Homeಮುಖಪುಟಈ ಬ್ರಹ್ಮಾಂಡದಾಗ ಇರೋ 200 ದೇಶಗಳಲ್ಲಿ 170 ದೇಶದೊಳಗ ಮೀಸಲಾತಿ ಐತಿ. ಇದರ ಬಗ್ಗೆ ನಿಮಗೆ...

ಈ ಬ್ರಹ್ಮಾಂಡದಾಗ ಇರೋ 200 ದೇಶಗಳಲ್ಲಿ 170 ದೇಶದೊಳಗ ಮೀಸಲಾತಿ ಐತಿ. ಇದರ ಬಗ್ಗೆ ನಿಮಗೆ ಗೊತ್ತೇನು?

ಎಲ್ಲೆಲ್ಲಿ ಪ್ರಜಾಪ್ರಭುತ್ವ ಅದನೋ ಅಲ್ಲೆಲ್ಲಾ ಮೀಸಲಾತಿ ಅದ. ಅದರ ಹೆಸರು ಬ್ಯಾರೆ ಬ್ಯಾರೆ ಇರಬಹುದು ಅಷ್ಟ. ಅಮೆರಿಕಾದ ಅದನ್ನು ಧನಾತ್ಮಕ ತಾರತಮ್ಯ ಅಂತಾರ. ಯುರೋಪಿನ್ಯಾಗ ಸಕಾರಾತ್ಮಕ ಕ್ರಿಯೆ ಅಂತಾರ, ಅನೇಕ ದೇಶದೊಳಗ ಕೋಟಾ ಅಂತಾರ. ಭಾರತದಾಗ ಸರಳವಾಗಿ ಮೀಸಲಾತಿ ಅಂತೇವಿ.

- Advertisement -
- Advertisement -

ಸುದ್ದಿಯೇನೇ ಮನೋಲ್ಲಾಸಿನಿ – ಐ.ವಿ ಗೌಲ್‌

ಸುಪ್ರೀಂಕೋರ್ಟು ಮೊನ್ನೆ ಮೊನ್ನೆ ಫ್ರೆಷ್ ಆಗಿ ಒಂದು ಟಪ್ಪಣಿ ಕೊಟ್ಟದ. ಅದು ಎಷ್ಟು ಬಿಸಿ ಬಿಸಿ ಸುದ್ದಿ ಅಂದರ ಅದನ್ನ ಬರೆದ ಕಾಗದ ಇನ್ನೂ ಸುಡು -ಸುಡು ಅನ್ನಲಿಕ್ಕೆ ಹತ್ತೇದ.

ಅದೇನಪಾ ಅಂದರ ಮೀಸಲಾತಿ ಅಂದರ ನಾಗರಿಕರ ಮೂಲಭೂತ ಹಕ್ಕೇನಲ್ಲ. ಅದು ಸರಕಾರದ ಜನ ಕಲ್ಯಾಣ ನೀತಿ. ಅದನ್ನು ಸರಕಾರಗಳು ಕೊಟ್ಟರ ಕೊಡಬಹುದು, ಇಲ್ಲಾಂದರ ಇಲ್ಲಾ. ಅವರ ಮ್ಯಾಲೆ ನೀವು ಈ ಸೌಲತ್ತು ಕೊಡಲೇಬೇಕು ಅಂತ ದಬಾಯಿಸಲಿಕ್ಕೆ ಬರಂಗಿಲ್ಲ ಅಂತ.

ಅದು ಅಂತಿಮ ತೀರ್ಪು ಅಲ್ಲ. ಅದಕ್ಕ ಸರಕಾರ ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ. ಅದು ಏನಂತ ಪ್ರತಿಕ್ರಿಯೆ ಕೊಡತದ ಅನ್ನೋದರ ಮ್ಯಾಲೆ ನಾವು ಪ್ರತಿಕ್ರಿಯೆ ಕೊಡೋಣಂತ. ಆದರ ಅದರ ಹಿನ್ನೆಲೆ ತಿಳದು ಕೊಳ್ಳೋಣ.

