Homeಅಂತರಾಷ್ಟ್ರೀಯರಷ್ಯಾ-ಉಕ್ರೇನ್ ಬಿಕ್ಕಟ್ಟು: 352 ಉಕ್ರೇನಿಯನ್ ನಾಗರಿಕರು ಸಾವು, 1,684 ಮಂದಿಗೆ ಗಾಯ

ರಷ್ಯಾ-ಉಕ್ರೇನ್ ಬಿಕ್ಕಟ್ಟು: 352 ಉಕ್ರೇನಿಯನ್ ನಾಗರಿಕರು ಸಾವು, 1,684 ಮಂದಿಗೆ ಗಾಯ

- Advertisement -
- Advertisement -

ಕಳೆದ ಗುರುವಾರ ಆರಂಭವಾದ ರಷ್ಯಾ ದಾಳಿಯಲ್ಲಿ 14 ಮಕ್ಕಳು ಸೇರಿದಂತೆ 352 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ. 116 ಮಕ್ಕಳು ಸೇರಿದಂತೆ ಸುಮಾರು 1,684 ಜನರು ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ. ಆದಾಗ್ಯೂ, ಉಕ್ರೇನ್ ಸಶಸ್ತ್ರ ಪಡೆಗಳ ನಡುವೆ ಆದ ಸಾವುನೋವುಗಳ ಬಗ್ಗೆ ಯಾವುದೇ ಮಾಹಿತಿಯನ್ನು ಭಾನುವಾರ ಸಚಿವಾಲಯ ನೀಡಿದ ಹೇಳಿಕೆಯಲ್ಲಿ ತಿಳಿಸಿಲ್ಲ.

ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ಐದು ಲಕ್ಷಕ್ಕಿಂತಲೂ ಹೆಚ್ಚು ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ವಿಭಾಗ ಹೇಳಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಲಂಗರ್‌‌ನ ಈ ಚಿತ್ರ ಯುದ್ದ ಪೀಡಿತ ಉಕ್ರೇನ್‌ ದೇಶದ್ದಲ್ಲ

ಈ ಮಧ್ಯೆ ತಾನು ನಷ್ಟವನ್ನು ಅನುಭವಿಸಿದ್ದೇನೆ ಎಂದು ರಷ್ಯಾ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಮತ್ತೊಂದೆಡೆ, ರಷ್ಯಾದ ಪಡೆಗಳ ಸಾವುನೋವುಗಳಿಗೆ ಯಾವುದೇ ನಿಜವಾದ ಅಂಕಿಅಂಶಗಳು ಲಭ್ಯವಿಲ್ಲ.

ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್ ಅವರು ಯಾವುದೇ ಸಂಖ್ಯೆಗಳನ್ನು ನೀಡದೆ, “ನಮ್ಮ ಒಡನಾಡಿಗಳು ಸತ್ತಿದ್ದಾರೆ ಮತ್ತು ಗಾಯಗೊಂಡಿದ್ದಾರೆ” ಎಂದು ಭಾನುವಾರ ಹೇಳಿದ್ದಾರೆ. ರಷ್ಯಾದ ನಷ್ಟವು ಉಕ್ರೇನಿಯನ್ ಪಡೆಗಿಂತ “ಅನೇಕ ಪಟ್ಟು” ಕಡಿಮೆ ಎಂದು ಅವರು ಹೇಳಿದ್ದಾರೆ.

ಆದರೆ, ರಷ್ಯಾ ಸುಮಾರು 5,300 ಸೈನಿಕರನ್ನು ಕಳೆದುಕೊಂಡಿದೆ ಮತ್ತು ತನ್ನ ಶಸ್ತ್ರಾಗಾರದಲ್ಲಿ ಭಾರೀ ನಷ್ಟವನ್ನು ಅನುಭವಿಸಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ.

ಇದನ್ನೂ ಓದಿ:  ಫ್ಯಾಕ್ಟ್‌ಚೆಕ್‌: ಪ್ಯಾಲೆಸ್ತೀನ್‌‌ನ ದಿಟ್ಟ ಬಾಲಕಿಯನ್ನು ಉಕ್ರೇನ್‌‌‌ನವರು ಎಂದು ವರದಿ ಮಾಡಿದ ಪಬ್ಲಿಕ್ ಟಿವಿ ಮತ್ತು ಸುವರ್ಣ ಟಿವಿ!

