Homeಕರ್ನಾಟಕನಾರಾಯಣ ಗುರುಗಳ ಪಠ್ಯಕ್ಕೆ ಕತ್ತರಿ: ‘ನನಗೆ ಅದು ನೆನಪಾಗುತ್ತಿಲ್ಲ’ ಎಂದ ಪಠ್ಯ ಪುಸ್ತಕ ಸಮಿತಿ ಸದಸ್ಯ...

ನಾರಾಯಣ ಗುರುಗಳ ಪಠ್ಯಕ್ಕೆ ಕತ್ತರಿ: ‘ನನಗೆ ಅದು ನೆನಪಾಗುತ್ತಿಲ್ಲ’ ಎಂದ ಪಠ್ಯ ಪುಸ್ತಕ ಸಮಿತಿ ಸದಸ್ಯ ಡಾ. ಅನಂತಕೃಷ್ಣ ಭಟ್‌

ನಮ್ಮ ವರದಿ ಸಲ್ಲಿಸಿದ್ದು, ನಾನು ಇದಕ್ಕೆಲ್ಲಾ ಉತ್ತರಿಸಲೇ ಬೇಕು ಎಂಬುವುದು ನಿಮ್ಮ ‘ಉದ್ಧಟತನ’ ಎಂದು ಅವರು ಹೇಳಿದ್ದಾರೆ

- Advertisement -
- Advertisement -

ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ, ನಾರಾಯಣ ಗುರುಗಳು ಮತ್ತು ಪೆರಿಯಾರ್‌ ಪಾಠಗಳನ್ನು ಕತ್ತರಿಸಿದ್ದೀರ ಎಂಬ ಪ್ರಶ್ನೆಗೆ, ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕವನ್ನು ಮರು ಪರಿಷ್ಕರಣೆ ಮಾಡಿರುವ ಸಮಿತಿಯ ಸದಸ್ಯ ಡಾ. ಅನಂತಕೃಷ್ಣ ಭಟ್‌ ಪ್ರತಿಕ್ರಿಯಿಸಿ, “ನನಗೆ ಅದು ನೆನಪಾಗುತ್ತಿಲ್ಲ” ಎಂದು ಹೇಳಿದರು.

ರಾಜ್ಯದ ಪಠ್ಯ ಪುಸ್ತಕ ಹಗರಣದ ಮತ್ತಷ್ಟು ಹುಳುಕುಗಳು ಹೊರಬೀಳುತ್ತಿವೆ. ಮಂಗಳವಾರದಂದು ಸುದ್ದಿ ಪೋರ್ಟಾಲ್‌ ‘ಈದಿನ.ಕಾಂ’ ಹೊರಗೆಡವಿದ ಮಾಹಿತಿಯಂತೆ, ಪರಿಷ್ಕರಣೆಗೆ ಸಮಿತಿ ಸದಸ್ಯರು ನೀಡಿದ್ದ ವರದಿ ಧಿಕ್ಕರಿಸಿ, ಸಮಿತಿ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಅವರು ರಹಸ್ಯ ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಮಂಗಳೂರಿನ ಕೆನರಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಉಪನ್ಯಾಸಕರೂ ಆಗಿರುವ ಡಾ. ಅನಂತಕೃಷ್ಣ ಭಟ್‌ ಅವರು, “ಈ ಬಗ್ಗೆಗಿನ ಸುದ್ದಿಯನ್ನು ನಾನು ಇನ್ನೂ ನೋಡಿಲ್ಲ ಹಾಗೂ ಅದರ ವಾಸ್ತವಿಕತೆಯೂ ನನಗೆ ಗೊತ್ತಿಲ್ಲ. ಅಲ್ಲದೆ ಪರಿಷ್ಕೃತ ಪಾಠ ಪುಸ್ತಕಗಳು ನನ್ನ ಕೈಗೆ ಬಂದಿಲ್ಲ” ಎಂದು ತಿಳಿಸಿದ್ದಾರೆ. ವಾಸ್ತವದಲ್ಲಿ 80% ಪಠ್ಯ ಪುಸ್ತಕಗಳನ್ನು ಶಾಲೆಗಳಲ್ಲಿ ಹಂಚಿಕೆ ಮಾಡಿದ್ದಾಗಿ ರಾಜ್ಯದ ಬಿಜೆಪಿ ಸರ್ಕಾರವು ಹೇಳಿಕೊಂಡಿದೆ.

ಡಾ. ಅನಂತಕೃಷ್ಣ ಭಟ್‌ ಅವರು 2014ರಂದು ರಚಿತವಾಗಿದ್ದ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ರಚನಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಪಠ್ಯ ಪುಸ್ತಕವನ್ನು ನಂತರದಲ್ಲಿ ಪ್ರೊಫೆಸರ್‌ ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ಪರಿಷ್ಕರಿಸಲಾಗಿತ್ತು. ಆದರೆ ಇದೀಗ ಅದನ್ನು ಮತ್ತೆ ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಮರು ಪರಿಷ್ಕರಣೆ ಮಾಡಿಸಲಾಗಿದೆ. ಈ ಸಮಿತಿಯಲ್ಲಿ ಇರುವ ಸದಸ್ಯರಲ್ಲಿ ಅನಂತಕೃಷ್ಣ ಭಟ್ ಅವರೂ ಒಬ್ಬರು.

ಪಠ್ಯ ಪುಸ್ತಕವನ್ನು ಮರು ಪರಿಷ್ಕರಣೆ ಮಾಡಿರುವ ಸಮಿತಿಯ ಯಾವ ಸದಸ್ಯರು ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ, ಈ ಬಗ್ಗೆ ನಿಮಗೆ ಯಾರಾದರೂ ಬೆದರಿಕೆ ಹಾಕಿದ್ದಾರೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಆ ರೀತಿಯಾಗಿ ಏನೂ ಇಲ್ಲ’’ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಪಠ್ಯಪುಸ್ತಕ ರಚನೆಯಲ್ಲಿ ಏಕ‘ಚಕ್ರ’ ಅಧಿಪತ್ಯ: ಸಮಿತಿ ಸದಸ್ಯರ ಗೊಂದಲಕಾರಿ ಹೇಳಿಕೆ

ಜನರಿಗಾಗಿ ಸರ್ಕಾರಿ ಸೇವೆಗಳನ್ನು ಮಾಡಿರುವವರು, ಅವುಗಳ ಬಗ್ಗೆ ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಬೇಕಲ್ಲವೆ ಎಂಬ ಪ್ರಶ್ನೆಗೆ ಅವರು,“ಉತ್ತರಿಸಲೇ ಬೇಕು ಎಂಬುವುದು ನಿಮ್ಮ ‘ಉದ್ಧಟತನ’. ನಾನು ತುಂಬಾ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ಯಾವುದೇ ಶೈಕ್ಷಣಿಕ ಅರ್ಹತೆಯನ್ನು ಈ ವರೆಗೆ ಬಹಿರಂಗಪಡಿಸದ ವ್ಯಕ್ತಿಯನ್ನು ಪಠ್ಯ ಪುಸ್ತಕ ಪರಿಷ್ಕರಣೆಯ ಅಧ್ಯಕ್ಷರನ್ನಾಗಿ ಮಾಡಿದ್ದು, ಪಠ್ಯದಲ್ಲಿ ತಪ್ಪುಗಳಾಗಿವೆ ಎಂಬ ಆಕ್ಷೇಪಗಳಿಗೆ ವಿದ್ವಾಂಸರುಗಳಾದ ನೀವು ಯಾರೂ ಮಾತನಾಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ಇದಕ್ಕೆ ನಾನು ಏನು ಕಮೆಂಟ್ ಮಾಡಲಿ ಎಂದು ನೀವೇ ಹೇಳಿ. ನಮ್ಮ ಕೆಲಸಗಳನ್ನು ಮಾಡಿ ಮುಗಿಸಿ ನಾವು ಬಂದಿದ್ದೇವೆ. ಇದರ ನಂತರ ನಮ್ಮ ನಡುವೆ ಸಂವಹನ ನಡೆದಿಲ್ಲ. ಸಂವಹನವೇ ನಡೆಯದಿದ್ದರೆ ನಾವು ಏನು ಕಮೆಂಟ್ ಮಾಡಲಿ?” ಎಂದು ಅವರು ಹೇಳಿದ್ದಾರೆ.

