ಬ್ರಿಟನ್ ರಾಣಿ ಎಲಿಜಬೆತ್ II ಅವರ ಪತಿ ರಾಜ ಫಿಲಿಪ್ ನಿಧನರಾಗಿದ್ದಾರೆ ಎಂದು ಬಕಿಂಗ್ಯ್ಹಾಮ್ ಅರಮನೆ ಪ್ರಕಟಿಸಿದೆ. ರಾಜ ಫಿಲಿಪ್ ಅವರಿಗರ 99 ವರ್ಷ ವಯಸ್ಸಾಗಿತ್ತು. ಇತ್ತಿಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಹೃದಯ ಚಿಕಿತ್ಸೆ ನಡೆಸಲಾಗಿತ್ತು.
ಬ್ರಿಟಿಷ್ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದವರು ಎಂಬ ಗರಿಮೆಗೆ ರಾಜ ಫಿಲಿಪ್ ಪಾತ್ರರಾಗಿದ್ದರು. ಫಿಲಿಪ್ ತಮ್ಮ 96 ನೇ ವಯಸ್ಸಿನಲ್ಲಿ 2017 ರಲ್ಲಿ ಸಾರ್ವಜನಿಕ ಕರ್ತವ್ಯದಿಂದ ನಿವೃತ್ತರಾಗಿದ್ದರು. ರಾಜ ಫಿಲಿಪ್ ಮರಣವು ರಾಣಿ ಎಲಿಜಬೆತ್‌ಗೆ ತೀವ್ರ ನಷ್ಟ, ಅವರು ತೀವ್ರ ದುಖಃದಲ್ಲಿರುವುದಾಗಿ ಬಕಿಂಗ್ಯ್ಹಾಮ್ ಅರಮನೆ ತಿಳಿಸಿದೆ.
ಫೆಬ್ರವರಿ 16 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ತಿಂಗಳ ನಂತರ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು. ಈ ಸಮಯದಲ್ಲಿ ಅವರಿಗೆ ಹೃದಯ ಸೋಂಕಿಗೆ ಚಿಕಿತ್ಸೆ ನೀಡಲಾಗಿತ್ತು.
ಇದನ್ನೂ ಓದಿ: ರೈತ ಹೋರಾಟ: ಹುತಾತ್ಮ ಸ್ಮಾರಕಕ್ಕೆ ಸೇರಿದ ದೇಶದ 23 ರಾಜ್ಯಗಳ 1,500 ಹಳ್ಳಿಗಳ ಮಣ್ಣು
It is with deep sorrow that Her Majesty The Queen has announced the death of her beloved husband, His Royal Highness The Prince Philip, Duke of Edinburgh.
His Royal Highness passed away peacefully this morning at Windsor Castle. pic.twitter.com/XOIDQqlFPn
— The Royal Family (@RoyalFamily) April 9, 2021
ಅವರ ಸಾವಿನ ಸುದ್ದಿ ಘೋಷಿಸಿದ ಬಿಬಿಸಿ ಟೆಲಿವಿಷನ್ ಮಿಲಿಟರಿ ಉಡುಗೆ ಸಮವಸ್ತ್ರವನ್ನು ಧರಿಸಿದ ಫಿಲಿಪ್ ಅವರ ಭಾವಚಿತ್ರದೊಂದಿಗೆ ರಾಷ್ಟ್ರಗೀತೆ ನುಡಿಸಿ, ಗೌರವ ಸಲ್ಲಿಸಿತು. ರಾಜಮನೆತನದ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ಧ್ವಜಗಳನ್ನು ಅರ್ಧಕ್ಕೆ ಇಳಿಸಲಾಯಿತು.
“ರಾಜಕುಮಾರ ಫಿಲಿಪ್ ಅವರ ಅಸಾಧಾರಣ ಜೀವನ ಮತ್ತು ಕೆಲಸಕ್ಕಾಗಿ ನಾವು ರಾಷ್ಟ್ರ ಮತ್ತು ಸಾಮ್ರಾಜ್ಯದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
1947 ರಲ್ಲಿ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ವಿವಾಹವಾಗಿದ್ದರು. ನವೆಂಬರ್‌ನಲ್ಲಿ ತಮ್ಮ 73ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ ಈ ದಂಪತಿಗಳು ಹೆಚ್ಚಾಗಿ ಲಂಡನ್‌ನ ಪಶ್ಚಿಮದಲ್ಲಿರುವ ವಿಂಡ್ಸರ್ ಕ್ಯಾಸ್ಟಲ್‌ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕೊರೊನಾ ಆತಂಕದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಇದನ್ನೂ ಓದಿ: ರಸಗೊಬ್ಬರ ಬೆಲೆ ಏರಿಕೆ ಪ್ರಶ್ನಿಸದ ರಾಜ್ಯ ಸರ್ಕಾರ, ಬಿಜೆಪಿ ಸಂಸದರು ಹೇಡಿಗಳು- ಸಿದ್ದರಾಮಯ್ಯ


