Homeಮುಖಪುಟಸಂವಿಧಾನದ ನಿಜ ಆಶಯಗಳನ್ನು ಎತ್ತಿಹಿಡಿದ ಗರ್ಭಪಾತ ಹಕ್ಕಿನ ತೀರ್ಪು

ಸಂವಿಧಾನದ ನಿಜ ಆಶಯಗಳನ್ನು ಎತ್ತಿಹಿಡಿದ ಗರ್ಭಪಾತ ಹಕ್ಕಿನ ತೀರ್ಪು

- Advertisement -
- Advertisement -

ಇತ್ತೀಚೆಗೆ ಬಂದ ಸುಪ್ರೀಂಕೋರ್ಟಿನ ಗರ್ಭಪಾತದ ಬಗೆಗಿನ ತೀರ್ಪು ಬದಲಾಗುತ್ತಿರುವ ಸಮಯದ ಅಗತ್ಯ ಹಾಗೂ ಧೋರಣೆ ಹೇಗಿರಬೇಕು ಎಂಬುದನ್ನು ಎತ್ತಿ ತೋರಿಸುತ್ತದೆ.

ಭಾರತದಲ್ಲಿ ಕಾನೂನುಬದ್ಧವಾದ ಗರ್ಭಪಾತದ ಅವಕಾಶ 1971ರಿಂದಲೇ ಇತ್ತು. ಆದರೆ ಪಿತೃಪ್ರಧಾನ ವ್ಯವಸ್ಥೆಯ ಅಡಿಯಲ್ಲಿ ಹೆಣ್ಣು ಮಗುವಿನ ಹುಟ್ಟು ಎಂಬುದೇ ಒಂದು ಶಾಪದಂತೆ ನೋಡುವ ಜನರು ಲಕ್ಷಾಂತರ ಸಂಖ್ಯೆಯಲ್ಲಿ ಕಾನೂನುಬಾಹಿರವಾಗಿ ಹೆಣ್ಣು ಭ್ರೂಣಹತ್ಯೆ ಮಾಡುತ್ತ ಜನಸಂಖ್ಯಾ ಅನುಪಾತದಲ್ಲಿ ಏರುಪೇರುಗಳಾದುದರಿಂದ ಸಮಸ್ಯೆಗಳು ತಲೆದೋರಿದವು. ಅದನ್ನು ನಿಯಂತ್ರಿಸಲು ಅನೇಕ ನೀತಿ ನಿಯಮಗಳು ಜಾರಿಗೆ ಬಂದು ಗರ್ಭಪಾತ ಅನೇಕ ಅಂಕುಶಗಳಿಗೆ ಒಳಪಟ್ಟಿತ್ತು. ಭಾರತದಲ್ಲಷ್ಟೇ ಅಲ್ಲ ಪ್ರಪಂಚದಾದ್ಯಂತ ಗರ್ಭಧಾರಣೆಯ ಸುತ್ತು ನಿರಂತರ ಚರ್ಚೆಗಳನ್ನು ಕೇಳುತ್ತಲೇ ಇರುತ್ತೇವೆ. ಇತ್ತೀಚೆಗೆ ಅಮೆರಿಕದ ಸುಪ್ರೀಂಕೋರ್ಟ್ ಗರ್ಭಪಾತವನ್ನು ಕಾನೂನುಬಾಹಿರ ಎಂದು ತೀರ್ಪುನೀಡಿ ಅಲ್ಲಿನ ಸೂಕ್ಷ್ಮ ಮತ್ತು ಸಂವೇದನಾಶೀಲ ಜನರ ವಿಮರ್ಶೆಗೆ ಗುರಿಯಾಗಿದೆ. ದೇಶ ಯಾವುದಾದರೇನು, ಪ್ರಜಾತಂತ್ರ ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿದ್ದರೇನು, ಅಲ್ಲಿ ಕೊನೆಗೆ ನಡೆಯುವುದು ಪುರುಷಪ್ರಧಾನ ಮನಸ್ಥಿತಿಗಳ ಆಡಳಿತವೇ ಎಂಬುದನ್ನು ಅದು ತೋರಿಸಿಕೊಟ್ಟಿತ್ತು.

ಅತ್ಯಂತ ಮುಂದುವರಿದ ದೇಶ ಎನ್ನುತ್ತಲೇ ಅಮೆರಿಕದ ಸುಪ್ರೀಂಕೋರ್ಟ್ ಅತ್ಯಂತ ಪುರೋಗಾಮಿ ನಡೆಗೆ ತೀರ್ಪಿತ್ತಾಗ, ಕೆಲವರಿಗೆ ಅದು ಆಶ್ಚರ್ಯವೆನಿಸಿತಾದರೂ, ಈ ಮನಸ್ಥಿತಿ ಅಲ್ಲಿನ ಬಲಪಂಥೀಯರಲ್ಲಿ ಎಂದಿನಿಂದಲೂ ಇದೆ ಎಂಬುದು ಸತ್ಯ. ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದಾಗಲೇ ಗರ್ಭಪಾತ ಕಾನೂನು ತೆಗೆದುಹಾಕುವ ಆಶ್ವಾಸನೆ ನೀಡಿದ್ದರು ಮತ್ತು ಅದಕ್ಕೆ ಪೂರಕವಾಗಿ ಸುಪ್ರೀಂಕೋರ್ಟಿಗೆ ಮೂರು ನ್ಯಾಯಮೂರ್ತಿಗಳನ್ನು ನೇಮಕ ಮಾಡಿದ್ದರು. ಇಂಥ ಹಿನ್ನೆಲೆಯಲ್ಲಿ ಭಾರತದ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸಂವಿಧಾನದ ಆಶಯಗಳನ್ನು ನಿಜವಾದ ಅರ್ಥದಲ್ಲಿ ಎತ್ತಿಹಿಡಿದಿದೆ ಎನ್ನಬಹುದು.

ಜಸ್ಟಿಸ್ ಎನ್.ವೈ ಚಂದ್ರಚೂಡ್, ಜಸ್ಟಿಸ್ ಎ.ಎಸ್ ಬೋಪಣ್ಣ ಹಾಗೂ ಪರ್ಡಿವಾಲ ಅವರ ವಿಭಾಗೀಯ ಪೀಠ 1971ರ ಕಾಯ್ದೆಗೆ ಮಹತ್ವದ ಬದಲಾವಣೆಗಳನ್ನು ಮಾಡುತ್ತ ಸಂವಿಧಾನದ 14 ಮತ್ತು 21ನೇ ಪರಿಚ್ಛೇದದ ಅಡಿಯಲ್ಲಿ ಹೆಣ್ಣಿಗೆ ಅವಳ ದೇಹದ ಮೇಲೆ ಸಂಪೂರ್ಣವಾದ ಹಕ್ಕನ್ನು ನೀಡಿ ಅವಳ ಇಚ್ಛೆ ಮತ್ತು ವ್ಯಕ್ತಿತ್ವಕ್ಕೆ ಸಂಪೂರ್ಣ ಮನ್ನಣೆಯನ್ನು ನೀಡಿದ್ದಾರೆ.

ಪ್ರಮುಖ ಅಂಶಗಳು

1. ಅವಿವಾಹಿತ ಮಹಿಳೆಗೂ ಗರ್ಭಪಾತದ ಹಕ್ಕು ಇಲ್ಲಿಯವರೆಗೂ ಗರ್ಭಪಾತ ಎಂಬುದು ಕೇವಲ ವಿವಾಹಿತ ಸ್ತ್ರೀಯರಿಗೆ ಮಾತ್ರ ನೀಡಲಾಗಿದ್ದ ಹಕ್ಕಾಗಿತ್ತು. ಈ ತೀರ್ಪಿನಲ್ಲಿ ನ್ಯಾಯಮೂರ್ತಿಗಳು, “ವಿವಾಹಿತ ಮತ್ತು ಅವಿವಾಹಿತ ಎಂಬ ವ್ಯತ್ಯಾಸ ಕೃತಕವಾದದ್ದು ಮತ್ತು ಸಂವಿಧಾನ ವಿರೋಧಿಯಾದದ್ದು; ಹಾಗೆ ಮಾಡುವುದರಿಂದ ಅವರ ದೇಹದ ಸ್ವಾಯತ್ತತೆಯ ಮೇಲಷ್ಟೇ ಅಲ್ಲದೆ ಅವರ ಮುಂದಿನ ಬದುಕನ್ನೂ ಇದು ದುರ್ಬಲಗೊಳಿಸುತ್ತದೆ” ಎಂದು ಹೇಳಿದ್ದಾರೆ. ಎಲ್ಲಿಯೂ ಮಹಿಳೆಯ ಗಂಡ ಎಂಬ ಪದವನ್ನು ಬಳಸದೆ ಜೊತೆಗಾರ (Partner) ಎಂದು ಹೇಳುತ್ತಾರೆ. ಕಾನೂನು ಎಂಬುದು ನಿಂತ ನೀರಲ್ಲ ಅದು ನಿರಂತರವಾಗಿ ಬದಲಾಗುತ್ತಿರುವ ಕಾಲಕ್ಕೆ ಸ್ಪಂದಿಸುವಂತೆ ಇರಬೇಕು ಎನ್ನುತ್ತಾರೆ. ಗಂಡ ಮತ್ತು ಹೆಂಡತಿ ಎಂಬ ಸಂಬಂಧಗಳ ಜೊತೆಗೇ ಲಿವ್‌ಇನ್ ಜೋಡಿಗಳ ಹಕ್ಕನ್ನು ಎತ್ತಿಹಿಡಿದಿದ್ದಾರೆ.

2. ಅನೈಚ್ಛಿಕವಾದ ಅಥವಾ ಬೇರೆ ಕಾರಣಗಳಿಂದ ಬೇಡವಾದ ಗರ್ಭವನ್ನು ತೆಗೆಸುವ ಅವಧಿಯನ್ನು 24 ವಾರಕ್ಕೆ ಏರಿಸುವ ಮೂಲಕ ಜೊತೆಗಾರರಿಗೆ ಅಥವಾ ಮಹಿಳೆಗೆ ತೀರ್ಮಾನ ತೆಗೆದುಕೊಳ್ಳಲು ಹೆಚ್ಚಿನ ಸಮಯಾವಕಾಶವನ್ನು ನೀಡಲಾಗಿದೆ.

3. ಅತ್ಯಾಚಾರ ಎಂಬ ಪದವನ್ನು ವೈವಾಹಿಕ ಸಂಬಂಧಕ್ಕೂ ವಿಸ್ತರಿಸುವ ಮೂಲಕ ವೈವಾಹಿಕ ಅತ್ಯಾಚಾರದಿಂದ ಗರ್ಭಧರಿಸಿದ ಹೆಣ್ಣು ಮಕ್ಕಳೂ ಗರ್ಭಪಾತ ಮಾಡಿಸಲು ಅವಕಾಶ ನೀಡಲಾಗಿದೆ.

ವಿವಾಹ ಎಂಬುದನ್ನು ಅತ್ಯಾಚಾರದ ಪರಿಧಿಯಿಂದ ದೂರ ಇಟ್ಟಿರುವ ಸರ್ಕಾರಗಳು ಇಲ್ಲಿಯವರೆಗೂ ವೈವಾಹಿತ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಿಲ್ಲ; ಹಾಗೆ ಮಾಡುವುದರಿಂದ ಕುಟುಂಬ ವ್ಯವಸ್ಥೆಯೇ ಕುಸಿದುಬೀಳುತ್ತದೆ ಎಂಬ ವಾದ ಮುಂದಿಟ್ಟು, ಒಲ್ಲದ ಮದುವೆಯಲ್ಲಿ ಹೆಣ್ಣು ಬಲವಂತದಿಂದ ಎಲ್ಲವನ್ನೂ ಸಹಿಸಿಕೊಳ್ಳುವಂತೆ ಮಾಡಲಾಗಿದೆ. ಆದರೆ ಈ ಬದಲಾದ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಒಲ್ಲದ ಸಂಭೋಗದಿಂದ ಧರಿಸಿದ ಗರ್ಭವನ್ನು ತೆಗೆಸುವ ಹಕ್ಕು ಮಹಿಳೆಗೆ ಇದೆ ಹಾಗೂ ಅವಳ ದೇಹ ಅವಳ ಸ್ವಾಯತ್ತತೆ; ಅದನ್ನು ಪುರುಷ ಪ್ರಧಾನ ವ್ಯವಸ್ಥೆಯ ದೃಷ್ಟಿಕೋನದಿಂದ ನೋಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿಸುಪ್ರೀಂಕೋರ್ಟ್: ಬದಲಾವಣೆಯ ಗಾಳಿ ಜಸ್ಟಿಸ್ ಯು.ಯು ಲಲಿತ್

4. ಸಂತಾನೋತ್ಪತ್ತಿಯ ಹಕ್ಕುಗಳು ಎಂಬುದನ್ನು ವಿವರಿಸುತ್ತ ನ್ಯಾಯಮೂರ್ತಿಗಳು, ಇದು ಕೇವಲ ಮಕ್ಕಳನ್ನು ಹೆರುವುದಕ್ಕಷ್ಟೇ ಅಲ್ಲದೆ, ಸಂತಾನ ನಿಯಂತ್ರಣ ಪ್ರಕ್ರಿಯೆಗಳು ಮತ್ತು ಸೌಲಭ್ಯಗಳ ಬಗೆಗೆ ಸರಿಯಾದ ಮಾಹಿತಿ ಮತ್ತು ಜ್ಞಾನ ಹೊಂದುವುದೂ ಆಗಿದೆ ಎಂದು ಹೇಳುತ್ತಾರೆ. ಯಾವಾಗ ಮಕ್ಕಳನ್ನು ಹೆರಬೇಕು, ಎಷ್ಟು ಮಕ್ಕಳನ್ನು ಹೆರಬೇಕು ಎಂಬ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲೂ ಹೆಣ್ಣು ಸಂಪೂರ್ಣವಾಗಿ ಸ್ವತಂತ್ರಳು ಎಂದು ಹೇಳುವ ಮೂಲಕ ಹೆಣ್ಣಿನ ಹಕ್ಕನ್ನು ಗಂಡಿಗೆ ಸರಿಸಮನಾಗಿ ಗುರ್ತಿಸಿದ್ದಾರೆ.

ನ್ಯಾಯಮೂರ್ತಿಗಳು ನೀಡಿದ ತೀರ್ಪು ಅತ್ಯಂತ ಸಂವೇದನಾಶೀಲವಾಗಿರುವುದರೆ ಜೊತೆಗೇ ಸಮಾನತೆ ಎಂಬ ಹಕ್ಕಿನ ನಿಜವಾದ ವ್ಯಾಖ್ಯಾನವಾಗಿದೆ. ದೇಶದೆಲ್ಲೆಡೆ ಬಹುತೇಕ ಎಲ್ಲರೂ ಈ ತೀರ್ಪಿಗೆ ಸಮ್ಮತಿ ಸಹಮತವನ್ನೇ ಸೂಚಿಸಿದ್ದರೂ ಸಹಿತ ಕೆಲವರು ತಮ್ಮ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ಈ ಆತಂಕಗಳು ನಿರಾಧಾರವಾದದ್ದು ಅಲ್ಲವಾದರೂ ಅವಕ್ಕೆ ಕೋರ್ಟು ಗಮನದಲ್ಲಿಟ್ಟುಕೊಂಡೇ ತೀರ್ಪು ನೀಡಿದೆ.

ಆತಂಕಗಳು

1. ಭಾರತದಲ್ಲಿ ವೈವಾಹಿತ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಿಲ್ಲ. ಹಾಗಾದರೆ ಅಂತ ಸಂದರ್ಭದಲ್ಲಿ ಇದನ್ನು ಹೇಗೆ ಅರ್ಥೈಸುವುದು.

ಈಗಾಗಲೇ ಹೇಳಿದಂತೆ ನ್ಯಾಯಮೂರ್ತಿಗಳು ಹೆಣ್ಣಿನ ಸಮಾನತೆಯ ಹಕ್ಕು ಮತ್ತು ಅವಳಿಗೆ ತನ್ನ ದೇಹದ ಮೇಲಿನ ಸ್ವಾಯತ್ತತೆಯ ಹಕ್ಕನ್ನು ಎತ್ತಿ ಹಿಡಿದಾಗ ಇಲ್ಲಿ ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳು ಮುಖ್ಯವಾಗುತ್ತವೆ ಹೊರತು ಇತರ ಕಾನೂನುಗಳಲ್ಲ. ಏಕೆಂದರೆ ನಿಸ್ಸಂಶಯವಾಗಿ ಸಂವಿಧಾನ ಎಲ್ಲಾ ಕಾನೂನಗಳಿಗೂ ಮೂಲ.

2. ಒಲ್ಲದ ಗರ್ಭಧಾರಣೆ ಎಂಬ ಕಾರಣಕ್ಕೆ ಹೆಣ್ಣು ಭ್ರೂಣಹತ್ಯೆ ಹೆಚ್ಚಾಗಬಹುದು. ಅದರಿಂದ ಸಮಾಜದ ಸಮತೋಲನ ಕೆಡಬಹುದು ಎಂಬುದು.

ಡೊನಾಲ್ಡ್ ಟ್ರಂಪ್

ತೀರ್ಪು ನೀಡುವ ಸಂದರ್ಭದಲ್ಲಿ ಇದನ್ನು ವಿವರಿಸುತ್ತ ಭ್ರೂಣಲಿಂಗ ಪತ್ತೆ ಹಚ್ಚುವ ಕಾಯ್ದೆಯನ್ನು ಹೇಗೆ ಬಲಪಡಿಸಬೇಕು ಎಂಬ ಬಗ್ಗೆಯೂ ಹೇಳಲಾಗಿದೆ. ಏಕೆಂದರೆ ಭ್ರೂಣದ ಲಿಂಗ ಪತ್ತೆ ಆಗದೆ ಹೆಣ್ಣು ಮಗು ಎಂಬ ಕಾರಣಕ್ಕೆ ಗರ್ಭಪಾತ ಮಾಡಿಸುವುದು ಅಸಾಧ್ಯ ಅದಕ್ಕೆಂದೇ ಬಲವಾದ ಕಾನೂನುಗಳನ್ನು ರಚಿಸುವ ಮೂಲಕ ಇಂತಹ ದುರುಪಯೋಗ ತಡೆಯುತ್ತೇವೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

3. 24 ವಾರಗಳು ಎಂಬುದು ಸ್ವಲ್ಪ ಮುಂದುವರಿದ ಗರ್ಭವಾದ್ದರಿಂದ ಅಂಥ ಸಂದರ್ಭದಲ್ಲಿ ಗರ್ಭಪಾತ ಮಾಡಿಸಲು ಹೋಗಿ ಗರ್ಭಿಣಿಯರಿಗೆ ಅಪಾಯವಾಗುವ ಸಂಭವವಿದೆ.

24 ವಾರ ಎಂಬುದು 6ನೇ ತಿಂಗಳ ಗರ್ಭ; ಹಾಗಾಗಿ ಸುರ್ಪೀಂಕೋರ್ಟ್ ಎಲ್ಲಾ ಬಗೆಯ ಸುರಕ್ಷತಾ ಕ್ರಮಗಳನ್ನು ವಿವರಿಸುತ್ತಲೇ ಇದಕ್ಕೆ ಅನುಮತಿ ನೀಡಿದೆ. ಗರ್ಭದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳು ಕೆಲವೊಮ್ಮೆ ಗರ್ಭಧಾರಣೆಯ ಪ್ರಾರಂಭಿಕ ತಿಂಗಳುಗಳಲ್ಲಿ ಪತ್ತೆಯಾಗುವುದಿಲ್ಲ ಅಥವಾ ಗರ್ಭಿಣಿ ಇರುವ ಸ್ಥಳದಲ್ಲಿ ಅಂತಹ ಪರೀಕ್ಷೆಗಳಿಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಸ್ವಲ್ಪ ತಡವಾದರೂ ಸಹಿತ ಸುರಕ್ಷಿತವಾದ ಪ್ರಕ್ರಿಯೆಗಳ ಮೂಲಕ ಗರ್ಭಪಾತ ಮಾಡುವುದರಿಂದ ಒಂದು ಮಗು ವಿಕಲಚೇತನವಾಗಿ ಜೀವನಪರ್ಯಂತ ನರಳುವುದನ್ನು ತಡೆಯಬಹುದು.

