Homeಮುಖಪುಟಜಾಗತಿಕ ಲಿಂಗಾಯಿತ ಮಹಾಸಭಾದ ಜಾಮದಾರ್ ಸಂದರ್ಶನ; ರಾಜಕಾರಣಿಗಳು ತಮ್ಮ ಲಾಭಕ್ಕೆ ಸ್ವಾಮಿಗಳನ್ನು ಬಳಸಿಕೊಳ್ಳುತ್ತಿದಾರಷ್ಟೇ

ಜಾಗತಿಕ ಲಿಂಗಾಯಿತ ಮಹಾಸಭಾದ ಜಾಮದಾರ್ ಸಂದರ್ಶನ; ರಾಜಕಾರಣಿಗಳು ತಮ್ಮ ಲಾಭಕ್ಕೆ ಸ್ವಾಮಿಗಳನ್ನು ಬಳಸಿಕೊಳ್ಳುತ್ತಿದಾರಷ್ಟೇ

- Advertisement -
- Advertisement -

ಕೆಲ ದಿನಗಳ ಹಿಂದಷ್ಟೇ ಭಾರಿ ಸದ್ದು ಮಾಡಿದ್ದ ಮೀಸಲಾತಿ ಹೋರಾಟ ಈಗ ನಡೆಯುತ್ತಿರುವ ಕಲಾಪದಲ್ಲಿ ಪ್ರಸ್ತಾಪವೇ ಆಗುತ್ತಿಲ್ಲ. ಭಾರಿ ಹವಾ ಮಾಡಿದ ಪಂಚಮಸಾಲಿ ಹೋರಾಟವೂ ಸಿ.ಡಿ ಗದ್ದಲದಲ್ಲಿ ಗಾಯಬ್ ಆಗಿದೆ. ಈ ನಡುವೆ, ಲಿಂಗಾಯತ ಧರ್ಮದಲ್ಲಿ ಈ ವೀರಶೈವರದೇನು ಕೆಲಸ, ಅವರು ಲಿಂಗಾಯತ ಧರ್ಮದ 100 ಉಪಪಂಗಡಗಳಲ್ಲಿ ಒಂದು ಅಷ್ಟೇ ಎಂದು ನಿವೃತ್ತ ಐಎಎಸ್ ಅಧಿಕಾರಿ, ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ್ ಜಾಮದಾರ್ ಹೇಳಿದ್ದಾರೆ. ನಾನುಗೌರಿ.ಕಾಂ ಜೊತೆಗಿನ ದೂರವಾಣಿ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ನಾನುಗೌರಿ: ಇತ್ತೀಚೆಗೆ ಸುದ್ದಿಯಾದ ಪಂಚಮಸಾಲಿ ಮೀಸಲಾತಿ ಹೋರಾಟ ಸದನದಲ್ಲಿ ಸುದ್ದಿಯೇ ಆಗಲಿಲ್ಲ. ಈ ಕುರಿತು ನಿಮ್ಮ ಅಭಿಪ್ರಾಯ?

ಜಾಮದಾರ್: ರೀ ಅದೊಂದು ಹೋರಾಟವಾ? ಅಮಾಯಕ ಪಂಚಮಸಾಲಿಗಳನ್ನು ದಿಕ್ಕು ತಪ್ಪಿಸಿದ ಮತ್ತು ರಾಜಕಾರಣಿಗಳು ತಮ್ಮ ಲಾಭಕ್ಕೆ ಸ್ವಾಮಿಗಳನ್ನು ಬಳಸಿಕೊಂಡ ಹೋರಾಟವಾಗಿದೆ.

ನಾನುಗೌರಿ: ಅಂದರೆ ಪಂಚಮಸಾಲಿಗಳು 2ಎ ಮೀಸಲಾತಿಗೆ ಅರ್ಹರೇ ಅಲ್ಲ ಎಂಬುದು ನಿಮ್ಮ ಅಭಿಪ್ರಾಯವೇ?

ಜಾಮದಾರ್: ಎಲ್ಲ ಸಮುದಾಯಗಳಿಗೂ ತಮ್ಮ ಪಾಲಿನ ಮೀಸಲಾತಿ ಕೇಳುವ ಹಕ್ಕಿದೆ. ಆದರೆ ಇದನ್ನು ಯಡಿಯೂರಪ್ಪ ಆಗಲಿ, ಸಿಸಿ ಪಾಟೀಲ್, ನಿರಾಣಿ ಅವರಾಗಲಿ ಏಕ್‌ಧಂ ನಿರ್ಣಯ ಮಾಡಲು ಆಗಲ್ಲ. ಅದಕ್ಕೆ ಒಂದು ಪ್ರೊಸೆಸ್ ಅಂತಾ ಇದೆ. ಈ ರಾಜಕಾರಣಿಗಳು ತಮ್ಮ ಲಾಭಕ್ಕೆ ಸ್ವಾಮಿಗಳನ್ನು ಬಳಸಿಕೊಳ್ಳುತ್ತಿದಾರಷ್ಟೇ.

ನಾನುಗೌರಿ.ಕಾಂ: 3-ಬಿಯಿಂದ 2ಎ ಗೆ ಸೇರಲು ಅವರ ಪ್ರತಿಭಟನೆ ನಡೆಯಿತು. ಈ ಕುರಿತು ನಿಮ್ಮ ಅಭಿಪ್ರಾಯ ಏನು?

ಜಾಮದಾರ್: ಲಿಂಗಾಯತ ಧರ್ಮದಲ್ಲಿ 100 ಉಪ ಪಂಗಡಗಳಿವೆ. 3-ಬಿಯಲ್ಲಿ ಉಲ್ಲೇಖ ಆಗಿರುವುದು ಕೇವಲ 23 ಲಿಂಗಾಯತ ಉಪ ಪಂಗಡಗಳಷ್ಟೆ. ಉಳಿದ 77 ಉಪ ಪಂಗಡಗಳ ಬಗ್ಗೆ ಯಾರೂ ಯೊಚಿಸುತ್ತಿಲ್ಲ. ಕೆಲವು ರಾಜಕಾರಣಿಗಳ ಪುಸಲಾವಣೆಯೊಂದಿಗೆ ಕಾವಿ ತೊಟ್ಟವರು ಪಂಚಮಸಾಲಿ ಸಮಯದಾಯದ ದಿಕ್ಕು ತಪ್ಪಿಸಲು ನೋಡಿದರು. ಅದರ ಭಾಗವೇ ಈ ಹೋರಾಟ. ಈ ಹೋರಾಟ ಲಿಂಗಾಯತರಿಗೆ ಒಂದು ಕಪ್ಪು ಚುಕ್ಕೆ.

ನಾನುಗೌರಿ: ಇದರ ಹಿಂದೆ ಒಂದು ದೊಡ್ಡ ಶಕ್ತಿಯೇ ಇದೆಯಲ್ಲವಾ?

ಜಾಮದಾರ್: ಎಲ್ಲ ಪಂಚಮಸಾಲಿಗಳಲ್ಲ. ಆದರೆ ಅವರನ್ನು ಪ್ರತಿನಿಧಿಸುತ್ತೇವೆ ಎನ್ನುವ ಸ್ವಾಮಿಗಳು, ರಾಜಕಾರಣಿಗಳ ಒಂದು ಗುಂಪಿದೆ. ಬೇಡ ಜಂಗಮರ ಹೆಸರಲ್ಲಿ ಬೇಡರ ಮೀಸಲಾತಿ ಕದಿಯುವ ಗುಂಪಿದೆ ಮತ್ತು ವೀರಶೈವ-ಲಿಂಗಾಯತ ಎನ್ನುವ ತಳಬುಡವಿಲ್ಲದ ಗುಂಪೂ ಇದೆ. ಈ ಮೂರೂ ಗುಂಪುಗಳು ಅಖಂಡ ಲಿಂಗಾಯತ ಧರ್ಮವನ್ನು ಒಡೆದು ಹಾಕುತ್ತಿವೆ.

ನಾನುಗೌರಿ: ನೀವು ವೀರಶೈವ-ಲಿಂಗಾಯತ ಎಂಬ ತಳಬುಡವಿಲ್ಲದ ಗುಂಪು ಎಂದಿರಿ. ಈಗ ಅದೇ ಹೆಸರಲ್ಲಿ ಒಂದು ನಿಗಮ ಆಗಿದೆಯಲ್ಲ?

ಜಾಮದಾರ್: ವೀರಶೈವ-ಲಿಂಗಾಯತ ಅಂದರೆ ಯಾರ‍್ರಿ ಇವರು? ವೀರಶೈವರೂ ಅಲ್ಲ, ಈ ಕಡೆ ಲಿಂಗಾಯತರೂ ಅಲ್ಲ. ಲಿಂಗಾಯತ ಧರ್ಮಧ ನೂರು ಉಪ ಪಂಗಡಗಳಲ್ಲಿ ಅದೂ ಒಂದು ಅಷ್ಟೇ. ಈ ಹೆಸರಲ್ಲಿ ಒಂದು ಸರ್ವಶ್ರೇಷ್ಠ ಧರ್ಮವಾದ ಲಿಂಗಾಯತ ಧರ್ಮವನ್ನು ಇವರೆಲ್ಲ ನಾಶ ಮಾಡಲು ಹೊರಟಿದ್ದಾರೆ. ನಾವು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮಾಡಿದಾಗ, ನೀವೆಲ್ಲ ಧರ್ಮ ಒಡೆಯುತ್ತಿದ್ದೀರಾ ಎಂದರು. ಈಗ ಅವರು ಮಾಡುತ್ತಿರುವುದೇನು? ಕೆಲವು ಸ್ವ ಹಿತಾಸಕ್ತಿ ಗುಂಪುಗಳು ಪುಡಿಗಾಸಿಗಾಗಿ ಧರ್ಮ ಒಡೆಯುತ್ತಿವೆ. ಇದರ ಹಿಂದೆ ಒಂದು ವ್ಯವಸ್ಥಿತ ಲಾಭಕರ ಸ್ವ ಹಿತಾಸಕ್ತಿಯ ಗುಂಪು ಇವೆ.

ನಾನುಗೌರಿ: ಈ ನಿಗಮಕ್ಕೆ 500 ಕೋಟೊ ರೂ ಕೊಟ್ಟಿದ್ದಾರಲ್ಲ?

ಜಾಮದಾರ್: ಅಲ್ರೀ ಇನ್ನೂ ಆ ನಿಗಮ ಅಧಿಕೃತವಾಗಿ ಚಾಲನೆಗೇ ಬಂದಿಲ್ಲ. ಅದಕ್ಕೆ 500 ಅಲ್ಲ, 100 ಕೋಟಿ ಅಲ್ಲ, 10 ಕೋಟಿ ರೂ ಕೂಡ ಸಿಗಲ್ಲ. ಇದೆಲ್ಲ ಒಂದು ಹುಚ್ಚಾಟ ಮತ್ತು ಪಾಲಿಟಿಕಲ್ ಗೇಮ್ ಅಷ್ಟೇ.

ನಾನುಗೌರಿ: ಅಂದರೆ ಈ ಹೋರಾಟಕ್ಕೆ ಭದ್ರ ಬುನಾದಿಯೇ ಇಲ್ಲ ಎನ್ನುತ್ತೀರಾ?

ಜಾಮದಾರ್: ಈ ಕುರಿತು ಅಂತಿಮ ತೀರ್ಮಾನ ಕೊಡಲಾರೆ, ಆದರೆ ಖಾವಿ ಧರಿಸಿ ಮೀಸಲಾತಿ ಕೇಳಿದ ಕೂಡಲೇ ಅದು ಸಿಗಲ್ಲ. ಅದಕ್ಕೆ ಪ್ರೊಸೆಸ್ ಇದೆ. ಯಡಿಯೂರಪ್ಪ ಅಂತಲ್ಲ, ಯಾರೇ ಸಿಎಂ ಆಗಿದ್ದರೂ ಆ ಪ್ರಕ್ರಿಯೆಯ ಮೂಲಕವೇ ಹೋಗಬೇಕು. ಲಿಂಗಾಯತ ಪ್ರತ್ಯೇಕ ಧರ್ಮ ಸಾಂವಿಧಾನಿಕ ಮಾನ್ಯತೆ ತಡೆದ ಬಿಜೆಪಿ-ಆರ್‌ಎಸ್‌ಎಸ್ ಇಂತಹ ದುಸ್ಸಾಹಸ ಮಾಡುತ್ತಿವೆ. ಈ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಎಲ್ಲ ಒಂದೇ ಬಿಡಿ.

