Homeಫ್ಯಾಕ್ಟ್‌ಚೆಕ್ಪ್ರಧಾನಿ ಬಿಜೆಪಿ ಕಾರ್ಯಕರ್ತರ ಭೇಟಿ ಮಾಡಿದ್ದನ್ನು, ರೈತರೊಂದಿಗಿನ ಭೇಟಿಯೆಂದ ಮಾಧ್ಯಮಗಳು!

ಪ್ರಧಾನಿ ಬಿಜೆಪಿ ಕಾರ್ಯಕರ್ತರ ಭೇಟಿ ಮಾಡಿದ್ದನ್ನು, ರೈತರೊಂದಿಗಿನ ಭೇಟಿಯೆಂದ ಮಾಧ್ಯಮಗಳು!

ಕಚ್ಛ್‌ನ ಕೆಲ ರೈತರ ಜತೆ ಮಾತುಕತೆ ನಡೆಸಿ ಕೃಷಿ ಕಾನೂನಿನ ಕುರಿತಂತೆ ಅವರಿಗೆ ಮನವರಿಕೆ ಮಾಡಿ ಸಂಶಯಗಳನ್ನು ನಿವಾರಿಸಿದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಮಧ್ಯೆ, ಪ್ರಧಾನಿ ಮೋದಿ ಗುಜರಾತ್‌ನ ಕಚ್‌ನಲ್ಲಿನ ರೈತರ ನಿಯೋಗದೊಂದಿಗೆ ಭೇಟಿಯಾಗಿದ್ದಾರೆ ಎಂದು ಮಾಧ್ಯಮದಲ್ಲಿ ಸುದ್ದಿಯಾಗಿದ್ದ ವರದಿಯ ಸತ್ಯಾಸತ್ಯತೆ ಹೊರಬಿದ್ದಿದೆ. ವಾಸ್ತವದಲ್ಲಿ ಪ್ರಧಾನಿಯು ಬಿಜೆಪಿ ಕಾರ್ಯಕರ್ತರ ನಿಯೋಗವನ್ನು ಭೇಟಿ ಮಾಡಿದ್ದು ಅದನ್ನು ಮಾಧ್ಯಮಗಳು ರೈತರೊಂದಿಗಿನ ಭೇಟಿಯೆಂದು ಬಿಂಬಿಸಿದ್ದಾರೆ ಎನ್ನಲಾಗಿದೆ.

“ಪ್ರಧಾನಿ ನರೇಂದ್ರ ಮೋದಿ ಗುಜರಾತ್‍ನ ಕಚ್ಛ್‌ನ ಕೆಲ ರೈತರ ಜತೆ ಮಾತುಕತೆ ನಡೆಸಿ ಕೃಷಿ ಕಾನೂನಿನ ಕುರಿತಂತೆ ಅವರಿಗೆ ಮನವರಿಕೆ ಮಾಡಿ ಅವರ ಸಂಶಯಗಳನ್ನು ನಿವಾರಿಸಿದರು” ಎಂದು ಮಾಧ್ಯಮಗಲ್ಲಿ ವರದಿಯಾಗಿದ್ದವು.

ಆದರೆ ಈ ವರದಿಗಳು ಸುಳ್ಳಾಗಿದ್ದು, ಇದು ಕೇವಲ ರೈತ ಪ್ರತಿಭಟನೆಯಿಂದ ಜನರ ಗಮನ ಬೇರೆಡೆ ಸೆಳೆಯುವ ತಂತ್ರಗಾರಿಕೆಯಾಗಿತ್ತು ಹಾಗೂ ಪ್ರಧಾನಿಗೆ ರೈತರ ಪ್ರತಿಭಟನೆ ಕುರಿತು ಕಳವಳವಿದೆ ಎಂದು ತೋರಿಸುವ ಯತ್ನವಾಗಿತ್ತು ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ. ಈ ಬಗ್ಗೆ ತನಿಖಾ ಲೇಖನ ಪ್ರಕಟಸಿರುವ ಪತ್ರಿಕೆಯು ಪ್ರಧಾನಿ ಕಚ್ಛ್ ಗೆ ಭೇಟಿ ನೀಡಿದಾಗ ಅವರು ಮಾತುಕತೆ ನಡೆಸಿದ ರೈತರು ವಾಸ್ತವವಾಗಿ ರೈತರಲ್ಲ ಬದಲು ಸಿಖ್ ಸಮುದಾಯಕ್ಕೆ ಸೇರಿದ ಬಿಜೆಪಿ ಕಾರ್ಯಕರ್ತರು ಎಂದು ತಿಳಿದು ಬಂದಿದೆ ಎಂದಿದೆ.

ಇದನ್ನೂ ಓದಿ: ರೈತರನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಆಪ್ ಮುಖಂಡರು

ರೈತರೆಂದು ಕರೆಯಲ್ಪಡುವ ನಿಯೋಗವನ್ನು ಮುನ್ನಡೆಸಿದ ವ್ಯಕ್ತಿ ರಾಜು ಭಾಯಿ ಸರ್ದಾರ್ ಕಚ್ ವಲಯದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿದ್ದು, ಅವರು ಡಿಸೆಂಬರ್ 15 ರಂದು ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದ ಚಿತ್ರದಲ್ಲಿ ಪ್ರಧಾನಿ ಎದುರು ಕೇಸರಿ ರುಮಾಲು ಧರಿಸಿ ಕುಳಿತಿರುವುದನ್ನು ಕಾಣಬಹುದು.

ಗುಜರಾತ್ ಮುಖ್ಯಮಂತ್ರಿಯ ಟ್ವಿಟ್ಟರ್ ಹ್ಯಾಂಡಲ್ ಚಿತ್ರವನ್ನು ಟ್ವೀಟ್ ಮಾಡುವಾಗ, “ಕರಕುಶಲ ಚಟುವಟಿಕೆಗಳಲ್ಲಿ ತೊಡಗಿರುವ ವಿವಿಧ ಸ್ಥಳೀಯ ಕಚ್ಚಿ ಮಹಿಳೆಯರ ಗುಂಪುಗಳನ್ನು ಮತ್ತು ಕಚ್‌‌ನಲ್ಲಿ ನೆಲೆ ನಿಂತಿರುವ ’ಸಿಖ್ ರೈತ’ರನ್ನು ಭೇಟಿಯಾದರು” ಎಂದು ಹೇಳಿದೆ. ಅಲ್ಲದೆ ಸ್ವತಃ ರಾಜು ಭಾಯಿ ಕೂಡಾ ತಾನು ರೈತರ ನಿಯೋಗವನ್ನು ಮುನ್ನಡೆಸಿದೆ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ರೈತರನ್ನು ರಾಷ್ಟ್ರ ವಿರೋಧಿಗಳಂತೆ ಬಿಂಬಿಸಬೇಡಿ: ಮಾಧ್ಯಮಗಳಿಗೆ ಎಡಿಟರ್ಸ್ ಗಿಲ್ಡ್ ಸಲಹೆ

 

ಆದರೆ ಆಜ್‌ತಕ್ ಟಿವಿ ನ್ಯೂಸ್ ಚಾನೆಲ್‌ನ ವರದಿಗಾರ್ತಿ, ಸಭೆಯಲ್ಲಿ ಚರ್ಚಿಸಲಾದ ವಿಷಯದ ಬಗ್ಗೆ ವ್ಯಕ್ತಿಯೊಬ್ಬರೊಂದಿಗೆ ಪ್ರಶ್ನಿಸಿದಾಗ, ಗುರುದ್ವಾರದ ಬಗ್ಗೆ ಚರ್ಚೆಯನ್ನು ಕೇಂದ್ರೀಕರಿಸಲಾಗಿತ್ತು ಎಂದು ಹೇಳಿದ್ದಾರೆ.

