Homeಕರ್ನಾಟಕಪಠ್ಯ ಪರಿಷ್ಕರಣೆ; ಕವಿಶೈಲದ ಜಾಥಾ ಪಡೆಯಬೇಕಿದೆ ಗೋಕಾಕ್ ಚಳವಳಿಯ ತೀವ್ರತೆ

ಪಠ್ಯ ಪರಿಷ್ಕರಣೆ; ಕವಿಶೈಲದ ಜಾಥಾ ಪಡೆಯಬೇಕಿದೆ ಗೋಕಾಕ್ ಚಳವಳಿಯ ತೀವ್ರತೆ

- Advertisement -
- Advertisement -

ರೋಹಿತ್ ಚಕ್ರತೀರ್ಥ ನಾಡಗೀತೆಗೆ ಮಾಡಿದ ಅವಮಾನ ರಸಋಷಿ ಕವಿ ಕುವೆಂಪುರವರಿಗೆ ಮಾಡಿದ ಅವಮಾನವಾಗಿ ಕಂಡ ಕೂಡಲೇ ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ್ ಕವಿಶೈಲದಿಂದ ತೀರ್ಥಹಳ್ಳಿಗೆ ಪ್ರತಿಭಟನಾ
ಜಾಥಾವನ್ನು ಘೋಷಿಸಿದರು. ಜೊತೆಗೆ, ಹಿಂದಿನ ಸರಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಅವರಿಗೆ ಪಠ್ಯ ಪುಸ್ತಕ ಪರಿಷ್ಕರಣೆಯು ಒಂದು ಹಗರಣವಾಗಿ ಕಂಡಿತ್ತು. ಮೊದಲು ಅದರ ಕೂಲಂಕುಷ ಅಧ್ಯಯನ ಮಾಡಿದರು. ಸರಕಾರ ಮಾಡಿರುವ ನಯವಂಚನೆಯ ಕೆಲಸಗಳು ಮತ್ತು ಎಡವಟ್ಟುಗಳನ್ನು ಜನರಿಗೆ ಹೇಳುತ್ತಾ ಬಂದರು. ಇನ್ನೊಂದು ಮುಖ್ಯವಾದ ವಿಷಯವೆಂದರೆ ಕಿಮ್ಮನೆ ರತ್ನಾಕರ್ ಕೇವಲ ರಾಜಕಾರಣಿಯಾಗಿರದೆ ಗಂಭೀರ ಅಧ್ಯಯನಶೀಲ ವಿದ್ವಾಂಸರು. ಅವರು ಕರ್ನಾಟಕ ಸರಕಾರ ಈವರೆಗೆ ಮಂಡಿಸಿರುವ ಎಲ್ಲಾ ಬಜೆಟ್‌ಗಳ ಒಳಹೊರಗಗಳನ್ನು ಅಧ್ಯಯನ ಮಾಡಿರುವ ರಾಜಕಾರಣಿ. ಅವರು ಸಾರ್ವಜನಿಕರಿಗೆ ವಿಧಾನಸೌಧದ ಲೈಬ್ರರಿಯಲ್ಲಿ ಸಿಗುತ್ತಿದ್ದುದೇ ಹೆಚ್ಚು. ಮತ್ತೊಂದು ವಿಶೇಷವೆಂದರೆ ಅವರು ಕೋಣಂದೂರು ಲಿಂಗಪ್ಪನವರು ಶಾಸಕರಾಗಿದ್ದ ಅವಧಿಯಲ್ಲಿ ಅವರ ಸಹಾಯಕರಾಗಿದ್ದು. ಆಗಿನಿಂದಲೇ ವಿಧಾನಸೌಧದ ಗ್ರಂಥಾಲಯವನ್ನ ಉಪಯೋಗಿಸಿಕೊಂಡವರು. ಮತ್ತೊಬ್ಬ ಜನನಾಯಕ ಶಾಂತವೇರಿ ಗೋಪಾಲಗೌಡರ ಕಾರ್ಯಕ್ಷೇತ್ರವಾದ ತೀರ್ಥಹಳ್ಳಿಯಿಂದ ಆರಿಸಿಬಂದರು. ದುರಂತವೆಂದರೆ ಗೋಪಾಲಗೌಡರು ಊರಾದ ಆರಗದಿಂದಲೇ ಆರಸಿಬಂದ ಆರಗ ಜ್ಞಾನೇಂದ್ರರ ಮತೀಯವಾದಿ ರಾಜಕಾರಣ ಎದುರಿಸುವುದು ತುಂಬ ದುಸ್ತರವಾಯಿತು. ಕಿಮ್ಮನೆ ನೈತಿಕ ಜವಾಬ್ದಾರಿಯಿಂದ ರಾಜಕಾರಣ ಮಾಡಿದರೆ, ಆರಗ ಮತೀಯ ಮತ್ತು ಒಡೆಯುವ ರಾಜಕಾರಣ ಮಾಡುತ್ತ ಬಂದರು. ಕ್ರಮೇಣ ಗೋಪಾಲಗೌಡರ ತಲೆಮಾರು ಕರಗುತ್ತ ಬಂದರೆ, ಇತ್ತ ಮತೀಯವಾದ ತಲೆ ಎತ್ತುತ್ತಾ ಬಲಗೊಳ್ಳುತ್ತಾ ಬಂತು. ವಿಚಿತ್ರವೆಂದರೆ ಆರಗ ಮತ್ತು ಕಿಮ್ಮನೆ ಇಬ್ಬರೂ ಕುವೆಂಪು ಕಾವ್ಯದ ನೆಲೆಬೀಡಿನಿಂದ ಬಂದವರೇ ಆದರೂ ಕುವೆಂಪು ಅವರಿಗೆ ಬಿಜೆಪಿ ಮಾಡಿರುವ ಅವಮಾನ ಆರಗರಿಗೆ ಇವತ್ತಿಗೂ ಆಕ್ರೋಶ ತರಿಸಿಲ್ಲ. ಕನಿಷ್ಟ ಪಕ್ಷ ಬೇಸರವೂ ಅವರ ಹತ್ತಿರ ಸುಳಿದಂತೆ ಕಂಡಿಲ್ಲ.