ನಾನುಗೌರಿ: ಪಂಚಮಸಾಲಿಗಳಿಗೆ 2-ಎ ಸ್ಥಾನಮಾನ ಸಿಕ್ಕಿತು ಅಂದುಕೊಳ್ಳೋಣ. ಆಗ ಏನಾಗಬಹುದು?

ಜಾಮದಾರ್: ಈಗ ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿ ಮಾಡಿದ 10 ಪರ್ಸೆಂಟ್ ಮೀಸಲಾತಿಯಲ್ಲಿ ಪಂಚಮಸಾಲಿಗಳು, ಬೇಡ ಜಂಗಮರು, ಬಣಜಿಗರು ಕೂಡ ಬರುತ್ತಾರೆ. 2-ಎ ಮತ್ತು 10 ಪರ್ಸೆಂಟ್ ಎರಡನ್ನೂ ಪಡೆಯಲಾಗಲ್ಲ. ಈ ಕಾನೂನು ಬಗ್ಗೆ ತಿಳಿಯದೇ ಏನೇನೋ ಹೋರಾಟ ಮಾಡುತ್ತಿದ್ದಾರೆ.

ಸಂದರ್ಶನ: ಪಿ.ಕೆ. ಮಲ್ಲನಗೌಡರ್

(ಈ ಸಂದರ್ಶನದಲ್ಲಿ ತಪ್ಪು ಗ್ರಹಿಕೆಯಿಂದಾಗಿ ಖಾವಿ ಧರಿಸಿದವರ ಪುಡಿಗಾಸಿನ ಹೋರಾಟ ಎಂದು ಬಂದಿತ್ತು. ಅದಕ್ಕಾಗಿ ವಿಷಾಧಿಸುತ್ತೇವೆ)


ಇದನ್ನೂ ಓದಿ: ‘ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ’ – ಪಂಚಮಸಾಲಿ ಸ್ವಾಮೀಜಿಯ ವಿಶೇಷ ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಜಾಮದಾರರದು ತಪ್ಪು ಅಭಿಪ್ರಾಯ..
    ಈ ಹಿಂದೆ ಬೇಡಜಂಗಮರೆಂಬ ಪಂಗಡ ಲಿಂಗಾಯತ ಪಂಥದಲ್ಲಿ ಬರುವುದು ಎಂದಿದ್ದರು.
    ಜಂಗಮ, ಜಾತಿ ಪಟ್ಟಿಯಲ್ಲಿ ಏಕಿಲ್ಲ ಎಂಬುದನ್ನು ಜಾಮದಾರ ವಿವರಿಸಲಿ.
    ಮೀಸಲಾತಿ ಇರುವುದು ಜಾತಿಗೇ ಹೊರತು ಮತ, ಧರ್ಮಕ್ಕಲ್ಲ ಎನ್ನುವ ಸಾಮಾನ್ಯ ಅರಿವೂ ಜಾಮದಾರರಿಗಿಲ್ಲ.
    ಬಣಜಿಗ, 2A ದಲ್ಲಿ ಶೈಕ್ಷಣಿಕ ಮೀಸಲಾತಿ ಮತ್ತು ಕೇಂದ್ರ OBC ಯಲ್ಲಿ ಬರುತ್ತದೆ ಎನ್ನುವ ಸತ್ಯವನ್ನೂ ಮುಚ್ಚಿಡುತ್ತಾರೆ. ಮೀಸಲಾತಿ ವಂಚಿಸಿ ವೀರಶೈವ ಅಥವಾ ಲಿಂಗಾಯತರನ್ನು ಶೋಷಿಸುವುದೇ ಧರ್ಮವಾಗಬಾರದು..!!

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...