲ್ಲ. ಮೋದಿ ಎಂಬುದು ಒಂದು ಉಪನಾಮ ಹೊರತು ಒಂದು ಸಮುದಾಯ ಅಥವಾ ಜಾತಿ ದ್ಯೋತಕವಲ್ಲ.

ಹೀಗಿರುವಾಗ ’ನನ್ನ ಮಾನ ನಷ್ಟವಾಯಿತು’ ಎಂದು ಪೂರ್ಣೇಶ್ ಮೋದಿ ಸಲ್ಲಿಸಿದ ದಾವೆಯೇ ದೋಷಮುಕ್ತವಾಗಿದೆ ಎಂಬುದು ಅನೇಕ ಕಾನೂನು ಪಂಡಿತರ ವಾದ. ಇದೇ ವಾದವನ್ನು ಸುಪ್ರೀಂ ಕೋರ್ಟ್ ’ಎಸ್.ಖುಷ್ಬೂ ವರ್ಸಸ್ ಕನ್ನಿಯಮ್ಮಾಳ್’ ಕೇಸಿನಲ್ಲಿ ಹೇಳಿದ್ದು. ಕಲಂ 499ರ 2ನೇ ವಿವರಣೆಯು ವಿಶಾಲವಾಗಿದ್ದು ಒಂದು ನಿರ್ದಿಷ್ಟ ಸಮುದಾಯ ತನಗೆ ಮಾನನಷ್ಟವಾಗಿದೆ ಎಂದು ಹೇಳಬೇಕಾದರೆ ಅದು ಒಂದು ಗುರುತಿಸಬಹುದಾದಂತಹ ನಿರ್ದಿಷ್ಟ ಅಂಗವಾಗಿರಬೇಕು ಎಂದು ಅದು ಹೇಳುತ್ತದೆ. ಮೇಲ್ನೋಟಕ್ಕೆ ಗೊತ್ತಾಗುವಂತೆ ಪೂರ್ಣೇಶ್ ಮೋದಿ ಯಾವುದೇ ಅಂತಹ ಅಂಗವನ್ನು ಪ್ರತಿನಿಧಿಸುತ್ತಿರಲಿಲ್ಲ.

ಕಾನೂನು ತಜ್ಞರೂ ಅನೇಕ ವ್ಯಾಖ್ಯಾನ ನೀಡಬಹುದು. ನೂರಾರು ಸುಪ್ರೀಂ ಕೋರ್ಟಿನ ತೀರ್ಪುಗಳನ್ನು ಎದುರಿಗಿಟ್ಟು ವಾದ ಮಾಡಬಹುದು. ಆದರೆ ಕಾನೂನು ಕಾಯ್ದೆಗಳು ನಿಂತ ನೀರಲ್ಲ; ನಿರಂತರವಾಗಿ ಬದಲಾಗುತ್ತಿರುವ ದಿನಮಾನಗಳಲ್ಲಿ ಹೊಸ ಬಗೆಯ ವ್ಯಾಖ್ಯಾನಗಳು ಹುಟ್ಟಬೇಕು. ಇಲ್ಲಿಯವರೆಗೆ ಯಾವಯಾವ ರಾಜಕೀಯ ಮುಖಂಡರಿಗೆ ಶಿಕ್ಷೆಗಳಾದಾಗ ಎಷ್ಟು ಜನ ಸ್ಥಾನ ಕಳೆದುಕೊಂಡಿದ್ದಾರೆ ಎಂಬುದು ನಮ್ಮ ಕಣ್ಣ ಮುಂದಿದೆ. ಕರ್ನಾಟಕದಲ್ಲಿ ನೆಹರು ಓಲೆಕಾರ್ ಅಂಥವರ ಉದಾಹರಣೆ ಇದ್ದರೆ ಕೇಂದ್ರದಲ್ಲಿ ಸಾಧ್ವಿ ಪ್ರಜ್ಞಾ ಅವರಂಥವರು ಅನಾಯಾಸವಾಗಿ ಅಧಿಕಾರದಲ್ಲಿದ್ದಾರೆ. ಉನ್ನಾವ್‌ನ (ಉತ್ತರ ಪ್ರದೇಶ್) ಕುಲದೀಪ್ ಸಿಂಗ್ ಸೆಂಗರ್ ರೇಪ್ ಕೇಸಿನಲ್ಲಿ ಶಿಕ್ಷೆಯಾದರೂ ಜನರ ಪ್ರತಿಭಟನೆಗಳು ಭುಗಿಲೇಳುವವರೆಗೆ ತನ್ನ ಸ್ಥಾನದಲ್ಲೇ ಮುಂದುವರೆದಿದ್ದ.

ನಿಜ, ಒಂದು ದೇಶ, ಒಂದು ಕಾಯ್ದೆ, ನ್ಯಾಯ ಮಾತ್ರ ಬೇರೆಬೇರೆ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...