Homeಅಂಕಣಗಳುಕಾಶ್ಮೀರದಾಗಿನ ಅಲೌಕಿಕ ಚಲುವೆಯರು ಎಲ್ಲೇ, ಈ ಲೌಕಿಕದ ಜುಜುಬಿ ಸರಕಾರೀ ಆಸ್ಪತ್ರೆ ಬೆಡ್, ಆಕ್ಸಿಜನ್, ಇಂಜೆಕ್ಷನ್...

ಕಾಶ್ಮೀರದಾಗಿನ ಅಲೌಕಿಕ ಚಲುವೆಯರು ಎಲ್ಲೇ, ಈ ಲೌಕಿಕದ ಜುಜುಬಿ ಸರಕಾರೀ ಆಸ್ಪತ್ರೆ ಬೆಡ್, ಆಕ್ಸಿಜನ್, ಇಂಜೆಕ್ಷನ್ ಎಲ್ಲೇ?

ಈ ಸಾರೆ ಅಂತೂ ನಾವು ಕಾಶ್ಮೀರದ ಹುಡುಗಿ ಮಾಡಿಕೊಂಡು, ಅಲ್ಲೇ ಹತ್ತು ಎಕರೆ ಸೇಬುಹಣ್ಣಿನ ತೋಟ ವರದಕ್ಷಿಣೆ ಪಡಿಯಬೇಕು ಅಂತ ಈಗಿನ ಆಳುವ ಪಕ್ಷಕ್ಕ ವೋಟು ಹಾಕಿದ್ದೇವಿ. ಹೀಗಾಗಿ...

- Advertisement -
- Advertisement -

ಪೂರ್ಣಾವಧಿ ಸೋಶಿಯಲ್ ಮೀಡಿಯಾ ಸ್ಟಾರ್, ಅಲ್ಪಾವಧಿ ಲೋಕಸಭಾ ಸದಸ್ಯರಾಗಿರುವ ತೇಜಸ್ವಿ ಸೂರ್ಯ ನಾರಾಯಣರಾವು ಅವರು ಮೊನ್ನೆ ಬೆಂಗಳೂರು ಎಂಬೋ ಮಾಯಾನಗರಿಯೊಳಗ ಒಂದು ಕಾಲ್ ಸೆಂಟರ್‌ದೊಳಗಿನ 17 ಮಂದಿ ಮುಸ್ಲಿಂ ಕೆಲಸಗಾರರ ಹೆಸರು ಓದಿ, ಮರುದಿವಸ ಒಂಬತ್ತು ಮಂದಿ ಗೈರು ಮುಸ್ಲಿಂರ ದಸ್ತಗಿರಿ ಮಾಡಿಸಿದ್ದು ನಮಗ ಗೊತ್ತು.

ಇಲ್ಲೇ ಪ್ರಶ್ನೆ ಏನು ಅಂದ್ರ ಒಬ್ಬ ಎಂಪಿ ಕೆಲಸ ಏನು? ಪತ್ತೇದಾರಿ ವರದಿಗಾರರಂತೆ ಹಗರಣ ಹೊರಗೆ ತೆಗೆಯೋದೋ ಅಥವಾ ಸರ್ಕಾರದ ಕೆಲ್ಸಗಳು ಸರಿಯಾಗಿ ನಡಿಯೋ ಹಂಗ ಮಾಡೋದೋ?

ತೇಜಸ್ವಿ ಅವ್ರು ಮಾಡಿದ್ದೇ ಸರಿ. ಅವ್ರು ಈ ಹುಳುಕು ಹೊರಗೆ ತೆಗೆಯದೇ ಇದ್ದರೆ ಯಾರು ತೆಗೆಯಬೇಕಿತ್ತು? ಅಂತ ಅವರನ್ನು ಹೊಗಳುವ, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಿಕ್ಕೆಬಿಟ್ಟರು ಅಂತ ಖುಷಿಯಿಂದ ಕುಣಿಯುತ್ತಿರುವ ಜನರಿಗೆ ಏನೂ ಕಮ್ಮಿ ಇಲ್ಲಾ.

