ರಾಮಾಯಣ ಟಿವಿ ಸರಣಿಯಲ್ಲಿ ರಾಮ ಪಾತ್ರದಲ್ಲಿ ಹೆಸರುವಾಸಿಯಾಗಿದ್ದ ನಟ ಅರುಣ್ ಗೋವಿಲ್ ಗುರುವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ್ದಾರೆ. ಹಿರಿಯ ನಟ ಅರುಣ್ ಗೋವಿಲ್ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ತಮಿಳುನಾಡು, ಕೇರಳ, ಅಸ್ಸಾಂ ,ಪಶ್ಚಿಮ ಬಂಗಾಳದ ನಾಲ್ಕು ವಿಧಾನಸಭಾ ಚುನಾವಣೆ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಚುನಾವಣೆಗೆ ಕೆಲವು ದಿನಗಳು ಇರುವಾಗ ಇವರ ಪಕ್ಷ ಸೇರ್ಪಡೆ ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಮೀರತ್ ಪಟ್ಟಣದಲ್ಲಿ ಬೆಳೆದ ನಟ ಗೋವಿಲ್ ಸಹರಾನ್ಪುರ್ ಮತ್ತು ಶಹಜಹಾನ್‌ಪುರದ ಶಾಲೆಗಳಲ್ಲಿ ಅಧ್ಯಯನ ಮಾಡಿದ್ದಾರೆ. ರಾಮಾಯಣದ ರಾಮ ಪಾತ್ರವನ್ನು ನಿರ್ವಹಿಸುವ ಮೊದಲು, ಅರುಣ್ ಗೋವಿಲ್ ತಮ್ಮ ಮೊದಲ ಚಿತ್ರ ಪಹೇಲಿ (1977) ಮೂಲಕ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷಿಸಿದ್ದರು.
ಇದನ್ನೂ ಓದಿ: ಚುನಾವಣೆಯಿಂದ ಹಿಂದೆ ಸರಿಯದ ಅಭ್ಯರ್ಥಿಯ ಮಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ದುಷ್ಕರ್ಮಿಗಳು
ವರದಿಗಳ ಪ್ರಕಾರ, ರಾಮಾಯಣವು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಐತಿಹಾಸಿಕ ವೀಕ್ಷಕರ ಕಾರಣದಿಂದಾಗಿ ಒಂದು ಸ್ಥಾನವನ್ನು ಕಂಡುಕೊಂಡಿದೆ. ಈ ಪ್ರದರ್ಶನವು 2003 ರವರೆಗೆ ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಪೌರಾಣಿಕ ಟಿವಿ ಸರಣಿಯ ದಾಖಲೆಯನ್ನು ಹೊಂದಿದೆ.
ವರದಿಗಳ ಪ್ರಕಾರ, ರಾಮಾಯಣವು ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಐತಿಹಾಸಿಕ ವೀಕ್ಷಕರ ಕಾರಣದಿಂದಾಗಿ ಸ್ಥಾನ ಪಡದುಕೊಂಡಿದೆ. ಈ ರಾಮಾಯಣ ಧಾರಾವಾಹಿ 2003 ರವರೆಗೆ ವಿಶ್ವದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಪೌರಾಣಿಕ ಟಿವಿ ಸರಣಿಯ ದಾಖಲೆಯನ್ನು ಹೊಂದಿದೆ.
ರಾಮಾಯಣದ ನಂತರ, ಗೋವಿಲ್ ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಹಲವಾರು ಭೋಜ್‌ಪುರಿ, ಬ್ರಜ್ ಭಾಷಾ, ಒಡಿಯಾ ಮತ್ತು ತೆಲುಗು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಮಹಾಭಾರತ ಧಾರಾವಾಹಿಯ ದ್ರೌಪದಿ ಪಾತ್ರದಲ್ಲಿ ನಟಿಸಿದ್ದ ನಟಿ ರೂಪಾ ಗಂಗೂಲಿ ಬಿಜೆಪಿ ಸೇರಿ, ಪಶ್ಚಿಮ ಬಂಗಾಳದ ಸ್ಟಾರ್ ಪ್ರಚಾರಕರಾಗಿದ್ದಾರೆ.
ಇದನ್ನೂ ಓದಿ: ಶಬರಿಮಲೆ ಕುರಿತು ಸುಪ್ರೀಂಕೋರ್ಟ್ ಅಂತಿಮ ತೀರ್ಪಿನ ನಂತರ ತೀರ್ಮಾನ: ಪಿಣರಾಯಿ ವಿಜಯನ್