ಈಗ ಮೀಸಲಾತಿ ಅನ್ನೋದು ಏನು ಅಂತ ತಿಳಕೋಕಿಂತಾ ಮೊದಲ ಮೂಲಭೂತ ಹಕ್ಕು ಅಂದರೇನು ಅಂತ ತಿಳಿಯೋಣು. ಮೂಲಭೂತ ಹಕ್ಕು ಅಂದರ ಹುಟ್ಟಿನಿಂದ ಬಂದ ಹಕ್ಕು. ಅದರ ಸಲುವಾಗಿ ಏನೂ ವಿಶೇಷ ಮಸಲತ್ತು ಮಾಡಬೇಕಿಲ್ಲ. ಯಾ ಮನುಷಾ ನಾಗರಿಕ ಇರತಾನೋ ಅವನಿಗೆ ಸಹಜವಾಗಿ ಬಂದ ಬಿಡೋ ಹಕ್ಕುಗಳು ಮೂಲಭೂತ ಹಕ್ಕುಗಳು. ಕೆಲವು ಎಲ್ಲಾ ಮನುಷ್ಯರಿಗೂ ಬರತಾವು. ಅವಕ್ಕ ಮಾನವ ಹಕ್ಕುಗಳು ಅಂತ ಅನಸಿಗೋತಾವು.

ಇನ್ನು ಕೆಲವು ಬರೇ ನಾಗರಿಕರಿಗೆ ಮಾತ್ರ ಸಿಗೋವು. ಅವು ಕಾನೂನಿನಿಂದ ಮಾತ್ರ ಸಿಗೋವಂಥವು. ಅವನ್ನು ಆಯಾ ದೇಶದ ಸಂವಿಧಾನದ ಒಳಗ ಬರದು ಇಡಲಾಗುತ್ತದೆ. ಅದರಾಗ ಬರದಾರ ಅಂದ ಮಾತ್ರಕ್ಕ ಅವು ಸಿಗತಾವು ಅಂತ ಅಲ್ಲ. ಅವು ನಿಸರ್ಗದ ನಿಯಮಗಳು. ಮಾನವ ಅಂತ ಅನ್ನಿಸಿಕೊಂಡವನು ಹಿಂಗ ಇರಬೇಕು ಅಂತ ಮಾನವ ಇತಿಹಾಸದ ಜೀವನಚಕ್ರದ ಅಲ್ಲಲ್ಲಿ ನಿಂತು ತೋರಸತದ. ಅದನ್ನು ಸಂವಿಧಾನದಾಗ ದಾಖಲಿಸಲಾಗತದ. ಸಂವಿಧಾನಕ್ಕ ಅಷ್ಟು ಯಾಕ ಇಂಪಾರ್ಟನ್ಸ ಕೊಡತೀರಿ? ಅದು ಒಂದು ಬುಕ್ಕು ಅಷ್ಟ. ಅಂತ ಮಾತಾಡೋರನ್ನ ವಾದದಾಗ ಸೋಲಸಲಿಕ್ಕೆ ಆಗಂಗಿಲ್ಲ. ಆದರ ಅವರಿಗೆ ಒಂದು ಮಾತು ಹೇಳಬೇಕು. ಸಂವಿಧಾನ ಅನ್ನೋದು ಒಂದು ಬುಕ್ಕು ಅಷ್ಟ. ಆದರ ಅದು ಸಮಗ್ರ ಮಾನವ ಜೀವ ವಿಕಾಸದ ಬುದ್ಧಿಮತ್ತೆ ಹಾಗೂ ವಿವೇಕವನ್ನು ದಾಖಲಿಸಿರುವ ಬುಕ್ಕು. ಅದನ್ನು ಬದಲು ಮಾಡಿದರ, ಮುಚ್ಚಿ ಇಟ್ಟರ, ಬೀಸಿ ಒಗದರ ಸಹಿತ ಅದರಲ್ಲಿರುವ ವಿವೇಕ ಹಾಳಾಗುವುದಿಲ್ಲ ಅಂತ.