“ನಿಜಾ ಹೇಳಬೇಕೆಂದರೆ, ಈ ವರದಿ ಕೊಟ್ಟು ನಾಲ್ಕು ತಿಂಗಳಾಗಿವೆ. ನಾವು ವರದಿ ಕೊಟ್ಟು ಬಂದೆವು. ಅದರ ನಂತರ ನಮ್ಮ ನಡುವೆ ಸಂವಹನ ನಡೆದಿಲ್ಲ. ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇವೆ. ಅದೂ ಅಲ್ಲದೆ ನಾನು ಮಾಡಿದ್ದು ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕವಾಗಿದೆ.” ಎಂದು ಹೇಳಿದರು.

ಅಲ್ಲದೆ, ಪಠ್ಯಪುಸ್ತಕವನ್ನು ಹೇಗೆ ಪರಿಷ್ಕರಣೆ ಮಾಡಬಹುದು ಎಂಬ ವರದಿಯನ್ನಷ್ಟೆ ಕೊಟ್ಟು ಬಂದಿದ್ದೇನೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. “ನಮ್ಮ ಕೆಲಸ ಇಷ್ಟೆ ಇದ್ದಿದ್ದು. ಉಳಿದಿದ್ದು ಸರ್ಕಾರಕ್ಕೆ ಬಿಟ್ಟಿದ್ದು. ಅದನ್ನು ಅವರು ಅಳವಡಿಸಿಕೊಂಡಿದ್ದಾರೆಯೆ ಎಂಬುವುದು ನನಗೆ ಗೊತ್ತಿಲ್ಲ” ಎಂದು ಅವರು ಹೇಳಿದರು.

ಇದನ್ನೂ ಓದಿ: ಪಠ್ಯಪುಸ್ತಕ ರಚನೆಯಲ್ಲಿ ಸಮಿತಿ ಸದಸ್ಯರ ಅಭಿಪ್ರಾಯ ತಿರಸ್ಕರಿಸಿ ಏಕಪಕ್ಷೀಯ ಪಠ್ಯ ರಚಿಸಿದ ಚಕ್ರತೀರ್ಥ!

ನಿಮ್ಮ ಸಮಿತಿಯಿಂದ ಆಗಿರುವ ತಪ್ಪಿಗೆ ನೀವು ಉತ್ತರ ಹೇಳಬೇಕಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ತಪ್ಪು ಆಗಿಲ್ಲ. ತಪ್ಪು ಎಂದು ಹೇಳುವವರು ಅವುಗಳನ್ನು ಅಧ್ಯಯನ ನಡೆಸಿ ಹೇಳಬೇಕು. ನನ್ನ ದೃಷ್ಟಿಯಲ್ಲಿ ಏನು ಸರಿ ಇದೆಯೋ ಅದನ್ನು ನಾನು ಮಾಡಿದ್ದೇನೆ”  ಎಂದು ತಿಳಿಸಿದರು.

“ಬರಗೂರು ರಾಮಚಂದ್ರಪ್ಪ ಎಲ್ಲವನ್ನೂ ಸತ್ಯನಾಶ ಮಾಡಿ ಹಾಕಿದ್ದಾರೆ. ಆರ್ಯರ ಪಾಠದಲ್ಲಿ, ‘ಸಂಸ್ಕೃತ ಎಂಬ ಭಾಷೆಯಿತ್ತು. ವೇದಗಳು ಸಂಸ್ಕೃತದಲ್ಲಿ ಇತ್ತು’ ಎಂದು ತಪ್ಪಿ ಕೂಡಾ ಹಾಕಿಲ್ಲ. ‘ಸಂಸ್ಕೃತ’ ಎಂಬ ಶಬ್ಧವನ್ನು ಇಡೀ ಪಾಠದಲ್ಲಿ ಉಪಯೋಗ ಮಾಡಿಲ್ಲ. ಅವರಿಗೆ ಭಾರತೀಯತೆಯ ಬಗ್ಗೆ ಅಷ್ಟೊಂದು ವಿರೋಧವಿದೆ.” ಎಂದು ಹೇಳಿದರು.

