Homeಮುಖಪುಟಹಸಿವನ್ನು 'ಯುದ್ಧ ಅಸ್ತ್ರ'ವನ್ನಾಗಿಸಿದ ಇಸ್ರೇಲ್‌: ಗಾಝಾದಲ್ಲಿ ಪರಿಸ್ಥಿತಿ 'ನರಕಸದೃಶ'

ಹಸಿವನ್ನು ‘ಯುದ್ಧ ಅಸ್ತ್ರ’ವನ್ನಾಗಿಸಿದ ಇಸ್ರೇಲ್‌: ಗಾಝಾದಲ್ಲಿ ಪರಿಸ್ಥಿತಿ ‘ನರಕಸದೃಶ’

- Advertisement -
- Advertisement -

ಇಸ್ರೇಲ್‌ ಸರ್ಕಾರವು  ಗಾಝಾ ಪಟ್ಟಿಯಲ್ಲಿ ನಾಗರಿಕರನ್ನು ಹಸಿವಿನಿಂದ ಸಾಯುವಂತೆ ಪ್ರೇರೇಪಿಸುತ್ತಿದ್ದು, ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸುತ್ತಿದೆ. ಇಸ್ರೇಲ್‌ ಪಡೆಗಳು ಗಾಝಾದ ಜನರಿಗೆ ಉದ್ದೇಶಪೂರ್ವಕವಾಗಿ ನೀರು, ಆಹಾರ ಮತ್ತು ಇಂಧನದ ವಿತರಣೆಯ ಮೇಲೆ ನಿರ್ಬಂಧ ವಿಧಿಸುತ್ತಿದೆ, ಮಾನವೀಯ ಸಹಾಯಕ್ಕೆ ಅಡ್ಡಿಪಡಿಸುತ್ತಿದೆ. ಕೃಷಿ ಪ್ರದೇಶಗಳನ್ನು ನೆಲಸಮ ಮಾಡುತ್ತಿದೆ, ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತಿದೆ ಮತ್ತು ನಾಗರಿಕರ ಉಳಿವಿಗೆ ಅನಿವಾರ್ಯವಾದ ಎಲ್ಲಾ ವಸ್ತುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಉದ್ದೇಶಪೂರ್ವಕವಾಗಿರುವ ಈ ಕೃತ್ಯವು ಯುದ್ಧ ಅಪರಾಧವಾಗಿದೆ.

ಚೆಕ್‌ಪೋಸ್ಟ್‌ಗಳಲ್ಲಿ ಅಡ್ಡಿ ಹಿನ್ನೆಲೆ ಆಹಾರಗಳ ‘ಗಂಭೀರ ಕೊರತೆಯಿದ್ದರೂ’ ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಗೆ ಆಹಾರವನ್ನು ತಲುಪಿಸಲು ಸಾಧ್ಯವಾಗಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಉತ್ತರ ಗಾಝಾಕ್ಕೆ ಆಹಾರ ನೆರವು ತಲುಪಿದಾಗ ಜನ ಸಂದಣಿ ಕೂಡಿತ್ತು. ಈ ಆಹಾರಕ್ಕಾಗಿ ನಡೆದ ನೂಕಾಟ-ತಳ್ಳಾಟದಲ್ಲಿ ಇಬ್ಬರು ಉಸಿರುಗಟ್ಟಿ ಸಾಯುವುದನ್ನು ನಾನು ನೋಡಿದೆ ಎಂದು ಪರಿಹಾರ ಸಾಮಾಗ್ರಿಯನ್ನು ರಾವನಿಸುತ್ತಿದ್ದ ಕಾರ್ಯಕರ್ತೆಯೋರ್ವರು ಹೇಳಿದ್ದಾರೆ.