ಇನ್ನು ಭಾರತದ ಸಂವಿಧಾನದಲ್ಲಿ ಇರುವ ಸುಮಾರು 20 ಮೂಲಭೂತ ಹಕ್ಕುಗಳಲ್ಲಿ ಪ್ರಮುಖವಾದ್ದು ಸಮಾನತೆಯ ಹಕ್ಕು. ಅಸಮಾನತೆ ತಳಹದಿಯ ಮೇಲೆ ನಿಂತಿರುವ ಸಮಾಜದಲ್ಲೆ ಸಮಾನತೆ ಸ್ಥಾಪಿಸೋದು ಹೆಂಗ ಹಂಗಾರ?

ಈ ದೇಶದ ರಾಜಕೀಯದ ಮೇಲೆ ಹಿಂದೆಂದೂ ಇಲ್ಲದ ಪ್ರಭಾವ ಬೀರಿ ಬದಲಾವಣೆ ತಂದದ್ದು ಮಂಡಲ ವರದಿ. ಅದರ ಶಿಫಾರಸು ಪುಸ್ತಕ ನೋಡಿದವರು ಕಮ್ಮಿ. ಅದರ ಹೆಸರಿನಲ್ಲಿ ಹೋರಾಟ ಮಾಡಿದವರು ಹೆಚ್ಚು. ಅದು ಆ ಕಡೆನೂ ಇರಬಹುದು, ಈ ಕಡೆನೂ ಇರಬಹುದು.

ಆ ವರದಿಯ ಮೊದಲ ಪುಟದ ಮೇಲೆ ಒಂದು ಮಾತು ಬರದದ. ಸಾವಿರ ವರ್ಷಕ್ಕೂ ಸಲ್ಲುವ ಮಾತು ಅದು. “ಅಸಮಾನನನ್ನು ಸಮಾನನ ಜೊತೆ ಸೇರಿಸಿ ನೋಡುವುದು, ಅಸಮಾನತೆಯನ್ನು ಮುಂದುವರೆಸಿದಂತೆ”. ಅಸಮಾನತೆಯನ್ನು ಮುರಿಯಲಿಕ್ಕೆ ಬೇರೆ ಬೇರೆ ಪ್ರಯತ್ನ ಮಾಡಿ ಅವು ಯಾವುವೂ ಯಶಸ್ಸು ಗಳಿಸದೇ ಹೋದಾಗ ಪ್ರಾರಂಭವಾಗಿದ್ದು, ತಕ್ಕಮಟ್ಟಿಗೆ ಯಶಸ್ಸು ಗಳಿಸಿದ್ದು ಮೀಸಲಾತಿ.

ಅದರ ಬಗ್ಗೆ ಕೆಲವು ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳೋಣ. ಈ ಬ್ರಹ್ಮಾಂಡದಾಗ 200 ದೇಶ ಅವ. ಅದರಾಗ ಸುಮಾರು 170 ದೇಶದೊಳಗ ಪ್ರಜಾಪ್ರಭುತ್ವ ಅದ. ಎಲ್ಲೆಲ್ಲಿ ಪ್ರಜಾಪ್ರಭುತ್ವ ಅದನೋ ಅಲ್ಲೆಲ್ಲಾ ಮೀಸಲಾತಿ ಅದ. ಅದರ ಹೆಸರು ಬ್ಯಾರೆ ಬ್ಯಾರೆ ಇರಬಹುದು ಅಷ್ಟ. ಅಮೆರಿಕಾದ ಅದನ್ನು ಧನಾತ್ಮಕ ತಾರತಮ್ಯ ಅಂತಾರ. ಯುರೋಪಿನ್ಯಾಗ ಸಕಾರಾತ್ಮಕ ಕ್ರಿಯೆ ಅಂತಾರ, ಅನೇಕ ದೇಶದೊಳಗ ಕೋಟಾ ಅಂತಾರ. ಭಾರತದಾಗ ಸರಳವಾಗಿ ಮೀಸಲಾತಿ ಅಂತೇವಿ.

