ರೈತ ಹೋರಾಟದ ನಾಯಕತ್ವ ವಹಿಸಿರುವ ಪಂಜಾಬ್ ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಏಣಿಕೆ ನಡೆದು ಫಲಿತಾಂಶ ಪ್ರಕಟವಾಗುತ್ತಿದೆ. ವಿವಾದಿತ ಕೃಷಿ ಕಾನೂನುಗಳು ಕೇಂದ್ರದ ಆಡಳಿತರೂಢ ಬಿಜೆಪಿಗೆ ಭಾರಿ ಹಿನ್ನಡೆ ಉಂಟುಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅದ್ಭುತ ಸಾಧನೆ ಮಾಡಿದೆ.
ಪಂಜಾಬಿನ ಮೊಗ್ಗ, ಹೋಶಿಯಾರ್‌ಪುರ್, ಕಪುರ್ಥಾಲಾ, ಅಬೋಹರ್, ಪಠಾಣ್‌ಕೋಟ್ ಮತ್ತು ಬಟಿಂಡಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಬರ್ಜರಿ ಯಶಸ್ಸು ಪಡೆದಿದೆ. ಇವುಗಳಲ್ಲಿ ಬಟಿಂಡಾ ಜಿಲ್ಲೆಯಲ್ಲಿ ಕಳೆದ 53 ವರ್ಷಗಳ ನಂತರ ಕಾಂಗ್ರೆಸ್ ಪಾಲಿಗೆ ಮೇಯರ್ ಸ್ಥಾನ ಒಲಿದಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಒಂದು ಅದ್ಭುತ ಗೆಲುವು ಎಂದು ಬಿಂಬಿಸಲಾಗುತ್ತಿದೆ.
ಬಟಿಂಡಾ ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್ ತಿಂಗಳಿನಿಂದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಯುತ್ತಲೇ ಇದೆ. ಇಂದಿಗೂ ಅಲ್ಲಿನ ಟೋಲ್ ಪ್ಲಾಜಾ, ರೈಲು ನಿಲ್ದಾಣದಳ ಬಳಿ ಪ್ರತಿಭಟನೆ ನಡೆಯುತ್ತಿದೆ. ಅಕ್ಕ ಪಕ್ಕದ ಹಳ್ಳಿಯ ಜನರು ಜಿಲ್ಲಾ ಕೇಂದ್ರ ಮತ್ತು ರಾಮಪುರ ಪುಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪಂಜಾಬ್ ಸ್ಥಳೀಯ ಚುನಾವಣೆ – ಕಾಂಗ್ರೆಸ್‌ಗೆ ಭರ್ಜರಿ ಜಯ, ಬಿಜೆಪಿಗೆ ಮುಖಭಂಗ
History has been made today!
Bathinda will get a Congress Mayor for the 1st time in 53 years!
Thank you to ALL Bathinda residents.Congratulations to the people of Bathinda for a spectacular victory.
Kudos to all Congress candidates and workers, who toiled for this day. pic.twitter.com/Xvczq5MjfU— Manpreet Singh Badal (@MSBADAL) February 17, 2021
ಬಟಿಂಡಾದಲ್ಲಿ ಕಾಂಗ್ರೆಸ್‌ಗೆ ಗೆದ್ದ ಗೆಲುವಿನ ಕುರಿತು ಟ್ವೀಟ್ ಮಾಡಿರುವ ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್, ” ಇಂದು ಇತಿಹಾಸ ಸೃಷ್ಟಿಯಾಗಿದೆ. 53 ವರ್ಷಗಳಲ್ಲಿ ಮೊದಲ ಬಾರಿಗೆ ಬಟಿಂಡಾ ಕಾಂಗ್ರೆಸ್ ಮೇಯರ್ ಪಡೆಯಲಿದೆ. ಅದ್ಭುತ ಗೆಲುವು ನೀಡಿದ ಬಟಿಂಡಾ ಜನರಿಗೆ ಅಭಿನಂದನೆಗಳು. ಈ ದಿನಕ್ಕಾಗಿ ಶ್ರಮಿಸಿದ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಿಗೆ ಶುಭಾಷಯಗಳು” ಎಂದಿದ್ದಾರೆ.
