Homeಕ್ರೀಡೆಒಲಂಪಿಕ್ಒಲಿಂಪಿಕ್ಸ್ ಪದಕ ಗೆಲುವಿಗೆ ನಾಂದಿ ಹಾಡಿದ ನಾರಿಯರು

ಒಲಿಂಪಿಕ್ಸ್ ಪದಕ ಗೆಲುವಿಗೆ ನಾಂದಿ ಹಾಡಿದ ನಾರಿಯರು

- Advertisement -
- Advertisement -

ಸೈಖೋಮ್ ಮೀರಾಬಾಯಿ ಚಾನು

ವಿಶ್ವದ ಕ್ರೀಡಾಪ್ರೇಮಿಗಳ ದೃಷ್ಟಿ ಸಮ್ಮರ್ ಒಲಿಂಪಿಕ್ಸ್ ಮೇಲೆ ನೆಟ್ಟಿದೆ. ಇದರ ನಡುವೆ ಭಾರತದ ನಾರಿ ಶಕ್ತಿ ದೇಶದ ಜನರ ಗಮನ ಸೆಳೆದಿದೆ. ಬೆಳ್ಳಿ, ಕಂಚು ಪದಕಗಳನ್ನು ಗೆಲ್ಲುವ ಮೂಲಕ ಸೈಖೋಮ್ ಮೀರಾಬಾಯಿ ಚಾನು ಮತ್ತು ಪಿ.ವಿ.ಸಿಂಧು ದೇಶದ ಕ್ರೀಡಾಸಕ್ತರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ಪ್ರಸಕ್ತ ಟೋಕಿಯೋ ಒಲಂಪಿಕ್ಸ್‌ನ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದು ಮನೆಮಾತಾಗಿರುವ ಸೈಖೋಮ್ ಮೀರಾಬಾಯಿ ಚಾನು (27) ಆಗಸ್ಟ್ 8, 1994ರಲ್ಲಿ ಮಣಿಪುರದ ಇಂಪಾಲದಿಂದ 30 ಕಿಲೋಮೀಟರ್ ದೂರದಲ್ಲಿರುವ ನಾಂಗ್ಪೋಕ್ ಕಾಚಿಂಗ್ ಗ್ರಾಮದಲ್ಲಿ ಜನಿಸಿದವರು. ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ದೇಶದ 21 ವರ್ಷಗಳ ಪದಕದ ಕನಸನ್ನು ನನಸು ಮಾಡಿದವರು ಮೀರಾಬಾಯಿ ಚಾನು.

12 ವರ್ಷದ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಅಣ್ಣನಿಂದಲೂ ಎತ್ತಲಾಗದ ಭಾರಿ ತೂಕದ ಸೌದೆಯ ಹೊರೆಯನ್ನು ಎತ್ತಿ ತರುತ್ತಿದ್ದ ಈಕೆಯ ಶಕ್ತಿ ಬಗ್ಗೆ ಮನೆಯವರಿಗೆ ಹೆಮ್ಮೆಯಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಕ್ರೀಡೆ ಮೇಲೆ ಆಸಕ್ತಿ ಬೆಳೆದಿದ್ದ ಮೀರಾಬಾಯಿ ಚಾನುಗೆ ಯಶಸ್ಸಿನ ದಾರಿ ಸುಲಭವಾಗಿರಲಿಲ್ಲ ಎಂಬುದು ಅವರ ಹೇಳಿಕೆಗಳಿಂದಲೇ ಸ್ಪಷ್ಟವಾಗಿದೆ. ಮನೆಯಲ್ಲಿ ಆರ್ಥಿಕ ಸಂಕಷ್ಟ ಇತ್ತಾದರೂ, ಅಪ್ಪ ಅಮ್ಮನ ಪ್ರೋತ್ಸಾಹ ಮಗಳಿಗಿತ್ತು.