ಕಿಮ್ಮನೆ ರತ್ನಾಕರ್

ಕಿಮ್ಮನೆಯವರು ಕುವೆಂಪುರವರ ಸಮಗ್ರ ಸಾಹಿತ್ಯ ಓದಿಕೊಂಡಿರುವುದಲ್ಲದೆ ಕವಿಯ ವಿಚಾರ ಕ್ರಾಂತಿಯನ್ನು ಅಳವಡಿಸಿಕೊಂಡವರು. ಆದ್ದರಿಂದ, ನಾಡಗೀತೆ ತಿರುಚಿ ಆಡಿಕೊಂಡಿದ್ದೂ ಅಲ್ಲದೆ, ಸರ್ವ ಜನಾಂಗದ ಮಕ್ಕಳು ಓದುವಂತಹ ಪಠ್ಯ ತಿರುಚಿದ್ದು ಅವರನ್ನ ಸಹಜವಾಗಿ ಕೆರಳಿಸಿತು. ಕೂಡಲೇ ಈ ಸಂಬಂಧವಾದ ಪ್ರತಿಭಟನೆಯನ್ನು ಮಾಡುವ ತೀರ್ಮಾನ ತೆಗೆದುಕೊಂಡು ಬೆಂಗಳೂರಿಗೆ ಹೋದರು. ಅಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ, ನಿಮ್ಮ ಕಾರ್ಯಕ್ರಮ ಮತ್ತು ಜಾಥಾದಲ್ಲಿ ಸಾಹಿತಿ ಮತ್ತು ಕಲಾವಿದರು ಮುಂಚೂಣಿಯಲ್ಲಿದ್ದು ನೀವು ಹಿನ್ನೆಲೆಯಲ್ಲಿರಿ, ಇದು ಸಾಂಸ್ಕೃತಿಕ ಲೋಕದ ಪ್ರತಿಭಟನೆ ಆದ್ದರಿಂದ ಇಲ್ಲಿ ರಾಜಕಾರಣಿಗಳು ಹಿನ್ನೆಲೆಗೆ ಸರಿದು ಸಾಂಸ್ಕೃತಿಕ ಲೋಕದವರು ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳಿ ಎಂದು ಹೇಳಿದರು. ಇದನ್ನು ಒಪ್ಪಿಕೊಂಡು ಬಂದ ಕಿಮ್ಮನೆ 15ನೇ ಜೂನ್ ಮುಂಜಾನೆ ಏಳು ಗಂಟೆಗೆ ಕವಿಶೈಲದಿಂದ ತೀರ್ಥಹಳ್ಳಿಗೆ ಜಾಥಾ ನಿಗದಿಗೊಳಿಸಿದರು. ನಾಡಿನ ಮೂಲೆಮೂಲೆಯಿಂದ ಬರಹಗಾರರು, ಕಲಾವಿದರು, ವಿದ್ವಾಂಸರು ರಾತ್ರಿಯೇ ಬಂದು ಕವಿಶೈಲದಲ್ಲಿ ತಂಗಿದ್ದು, ಜಾಥಾಗೆ ಸಿದ್ಧರಾದರು. ಕವಿಶೈಲ ಒಂದು ರೀತಿ ನಳನಳಿಸುತ್ತಿತ್ತು.

