ಕೋವಿಡ್‌
PC : vijaya karnataka

ಕಳೆದ 24 ಗಂಟೆಗಳಲ್ಲಿ ಭಾರತವು 38,628 ಹೊಸ ಕೋವಿಡ್‌ 19 ಪ್ರಕರಣಗಳನ್ನು ವರದಿ ಮಾಡಿದೆ. ನಿನ್ನೆಗೆ ಹೋಲಿಸಿದರೆ 13% ಕಡಿಮೆ ಪ್ರಕರಣಗಳನ್ನು ದಾಖಲಿಸಿದೆ. ಜೊತೆಗೆ 40,017 ಮಂದಿ ಚೇತರಿಸಿಕೊಂಡಿದ್ದು, 617 ಸಾವುಗಳನ್ನು ವರದಿ ಮಾಡಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಗುರುವಾರ ದೇಶಾದ್ಯಂತ 44,643 ಪ್ರಕರಣಗಳು ದಾಖಲಾಗಿ ಆತಂಕ ಹುಟ್ಟಿಸಿದ್ದವು. ಶುಕ್ರವಾರ ಅವುಗಳ ಸಂಖ್ಯೆ 38,628ಕ್ಕೆ ಇಳಿದಿದೆ. ಅಲ್ಲಗೆ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,18,95,385 ಕ್ಕೆ ತಲುಪಿದೆ. ಇನ್ನು 4,12,153 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಚೇತರಿಕೆ 3,10,55,861 ಆಗಿದೆ. ಒಟ್ಟು ಸಾವುಗಳು ಸಂಖ್ಯೆ 4,27,371 ಆಗಿದೆ.

ಇದೇ ಸಂದರ್ಭದಲ್ಲಿ ಒಟ್ಟು ಲಸಿಕೆ ನೀಡಿದ ಪ್ರಮಾಣ 50,10,09,609 ಆಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 49,55,138 ಜನರಿಗೆ ಲಸಿಕೆ ನೀಡಲಾಗಿದೆ.


ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಬಿಗಿ ನೈಟ್ ಕರ್ಫ್ಯೂ, ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ

LEAVE A REPLY

Please enter your comment!
Please enter your name here