Homeಕರ್ನಾಟಕಬೆನ್ನು ಬಿಡದ ಅಪರಾಧ

ಬೆನ್ನು ಬಿಡದ ಅಪರಾಧ

- Advertisement -
- Advertisement -

ಮಂಡ್ಯ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತ ಸುಮಲತಾ ಅಂಬರೀಶರ ಚುನಾವಣಾ ಪ್ರಚಾರ ಮಾಡಿ ಸುಸ್ತಾಗಿ ಬಂದು ಮನೆ ಮುಂದೆ ನಿಂತಿದ್ದೆ. ಆಗ ನಾಗಮಂಗಲದಲ್ಲಿ ನಡೆದ ದೇವೇಗೌಡರ ಸಭೆಯ ಬಗ್ಗೆ ಮನಸ್ಸು ಒಂದಿಷ್ಟು ಘಾಸಿಗೊಂಡಿತ್ತು. ಏಕೆಂದರೆ ಕಾಂಗ್ರೆಸ್ ಮತ್ತು ದಳದ ಘಟಾನುಘಟಿ ಲೀಡರುಗಳ ಸಮ್ಮುಖದಲ್ಲಿ ಮಾತನಾಡುತ್ತಿದ್ದ ಗೆಳೆಯ ಶಿವರಾಮೇಗೌಡ ಸುಮಲತಾರನ್ನು ‘ಮಾಯಾಂಗನೆ’ ಎಂದು ಮೂದಲಿಸಿದ್ದಲ್ಲದೆ, ‘ಕರ್ನಾಟಕದ ಜಯಲಲಿತ ಆಗಲು ಬಂದಿದ್ದಾಳೆ’ ಎಂದುಬಿಟ್ಟಿದ್ದ. ಇದು ಅವನ ವ್ಯಕ್ತಿತ್ವಕ್ಕೆ ಸರಿಯಾದ ಮಾತು, ಆದರೆ ಆ ಸಭೆಯಲ್ಲಿದ್ದ ಸಿದ್ದರಾಮಯ್ಯ ಮತ್ತು ದೇವೇಗೌಡರು ಸಭ್ಯತೆಯ ಎಲ್ಲೆ ಮೀರಿದ್ದ ಶಿವರಾಮೇಗೌಡನ ಮಾತಿಗೆ ಆಕ್ಷೇಪವೆತ್ತಿರಲಿಲ್ಲ. ಬದಲಿಗೆ ದೇವೇಗೌಡರ ಮಾತಿಗೆ ಅವಕಾಶ ದೊರೆತಾಗ ‘ನಾನು ಭಾಷಣ ಮಾಡಲ್ಲ. ಶಿವರಾಮೇಗೌಡರ ಮಾತೇ ಅಂತಿಮ’ ಎಂದು ಹೇಳಿ ದಂಗುಬಡಿಸಿದ್ದರು. ಅಂತು ಇವರಿಗೇನೂ ಕೇಡುಗಾಲ ಎಂದುಕೊಂಡು ಸುಮ್ಮನೆ ಊರಿಗೆ ಬಂದಿದ್ದೆ.

ಆ ದಿನ ಸಾಯಂಕಾಲ ಮನೆ ಮುಂದೆ ಒಂದು ಬೈಕ್ ಬಂದು ನಿಂತಿತು. ಅಲ್ಲದೆ ‘ನಮಸ್ಕಾರ ಕಣಣ್ಣಾ’ ಎಂದಿತು. ನಸುಗತ್ತಲಾದ್ದರಿಂದ ಯಾರೆಂದು ಅರಿವಾಗಲಿಲ್ಲ ಹತ್ತಿರ ಹೋದೆ. ‘ನಾನು ಕಣಣ್ಣ ಎಂದ’. ‘ನಾನು ಮತ್ತೂ ಅನುಮಾನಿಸಿ ಗೊತ್ತಾಗಲಿಲ್ಲ’ ಎಂದೆ. ‘ನಾನು ಕಣಣ್ಣ, ಅದೇ ಗಂಗಾಧರಮೂರ್ತಿ’ ಎಂದ. ಆಗ ತಿಳಿಯಿತು. ನಮ್ಮೂರ ಮಗಳ ಮಗನಾದ ಈತ ತನ್ನ ಪರಿಚಯ ಹೇಳಿಕೊಳ್ಳಲು ‘ನಾನು ಗಂಗಾಧರ ಮೂರ್ತಿ ಕೊಂದವನು’ ಎಂದು ಹೇಳಿಕೊಳ್ಳುತ್ತಿದ್ದಾನೆ’ ಎಂಬುದು ಅರಿವಿಗೆ ಬಂತು. ಒಂದುಕ್ಷಣ ಅಳುಕಾಗಿ ‘ಏನಪ್ಪ ಸಮಾಚಾರ’ ಎಂದೆ. ‘ಏನಿಲ್ಲ ಕಣಣ್ಣ ನಿಮ್ಮತ್ರ ಏನೋ ಹೇಳಬೇಕಾಗ್ಯದೆ’ ಎಂದ. ‘ಏನು ವಿಷಯ’ ಎಂದೆ. ‘ಅದೆ ಶಿವರಾಮೇಗೌಡನ ವಿಷಯ ಕಣಣ್ಣ’ ಎಂದೆ. ‘ಅಯ್ಯೊ ಅವುನ ವಿಷಯ ಬಂದೂ ಬಂದೂ ಸಾಕಾಗ್ಯದೆ ಕಣಪ್ಪ. ಈಗವುನ್ನೇನು ಮುಟ್ಟಂಗಿಲ್ಲ. ದೇವೇಗೌಡ್ರು ಕರಕಂಡು ಬಂದು ಎಂ.ಪಿ ಮಾಡ್ಯವುರೆ’ ಎಂದೆ. ಆದ್ರು ಬರಿಬೇಕು ಬುಡಬಾರ್ದು ಕಣಣ್ಣ’ ಎಂದ. ‘ಆಯ್ತು ಬರಿಯನ ಅದೇನೇಳು’ ಎಂದೆ. ನೀವೊಂದೆರಡು ದಿನ ಬಿಡುವಾಗಿ ಸಿಕ್ಕಬೇಕಲ್ಲಣ್ಣ’ ಎಂದ. ‘ಸಿಗನ ತಗೊ ನನಿಗೇನು ಕ್ಯಲ್ಸಿಲ್ಲ’ ಎಂದೆ. ಶಿವರಾಮೇಗೌಡ ಕೋರ್ಟಿಗೋಗಬಹುದು’ ಎಂದ. ‘ಯಾಕೆ!’ ಎಂದೆ. ‘ಗಂಗಾಧರ ಮೂರ್ತಿ ಕೊಲೇಲಿ ನಮ್ಮನ್ನ ಹ್ಯಂಗೆ ಬಳಸಿಗಂಡ ಅನ್ನದನ್ಯಲ್ಲ ಹೇಳತಿನಿ’ ಎಂದ.