ಅಕ್ಟೋಬರ್ 7, 2023ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಇಸ್ರೇಲ್‌ ಅಧಿಕಾರಿಗಳು ಗಾಝಾದಲ್ಲಿ ಆಹಾರ, ನೀರು ಮತ್ತು ಇಂಧನವನ್ನು ತಡೆದಿದ್ದಾರೆ. ಯುಎನ್‌ನ ಮಾನವೀಯ ವ್ಯವಹಾರಗಳ ಸೆಕ್ರೆಟರಿ ಜನರಲ್ ಮಾರ್ಟಿನ್ ಗ್ರಿಫಿತ್ಸ್, ಪ್ಯಾಲೇಸ್ತೀನ್‌ಗೆ ನೆರವನ್ನು ನಿಲ್ಲಿಸಿರುವುದನ್ನು ಗಾಝಾ ಪಟ್ಟಿಯಲ್ಲಿರುವ ಸಹಾಯ ವ್ಯವಸ್ಥೆಯ ಪತನಕ್ಕೆ ಕಾರಣವಾಗುತ್ತದೆ. ಪಾಶ್ಚಿಮಾತ್ಯ ದೇಶಗಳು ಘೋಷಿಸಿರುವ ನೆರವನ್ನು  ಯುಎನ್‌ಆರ್‌ಡಬ್ಲ್ಯೂಎಯಿಂದ ಹಿಂತೆಗೆದುಕೊಳ್ಳವ ನಿರ್ಧಾರವು ಅಪಾಯಕಾರಿ ಮತ್ತು ಇದು ದೂರಗಾಮಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಜಗತ್ತು ಗಾಝಾದ ಜನರನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಗ್ರಿಫಿತ್ಸ್ ಮಂಗಳವಾರ ಇತರ ಮಾನವೀಯ ಸಂಘಟನೆಯ ನಾಯಕರೊಂದಿಗೆ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದಲ್ಲದೆ ಇಸ್ರೇಲ್‌ ಪಡೆಗಳು ಆಕ್ರಮಿತ ವೆಸ್ಟ್‌ ಬ್ಯಾಂಕ್‌ನಲ್ಲಿ ಪ್ಯಾಲೆಸ್ತೀನಿಯನ್ನರ ಕಾನೂನುಬಾಹಿರ ಹತ್ಯೆಯನ್ನು ತಕ್ಷಣವೇ ಕೊನೆಗೊಳಿಸಬೇಕು ಎಂದು UN ಮಾನವ ಹಕ್ಕುಗಳ ಕಚೇರಿ ಹೇಳಿದೆ.

UNRWAಗಾಗಿ ನೆರವಿನ ನಿಧಿಯನ್ನು ನಿಲ್ಲಿಸುವ ವಿವಿಧ ಸದಸ್ಯ ರಾಷ್ಟ್ರಗಳ ನಿರ್ಧಾರಗಳು ಗಾಝಾದ 2.2 ಮಿಲಿಯನ್ ಜನರಿಗೆ ದುರಂತ ಪರಿಣಾಮಗಳನ್ನು ಉಂಟುಮಾಡುತ್ತವೆ. ಈ ನಿರ್ಧಾರಗಳನ್ನು ಮರುಪರಿಶೀಲಿಸುವಂತೆ ನಾವು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಸುಮಾರು ಹನ್ನೆರಡು ಪಾಶ್ಚಿಮಾತ್ಯ ದೇಶಗಳು UNRWAಗೆ ಧನಸಹಾಯವನ್ನು ಸ್ಥಗಿತಗೊಳಿಸಿವೆ. 12 ಮಾಜಿ ಸಿಬ್ಬಂದಿಗಳು ಅಕ್ಟೋಬರ್ 7ರಂದು ಇಸ್ರೇಲ್ ಮೇಲಿನ ದಾಳಿಯಲ್ಲಿ ಭಾಗವಹಿಸಿದ್ದಾರೆ ಎಂಬ ಆರೋಪವನ್ನು ಮಾಡಲಾಗಿದೆ.