ಈ ಜನರ ಭಾವನೆ ಸರಿ. ಅದನ್ನು ನಾನು ಮೈಸೂರು ತೇರು ಮೈದಾನದಿಂದ ಬೇಕಾದರೂ ಹೇಳಬಲ್ಲೆ ಅಂತ ಇನ್ನೊಬ್ಬ ಯುವ ಸಂಸದ ಪ್ರತಾಪ್ ಸಿಂಹ ಅವ್ರು ಹೇಳಿಬಿಟ್ಟಾರ. ಅವ್ರು ಇಂಥ ಕೆಲ್ಸಾ ಮಾಡಿಯೇ ಮುಂದೆ ಬಂದಾರ. ಎರಡು ವರ್ಷದ ಹಿಂದೆ ಕೊಡಗು ಜಿಲ್ಲೆಯೊಳಗ ಪ್ರವಾಹ ಬಂದಾಗ ಅವ್ರು ಒಂದು ಕೆಂಪು ಅಂಗಿ ಬಿಳೆ ಬೂಟು ಹಾಕಿಕೊಂಡು ಕರೆಂಟ್ ಕಂಬಾ ಭೂಮಿಯೊಳಗ ನೆಡುವ ಪ್ರಯತ್ನ ಮಾಡಿದ್ದ ಫೋಟೋ ಸೋಶಿಯಲ್ ಮೀಡಿಯಾದಾಗ ಓಡಾಡಲಿಕ್ಕೆ ಹತ್ತಿತ್ತು. ಆವಾಗ ಅವರ ಸಹೋದ್ಯೋಗಿಯಾಗಿದ್ದ ಹಿರಿಯ ಪತ್ರಕರ್ತರು ಒಬ್ಬರು “ನಾವು ಈ ಯುವ ಸಂಸದರನ್ನು ದೆಹಲಿಗೆ ಕಳಿಸಿದ್ದು ಯಾಕೆ ಅಂದ್ರೆ ಅವರು ಪ್ರಧಾನಿ ಹಾಗೂ ಇತರ ಮಂತ್ರಿಗಳ ಜೊತೆ ಸೇರಿ ಕರ್ನಾಟಕಕ್ಕೆ ಹೆಚ್ಚಿನ ನೆರವು ಕೊಡಿಸಲಿ ಅಂತ. ಹಸಿ ಮಣ್ಣಿನ ನೆಲದಲ್ಲಿ ಕರೆಂಟ್ ಕಂಬ ನೆಡಲಿ ಅಂತ ಅಲ್ಲಾ” ಅಂತ ಕಾಮೆಂಟ್ ಮಾಡಿದ್ರು. ಇದು ದೊಡ್ಡ ಸುದ್ದಿಯಾಗಿತ್ತು.

ಇದೆ ಮಾದರಿಯಲ್ಲಿ ಹಿರಿಯ ಭಾರತೀಯ ಪೊಲೀಸು ಸೇವೆ ಅಧಿಕಾರಿ ರೂಪ ದಿವಾಕರ್ ಅವ್ರು ತಾವು ಜೈಲಿನಲ್ಲಿ ಡಿಐಜಿ ಇದ್ದಾಗ ಅಲ್ಲಿನ ಆಡಳಿತದಲ್ಲಿನ ತಪ್ಪುಗಳನ್ನು ಸರಿ ಮಾಡುವುದನ್ನು ಬಿಟ್ಟು ಥೇಟು ಎನ್‌ಜಿಓ ಶೈಲಿಯಲ್ಲಿ ಒಂದು ದೊಡ್ಡ ರಿಪೋರ್ಟ್ ಬರೆದರು.

ಅವರು ನಾನು ನಿಗರಾಣಿ ಅಧಿಕಾರಿಯಾಗಿರುವ ಈ ಜೈಲಿನಲ್ಲಿ, ನನ್ನ ಕೆಳಗೆ ಹಾಗು ಮೇಲೆ ಇರುವ ಅಧಿಕಾರಿಗಳು ಇಂತಹ ತಪ್ಪುಗಳನ್ನು ಮಾಡಿದ್ದಾರೆ, ಮಾಡುತ್ತಾ ಇದ್ದಾರೆ, ಮುಂದೆಯೂ ಮಾಡುವ ಸಾಧ್ಯತೆ ಇದೆ ಅಂತ ಹೇಳಿ ಒಂದು ವರದಿ ಕೊಟ್ಟರು. ಅದನ್ನು ಮಾಧ್ಯಮದವರು ದೇವವಾಣಿಯಂತೆ ಕಂಡು ಪೂಜೆ ಮಾಡಿದ್ರು. ಅದನ್ನು ಬರೆದ ಅಧಿಕಾರಿಯನ್ನು ಪ್ರಮಥರಂತೆ ನೋಡಿದರು. ನಿಮ್ಮನ್ನು ಭಾ.ಪೋ.ಸೇ.ಗೆ ಸೇರಿಸಿ, ತೆರಿಗೆದಾರರ ಹಣದಿಂದ ನಿಮಗೆ ತಿಂಗಳು ತಿಂಗಳು ಸಂಬಳ ಕೊಟ್ಟಿದ್ದು ಯಾಕೆ? ಅಲ್ಲಿನ ಸಮಸ್ಯೆಗಳನ್ನು ಪರಿಹಾರ ಮಾಡಲಿಕ್ಕೋ ಅಥವಾ ಇದು ನನ್ನ ಕಣ್ಣಿಗೆ ಬಿದ್ದಿದೆ ಆದರೆ ನಾನು ಅದರ ಬಗ್ಗೆ ಏನೂ ಮಾಡಲಾರೆ ಅಂತ ಅಸಹಾಯಕತೆ ವ್ಯಕ್ತಪಡಿಸಲಿಕ್ಕೋ ಅಂತ ಯಾವ ಟಿವಿ ಚಾನೆಲ್‌ನ ಹಿಡಿಗೂಟಗಳೂ ಕೇಳಲಿಲ್ಲ.