ಕಾಂಗ್ರೆಸ್ ಶಾಸಕ ಮತ್ತು ಪಂಜಾಬ್ ರಾಜ್ಯ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಅವರು ಬಟಿಂಡಾ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮನ್‌ಪ್ರೀತ್ ಸಿಂಗ್ ಬಾದಲ್ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರ ಸೋದರಸಂಬಂಧಿಯಾಗಿದ್ದು, ಈ ಬಾರಿ ಪುರಸಭೆ ಚುನಾವಣೆಯನ್ನು ಪ್ರತಿಷ್ಠಿತ ಕಣವನ್ನಾಗಿಸಿಕೊಂಡಿದ್ದರು.
ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!
ಬಟಿಂಡಾ ಲೋಕಸಭಾ ಕ್ಷೇತ್ರವನ್ನು ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಹರ್ಸಿಮ್ರತ್ ಬಾದಲ್ ಪ್ರತಿನಿಧಿಸುತ್ತಿದ್ದಾರೆ. ಅಕಾಲಿದಳ ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳಿಂದ ರಾಜ್ಯದ ರೈತರಲ್ಲಿ ಉಂಟಾದ ಪ್ರತಿಭಟನೆಯ ನಂತರ ತನ್ನ ದೀರ್ಘಕಾಲದ ಮಿತ್ರ ಬಿಜೆಪಿಯೊಂದಿಗೆ ಇತ್ತೀಚೆಗೆ ಬೇರ್ಪಟ್ಟಿದೆ.

ಬಟಿಂಡಾ ಜಿಲ್ಲೆಯಲ್ಲಿ ಫೆಬ್ರವರಿ 7 ರಂದು ನಾನುಗೌರಿ.ಕಾಂ ತಂಡ ಕೆಲವು ಸ್ಥಳಿಯರೊಂದಿಗೆ ಮಾತುಕತೆ ನಡೆಸಿತ್ತು. ರಾಮಪುರ ಪುಲ್ ನಗರದ ರೈಲು ನಿಲ್ದಾಣದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಹಲವು ಮಂದಿ ರೈತರು ಹೇಳಿದ್ದು, ನಾವು ಈ ಬಾರಿ ಬಿಜೆಪಿಗೆ ಮತ ನೀಡುವುದಿಲ್ಲ. ನಮ್ಮ ಪರವಾಗಿ ನಿಂತವರಿಗೆ, ನಮ್ಮ ರೈತರ ನೋವುಗಳಿಗೆ ಜೊತೆಯಾದವರಿಗೆ ಮತ ನೀಡುತ್ತೇವೆ ಎಂದು ತಿಳಿಸಿದ್ದರು.
ಇದುವರೆಗಿನ ಚುನಾವಣಾ ಎಣಿಕೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ ಅನುಭವಿಸಿದ್ದು, ಮತ ಎಣಿಕೆಯಾಗುತ್ತಿರುವ 7 ಮುನ್ಸಿಪಲ್ ಕಾರ್ಪೋರೇಷನ್‌ಗಳಲ್ಲಿ 6 ನ್ನು ಕಾಂಗ್ರೆಸ್ ಗೆದ್ದುಕೊಂಡಿದ್ದು, ಒಂದು ಮುನ್ಸಿಪಲ್ ಕಾರ್ಪೋರೇಷನ್‌ನಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ.
ಇದನ್ನೂ ಓದಿ: ‘ಮೋದಿ ಅಳಿಯಂದಿರು ಬಂದರು ಹುಷಾರು’: ರೈತ ಬೂಟಾ ಸಿಂಗ್ ಎಚ್ಚರಿಕೆ



ಆಶಾದಾಯಕ ಬೆಳೆವಣಿಗೆ.