ತನ್ನ ಮನೆಯಲ್ಲಿದ್ದ ಹುಡುಗರು ಮತ್ತು ಸಂಬಂಧಿಕರು ಫುಟ್‌ಬಾಲ್ ಆಡುತ್ತಿದ್ದರಿಂದ ಪ್ರತಿದಿನ ಬಟ್ಟೆಯೆಲ್ಲ ಕೊಳಕು ಮಾಡಿಕೊಂಡು ವಾಪಸ್ ಬರುತ್ತಿದ್ದರು. ಹಾಗಾಗಿ ಶುಚಿಯಾದ, ನೀಟ್ ಆಗಿರುವ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಆಕೆ ಬಯಸಿದ್ದಳು. ಹಾಗಾಗಿ ಆರ್ಚರಿ ಅದಕ್ಕೆ ತಕ್ಕುದಾದ ಮತ್ತು ಸ್ಟೈಲ್ ಆದ ಕ್ರೀಡೆಯಾಗಿದ್ದು ಅದನ್ನು ಅಭ್ಯಸಿಸಲು ಬಯಸಿದ್ದೆ ಎಂದು ಮೀರಾಬಾಯಿ ಚಾನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

2008ರಲ್ಲಿ ಇಂಫಾಲ್‌ನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕಚೇರಿಗೆ ತೆರಳಿದ ಚಾನು ಅವರಿಗೆ ಆರ್ಚರಿ ಕ್ರೀಡೆಗೆ ತರಬೇತು ನೀಡುವವರು ದೊರೆಯಲಿಲ್ಲ. ಅದೇ ಸಮಯಕ್ಕೆ ಮಣಿಪುರದ ವೇಟ್ ಲಿಫ್ಟರ್ ಕುಂಜುರಾಣಿ ದೇವಿಯವರ ವಿಡಿಯೋ ನೋಡಿದ ಅವರು ಅದರಿಂದ ಸ್ಫೂರ್ತಿಗೊಂಡು ತಾನೂ ವೇಟ್ ಲಿಫ್ಟರ್ ಆಗಲು ನಿರ್ಧರಿಸಿದರು. ನಂತರ ಅಂತಾರಾಷ್ಟ್ರೀಯ ವೇಟ್ ಲಿಫ್ಟರ್ ಮತ್ತು ಕೋಚ್ ಆಗಿದ್ದ ಅನಿತಾ ಅವರು ಚಾನುರನ್ನು ಭೇಟಿ ಮಾಡಿದ ನಂತರ ನಿರ್ಧಾರ ಪಕ್ವವಾಯಿತು. ಚಾನು ಅವರ ವೇಟ್ ಲಿಫ್ಟಿಂಗ್ ಪ್ರಯಾಣ ಆರಂಭವಾಯಿತು.

PC : NDTV Sports

ಮೀರಾಬಾಯಿ ಅವರ ವೇಟ್ ಲಿಫ್ಟರ್ ಆಗುವ ಪಯಣದ ಆರಂಭವೇ ಬಹಳಷ್ಟು ಕಷ್ಟ ಕಾರ್ಪಣ್ಯಗಳಿಂದ ಕೂಡಿತ್ತು. ತನ್ನ ಊರಿನಿಂದ 30 ಕಿ.ಮೀ ದೂರದಲ್ಲಿರುವ ತರಬೇತಿ ಕೇಂದ್ರವನ್ನು ಎರಡು ಬಸ್ ಬದಲಿಸಿ ಬೆಳಿಗ್ಗೆ 6 ಗಂಟೆಯೊಳಗೆ ತಲುಪಬೇಕಾಗಿತ್ತು. ಆದರೆ, ಮನೆಯಲ್ಲಿ ನೀಡುತಿದ್ದ 10-20 ರೂಪಾಯಿಯನ್ನು ಉಳಿಸಿಕೊಂಡು ತನ್ನ ಡಯಟ್ ಖರ್ಚು ನಿರ್ವಹಿಸಲು ಬಳಸುತ್ತಿದ್ದ ಮೀರಾಬಾಯಿ ಚಾನು, ಈ ದೂರವನ್ನು ಕ್ರಮಿಸುವುದಕ್ಕಾಗಿ, ತಮ್ಮ ತಾಯಿ ಸೈಕೋಮ್ ಒಂಗ್ಬಿ ತೊಂಬಿ ದೇವಿ ನಡೆಸುತ್ತಿದ್ದ ಚಿಕ್ಕ ಅಂಗಡಿ ಬಳಿ ನಿಲ್ಲುತ್ತಿದ್ದ ಟ್ರಕ್‌ಗಳಲ್ಲಿ ಲಿಫ್ಟ್ ತೆಗೆದುಕೊಳ್ಳುತ್ತಿದ್ದರು.