ಕವಿವರ್ಣನೆಯ ಕಗ್ಗಾಡಿನ ನಡುವೆ ತೇಜಸ್ವಿ, ಸಿದಾರ್ಥ, ಕೆ.ಟಿ ಶಿವಪ್ರಸಾದ್ ಮತ್ತು ಅಂದಿನ ಸರಕಾರದ ನೆರವಿನಿಂದ ರಚನೆಗೊಂಡ ಕವಿ ಸಮಾಧಿಯ ಸುತ್ತ ನೆರೆದಿರುವ ಸಸ್ಯರಾಶಿಯ ದೆಸೆಯಿಂದ ಇಲ್ಲೊಂದು ಆಹ್ಲಾದಕರ ತಂಪು ಆವರಿಸಿದೆ. ಇಲ್ಲಿ ಮಾತುಗಳು ಏಕಾಂತವನ್ನು ಕಲಕುವಂತೆ ಕಾಣುವುದರಿಂದ ಯಾರೂ ಮಾತನಾಡುವುದಿಲ್ಲ. ಆದ್ದರಿಂದ ಕವಿ ಸಮಾಧಿಯ ಎದುರು ಸಿಕ್ಕಿದ ಹಂಸಲೇಖ, ಎಸ್. ಜಿ. ಸಿದ್ದರಾಮಯ್ಯ, ದಿನೇಶ್ ಅಮೀನ್ ಮಟ್ಟು, ರುದ್ರಪ್ಪ, ಅಕ್ಷತಾ, ಕಿಮ್ಮನೆ ಅಲ್ಲದೆ ಇನ್ನು ಹತ್ತಾರು ಜನ ಕವಿ ಸಮಾಧಿಗೆ ಪುಷ್ಪಾರ್ಚನೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್‌ನ ಮಂಜುನಾಥ್, ದಲಿತ ಸಂಘರ್ಷ ಸಮಿತಿ ಗುರುಮೂರ್ತಿ, ರೈತ ಸಂಘದ ಕೆ.ಟಿ.ಗಂಗಾಧರ್ ಹೀಗೆ ಹಲವು ಸಂಘಟನೆಗಳ ಅಧ್ಯಕ್ಷರು-ಸಂಚಾಲಕರು ಕವಿಸಮಾಧಿಗೆ ನಮಿಸಿ ಹೊರಟಾಗ ಅದೊಂದು ನದಿಮೂಲದ ಸೆಲೆಯಂತೆ ಕಂಡಿತು. ಕವಿಶೈಲದ ಕೆಳಗಿಳಿದು ಬಂದ ಕೂಡಲೇ ಕಾಣುವ ತೇಜಸ್ವಿಯ ಸಮಾಧಿಯ ಸ್ಥಂಭಗಳು ಆಯ್ತು ಹೋಗಿ ಬನ್ನಿ ಎನ್ನುವಂತಿದ್ದವು.

