ಕ್ರಾಂತಿಕಾರಿ ಹುತಾತ್ಮ ಭಗತ್ ಸಿಂಗ್ ಅವರು 114ನೇ ಜನ್ಮ ದಿನದಂದು ಅವರ ಧೈರ್ಯ, ಅರ್ಪಣಾ ಮನೋಭಾವ, ವಿಚಾರಧಾರೆ ಮತ್ತು ಜೀವನಾದರ್ಶಗಳನ್ನು ಇಡೀ ದೇಶ ನೆನಪಿಸಿಕೊಂಡಿದೆ. ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಕೂಡ ಭಗತ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಪ್ರತಿಭಟನಾ ನಿರತ ಸಿಂಘು, ಟಿಕ್ರಿ, ಶಹಜಾನ್‌ಪುರ, ಗಾಝಿಪುರ್ ಗಡಿಗಳಲ್ಲಿ ರೈತರು ಕಾರ್ಯಕ್ರಮಗಳನ್ನು ಆಯೋಜಿಸಿ, ಭಗತ್ ಸಿಂಗ್ ವಿಚಾರಧಾರೆಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ಜೊತೆಗೆ ಪಂಜಾಬ್‌ನಲ್ಲಿ ಇಂದು ಭಾರಿ ಕಾರ್ಯಕ್ರಮಗಳ ಮೂಲಕ ರೈತರು ಹುತಾತ್ಮ ಭಗತ್ ಸಿಂಗ್‌ಗೆ ಗೌರವ ಸಮರ್ಪಿಸಿದ್ದಾರೆ.
#MeraRangDeBasantiChola fills enthusiasm among activists at anti imperialism conference by @Bkuektaugrahan @BkuTikri pic.twitter.com/X19moqysiC
— Neel Kamal (@NeelkamalTOI) September 28, 2021
ಸಂಯುಕ್ತ ಕಿಸಾನ್ ಮೋರ್ಚಾ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಜನರಿಗಾಗಿ ತನ್ನ ಜೀವವನ್ನು ಅರ್ಪಿಸಿದ ಭಾರತದ ಹೆಮ್ಮೆಯ ಮಗನನ್ನು ಎಲ್ಲ ಪ್ರತಿಭಟನಾ ಸ್ಥಳಗಳಲ್ಲಿ ಸ್ಮರಿಸಲಾಯಿತು. ಭಗತ್ ಸಿಂಗ್ ಅವರ ತ್ಯಾಗವು ರೈತರಿಗೆ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಸ್ಫೂರ್ತಿ ನೀಡುತ್ತದೆ ಎಂದು ಎಸ್‌ಕೆಎಂ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Ocean of Farmers at Barnala Farmers conference. #ShaheedBhagatSingh #FarmersProtest pic.twitter.com/ezYtzgXLR5
— Tikri Updates (@BkuTikri) September 28, 2021
ಛತ್ತೀಸ್‌ಗಢದ ಕಿಸಾನ್ ಮಜ್ದೂರ್ ಮಹಾಸಂಘದಿಂದ ಛತ್ತೀಸ್‌ಗಢದ ರಾಜೀಮ್‌ನಲ್ಲಿ ನಡೆದ ಬೃಹತ್ ಕಿಸಾನ್ ಮಹಾಪಂಚಾಯತ್‌ನಲ್ಲಿ ಎಸ್‌ಕೆಎಂ ನಾಯಕರು ಭಾಗಿಯಾಗಿದ್ದರು. ಲಕ್ಷಾಂತರ ರೈತರು ಭಾಗಿಯಾಗಿದ್ದ ಈ ಮಹಾಪಂಚಾಯತ್‌ನಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಮಹಾಪಂಚಾಯತ್ ಆರು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಿದೆ. ರೈತ ವಿರೋಧಿ ಕೃಷಿ ಮತ್ತು ಗ್ರಾಹಕರ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಬೇಕು. ಕನಿಷ್ಠ ಬೆಂಬಲ ಬೆಲೆಯಲ್ಲಿ ಖಾರಿಫ್ ಋತುವಿನ ಭತ್ತವನ್ನು ರಾಜ್ಯ ಸರ್ಕಾರ ಪ್ರತಿ ಎಕರೆಗೆ 25 ಕ್ವಿಂಟಾಲ್‌ಗೆ ಖರೀದಿಸಬೇಕು. ನೀರಾವರಿ ಸಂಪನ್ಮೂಲಗಳನ್ನು ಹೆಚ್ಚಿಸಬೇಕು. ಬೆಳೆ ವೈವಿಧ್ಯತೆಯನ್ನು ಉತ್ತೇಜಿಸಬೇಕು. ಕೃಷಿ ಭೂಮಿಯನ್ನು ಬೇರೆ ಇತರೆ ಕಾರಣಗಳಿಗಾಗಿ ಸ್ವಾಧೀನ ಪಡಿಸಿಕೊಳ್ಳಬಾರದು ಮತ್ತು ಬುಡಕಟ್ಟು ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಚಳವಳಿಗಳ ಮೇಲಿನ ದಮನವನ್ನು ನಿಲ್ಲಿಸಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಬಹುಜನ ಭಾರತ; ಭಗತ್ ಸಿಂಗ್ ಎಂಬ ಬೆಳಕಿಗೆ ಬೆನ್ನು ಮಾಡಿರುವ ಸಮಾಜ


