Homeಕರ್ನಾಟಕಬೀದಿಬದಿಯ ಬಡ ವ್ಯಾಪಾರಿಗಳ ಮೇಲೆ ದರ್ಪ ತೋರಿದ ಪಿಎಸ್‌ಐ ಅಮಾನತು

ಬೀದಿಬದಿಯ ಬಡ ವ್ಯಾಪಾರಿಗಳ ಮೇಲೆ ದರ್ಪ ತೋರಿದ ಪಿಎಸ್‌ಐ ಅಮಾನತು

- Advertisement -

ವೀಕೆಂಡ್‌ ಕರ್ಫ್ಯೂ ಉಲ್ಲಂಘಿಸಿ ಬೀದಿಬದಿಯಲ್ಲಿ ಕುಳಿತು ತರಕಾರಿ ಮಾರುತ್ತಿದ್ದಾರೆ ಎಂಬ ಕಾರಣಕ್ಕೆ ತರಕಾರಿಗಳನ್ನು ಕಾಲಿನಿಂದ ಒದ್ದು, ಬೀದಿಬದಿ ವ್ಯಾಪಾರಿಗಳ ಮೇಲೆ ದರ್ಪ ತೋರಿಸಿದ್ದ ರಾಯಚೂರು ನಗರದ ಸದರ ಬಜಾರ್‌ ಠಾಣೆಯ ಪಿಎಸ್‌ಐ ಅಜಮ್ ಅವರನ್ನು ಅಮಾನತು ಮಾಡಲಾಗಿದೆ.

ಕೊರೊನಾ ಕಾರಣಕ್ಕಾಗಿ ರಾಜ್ಯಾದ್ಯಂತ ವೀಕೆಂಡ್‌ ಕರ್ಫ್ಯೂ ಜಾರಿಯಲ್ಲಿದೆ. ಈ ವೇಳೆ ಜನರು ರಸ್ತೆಗೆ ಬರಬಾರದು ಎಂದು ಆದೇಶಿಸಲಾಗಿದೆ. ಆದರೆ, ರಾಯಚೂರಿನ ಚಂದ್ರಮೌಳೇಶ್ವರ ವೃತ್ತದಿಂದ ಪಟೇಲ್ ರಸ್ತೆ ಮಾರ್ಗದಲ್ಲಿ ರೈತರು, ವರ್ತಕರು ತರಕಾರಿ ವ್ಯಾಪಾರ ಮಾಡುತ್ತಿದ್ದರು. ಇದನ್ನು ಕಂಡು ಆಕ್ರೋಶಗೊಂಡ ಪಿಎಸ್‌ಐ ವ್ಯಾಪಾರಿಗಳಿಗೆ ಬುದ್ದಿವಾದ ಹೇಳುವುದು ಬಿಟ್ಟು ತರಕಾರಿ, ಸೊಪ್ಪನ್ನು ಕಾಲಿನಿಂದ ಒದ್ದು ಚೆಲ್ಲಾಪಿಲ್ಲಿ ಮಾಡಿದ್ದರು.

ಪಿಎಸ್‌ಐ ಅಜಮ್ ವ್ಯಾಪಾರಿಗಳ ಮೇಲೆ ದರ್ಪ ಎಸಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಪಿಎಸ್‌ಐ ಅವರ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ್ ನಿಕಮ್ ಅವರು ಪಿಎಸ್‌ಐಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋದಲ್ಲಿ ಪಿಎಸ್‌ಐ ವಾಹನದಿಂದ ಇಳಿದು ಬಂದು, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ತರಕಾರಿ, ಸೋಪ್ಪು, ನಿಂಬೆಹಣ್ಣು ಸೇರಿದಂತೆ ಎಲ್ಲಾವನ್ನು ಬೂಟು ಕಾಲಿನಿಂದ ಒದ್ದು ದರ್ಪ ತೋರಿದ್ದರು.


ಇದನ್ನೂ ಓದಿ: ತಮಿಳುನಾಡಿನಲ್ಲಿ ಮಹಿಳೆಯರು, ಬ್ರಾಹ್ಮಣೇತರರಿಗೆ ಅರ್ಚಕ ಹುದ್ದೆ, ರಾಜ್ಯದಲ್ಲಿಯೂ ಚರ್ಚೆ ಆರಂಭ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial