Homeಕರ್ನಾಟಕಕರ್ನಾಟಕದಲ್ಲಿ ಕಾಂಗ್ರೆಸ್ ಗೆ ವಿಲನ್ ಆದರೆ ಸಿದ್ದರಾಮಯ್ಯ?

ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ವಿಲನ್ ಆದರೆ ಸಿದ್ದರಾಮಯ್ಯ?

ಮೋದಿ ಎದುರು ಸಮರ್ಥವಾದ ಸೈದ್ಧಾಂತಿಕ ನಾಯಕತ್ವ ನೀಡುವರೆಂಬ ನಿರೀಕ್ಷೆ ಹುಟ್ಟಿಸಿದ್ದ ಸಿದ್ದರಾಮಯ್ಯನವರು ಹೀಗೆ ಮಾಡಿದ್ದು ಹೌದೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

- Advertisement -
- Advertisement -

| ಸುನೀಲ್ ಶಿರಸಿಂಗಿ |

ಕರ್ನಾಟಕ ಕಾಂಗ್ರೆಸ್‍ನ ದಂಡನಾಯಕನಾಗಿ, ಯಶಸ್ವಿ ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಿ, ಬಡ ಮಧ್ಯಮ ವರ್ಗದ ಆಶಾಕಿರಣವಾಗಿದ್ದ ಸಿದ್ಧರಾಮಯ್ಯ ಇಂದು ಅದೇ ಕಾಂಗ್ರೆಸ್ ಪಕ್ಷದ ವಿಲನ್ ಆಗಿ ಕಾಣುತ್ತಿದ್ದಾರೆ. ಎಕ್ಸಿಟ್ ಪೋಲ್ ಬಂದತಕ್ಷಣ ಭಿನ್ನಮತದ ಮಾತುಗಳನ್ನು ಆಡಲು ಶುರು ಮಾಡಿದ ರೋಷನ್‍ಬೇಗ್‍ರ ಪ್ರಧಾನ ಟಾರ್ಗೆಟ್ ಸಿದ್ದರಾಮಯ್ಯನವರೇ ಆಗಿದ್ದರು. ಬಹುಶಃ ಈ ವರಸೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ, ಕಾಂಗ್ರೆಸ್ ವಲಯದಿಂದ ಹೊರಬಿದ್ದ ಅಸಮಾಧಾನದ ದನಿಗಳು ಹೀಗಿವೆ. ‘ನಾವು ಹೀಗೆ ಹೇಳಿದರೆ ಬೇರೆಯವರು ನಂಬದಿರಬಹುದು. ಆದರೆ, ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ನಾಯಕನಾಗಿ ಮಿಂಚುತ್ತಿರುವ ಸಿದ್ಧರಾಮಯ್ಯನವರಿಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನು ನೀಡಿದೆ. ಅವರ ಕನಸಾಗಿದ್ದ ಮುಖ್ಯಮಂತ್ರಿ ಪಟ್ಟವನ್ನು ಕಟ್ಟಿದೆ.. ಆದರೆ ಇದು ನಿಜ. ಕಳೆದೆರಡು ವರ್ಷಗಳಲ್ಲಿ ಅವರ ನಡೆಗಳನ್ನು ನೋಡುತ್ತಾ ಬಂದರೆ, ಅವರ ರಾಜಕೀಯ ಲೆಕ್ಕಾಚಾರದ ಒಳಸುಳಿಗಳನ್ನು ಬಿಡಿಸುತ್ತಾ ಬಂದರೆ ಕಾಣುವುದು ಅವರ ಸ್ವಾರ್ಥ ರಾಜಕೀಯ ಮತ್ತು ದುರಹಂಕಾರದ ನಡೆ ಬಿಟ್ಟು ಮತ್ತೇನು ಇಲ್ಲ.’