“ಏನಾಗಿದೆಯೆಂದರೆ, 1947 ರಿಂದ ಇವತ್ತಿನವರೆಗೆ ‘ಜಾತ್ಯಾತೀತ ಸಿದ್ದಾಂತದ ತುಂಬಿಸಬೇಕು’ ಎಂದು ಹೇಳಿ ತಪ್ಪು ದಾರಿಯಲ್ಲಿ ಹೋಗಿ ಈ ರೀತಿಯಲ್ಲಿ ಆಗಿದೆ. ಇನ್ನೊಂದು ವಿಷಯ ಏನೆಂದರೆ, ಈ ರೀತಿ ‘ತಪ್ಪು-ತಪ್ಪು’ ಎಂದು ತೀರ್ಪು ನೀಡಲು ಅವರು ಯಾರು? ಇದನ್ನು ಸುಪ್ರೀಂಕೋರ್ಟ್‌ನಲ್ಲಿ ತೀರ್ಪು ನೀಡಲಿ” ಎಂದು ತಿಳಿಸಿದರು.

ಬರಗೂರು ರಾಮಚಂದ್ರಪ್ಪ ಸಮಿತಿಯಿಂದ ತಪ್ಪಾಗಿದೆ ಎಂದು ನೀವು ಗುರುತಿಸಿದ ಹಾಗೆಯೆ, ನಿಮ್ಮ ಸಮಿತಿಯಿಂದ ತಪ್ಪಾಗಿದೆ ಎಂಬುವುದನ್ನು, ತಜ್ಞರು ಗುರುತಿಸಬಹುದಲ್ಲವೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, “ಪತ್ರಿಕೆಯವರಾಗಲಿ, ಟಿವಿ ಮಾಧ್ಯಮವಾಗಲಿ ಯಾರೂ ಕೂಡಾ ಅಧ್ಯಯನ ನಡೆಸದೆ ತಪ್ಪು-ತಪ್ಪು ಎಂದು ಹೇಳುವುದು ಸರಿಯೇ” ಎಂದು ಹೇಳಿದರು.

ಇದನ್ನೂ ಓದಿ: ಸಂವಿಧಾನ ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ?: ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಪದ ಕೈಬಿಟ್ಟಿದ್ದಕ್ಕೆ ಪಠ್ಯ ಪರಿಶೀಲನೆ ಸಮಿತಿ ಸದಸ್ಯನ ಸಮರ್ಥನೆ

“ನಿಜ ಇಷ್ಟೆ. ನಾವೆಲ್ಲಾ ಕೆಲಸ ಮುಗಿಸಿ ನಾಲ್ಕು ತಿಂಗಳು ಆ‌ಯ್ತು. ಅದನ್ನು ಕೊಟ್ಟು ಬಂದಿದ್ದೇವೆ. ಈಗ ನಮಗೆ ನಮ್ಮದೆ ಕೆಲಸಗಳು ಇವೆ. ನಾನು ಪರಿಷ್ಕರಣೆ ಮಾಡಿರುವ ಪಠ್ಯ ಪುಸ್ತಕ ಹತ್ತನೆ ತರಗತಿಯ ಸಮಾಜ ವಿಜ್ಞಾನ. ಈ ಪುಸ್ತಕವನ್ನು ನನ್ನ ಅಧ್ಯಕ್ಷತೆಯಲ್ಲಿ 2014ರಲ್ಲಿ ಪರಿಚಯಿಸಲಾಗಿತ್ತು. ಈಗಲೂ ಅದನ್ನೇ ಮುಂದುವರೆಸಲಾಗಿದೆ. ಇದನ್ನು ಆರೇಳು ಭಾಷೆಗಳಿಗೆ ತರ್ಜುಮೆ ಮಾಡಲಾಗಿದೆ. ಈ ನಡುವೆ ಬರಗೂರು ರಾಮಚಂದ್ರಪ್ಪ ಅವರು ಪರಿಷ್ಕರಣೆ ಮಾಡಿದ್ದಾರೆ” ಎಂದು ಅವರು ಹೇಳಿದರು.