‘ನೋಡ್ರಪ್ಪ ಈಚೆಗೆ ನಮ್ಮ ಕೋರ್ಟಿಗೆ ಯಾರೂ ಹೆದರತಾಯಿಲ್ಲ. ಕೇಸಿನ ತೀರ್ಪು ಬರಕ್ಕೆ ಕನಿಷ್ಟ ಇಪ್ಪತ್ತು ವರ್ಷ ಆಯ್ತಾ ಅದೆ. ಅಷ್ಟೊತ್ತಿಗೆ ಶಿವರಾಮ ನೀನು ನಾನು ಯಾರೂ ಇರದಿಲ್ಲ ಆದ್ರಿಂದ ಧೈರ್ಯವಾಗಿ ಹೇಳು ಬರಿಯನ’ ಎಂದೆ. ಬರಿಬೇಕು ಕಣಣ್ಣ. ಇವತ್ತು ನಾನು ಬಾಳ ಯಾತನೇಲಿದ್ದಿನಿ’ ಎಂದ. ಒಂದಿಷ್ಟು ಸುಮ್ಮನಾದ. ನಾನು ಗಂಗಾಧರ ಮೂರ್ತಿ ಕೊಲೆ ಕಾಡಿಸುತ್ತಿರಬಹುದೆ. ಈತ ಹೊಡೆದ ಮಚ್ಚಿನೇಟಿಗೆ ಮರು ಮಾತನಾಡದೆ ಬೈಕ್ ಸಮೇತ ಭೂಮಿಗೊರಗಿದ. ಆ ದೃಶ್ಯ ಜೀವ ಹಿಂಡುತ್ತಿರಬಹುದೆ. ಎಂದು ಒಂದುಕ್ಷಣ ಯೋಚಿಸಿ ‘ಯಾಕಪ್ಪ ಏನಾಯ್ತು’ ಎಂದೆ. ‘ನನಿಗೆ ಜೀವಾವಧಿ ಆಯ್ತು ಕಣಣ್ಣ. ಅದೇ ಟೈಮಿಗೆ ನನಿಗೆ ಮಗ ಹುಟ್ಟಿದ. ಇತ್ತಗೆ ಹೆರಿಗೆ ಆದ್ರೆ ಅತ್ತಗೆ ನಾನು ಜೈಲಿಗೋದೆ. ಹೋಗುವಾಗ ನನ್ನೆಡ್ತಿಗೆ ಧೈರ್ಯ ಹೇಳಿ ಹೋಗಿದ್ದೆ. ಪೆರೋಲ್ ಮ್ಯಾಲೆ ಬಿಡುಗಡೆ ಆಯ್ತು ಸಾ… ಅದು ಎಂಟು ದಿನಕ್ಕೆ ಮಾತ್ರ. ಊರಿಗೆ ಬಂದು ನೋಡ್ತಿನಿ. ಮಗನಿಗಾಗ್ಲೆ ಹನ್ನೆರಡೊರ್ಸ. ಅವುನ ಜೊತೆ ಅರಾಮಾಗಿದ್ದು ಪುನಃ ಜೈಲಿಗೋದೆ ಕಣಣ್ಣ. ಒಳ್ಳೆ ನಡವಳಿಕೆ ಕಾರಣಕ್ಕೆ ಬೇಗ ಬಿಡುಗಡೆಯಾಗಕ್ಕೆ ಕುಮಾರಸ್ವಾಮಿಗೆ ಹೇಳೋದಕ್ಕೆ ಯವಸ್ಥೆ ಮಾಡಿದ್ದೆ ಕಣಣ್ಣ. ಅಷ್ಟರಲ್ಲಿ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡ ಅನ್ನ ಸುದ್ದಿ ಬಿತ್ತು ಕಣಣ್ಣ’ ಎಂದು ಹೇಳುವಷ್ಟರಲ್ಲಿ, ಲೋಕೇಶನ ಗಂಟಲು ಬಿಗಿದು ಬಂದು ಕಣ್ಣು ತುಂಬಿಕೊಂಡವು. ‘ಅಯ್ಯೊ ಯಂತ ದುರಂತನಯ್ಯ’ ಎಂದು ಉದ್ಘಾರ ತೆಗೆದ. ನಾನು, ಬರೋಬ್ಬರಿ 26 ವರ್ಷಕ್ಕೆ ಮಗುಚಿಕೊಂಡೆ. ಆಗ ಇದೇ ಲೋಕೇಶ್‍ನಂತೆ ನನಗೂ ದುಃಖ ಒತ್ತರಿಸಿ ಬಂದು ಗೆಳೆಯರು ಸುಮ್ಮನಿರಿಸಿದರೂ ಆಗದೇ ಗೊಳೋ ಎಂದು ಅತ್ತು ಬಿಟ್ಟಿದ್ದೆ. ಎದೆಯ ದುಃಖ ಬಸಿದ ನಂತರ ಸಮಾಧಾನ ಮಾಡಿಕೊಂಡು ಆಲಿಸಿದೆ. ನನ್ನ ಅಳುವಿಗೆ ಕಾರಣನಾಗಿದ್ದ ಗಂಗಾಧರ ಮೂರ್ತಿ ಮಗ ರವಿವರ್ಮನ ಅಳು ನಿಂತಿತ್ತು. ತನ್ನ ತಂದೆಯ ಶವಸಂಸ್ಕಾರ ಮುಗಿದ ಮೇಲೆ ಇದ್ದಕ್ಕಿದ್ದಂತೆ ಅಪ್ಪನನ್ನ ನೆನೆಸಿಕೊಂಡು ಯಾರೂ ಸುಮ್ಮನಿರಿಸಲಾಗದ ಅಳುವಿಗೆ ತುತ್ತಾಗಿತ್ತು. ಈಗ ಸುಸ್ತಾಗಿ ಸುಮ್ಮನಾಗಿತ್ತು. ಆ ದಾರುಣ ಸಂದರ್ಭ ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿತ್ತು. ಆವತ್ತು ಅಪ್ಪನನ್ನು ಕಳೆದುಕೊಂಡು ಮಗು ರವಿವರ್ಮ ಅಳುತ್ತಿದ್ದರೆ, ಈಗ ಮಗನನ್ನು ಕಳೆದುಕೊಂಡು ಲೋಕೇಶ್ ದುಃಖಿತನಾಗಿದ್ದ. ಬಹುಶಃ ಇಂತಹ ದುಃಖವೇ ಆತನನ್ನ ಶಿವರಾಮೇಗೌಡನ ವಿರುದ್ಧ ಸೇಡಿಗೆ ಪ್ರಚೋದಿಸಿರಬಹುದು ಎಂದುಕೊಳ್ಳುತ್ತಿರುವಾಗ, ಲೋಕೇಶ್ ‘ಮಗನ ಸಾವಿನ ದುಃಖ ಮರಿಯಕ್ಕೆ ಆಗಾಗ್ಗೆ ಕುಡಿತಿನಿ ಕಣಣ್ಣ’ ಎಂದ. ಈ ಬಗ್ಗೆ ನಾನು ಏನೂ ಹೇಳಲಾಗಲಿಲ್ಲ. ಆದರೆ, ಜೈಲಿನಲ್ಲಿದ್ದ ಅಪ್ಪ ಪೆರೋಲ್ ಮೇಲೆ ಬಂದು ಮಗನನ್ನ ಮಾತನಾಡಿಸಿ ಮುದ್ದಾಡಿ ಮತ್ತೆ ಜೈಲಿಗೆ ಹೋದಾಗ, ಆ ಹುಡುಗ ಏನು ಯೋಚಿಸಿರಬಹುದು. ಶಾಲೆಯಲ್ಲಿ ಯಾರಾದರೂ ಹಂಗಿಸಿರಬಹುದೇ ಎಂದೆಲ್ಲ ಆ ಯೋಚಿಸುತ್ತಿರುವಾಗ ‘ಬರ್ತಿನಿ ಕಣಣ್ಣ ಬಿಡುವು ಮಾಡಿಕೊಂಡು ಸಿಕ್ಕಿ ಯಲ್ಲನು ಹೇಳ್ತಿನಿ’ ಎಂದು ಹೊರಟ. ಈಗ ಅದ್ಯಾವುದರಿಂದ ಏನೂ ಪ್ರಯೋಜನವಿಲ್ಲ ಎಂದುಕೊಂಡರೂ, ಗಂಗಾಧರ ಮೂರ್ತಿ ಕೊಲೆ ನಡೆದು ಇಪ್ಪತ್ತಾರು ವರ್ಷಗಳಾಗಿವೆ. ಈ ನಡುವೆ ರಾಜಕೀಯವಾಗಿ ಮತ್ತು ಮತೀಯವಾಗಿ ನೂರಾರು ಕೊಲೆಗಳಾಗಿವೆ. ಆದರೂ ಇದೊಂದು ಕೊಲೆಗೆ ಸಂಬಂಧಿಸಿದವರು ಅಶಾಂತಿ ಮತ್ತು ದುಃಖದಿಂದ ತತ್ತರಿಸುತ್ತಿರುವುದು ಗೋಚರವಾಗುತ್ತಿದ್ದಂತೆ ಆಶ್ಚರ್ಯವಾಗತೊಡಗಿತು. ನಿಜಕ್ಕೂ ಅದೊಂದು ಅಮಾಯಕನ ಕೊಲೆಯಾಗಿತ್ತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಬಿವಿಪಿ ದಾಂಧಲೆ : ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ ಅಜೀಂ ಪ್ರೇಮ್ ಜಿ ವಿವಿ

ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯಕ್ಕೆ (ಎಪಿಯು) ಎಬಿವಿಪಿ ಸದಸ್ಯರು ನುಗ್ಗಿ ದಾಂಧಲೆ ನಡೆಸಿದ ಬಳಿಕ, ಕ್ಯಾಂಪಸ್‌ನಲ್ಲಿ ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ 'ಸ್ಪಾರ್ಕ್ ರೀಡಿಂಗ್ ಸರ್ಕಲ್' ಎಂಬ ಸಾಮಾಜಿಕ ಮಾಧ್ಯಮ ಪುಟದ ವಿರುದ್ಧ ಕುಲಸಚಿವರು...

2019ರ ಈಸ್ಟರ್ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥರ ಬಂಧನ

2019ರ ಈಸ್ಟರ್ ಭಾನುವಾರದ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಅಪರಾಧ ತನಿಖಾಧಿಕಾರಿಗಳು ಮಾಜಿ ರಾಜ್ಯ ಗುಪ್ತಚರ ಸೇವೆ (SIS) ಮುಖ್ಯಸ್ಥ ನಿವೃತ್ತ ಮೇಜರ್ ಜನರಲ್ ಸುರೇಶ್ ಸಲ್ಲೇ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್...

ಹೈದರಾಬಾದ್| ವಿಡಿಯೋ ಗೇಮ್ ಆಡಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ 12 ವರ್ಷದ ಬಾಲಕ

ವಿಡಿಯೋ ಗೇಮ್ ಆಡಿದ್ದಕ್ಕಾಗಿ ತಂದೆ ನಿರಂತರವಾಗಿ ಬೈಯುತ್ತಿದ್ದ ಕಾರಣ 12 ವರ್ಷದ ಬಾಲಕ (ಫೆ.26) ಗುರುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ ಎಂದು 'ಸಿಯಾಸತ್' ವರದಿ ಮಾಡಿದೆ. ಬಂಜಾರಾ ಹಿಲ್ಸ್‌ನ...

‘ಕೋಮು ಸಾಮರಸ್ಯ ಕದಡುವ ಸಾಧ್ಯತೆ’: ‘ದಿ ಕೇರಳ ಸ್ಟೋರಿ-2’ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

'ಕೇರಳ ಸ್ಟೋರಿ 2 : ಗೋಸ್ ಬಿಯಾಂಡ್' ಸಿನಿಮಾದ ಸೆನ್ಸಾರ್ ಪ್ರಮಾಣೀಕರಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಗುರುವಾರ (ಫೆ.26) ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಸಿನಿಮಾ ನಾಳೆ...

ಕೈದಿಗಳಿಗೆ ನಿಯತಕಾಲಿಕ ವೈದ್ಯಕೀಯ ತಪಾಸಣೆಯ ಹಕ್ಕಿದೆ: ಮದ್ರಾಸ್ ಹೈಕೋರ್ಟ್ 

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು, ಪ್ರತಿಯೊಬ್ಬ ಕೈದಿಯೂ ನಿಯತಕಾಲಿಕ ವೈದ್ಯಕೀಯ ತಪಾಸಣೆಗೆ ಅರ್ಹನಾಗಿದ್ದು, ಅಂತಹ ಆರೋಗ್ಯ ರಕ್ಷಣೆ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಗೆ...