ಗಾಝಾದ ದಕ್ಷಿಣಕ್ಕೆ ಇಸ್ರೇಲ್‌ ಯುದ್ಧ ಘೋಷಣೆ ಬಳಿಕ ಲಕ್ಷಾಂತರ ಮಂದಿ ವಲಸೆ ಹೋಗಿದ್ದಾರೆ. ಇದರಿಂದ ಗಾಝಾದ ದಕ್ಷಿಣದಲ್ಲಿ ನಿರಾಶ್ರಿತರ ಕೇಂದ್ರಗಳಲ್ಲಿ ಲಕ್ಷಾಂತರ ಮಂದಿ ನೆಲೆಸಿದ್ದಾರೆ. ಈ ಭಾಗದಲ್ಲಿ ಹಸಿದ ಮತ್ತು ಹತಾಶೆಯ ಜನರು ಈಜಿಪ್ಟ್‌ನ ಗಡಿಯ ಸಮೀಪವಿರುವ ರಫಾ ಪ್ರದೇಶದಲ್ಲಿ ಆಹಾರ ಮತ್ತು ಇತರ ಸರಬರಾಜುಗಳನ್ನು ಸಾಗಿಸುವ ಟ್ರಕ್‌ಗಳನ್ನು ತಡೆಯುವುದು. ಆಹಾರ ಪೊಟ್ಟಣಗಳನ್ನು ಕಸಿದುಕೊಳ್ಳುತ್ತಿರುವುದು ಕಂಡು ಬಂದಿತ್ತು. ರಫಾ ಕ್ರಾಸಿಂಗ್‌ನಲ್ಲಿ ಜನರು ನೆರವು ಸಾಗಾಟ ಮಾಡುವ ಟ್ರಕ್‌ಗಳನ್ನು ಸುತ್ತುವರಿಯುತ್ತಾರೆ, ಕೆಲವರು ಟ್ರಕ್‌ಗಳ ಮೇಲೆ ಹಾರುತ್ತಾರೆ. ನೀರಿನ ಬಾಟಲಿಗಳನ್ನು, ಆಹಾರದ ಪೊಟ್ಟಣಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಕೆಲವು ಟ್ರಕ್‌ಗಳನ್ನು ಮುಸುಕುಧಾರಿಗಳು ಕಾವಲು ಕಾಯುತ್ತಿರುವುದು ಕೂಡ ಕಂಡು ಬಂದಿತ್ತು.ಇದು ಕೇವಲ ರಫಾ ನಗರದ ಸ್ಥಿತಿ ಮಾತ್ರವಲ್ಲ. ಗಾಝಾದಲ್ಲಿನ ಮಾನವೀಯ ಪರಿಸ್ಥಿತಿಯು ತುಂಬಾ ಕೆಟ್ಟದಾಗಿದೆ.