ಈ ನಡುವೆ, ಪ್ರಧಾನಿ ಮೋದಿ ರೈತರು ಎಂದು ಕರೆಯಲ್ಪಡುವವರೊಂದಿಗೆ ಸಭೆ ನಡೆಸುತ್ತಿದ್ದ ಅದೇ ಸಮಯದಲ್ಲಿ, ನಿಜವಾದ ರೈತರ ಗುಂಪು ಕೃಷಿ ಕಾನೂನುಗಳ ವಿರುದ್ಧ ಕಚ್‌ನಲ್ಲಿ ಪ್ರತಿಭಟನೆ ನಡೆಸುತ್ತಿತ್ತು. ಆದರೆ ಪ್ರತಿಭಟನಾ ನಿರತ ರೈತರ ಸುದ್ದಿಯನ್ನು ಗುಜರಾತಿ ಮತ್ತು ರಾಷ್ಟ್ರೀಯ ಮಾಧ್ಯಮಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು ಎನ್ನಲಾಗಿದೆ.

ಇದನ್ನೂ ಓದಿ: ಭಯೋತ್ಪಾದಕರು ನಮ್ಮ ಸೈನಿಕರನ್ನು ಕೊಲ್ಲುತ್ತಿದ್ದಾರೆ, ಆದರೆ ಸರ್ಕಾರ ರೈತರನ್ನು ಭಯೋತ್ಪಾಕರಂತೆ ನೋಡುತ್ತಿದೆ: ಶಿವಸೇನೆ ಕಿಡಿ

ಕಚ್ ರಾಜಕೀಯವನ್ನು ತಿಳಿದಿರುವವರು ಹೇಳುವಂತೆ, ರಾಜು ಭಾಯ್ ಸರ್ದಾರ್ ಅವರ ನಿಜವಾದ ಹೆಸರು ಜುಗರಾಜ್ ಸಿಂಗ್. ಅವರು ನಾರಾ ಗ್ರಾಮಕ್ಕೆ ಸೇರಿದವರಾಗಿದ್ದು, ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಬಿಜೆಪಿಯ ವಲಯ ಕಾರ್ಯದರ್ಶಿಯಾಗುವ ಮೊದಲು ಅವರು ಬಿಜೆಪಿ ಬೆಂಬಲದೊಂದಿಗೆ ನಾರಾದ ಸರ್ಪಂಚ್ ಆಗಿ ಆಯ್ಕೆಯಾಗಿದ್ದರು.

ಸಿಖ್ ಸಮುದಾಯದ ಹೆಚ್ಚಿನ ಜನಸಂಖ್ಯೆಯಿಂದಾಗಿ ನಾರಾವನ್ನು ಕಚ್ ಪ್ರದೇಶದ ಮಿನಿ-ಪಂಜಾಬ್ ಎಂದು ಕರೆಯಲಾಗುತ್ತದೆ. ಈ ಪ್ರದೇಶದ ನಾರಾ ಮತ್ತು ಕೊಠಾರಾ ಗ್ರಾಮಗಳಲ್ಲಿ ಸಿಖ್ ಸಮುದಾಯವು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ.

ಅಲ್ಲದೆ ರಾಜು ಭಾಯ್ ”ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 15 ಅಂಶಗಳ ಕಾರ್ಯಕ್ರಮ ಸಮಿತಿ”ಯ ಸದಸ್ಯರಾಗಿದ್ದಾರೆ ಎಂದು ಅವರ ವೆಬ್‌ಸೈಟ್ ಹೇಳಿಕೊಂಡಿದೆ. ಪ್ರಸ್ತುತ ಲಖಪತ್ ಸರೈನಲ್ಲಿ 18 ಕೊಠಡಿಗಳ ರೆಸಾರ್ಟ್ ನಿರ್ಮಾಣ ಕಾರ್ಯದಲ್ಲಿ ನಿರತರಾಗಿರುವ ರಾಜು ಭಾಯ್ ಸರ್ದಾರ್ ಲಖಪತ್ ತಾಲ್ಲೂಕು ಗುರುದ್ವಾರದ ಮುಖ್ಯಸ್ಥರಾಗಿದ್ದಾರೆ.

ಇದನ್ನೂ ಓದಿ: BJP ಮತ್ತು RSS ಸಿಖ್ ಜನಾಂಗವನ್ನು ಮುಗಿಸಲು ಪ್ರಯತ್ನಿಸುತ್ತಿದೆ: ಸಿಖ್ ಧರ್ಮಗುರುವಿನ ಆತ್ಮಹತ್ಯಾ ಟಿಪ್ಪಣಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...