“ನನಗೆ ನೆನಪಿರುವಂತೆ, ಹತ್ತನೇ ತರಗತಿ ಸಮಾಜ ವಿಜ್ಞಾನದ 6 ಅಥವಾ 7ನೇ ಅಧ್ಯಾಯವನ್ನು ಪರಿಷ್ಕರಿಸುವಂತೆ ನೀಡಲಾಗಿತ್ತು. ಅದನ್ನು ನಾನು ಅವರಿಗೆ ಸಲ್ಲಿಸಿದ್ದೇನೆ. ಈ ನಡುವೆ ಕೊರೊನಾ ಸಮಯದಲ್ಲಿ ಒಮ್ಮೆ ಕರೆ ಬಂದಿತ್ತು. ಆದರೆ ನಾನು ಮನೆಯಲ್ಲೇ ಕೂತು ಕೆಲಸ ಮಾಡುವುದಾಗಿ ಹೇಳಿದೆ. ಇವಿಷ್ಟು ಸತ್ಯ” ಎಂದು ಹೇಳಿದರು.

ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದ ಬಗ್ಗೆ ಅವರು ಕೊಟ್ಟಿರುವ ವರದಿ ಪ್ರಕಾರ ತಿದ್ದುಪಡಿ ಆಗಿದೆಯೆ ಅಥವಾ ಅಧ್ಯಕ್ಷರು ಅದನ್ನು ಬದಲಾಯಿಸಿ ಬೇರೆ ಬರೆದಿದ್ದಾರೆಯೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ನನಗೆ ಗೊತ್ತಿಲ್ಲ. ಅವರಿಗೆ ಈಗಾಗಲೇ ಅವುಗಳನ್ನು ಕಳುಹಿಸಿದ್ದೇನೆ. ಇದಕ್ಕಿಂತ ಹೆಚ್ಚು ಏನೂ ಹೇಳಲು ಸಾಧ್ಯವಿಲ್ಲ” ಎಂದು ಹೇಳಿದರು. ಮರು ಪರಿಷ್ಕರಣೆ ಮಾಡಿರುವ ಹೊಸ ಪಠ್ಯ ಪುಸ್ತಕ ನನಗೆ ತಲುಪಿಲ್ಲ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಪಠ್ಯ ಪರಿಶೀಲಿಸಿದ ಸಮಿತಿಯ ಸದಸ್ಯರ್‍ಯಾರೂ ಪ್ರತಿಕ್ರಿಯೆಗೆ ಸಿದ್ಧರಿಲ್ಲ!

ಹತ್ತನೇ ತರಗತಿ ಸಮಾಜ ವಿಜ್ಞಾನದಲ್ಲಿ ನಾರಾಯಣ ಗುರುಗಳ ಬಗ್ಗೆ ಮತ್ತು ಪೆರಿಯಾರ್‌ ಪಾಠಗಳನ್ನು ನೀವು ಕತ್ತರಿಸಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಇದು ನನಗೆ ನೆನಪಾಗುತ್ತಿಲ್ಲ. ನಾರಾಯಣ ಗುರುಗಳ ವಿಚಾರಗಳನ್ನು ಅವರು ಹತ್ತನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಹಾಕಿದ್ದಾರೆ ಎಂದು ಅವರು ಹೇಳುವುದನ್ನು ನಾನು ಕೇಳಿದ್ದೇನೆ. ಇದರ ಆಚೆಗೆ ಬೇರೆ ಯಾವ ವಿಚಾರವೂ ನನಗೆ ಗೊತ್ತಿಲ್ಲ” ಎಂದು ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...