ಪ್ಯಾಲೆಸ್ತೀನ್‌ಗೆ ಹರಿದು ಬರುತ್ತಿರುವ ನೆರವು ಸಾಕಾಗುತ್ತಿಲ್ಲ. ಜನರು ಮನೆಯಿಲ್ಲದೆ, ಆಹಾರವಿಲ್ಲದೆ, ನೀರಿಲ್ಲದೆ ಮತ್ತು ವೈದ್ಯಕೀಯ ಸಾಮಗ್ರಿಗಳಿಲ್ಲದೆ ಪರದಾಡುತ್ತಿದ್ದಾರೆ. ವಿಶ್ವಸಂಸ್ಥೆಯು ಇತ್ತೀಚೆಗೆ ಗಾಝಾದಲ್ಲಿರುವ ಜನರು ಆಹಾರಕ್ಕಾಗಿ ಹತಾಶರಾಗಿದ್ದಾರೆ, ಅವರು ನೆರವು ಟ್ರಕ್‌ಗಳನ್ನು ತಡೆದು ಸಿಕ್ಕಿದ್ದನ್ನು ಕಸಿದುಕೊಂಡು ತಿನ್ನುವ ಸ್ಥಿತಿಯಲ್ಲಿದ್ದಾರೆ. ಇತ್ತೀಚೆಗೆ ಗಾಝಾ ಪಟ್ಟಿಗೆ ಭೇಟಿ ನೀಡಿದ್ದ ಯುಎನ್‌ಆರ್‌ಡಬ್ಲ್ಯೂಎ ಮುಖ್ಯಸ್ಥ ಫಿಲಿಪ್ ಲಜ್ಜರಿನಿ ಮಾತನಾಡುತ್ತಾ, ಗಾಝಾ ನಿವಾಸಿಗಳು ಸುದೀರ್ಘ ವರ್ಷಗಳಿಂದ ಇಸ್ರೇಲ್‌ನ ದಾಳಿಗೆ ಒಳಗಾಗಿದ್ದರೂ ಈ ರೀತಿಯ ಹಸಿವನ್ನು ಎಂದು ಅನುಭವಿಸಿರಲಿಕ್ಕಿಲ್ಲ. ರಾಫಾದಲ್ಲಿನ ಜನರು ಸಂಪೂರ್ಣ ಹತಾಶೆಯಿಂದ ಟ್ರಕ್‌ನಲ್ಲಿ ಸಾಗಿಸುತ್ತಿದ್ದ ನೆರವು ಸಾಮಾಗ್ರಿ ಕಸಿದು ಸ್ಥಳದಲ್ಲೇ ತಿನ್ನುತ್ತಿದ್ದು, ಅವರ ಹಸಿವಿನ ದಾಹವನ್ನು ಸೂಚಿಸುತ್ತದೆ. ಈ ಭಯಾನಕ ಸ್ಥಿತಿ ನನ್ನ ಕಣ್ಣುಗಳಿಂದ ನೋಡಿದೆ ಎಂದು ಫಿಲಿಪ್ ಲಜ್ಜರಿನಿ ಹೇಳಿದ್ದರು.

ರಾಫಾದಲ್ಲಿ ಸಾಮೂಹಿಕ ಅಂತ್ಯಕ್ರಿಯೆ;  ದಕ್ಷಿಣ ಗಾಝಾದ ರಾಫಾದಲ್ಲಿ ಇಸ್ರೇಲ್‌ ಮಿಲಿಟರಿಯಿಂದ ಹತ್ಯೆಗೀಡಾದ ಪ್ಯಾಲೆಸ್ತೀನ್‌ ನಾಗರಿಕರ ಮೃತದೇಹವನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಗಿದೆ. ನಾಪತ್ತೆಯಾದವರ ಸಂಬಂಧಿಕರು ಸಮಾಧಿ ಸ್ಥಳಕ್ಕೆ ಆಗಮಿಸಿದ್ದರೂ, ಮೃತರ ದೇಹಗಳನ್ನು ಗುರುತಿಸಲು ಸಾಧ್ಯವಾಗದೆ ಹಿಂತಿರುಗಿದ್ದಾರೆ.

ಅಕ್ಟೋಬರ್ 7ರಿಂದ ಗಾಝಾದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯ ಬಳಿಕ ಗಾಝಾದಲ್ಲಿ ಕನಿಷ್ಠ 26,751 ಜನರು ಸಾವನ್ನಪ್ಪಿದ್ದಾರೆ ಮತ್ತು 65,636 ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಲಕ್ಷಾಂತರ ಮನೆಗಳು ನೆಲಸಮಗೊಳಿಸಲಾಗಿದೆ.

ಇದನ್ನು ಓದಿ: ದಲಿತ ರೈತರಿಗೆ ಇಡಿ ಸಮನ್ಸ್‌ ಪ್ರಕರಣ: ನಿರ್ಮಲಾ ಸೀತಾರಾಮನ್‌ ವಜಾಗೆ ಆಗ್ರಹಿಸಿ ಪತ್ರ ಬರೆದಿದ್ದ IRS ಅಧಿಕಾರಿ ಅಮಾನತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...