‘ಮುಖ್ಯಮಂತ್ರಿಯ ಪಟ್ಟ ತಪ್ಪಿದ್ದರಿಂದ ಹತಾಶಗೊಂಡಿದ್ದ ಅಹಿಂದ ನಾಯಕ ಸಿದ್ಧರಾಮಯ್ಯರನ್ನು, ಕಾಂಗ್ರೆಸ್ ಪಕ್ಷ ರತ್ನಗಂಬಳಿ ಹಾಸಿ ಸ್ವಾಗತಿಸಿತು. ನಂತರ ಪಕ್ಷದ ನಿಷ್ಠಾವಂತ ಮಲ್ಲಿಕಾರ್ಜುನ ಖರ್ಗೆಯವರ ಹಿರಿತನವನ್ನು ಕಡೆಗಣಿಸಿ ಮುಖ್ಯಮಂತ್ರಿಯನ್ನಾಗಿ ಮಾಡಿತು. ಅಧಿಕಾರ ಸಿಕ್ಕ ಕೆಲದಿನಗಳ ಮಟ್ಟಿಗೆ ಶಾಂತವಾಗಿದ್ದ ಸಿದ್ದು, ನಂತರ ತಮ್ಮ ಬತ್ತಳಿಕೆಯಿಂದ ಒಂದೊಂದೆ ಬಾಣಗಳನ್ನು ಬಿಡತೊಡಗಿದರು. ತಮ್ಮನ್ನು ಕಾಂಗ್ರೆಸ್ ಪಕ್ಷದಲ್ಲಿ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಎಚ್.ವಿಶ್ವನಾಥ್‍ರನ್ನು ನಿರ್ಲಕ್ಷಿಸಿ ದೂರ ಮಾಡಿಕೊಂಡರು.’

ಈ ಅವಧಿಯಲ್ಲಿ ಕಾಂಗ್ರೆಸ್‍ನ ಜನಪ್ರಿಯತೆಯನ್ನು ಹೆಚ್ಚಿಸಿದ್ದು ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಮತಪ್ರಮಾಣ ಹೆಚ್ಚಿಸುವಲ್ಲಿ ಸಿದ್ದರಾಮಯ್ಯನವರ ಪಾತ್ರ ಇಲ್ಲವೇ? ‘ಹೌದು ಇದೆ. ಅದರಲ್ಲಿ ಸಂಶಯವಿಲ್ಲ. ಜೊತೆಗೆ ಈ ಅವಧಿಯಲ್ಲಿ ಅವರು ಯಡಿಯೂರಪ್ಪನವರಿಗಿಂತ ದೊಡ್ಡ ಮಾಸ್ ಲೀಡರ್ ಆಗಿ ಬೆಳೆದರು. ಅವರನ್ನು ಯಾರೂ ನಿರ್ಲಕ್ಷಿಸಲಾಗದ ಪ್ರಮಾಣಕ್ಕೆ ಸಿದ್ದರಾಮಯ್ಯನವರ ಶಕ್ತಿ ಹೆಚ್ಚಿತು. ಅದೇ ಮುಳುವಾದದ್ದು. ಏಕೆಂದರೆ, ಒಂದು ಸಮತೋಲನ ಕಾಪಾಡಬೇಕಿದ್ದ ಕಾಂಗ್ರೆಸ್ ಪಕ್ಷ ಸಿದ್ದುರ ಅಲೆಯಲ್ಲಿ ತೇಲಿ ಹೋಯಿತು. ನಂತರ ಮಲ್ಲಿಕಾರ್ಜುನ ಖರ್ಗೆ ಹೆಗಲ ಮೇಲೆ ಬಂದೂಕ ಇಟ್ಟು ಮುಸ್ಲಿಂ ನಾಯಕ ಖಮರುಲ್ ಇಸ್ಲಾಂ ಮತ್ತು ಹಳೆ ಮೈಸೂರು ಭಾಗದ ಹಿರಿಯ ದಲಿತ ನಾಯಕ ಶ್ರೀನಿವಾಸ ಪ್ರಸಾದ್ ಮೇಲೆ ಗುಂಡು ಹಾರಿಸಿದರು. ಅಂದರೆ ಒಂದು ಹಂತದಲ್ಲಿ ರಾಜಕೀಯವಾಗಿ ಗೆದ್ದರು. ಆದರೆ ನಾಯಕನಾಗಿ, ಮುತ್ಸದ್ದಿಯಾಗಿ ಸೋಲುತ್ತಾ ಸಾಗಿದ್ದರು.’

‘2018ರ ವಿಧಾನ ಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸ್ಪಷ್ಟ ಸಾಧ್ಯತೆಗಳಿದ್ದವು. ಆದರೆ ಅವರ ