ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಕಾನ್ಪುರದ 38 ವರ್ಷದ ಪ್ರಾಪರ್ಟಿ ಡೀಲರ್ ಮಂಗಳವಾರ ಮುಂಜಾನೆ ಗೋರಖ್‌ಪುರದ ಹೋಟೆಲ್ ಕೋಣೆಯಲ್ಲಿ ಮೃತಪಟ್ಟಿದ್ದಾರೆ. ಹೋಟೆಲ್‌ನಲ್ಲಿ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಉದ್ಯಮಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಇಂದು ಬೆಳಿಗ್ಗೆ ಟ್ವೀಟ್ ಮಾಡಿದ ಗೋರಖ್‌ಪುರ ಪೊಲೀಸರು, ಉದ್ಯಮಿ ಸಾವು ಪ್ರಕರಣದಲ್ಲಿ ಆರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಅಮಾನತುಗೊಂಡ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ರಾಮಘಡಲ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಸೇರಿದಂತೆ ಅಮಾನತುಗೊಂಡ ಆರು ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ದೇಶನದಂತೆ ಉದ್ಯಮಿ ಕುಟುಂಬಕ್ಕೆ 10 ರೂಪಾಯಿ ಲಕ್ಷ ಪರಿಹಾರ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಮೋದಿ ಕೊನೆಯ ಭರವಸೆಯೆಂದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿಲ್ಲ, ಇದು ಎಡಿಟ್ ಫೋಟೊ
ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶದ ಕಾನ್ಪುರದ ನಿವಾಸಿ ಮನೀಶ್ ಕುಮಾರ್ ಗುಪ್ತಾ ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯರಾತ್ರಿ ನಡೆದ ದಾಳಿಯ ಸಮಯದಲ್ಲಿ ಆತ ಮತ್ತು ಬೇರೆ ನಗರಗಳ ಇಬ್ಬರು ವ್ಯಕ್ತಿಗಳು ಹೋಟೆಲ್ ಕೊಠಡಿಯಲ್ಲಿದ್ದರು. ವ್ಯಾಪಾರ, ವ್ಯವಹಾರದ ಸಂಬಂಧ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಗೋರಖ್‌ಪುರಕ್ಕೆ ಬಂದಿದ್ದರು ಎಂದು ಮೃತ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ಇದನ್ನು “ಎನ್ಕೌಂಟರ್ ಸಂಸ್ಕೃತಿ”, ರಾಜ್ಯದಲ್ಲಿ ಬಿಜೆಪಿ ಆರಂಭಿಸಿದ ಅಭ್ಯಾಸ ಎಂದು ಆರೋಪಿಸಿದ್ದಾರೆ.
गोरखपुर में पुलिस की बर्बरता ने एक युवा व्यापारी की जान ले ली। ये बहुत ही दुखद और निंदनीय है।
उप्र की भाजपा सरकार ने एनकाउंटर की जिस हिंसक संस्कृति को जन्म दिया है, ये उसी का दुष्परिणाम है।
संलिप्त लोगों पर हत्या का मुक़दमा चले और उप्र को हिंसा में धकेलनेवाले इस्तीफ़ा दें। pic.twitter.com/luhjqRTIar
— Akhilesh Yadav (@yadavakhilesh) September 28, 2021
“ನಾವು ಮೂವರು ನಮ್ಮ ಕೋಣೆಯಲ್ಲಿ ಮಲಗಿದ್ದೆವು. ಸುಮಾರು 12: 30 ರ ಸುಮಾರಿಗೆ ಡೋರ್‌ಬೆಲ್ ಬಾರಿಸಿತು. ನಾನು ಬಾಗಿಲು ತೆರೆದೆ ಅಲ್ಲಿ 5 ರಿಂದ 7 ಪೊಲೀಸರು ಮತ್ತು ರಿಸೆಪ್ಶನ್ ಹುಡುಗ ನಿಂತಿದ್ದರು. ಅವರು ಕೋಣೆಯ ಒಳಗೆ ಬಂದು ನಮ್ಮ ಐಡಿಗಳನ್ನು ಕೇಳಲು ಪ್ರಾರಂಭಿಸಿದರು. ನಾನು ನನ್ನ ಐಡಿಯನ್ನು ತೋರಿಸಿ ನಂತರ ಮನೀಶ್‌ನನ್ನು ಎಬ್ಬಿಸಿದೆ. ಈ ಸಮಯದಲ್ಲಿ ಯಾಕೆ ತೊಂದರೆ ನೀಡುತ್ತಿದ್ದೀರಿ ಎಂದು ಪೊಲೀಸರನ್ನು ಕೇಳಿದರು. ನಂತರ ಪೊಲೀಸರು ನಮ್ಮನ್ನು ಬೆದರಿಸಲು ಆರಂಭಿಸಿದರು”ಎಂದು ಹೋಟೆಲ್ ಕೊಠಡಿಯೊಳಗೆ ಇದ್ದ ಹರ್ವೀರ್ ಸಿಂಗ್ ಹೇಳಿದ್ದಾರೆ.
“ಪೊಲೀಸರು ಕುಡಿದಂತೆ ಕಾಣಿಸುತ್ತಿದ್ದರು. ನನಗೆ ಒಬ್ಬ ಪೊಲೀಸ್ ಹೊಡೆದರು. ಕೆಲವು ಪೊಲೀಸರ ಬಳಿ ಬಂದೂಕು ಇತ್ತು. ನಂತರ ಪೊಲೀಸರು ನನ್ನನ್ನು ಹೊರಗೆ ಕರೆದೊಯ್ದರು. ಸ್ವಲ್ಪ ಸಮಯದ ನಂತರ, ಮನೀಶ್‌ನನ್ನು ಕೋಣೆಯಿಂದ ಹೊರಗೆ ಎಳೆದುಕೊಂಡು ಹೋಗುವುದನ್ನು ನಾನು ನೋಡಿದೆ. ಆಗ ಆತನ ಮುಖದ ತುಂಬಾ ರಕ್ತವಿತ್ತು” ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಹೇಳಿಕೆ ನೀಡಿರುವ ಗೋರಖ್‌ಪುರ್ ಎಸ್‌ಪಿ ವಿಪಿನ್ ತಡಾ, “ವಿಧ ನಗರಗಳಿಂದ ಬಂದಿದ್ದ ಮೂವರು ಶಂಕಿತ ಯುವಕರ ತಪಾಸಣೆಯ ಸಮಯದಲ್ಲಿ, ರಾಮಗಡ್ತಾಲ್ ಪೊಲೀಸ್ ಠಾಣೆಯ ಪೊಲೀಸರು ಹೋಟೆಲ್‌ಗೆ ತೆರಳಿದ್ದಾರೆ. ಈ ವೇಳೆ ಪೊಲೀಸರನ್ನು ನೋಡಿ ಗಾಬರಿಯಿಂದ, ಕೊಠಡಿಯಲ್ಲಿದ್ದ ಒಬ್ಬ ವ್ಯಕ್ತಿ ಬಿದ್ದು ಗಾಯಗೊಂಡಿದ್ದಾರೆ. ನಮ್ಮ ಪೊಲೀಸರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬಿಆರ್‌ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಮೃತಪಟ್ಟಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ: ಗಾಂಧಿ ಕುಟುಂಬ ಸಿಂಗ್ ಅವರಿಗೆ ಅಗೌರವ ತೋರಿಸಿತ್ತೆ? ಹಳೆಯ ಪೋಟೋಗಳ ಅಸಲಿ ಕಥೆಯೇನು?