ಕವಿಯ ಶತಮಾನ ಭವನದ ಎದುರು ಎಲ್ಲರೂ ತಿಂಡಿತಿಂದು ಹೊರಟರು. ಕವಿಶೈಲದಿಂದ ತೀರ್ಥಹಳ್ಳಿಗೆ ಹದಿನೆಂಟು ಕಿಲೋಮೀಟರ್ ದೂರವಿದ್ದುದರಿಂದ ಜಾಥ ಅಕ್ಷೋಹಿಣಿ ಸೈನ್ಯದಂತಾಯಿತು. ತೀರ್ಥಹಳ್ಳಿಯ ಸುತ್ತಮುತ್ತಲ ಊರಿನ ಜನರು ಜೊತೆಗೆ ಬಂದು ಸೇರಿಕೊಂಡಿದ್ದಲ್ಲದೆ ನಾಡಿನ ಮೂಲೆಮೂಲೆಯಿಂದ ಬಂದವರೆಲ್ಲಾ ಸೇರುತ್ತಾ ಕೇವಲ 50 ಜನರಿಂದ ಆರಂಭಗೊಂಡ ಜಾಥಾ ಸಾವಿರಾರು ಜನರೊಡಗೂಡಿ ಮೈಲಿಗಟ್ಟಲೆ ವಿಸ್ತರಿಸಿತು. ಕವಿಶೈಲದಿಂದ ದೇವಂಗಿವರೆಗೆ 9 ಕಿಲೋಮೀಟರ್. ಅಲ್ಲಿ ಎಲ್ಲರಿಗೂ ತಿಂಡಿ ಮತ್ತು ಕಾಫಿ ಟೀ ವ್ಯವಸ್ಥೆ ಮಾಡಿದ್ದರು. ಆ ಪ್ರದೇಶಕ್ಕೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿ.ಕೆ.ಹರಿಪ್ರಸಾದ್ ಬಂದು ಸೇರಿಕೊಂಡಿದ್ದರಿಂದ, ನಡಿಗೆಯವರ ಕಾಲಿಗೆ ಮತ್ತಷ್ಟು ಬಿರುಸು ಬಂತು. ದೇವಂಗಿಯಿಂದ ಹೊರಟವರಿಗೆ ತೀರ್ಥಹಳ್ಳಿ ಬಂದಿದ್ದೇ ತಿಳಿಯಲಿಲ್ಲ. ಕವಿ ಸಿದ್ದರಾಮಯ್ಯ, ದಿನೇಶ್ ಅಮೀನ್ ಮಟ್ಟು ಮತ್ತು ಅಕ್ಷತಾ ಜಾಥಾ ಆರಂಭಿಸಿದಾಗಿನ ನಡಿಗೆಯ ಉತ್ಸಾಹವನ್ನು ತೀರ್ಥಹಳ್ಳಿ ತಲುಪಿದರೂ ಕಳೆದುಕೊಂಡಿರಲಿಲ್ಲ. ಕಿಮ್ಮನೆಯವರು ತೀರ್ಥಹಳ್ಳಿಯಿಂದ ಕವಿಶೈಲಕ್ಕಿರುವ ದೂರ ಮತ್ತು ಜಾಥಾ ಹೊರಡುವ ಸಮಯ ಹಾಗೂ ಚಳವಳಿಗಾರರು ತೀರ್ಥಹಳ್ಳಿ ತಲುಪಿದ ಕೂಡಲೇ ಊಟ ಮಾಡಿ ಸಭಾಂಗಣಕ್ಕೆ ಬರುವ ಸಮಯವನ್ನು ಕರಾರುವಾಕ್ಕಾಗಿ ನಿಗದಿ ಮಾಡಿದ್ದರಿಂದ ಎಲ್ಲವೂ ನಿಗದಿಯಂತೆ ನಡೆಯಿತು.

ಕವಿಶೈಲ

ಸಮಯಕ್ಕೆ ಸರಿಯಾಗಿ ಆಕಾಶ ಮಾರ್ಗದಿಂದ ಇಳಿದು ಬಂದ ಸಿದ್ದರಾಮಯ್ಯ, ತೀರ್ಥಹಳ್ಳಿ ಬಸ್ಟಾಂಡಿನಲ್ಲಿ ಜಾಥಾ ಸೇರಿಕೊಂಡರು. ಆ ಕೂಡಲೇ ಮೈಕಿನವರು ಟಗರು ಹಾಡನ್ನ ಹಾಕಿದರು. ಸಿದ್ದು ಹಿಂಬಾಲಕರು ಕುಣಿದು ಶಿಳ್ಳೆ ಹೊಡೆದರು. ತೀರ್ಥಹಳ್ಳಿ ಪಟ್ಟಣದ ಪಕ್ಕದ ಮೈದಾನದಲ್ಲಿ ಸಭೆ ಏರ್ಪಾಟಾಗಿದ್ದರಿಂದ ಎಲ್ಲಾ ಸಂಘಟನೆಯ ಲೀಡರುಗಳಲ್ಲದೆ, ನಿರಂಜನಾರಾಧ್ಯ, ವೈ.ಎಸ್.ವಿ ದತ್ತ ಬಂದು ವೇದಿಕೆ ಮೇಲೆ ಕುಳಿತಾಗ, ಜಾಥಾದ ರೂವಾರಿ ಕಿಮ್ಮನೆ ಜನರ ಮಧ್ಯೆ ಕುಳಿತಿದ್ದರು. ಅವರನ್ನ ಬಲವಂತವಾಗಿ ವೇದಿಕೆಗೆ ಕರೆದಾಗ ಪ್ರಾಸ್ತಾವಿಕವಾಗಿ ಮಾತನಾಡಿದ ಕಿಮ್ಮನೆ, ಮೊದಲ ಬಾರಿಗೆ ಭಾವುಕರಾದರು. ಜೊತೆಗೆ ಕಾರ್ಯಕ್ರಮಕ್ಕೆ ಯಾರಿಂದಲೂ ಒಂದು ರೂಪಾಯಿ ದೇಣಿಗೆ ಪಡೆಯದೆ ತಾನೇ ಏರ್ಪಾಟು ಮಾಡಿರುವುದರಿಂದ ಸಾಹಿತಿಗಳು-ಕಲಾವಿದರು-ಸಾಮಾಜಿಕ ಕಾರ್ಯಕರ್ತರು ಯಾವುದೇ ಅಂಜಿಕೆಯಿಲ್ಲದೆ ಮುಕ್ತವಾಗಿ ಮಾತನಾಡಬಹುದೆಂದು ಹೇಳಿದರು. ಸುಮಾರು ಮೂರು ಗಂಟೆ ನಡೆದ ಸಮಾರಂಭದಲ್ಲಿ ಎಲ್ಲ ಸಂಘಟನೆಯವರೂ ಮಾತನಾಡಿದರೆ, ನಿರಂಜನಾರಾಧ್ಯರ ಭಾಷಣ ಜಾಥಾ ಜನಗಳನ್ನ ಚಿಂತನೆಗೆ ಹಚ್ಚಿ, ಸರಕಾರ ಮತ್ತು ಪಠ್ಯ ತಿರುಚಿದವರ ಭಂಡತನವನ್ನು ಅನಾವರಣ ಮಾಡಿತು.