ಒಲಿಂಪಿಕ್ಸ್ ಪದಕ ಗೆದ್ದ ಮೇಲೆ ಈ ದಾರಿಯಲ್ಲಿ ತನಗೆ ಲಿಫ್ಟ್ ನೀಡುತ್ತಿದ್ದ ಟ್ರಕ್ ಚಾಲಕರಿಗೆ ಧನ್ಯವಾದ ಹೇಳಬೇಕು ಎಂದು ಮೀರಾಬಾಯಿ ಚಾನು ಹುಡುಕುತ್ತಿದ್ದಾರೆ ಎಂಬುದು ಮನಕಲಕುವ ಸಂಗತಿ.

2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 170 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದ ಅವರು, 2016ರಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಸ್ಪರ್ಧೆಯಲ್ಲಿ 186 ಕೆಜಿ ಭಾರ ಎತ್ತಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಆದರೆ
ಅದೇ ವರ್ಷ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಗಾಯಗೊಂಡು ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅಂದು ತೊಟ್ಟ ಸಾಧನೆಯ ಹಠ ಇಂದಿನ ಬೆಳ್ಳಿ ಪದಕಕ್ಕೆ ಕಾರಣವಾಗಿದೆ.

2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮತ್ತು 2018ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಚಾನು 2016ರ ಒಲಿಂಪಿಕ್ಸ್ ನೋವನ್ನು ನುಂಗಿಕೊಂಡರು. 2020ರ ಏಷ್ಯನ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದುಕೊಂಡರು. ಅಲ್ಲಿಂದ ಟೋಕಿಯೋ ಒಲಿಂಪಿಕ್ಸ್‌ಗಾಗಿ ಎರಡು ವರ್ಷಗಳ ಕಾಲ ಮನೆಗಾಗಲೀ, ಯಾವ ಸಮಾರಂಭಗಳಿಗಾಗಲಿ ತೆರಳದೆ ಕಠಿಣ ಪರಿಶ್ರಮ ನಡೆಸಿದ್ದರು.

ಭಾರತೀಯ ರೈಲ್ವೆಯಲ್ಲಿ ಚೀಫ್ ಟಿಕೆಟ್ ಇನ್‌ಪ್ಸೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಚಾನು ಏಷ್ಯನ್ ಕ್ರೀಡಾಕೂಟದಲ್ಲಿ ವಿಶ್ವದಾಖಲೆಗಳಿಸಿದ್ದಾರೆ. ಟೊಕಿಯೋ ಒಲಿಂಪಿಕ್ಸ್‌ನಲ್ಲಿ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಒಟ್ಟು 202 ಕೆಜಿ ಭಾರ ಎತ್ತುವ (87 ಕೆಜಿ ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 115 ಕೆಜಿ) ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಸದ್ಯ ಮಣಿಪುರ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಹುದ್ದೆ ಅಲಂಕರಿಸಿದ್ದಾರೆ.

2018 ರಲ್ಲಿ ಭಾರತದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಹಾಗೂ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಣಿಪುರದ ಮೀರಾಬಾಯಿ ಚಾನು ಅವರ ಮನೆಯ ಸ್ಥಿತಿಯನ್ನು ಕಂಡು ಹಲವು ಕಲಾವಿದರು, ಕ್ರೀಡಾಪಟುಗಳು ಸರ್ಕಾರ ನೀಡುವ ಸವಲತ್ತುಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕ್ರಿಕೆಟ್ ತಾರೆಯರಿಗೆ ನೀಡುವ ಸೌಲಭ್ಯಗಳಲ್ಲಿ ಕನಿಷ್ಟ ಮಟ್ಟದ ಸೌಲಭ್ಯವನ್ನು ಬೇರೆ ಕ್ರೀಡೆಗಳಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪುಸರ್ಲಾ ವೆಂಕಟ ಸಿಂಧು

ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಭರವಸೆ ಮೂಡಿಸಿದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಎಂದೇ ಹೆಚ್ಚು ಪರಿಚಿತರಾದ ಪುಸರ್ಲಾ ವೆಂಕಟ ಸಿಂಧು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಭಾರತಕ್ಕೆ ಮತ್ತೊಮ್ಮೆ ಗರಿಮೆ ತಂದಿದ್ದಾರೆ. ಒಲಿಂಪಿಕ್ಸ್‌ನಲ್ಲಿ 2 ಬಾರಿ ಪದಕ ಗೆದ್ದು ದೇಶದ ಗಮನ ಸೆಳೆದಿದ್ದಾರೆ. ಕುಸ್ತಿಪಟು ಸುಶೀಲ್ ಕುಮಾರ್ ನಂತರ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ಅಥ್ಲೀಟ್ ಮತ್ತು ಮೊದಲ ಮಹಿಳೆ ಎಂಬ ದಾಖಲೆಗೂ ಭಾಜನರಾಗಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲಿ ಸೋಲುಂಡಿದ್ದ ಪಿ.ವಿ ಸಿಂಧು, ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾದ ಹಿ ಬಿಂಗ್ಜಾವ್ ಅವರ ವಿರುದ್ಧ ಸೆಣಸಿದರು. 21-13 ಅಂತರದಿಂದ ಮೊದಲ ಸೆಟ್ ಗೆದ್ದ ಸಿಂಧು ಎರಡನೇ ಸೆಟ್‌ಅನ್ನು 21-15 ಅಂತರದಲ್ಲಿ ಗೆದ್ದು ನೇರ ಸೆಟ್‌ಗಳಿಂದ ವಿಜಯಿಯಾಗಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.

ತೆಲಂಗಾಣದ ಹೈದರಾಬಾದ್‌ನಲ್ಲಿ 1995ರ ಜುಲೈ 5ರಂದು ಜನಿಸಿದ ಪಿ.ವಿ.ಸಿಂಧು ಅವರ ತಂದೆ ಪಿ.ವಿ.ರಮಣ ರೈಲ್ವೇ ಇಲಾಖೆಯಲ್ಲಿ ನೌಕರರಾಗಿದ್ದಾರೆ. ತಂದೆ-ತಾಯಿ ಇಬ್ಬರು ಮಾಜಿ ವಾಲಿಬಾಲ್ ಆಟಗಾರರು. ರಮಣ ಅವರು ಭಾರತದ ವಾಲಿಬಾಲ್ ಟೀಂನ ಆಟಗಾರರಾಗಿದ್ದು, ಭಾರತ ಸರ್ಕಾರದ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ, ಸಿಂಧು ಮಾತ್ರ ಆಕರ್ಷಿತರಾಗಿದ್ದು ಬ್ಯಾಡ್ಮಿಂಟನ್ ಕಡೆಗೆ. ತಮ್ಮ 8ನೇ ವಯಸ್ಸಿನಲ್ಲಿಯೇ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ್ದರು. ನಂತರ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯ ಸದಸ್ಯೆಯಾದರು.

ಆಗಸ್ಟ್ 2013ರಲ್ಲಿ ಚೀನಾದಲ್ಲಿ ಜರುಗಿದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಪಿ.ವಿ. ಸಿಂಧು. ಸೆಪ್ಟೆಂಬರ್ 2012ರಲ್ಲಿ ಬಿಡುಗಡೆ ಮಾಡಲಾದ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಶ್ರೇಯಾಂಕಗಳಲ್ಲಿ ಮೊದಲ 20 ಸ್ಥಾನದೊಳಗೆ ಸಿಂಧು ಗುರುತಿಸಿಕೊಂಡಿದ್ದರು. ಬಿಡಬ್ಲ್ಯುಎಫ್ ವಿಶ್ವ ರ್‍ಯಾಂಕಿಂಗ್‌ನ ಐದನೇ ಸ್ಥಾನದಲ್ಲಿ ಇದ್ದ ಸಿಂಧು 2017ರಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

PC : Business Standard

2013, 14, 17, 18, 19ರ ವಿಶ್ವ ಚಾಂಪಿಯನ್‌ಶಿಪ್‌ಗಳ ಸಿಂಗಲ್ಸ್‌ನಲ್ಲಿ ಪದಕ ಗೆದ್ದು ಭಾರತದ ಹೆಸರು ಬೆಳಗಿಸಿದ್ದಾರೆ. 2013 ಮತ್ತು 2014ರಲ್ಲಿ ಕಂಚಿನ ಪದಕ, 2017 ಮತ್ತು 2018ರಲ್ಲಿ ಬೆಳ್ಳಿ ಪದಕ ಮತ್ತು 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