ಬಿಲ್ ಕ್ಲಿಂಟನ್ನಿನ ಕಚೇರಿಯೊಳಗ ಕರಿಯರು, ಮೆಕ್ಸಿಕೋದವರು, ಏಷಿಯಾದವರು, ಮಹಿಳೆಯರು ಕಮ್ಮಿ ಇದ್ದಾರೆ ಅಂತ ಅಲ್ಲಿನ ಧನಾತ್ಮಕ ತಾರತಮ್ಯ ಆಯೋಗ ಅಲ್ಲಿನ ಅಧ್ಯಕ್ಷನಿಗೆ ನೋಟಿಸು ಕೊಟ್ಟಿತ್ತು.

ಯುರೋಪಿನಲ್ಲಿ ಪ್ರತಿ ಸರಕಾರಿ ಹಾಗೂ ಸಾರ್ವಜನಿಕ ಕಚೇರಿಗಳಲ್ಲಿ, ಎಲ್ಲಾ ರೀತಿಯ ಜಾತಿ- ಜನಾಂಗ- ಲಿಂಗದವರಿಗೆ ಅವಕಾಶ ನೀಡಲೇಬೇಕು ಅಂತ ಒಂದು ಕಾನೂನು ಇದೆ. ಅದನ್ನು ತಪ್ಪಿದರೆ ವಾಗ್ದಂಡನೆ ಹಾಗೂ ಇತರ ಶಿಕ್ಷೆ ಅದ. ಇದು ನಮ್ಮ ಭಾಳ ಜಾನ ಎನ್‍ಆರ್‍ಐಗಳಿಗೆ ಅನಿವಾಸಿ ಭಾರತೀಯರಿಗೆ ಗೊತ್ತಿರೋದಿಲ್ಲ. ಭಾರತ ಹಾಳಾಗಿರುವುದು ಮೀಸಲಾತಿಯಿಂದ ಅಂತ ಅವರು ಘಂಟಾಘೋಷವಾಗಿ ಹೇಳತಾರ. ತಮ್ಮ ಅಜ್ಞಾನದ ಬಲದಿಂದ ತಿಳಿದವರನ್ನ ಗೋಳು ಹೊಯ್ಕೊತಾರ.

ಯಾಕಂದರ ಅವರು ತಮಗೆ ರೊಟ್ಟಿ – ಬ್ಯಾಳಿ ನೀಡಿದ ದೇಶದ ಸರಕಾರ ಹಾಗೂ ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಬೆಳೆಸಿಕೊಳ್ಳಲಿಕ್ಕೆ ಹೋಗಿರೋದಿಲ್ಲ.

ಅವರು ಅಲ್ಲಿ ಇರೋತನಕಾ ಪ್ರವಾಸಿಗಳ ಥರಾ ಇದ್ದು, ತಮಗೆ ಕೆಲಸ ನೀಡಿದ ದೇಶದ ಬಗ್ಗೆ ಅಭಿಮಾನ ಹಾಗೂ ತಮಗೆ ಜನ್ಮ ನೀಡಿದ ದೇಶದ ಬಗ್ಗೆ ತಾತ್ಸಾರ ಬೆಳೆಸಿಕೊಂಡಿರತಾರ.