ಇದನ್ನೂ ಓದಿಗರ್ಭಪಾತಕ್ಕೆ ವಿವಾಹಿತ ಮತ್ತು ಅವಿವಾಹಿತ ಮಹಿಳೆ ಎಂಬ ಬೇಧವಿರಬಾರದು: ಸುಪ್ರೀಂ

ಇಲ್ಲಿಯವರೆಗೂ ಚಾಲ್ತಿಯಲ್ಲಿದ್ದ ಕಾಯ್ದೆಯ ಪ್ರಕಾರ ಗರ್ಭಪಾತ ಕಾನೂನಿನಲ್ಲಿ ಹೇಳಲಾದ ಕಾರಣಗಳ ಪ್ರಕಾರವೇ ಗರ್ಭಪಾತ ಮಾಡಲಾಗುತ್ತಿದೆ ಎಂಬುದನ್ನು ಹೆಣ್ಣುಮಗಳೇ ಸಾಬೀತುಪಡಿಸಬೇಕಾಗಿತ್ತು. ಸ್ವಲ್ಪ ಹೆಚ್ಚುಕಮ್ಮಿ ಆದರೂ ಅದನ್ನು ಅಪರಾಧವೆಂದು ಪರಿಗಣಿಸುವ ಸಾಧ್ಯತೆಯಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ನೇರ ಮತ್ತು ಪರೋಕ್ಷವಾದ ಅನೇಕ ನಿಯಮಗಳು ತೊಡಕಾಗಿದ್ದವು. ಇಂಥ ತೊಡಕುಗಳಿಂದ ತಪ್ಪಿಸಿಕೊಳ್ಳಲು ಜನರು ಕಾನೂನುಬಾಹಿರವಾಗಿ ನಡೆಯುತ್ತಿರುವ ಸಾವಿರಾರು ಗರ್ಭಪಾತ ಕೇಂದ್ರಗಳಿಗೆ ಹೋಗಿ ಅಲ್ಲಿನ ಅಸುರಕ್ಷಿತ ವಾತಾವರಣದಲ್ಲಿ ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಬೇಕಾದಷ್ಟಿವೆ.

ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಯಾವ ದೇಶಗಳಲ್ಲಿ ಗರ್ಭಪಾತಕ್ಕೆ ಕಾನೂನಿನ ಸಹಮತ ಮತ್ತು ರಕ್ಷಣೆ ಇದೆಯೋ ಅಲ್ಲಿ ಗರ್ಭಪಾತದ ಸಮಯದಲ್ಲಿ ಅಸುರಕ್ಷಿತ ಕ್ರಮಗಳಿಂದ ಪ್ರಾಣ ಕಳೆದುಕೊಳ್ಳುವ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇದೆ. ಈ ಸಮೀಕ್ಷೆ ಪ್ರಕಾರ ಕೆನಡಾದಲ್ಲಿ ಗರ್ಭಪಾತದ ಸಮಯದಲ್ಲಿ ಸಾವಿನ ಸಂಖ್ಯೆ ಶೂನ್ಯ. ಸುಪೀಂ ಕೋರ್ಟಿನ ಈ ಸುರಕ್ಷಿತ ಗರ್ಭಪಾತ ಕಾನೂನಿನ ಜೊತೆಗೆ ಭ್ರೂಣಲಿಂಗ ಪತ್ತೆ ಸಂಪೂರ್ಣವಾಗಿ ನಿಂತರೆ ಬಹುಶಃ ನಮ್ಮ ದೇಶದ ಹೆಣ್ಣುಮಕ್ಕಳ ಸುರಕ್ಷತೆ ಸಾಧಿಸಬಹುದು.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...