ಸಿದ್ದರಾಮಯ್ಯನವರು ಭಾಷಣ ಮಾಡುತ್ತ, ’ಕಿಮ್ಮನೆ ಅತ್ಯಂತ ಸಜ್ಜನ ರಾಜಕಾರಣಿ, ಅವರನ್ನು ಸಂಪುಟದಿಂದ ತೆಗೆದಾಗ ಸರಕಾರದ ಎಲ್ಲ ಸವಲತ್ತನ್ನು ತ್ಯಜಿಸಿ, ಸ್ವಂತ ಕಾರಿನಲ್ಲಿ ಮನೆಗೆ ಹೋದವರು. ನಾನು ಭೇಟಿ ಮಾಡಿ ಬೇಸರವಾಯ್ತೆ ಎಂದು ಕೇಳಿದಾಗ, ಬೇಸರವೇನು ಇಲ್ಲ ಸಾರ್, ಬೇರೆಯವರಿಗೂ ಅನುಕೂಲ ಆಯ್ತಲ್ಲ ಬಿಡಿ ಎಂದರು’ ಎಂದು ಹೇಳಿದ್ದಲ್ಲದೆ, ’ಈ ಸಮಾವೇಶವನ್ನು ಕೂಡ ಅವರು ರಾಜಕಾರಣಕ್ಕಾಗಿ ಏರ್ಪಡಿಸಿದವರಲ್ಲ. ಇದರಿಂದ ತಮ್ಮ ಚುನಾವಣೆಗೆ ಅನುಕೂಲವಾಗುತ್ತದೆಂದು ಅವರು ಭಾವಿಸಿಲ್ಲ’ ಎಂದರು.

ತೀರ್ಥಹಳ್ಳಿ ಕಾರ್ಯಕ್ರಮದ ಸಮಯದಲ್ಲೇ ಬೆಂಗಳೂರಲ್ಲಿ ನಡೆಯುವ ಪ್ರತಿಭಟನೆಗೆ ದೇವೇಗೌಡರು ಬರುತ್ತಾರೆಂಬ ಸುದ್ದಿ ಸಂಚಲನವುಂಟು ಮಾಡಿತು. ಅದರಂತೆ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದೇವೆಗೌಡರು, ಗೋಕಾಕ್ ಚಳವಳಿ ಮಾದರಿಯ ಹೋರಾಟದ ಅಗತ್ಯವಿದೆ ಎಂದು ಹೇಳಿದ್ದಾರೆ. ಆದ್ದರಿಂದ ನಾಡಿನ ಜನತೆ ಗೋಕಾಕ್ ಮಾದರಿಯ ಚಳವಳಿಗೆ ತಯಾರಾಗಬೇಕಿದೆ; ಅದೀಗ ಅನಿವಾರ್ಯ.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಪಠ್ಯಪುಸ್ತಕ ರಚನೆಯಲ್ಲಿ ಸಮಿತಿ ಸದಸ್ಯರ ಅಭಿಪ್ರಾಯ ತಿರಸ್ಕರಿಸಿ ಏಕಪಕ್ಷೀಯ ಪಠ್ಯ ರಚಿಸಿದ ಚಕ್ರತೀರ್ಥ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...