ಸಂಘರ್ಷ ಇಲ್ಲದಂತೆ ಮಾಡುವ ಮಾತುಕತೆಗಳಲ್ಲಿ ಪ್ರಗತಿ ಸಾಧಿಸಲು ವಿಫಲವಾದ ಕಾರಣ ರಷ್ಯಾ ಅಂತರರಾಷ್ಟ್ರೀಯವಾಗಿ ಪ್ರತ್ಯೇಕತೆಯನ್ನು ಎದುರಿಸುತ್ತಿದೆ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಉಕ್ರೇನ್ ಬಿಕ್ಕಟ್ಟಿನ ಕುರಿತು ಸಭೆ ನಡೆಸುತ್ತಿದೆ ಮತ್ತು ರಷ್ಯಾವನ್ನು ಪ್ರತ್ಯೇಕಿಸಲು ಈ ವಾರದ ನಂತರ ಮತ ಚಲಾಯಿಸಲು ಸಿದ್ಧವಾಗಿದೆ.

ಒಂದು ವಾರದಲ್ಲಿ ಎರಡನೇ ಬಾರಿಗೆ, ರಷ್ಯಾ ಉಕ್ರೇನ್ ಆಕ್ರಮಣಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ನಿರ್ಣಯದಲ್ಲಿ ಭಾರತ ಅಂತರ ಕಾಯ್ದುಕೊಂಡಿದೆ. ಬೆಲಾರಸ್ ಗಡಿಯಲ್ಲಿ ಮಾತುಕತೆ ನಡೆಸುವ ರಷ್ಯಾ ಮತ್ತು ಉಕ್ರೇನ್‌‌ ನಿರ್ಧಾರವನ್ನು ಭಾರತ ಸ್ವಾಗತಿಸಿದೆ.

ಉಕ್ರೇನ್‌ನ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಬೆಂಬಲವಾಗಿ ಶಸ್ತ್ರಾಸ್ತ್ರಗಳ ವರ್ಗಾವಣೆಯನ್ನು ಹೆಚ್ಚಿಸಿದ್ದು, ಬ್ರಿಟನ್ ಇಂತಹ ವರ್ಗಾವಣೆಗಳನ್ನು ವಿಸ್ತರಿಸಲು ಕರೆ ನೀಡಿದೆ. ಫಿನ್‌ಲ್ಯಾಂಡ್ 2,500 ಆಕ್ರಮಣಕಾರಿ ರೈಫಲ್‌ಗಳು ಮತ್ತು 1,500 ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ರವಾನಿಸಲು ಒಪ್ಪಿಕೊಂಡಿದೆ. ಕೆನಡಾ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳು ಮತ್ತು ನವೀಕರಿಸಿದ ಮದ್ದುಗುಂಡುಗಳನ್ನು ಪೂರೈಸುತ್ತದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.

ಇದನ್ನೂ ಓದಿ: ವೈದ್ಯಕೀಯ ‘ಭಾರ‘ತ: ಉಕ್ರೇನ್‌ನಲ್ಲಿ ಸಿಲುಕಿದ ಇಂಡಿಯಾ ವಿದ್ಯಾರ್ಥಿಗಳ ನೋವಿನ ಮೂಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಜಗನ್ನಾಥ ನರೇಂದ್ರ ಮೋದಿಯ ಭಕ್ತ’ ಎಂದ ಸಂಬಿತ್ ಪಾತ್ರ; ವಿರೋಧದ ನಂತರ ಕ್ಷಮೆಯಾಚನೆ

0
ಸದಾ ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ದೇಶದಾದ್ಯಂತ ಟ್ರೋಲ್‌ಗೆ ಗುರಿಯಾಗುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಬಿತ್ ಪಾತ್ರ, ಒಡಿಶಾದ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡುವಾಗ "ಜಗನ್ನಾಥ ಪ್ರಧಾನಿ ನರೇಂದ್ರ...