2014ರ ಕಾಮನ್‌ವೆಲ್ತ್ ಗೇಮ್ಸ್‌ನ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಮತ್ತು 2018ರಲ್ಲಿ ಸಿಂಗಲ್ಸ್‌ನಲ್ಲಿ ಬೆಳ್ಳಿ ಮತ್ತು ತಂಡದೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

2014ರ ಏಷಿಯನ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್ ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ. ಇದಲ್ಲದೆ ಉಬರ್ ಕಪ್, ದಕ್ಷಿಣ ಏಷ್ಯಾದ ಕ್ರೀಡೆಗಳಲ್ಲಿಯೂ ಪದಕಗಳನ್ನು ಗೆದ್ದು ತಂದಿದ್ದಾರೆ.

ಕಳೆದ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಪಿ.ವಿ. ಸಿಂಧು, ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ಪದ್ಮಶ್ರೀ (2015), ಪದ್ಮಭೂಷಣ(2020), ಅರ್ಜುನ ಪ್ರಶಸ್ತಿ(2013) ಗೌರವಗಳಿಗೆ ಸಿಂಧು ಪಾತ್ರವಾಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧುಗೆ ಆಂಧ್ರಪ್ರದೇಶ ಸರ್ಕಾರ ನಗದು ಪ್ರೋತ್ಸಾಹಧನ ಘೋಷಿಸಿದೆ. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು 2017-22 ಕ್ರೀಡಾ ನೀತಿಯ ಪ್ರಕಾರ ಸಿಂಧುಗೆ 30 ಲಕ್ಷ ರೂಪಾಯಿ ಬಹುಮಾನ ನೀಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ಅವರ ಬೆಳ್ಳಿ ಪದಕ ಹಾಗೂ ಪಿವಿ ಸಿಂಧು ಅವರ ಕಂಚಿನ ಪದಕದ ದೆಸೆಯಿಂದ ಪದಕ ಪಟ್ಟಿಯಲ್ಲಿ ಈ ಲೇಖನ ಪ್ರಕಟಣೆಗೆ ಹೋಗುವ ಹೊತ್ತಿಗೆ ಭಾರತ 62ನೇ ಸ್ಥಾನದಲ್ಲಿದೆ. ಇನ್ನು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದಿರುವ 23 ವರ್ಷದ ಅಸ್ಸಾಂನ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರಿಂದ ಒಂದು ಪದಕ ಖಚಿತವಾಗಿದೆ.

ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿರಬೇಕು ಎಂಬ ಮಾತುಗಳನ್ನು ಆಡಿದ್ದ ಆರ್‌ಎಸ್‌ಎಸ್ ನೇತಾರ ಮೋಹನ್ ಭಾಗವತ್ ಮತ್ತು ಸಮ್ಮರ್ ಒಲಿಂಪಿಕ್ಸ್‌ನಲ್ಲಿ ಪದಕ ಗೌರವಕ್ಕೆ ಭಾಜನರಾಗುತ್ತಿರುವ ಹೆಣ್ಣು ಮಕ್ಕಳ ಪೋಟೋಗಳು ಮೀಮ್ಸ್‌ಗಳಾಗಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ಪದಕ ಗಳಿಸಿದ ಮೀರಾಬಾಯಿ ಪದಕ ಗಳಿಕೆಗೆ ನಾಂದಿ ಹಾಡಿದರೆ ಅದೇ ದಾರಿಯಲ್ಲಿ ಪಿವಿ ಸಿಂಧು ಸಾಗಿದ್ದಾರೆ. ಈಗ ಅದೇ ಮಾರ್ಗದಲ್ಲಿ ಲವ್ಲಿನಾ ಮತ್ತು ಭಾರತದ ಮಹಿಳಾ ಹಾಕಿ ತಂಡವು ಇದೆ.


ಇದನ್ನೂ ಓದಿ: ಒಲಿಂಪಿಕ್ಸ್ ಬಾಕ್ಸಿಂಗ್: ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟ ಹೆಣ್ಣುಮಗಳು ಲವ್ಲಿನಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...