ಇವತ್ತಿಗೂ ನಮ್ಮ ಜನರಿಗೆ ಯಾರ ಹತ್ತಿರ ಗೋಳು ಹೇಳಿಕೊಳ್ಳಬೇಕು ಅನ್ನುವುದು ಗೊತ್ತಿಲ್ಲ. ಸುಂಕ ವಸೂಲಾತಿಗೆ ಬಂದ ಕಂದಾಯ ಅಧಿಕಾರಿಯ ಮುಂದೆ ಯಪ್ಪಾ ನಮ್ಮ ಹತ್ತಿರ ಉಣ್ಣಾಕ್ ರೊಕ್ಕಾ ಇಲ್ಲ ಅಂದ್ರೆ ಬಿಡುತ್ತಾನೆಯೇ? ವಿಧಾನಸಭೆ – ಸಂಸತ್ತು ಸಭೆಗಳಲ್ಲಿ ಹೋಗಿ ನಮ್ಮ ಪರವಾಗಿ, ನಮ್ಮ ಸುಂಕ ಕಮ್ಮಿ ಮಾಡಬೇಕು ಅಂತ ಮಾತು ಆಡಬೇಕಾದವರು ಆಡೋದಿಲ್ಲ. ಅವ್ರ ಕುತ್ತಿಗೆ ಪಟ್ಟಿ ಹಿಡದು ನಾವು ಕೇಳೋದಿಲ್ಲಾ. ನಮ್ಮ ಮನಿಗೆ ನೀರು ಬರಲಿಲ್ಲ ಅಂದರ ಜಿಲ್ಲಾಧಿಕಾರಿಯ ಕಚೇರಿಗೆ ಹೋಗ್ತೆವಿ, ಹೊರತು, ನಮ್ಮ ನಗರಸಭೆ ಸದಸ್ಯರ ಮನಿಯ ಮುಂದ ಹೋಗಿ ಕೂಡೋದಿಲ್ಲಾ.

ಈ ಸಾರೆ ಅಂತೂ ನಾವು ಕಾಶ್ಮೀರದ ಹುಡುಗಿ ಮಾಡಿಕೊಂಡು, ಅಲ್ಲೇ ಹತ್ತು ಎಕರೆ ಸೇಬುಹಣ್ಣಿನ ತೋಟ ವರದಕ್ಷಿಣೆ ಪಡಿಯಬೇಕು ಅಂತ ಈಗಿನ ಆಳುವ ಪಕ್ಷಕ್ಕ ವೋಟು ಹಾಕಿದ್ದೇವಿ. ಹೀಗಾಗಿ, ಸರಕಾರೀ ಆಸ್ಪತ್ರೆ ಒಳಗ ಹಾಸಿಗೆ ಸಿಗಲಿಲ್ಲಾ, ರೋಗಿಗಳಿಗೆ ಆಮ್ಲಜನಕ ಸಿಗಲಿಲ್ಲ, ರೆಮೆಡಿಸಿವಿರ್ ಇಂಜಕ್ಷನ್ ಕೊಡಲಿಲ್ಲ ಅಂತ ಹೇಳಿ ನಾವು ದೂರು ಕೊಡಲಿಕ್ಕೆ ಬರೋದಿಲ್ಲಾ.

ಕಾಶ್ಮೀರದಾಗಿನ ಸೇಬುಹಣ್ಣಿನ ಬಣ್ಣದ ಅಲೌಕಿಕ ಚಲುವೆಯರು ಎಲ್ಲೇ, ಈ ಲೌಕಿಕ ಜೀವನದ ಜುಜುಬಿ ಸರಕಾರೀ ಆಸ್ಪತ್ರೆ ಬೆಡ್, ಆಕ್ಸಿಜನ್, ಇಂಜೆಕ್ಷನ್ ಎಲ್ಲೇ. ಏನರ ಹೋಲಿಕೆ ಅದ ಏನು ಹೇಳ್ರಿ?


ಇದನ್ನೂ ಓದಿ: ತೇಜಸ್ವಿ ಸೂರ್ಯ ಓದಿದ ಮುಸ್ಲಿಮರ ಪಟ್ಟಿ: ಬಿಬಿಎಂಪಿ ಇಂತಹ ಲಿಸ್ಟ್ ತಯಾರಿಸಿಲ್ಲ! ಮತ್ತೆ ಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...