ನೀವು ಹಳ್ಳಿಯೊಳಗ ಜಂಗೀ ನಿಕಾಲಿ ಕುಸ್ತಿ ನೋಡಿರಬಹುದು. ಹಂಗಂದರ ಯುದ್ಧದಲ್ಲಿ ಕೊನೆಯಾಗುವ ಕುಸ್ತಿ ಅಂತ ಅರ್ಥ. ಅದರಾಗ ಎದುರಾಳಿಗಳನ್ನ ಹೆಂಗ ಹುಡುಕತಾರ, ಹೆಂಗ ಅವರ ನಡುವೆ ಸ್ಪರ್ಧೆ ಹಚ್ಚತಾರ ಅಂತ ನೋಡಬೇಕು .ಅದು ಅವರ ವಯಸ್ಸು ಅಥವಾ ಅನುಭವದ ಮ್ಯಾಲೆ ಇರಂಗಿಲ್ಲ. ಅವರ ದೇಹದ ತೂಕದ ಮ್ಯಾಲೆ ಇರತದ. ಯಾಕಂದರ ಸ್ಪರ್ಧೆ ಅನ್ನೋದು ಸಮಾನರ ನಡುವೆ ಇರಬೇಕು ಅಂತ. ಒಲಂಪಿಕ್ಸನ್ಯಾಗ ನಮ್ಮ ಹೆಮ್ಮೆಯ ಹುಡುಗಿ ಮೇರಿ ಕೋಮ ಅಂತಿಮ ಸುತ್ತಿನ್ಯಾಗ ಯಾಕ ಸೋತು ಹೋದಳು ಅಂದರ ಅಕಿನ್ನ ತನಗಿಂತ ಹೆಚ್ಚು ತೂಕದ ಹುಡುಗಿಯೊಂದಿಗೆ ಹೊಡದಾಡಲಿಕ್ಕೆ ಹಚ್ಚಿದರು.

ನಮ್ಮ ಸಮಾಜದಾಗ ಅಸಮಾನತೆ ಸಾವಿರಾರು ವರ್ಷಗಳಿಂದ ಅದ. ಅದನ್ನ ಪ್ರಜಾಪ್ರಭುತ್ವದ ನಂತರ ಅಳಿಸಬೇಕು ಅಂದರ ಸರಳ ಇಲ್ಲ. ಆದರೂ ಪ್ರಯತ್ನ ಕೈಬಿಡಬಾರದು. ಅದರಾಗುನೂ ಆ ಅಸಮಾನತೆ ಮಾನವ ನಿರ್ಮಿತವಾದ್ದರಿಂದ ಅದನ್ನು ಮಾನವರೇ ಅಳಿಸಬೇಕು. ಸಮಾನತೆ ಮೂಲಭೂತ ಹಕ್ಕು ಅಂದರ ಅದನ್ನು ನಿವಾರಿಸಲು ಬೇಕಾಗುವ ಪರಿಕರಗಳು ಮೂಲಭೂತ ಹಕ್ಕು ಯಾಕ ಆಗಂಗಿಲ್ಲ? ಆ ಪರಿಕರಗಳನ್ನ ಕಸಗೊಂಡರ ಯಾವ ರೀತಿ ಸಮಾನತೆ ಸಾಧಿಸಲಿಕ್ಕೆ ಸಾಧ್ಯ ಅದ?

ಘನ ಸರಕಾರಗಳು ನ್ಯಾಯಾಧೀಶರ ಮುಂದ ಇಡುವ ವಾದಗಳಲ್ಲಿ ಈ ಮಾತುಗಳು ಬರಬಹುದು ಅಂತ ಆಶೆ ಮಾಡೋಣ. ಪ್ರಾರ್ಥನೆಗಿಂತ ದೊಡ್ಡದು ಯಾವುದೂ ಇಲ್ಲ ಅನ್ನೋ ಮಾತನ್ನು ಬಂಗಾಳದ ಭಕ್ತಿ ಸಂತ ಕೃಷ್ಣ ಚೈತನ್ಯ ಹೇಳಿದರು. ಸದ್ಯಕ್ಕಂತೂ ನಮಗ ಪ್ರಾರ್ಥನೆ ಮಾಡೋದು ಬಿಟ್ಟು ಬ್ಯಾರೆ ದಾರಿನ ಇಲ್ಲ. ಅದು ದೇವರಿಗೆ ಇರಬಹುದು, ಸರಕಾರದಲ್ಲಿ ಇರೋ ನಮ್ಮ ದಾತಾರರಿಗೆ ಇರಬಹುದು. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...