ಡಿಜೆ ಮ್ಯೂಸಿಕ್ ವಿವಾದ: ಅಲಿಗಢದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ಮೇಲೆ ದಾಳಿ

ಉತ್ತರ ಪ್ರದೇಶ ರಾಜ್ಯದ ಅಲಿಗಢ ಸಮೀಪದ ಸುನಾನಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ಬಾರಾತ್ ಸಮಯದಲ್ಲಿ ಹಾಕಿದ್ದ ಡಿಜೆ ಮ್ಯೂಸಿಕ್‌ನಿಂದ ವಿವಾದ ಉಂಟಾಗಿದ್ದು, ದಲಿತ ಕುಟುಂಬದ ಮದುವೆ ಮೆರವಣಿಗೆಯ ಮೇಲೆ ದಾಳಿ ಮಾಡಲಾಗಿದೆ...

‘ನೆತನ್ಯಾಹು ಅವರ ನಿರ್ಲಜ್ಜ ಸಮರ್ಥನೆ’ : ಪ್ರಧಾನಿ ಮೋದಿಯ ನೆಸೆಟ್ ಭಾಷಣ ಟೀಕಿಸಿದ ಕಾಂಗ್ರೆಸ್

ಇಸ್ರೇಲ್ ಸಂಸತ್ ನೆಸೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಗುರುವಾರ (ಫೆ.26) ತೀವ್ರವಾಗಿ ಟೀಕಿಸಿದ್ದು, ಇದು ಅವರ ಆತಿಥೇಯರಾದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ 'ನಿರ್ಲಜ್ಜ ಸಮರ್ಥನೆ' ಎಂದಿದೆ. ಇಸ್ರೇಲ್ ರಾಷ್ಟ್ರದ...

ವಿವಾದಿತ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ನಿಷೇಧಿಸಿದ ಸುಪ್ರೀಂ ಕೋರ್ಟ್

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸಿದ್ದಪಡಿಸಿದ 8 ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿರುವ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ಎಂಬ ಅಧ್ಯಾಯದ ಕುರಿತು ಸುಪ್ರೀಂ ಕೋರ್ಟ್ ಗುರುವಾರ (ಫೆ.26) ತೀವ್ರ ಅಸಮಾಧಾನ...

ಕ್ಯೂಬಾ ಜಲಪ್ರದೇಶ ಪ್ರವೇಶಿಸಿದ ಅಮೆರಿಕಾ ಮೂಲದ ಸ್ಪೀಡ್‌ಬೋಟ್ ಮೇಲೆ ಕ್ಯೂಬಾ ಪಡೆಗಳಿಂದ ಗುಂಡಿನದಾಳಿ, ನಾಲ್ವರು ಸಾವು 

ಕ್ಯೂಬಾ: ಬುಧವಾರ ಕ್ಯೂಬಾದ ಪ್ರಾದೇಶಿಕ ಜಲಪ್ರದೇಶವನ್ನು ಪ್ರವೇಶಿಸಿದ ಫ್ಲೋರಿಡಾ-ನೋಂದಾಯಿತ ಸ್ಪೀಡ್‌ಬೋಟ್‌ನ ಮೇಲೆ ಕ್ಯೂಬಾ ಭದ್ರತಾ ಪಡೆಗಳು ಗುಂಡು ಹಾರಿಸಿವೆ. ಈ ವೇಳೆ ಬೋಟ್ ನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡರುವುದಾಗಿ ವರದಿಯಾಗಿದೆ....

ಬಾಲಕಿಯೊಂದಿಗೆ ಅನುಚಿತ ವರ್ತನೆ : ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲು

ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಮೇಲೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲ್ ರೋಝಾದ ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಶಹಾಪುರ...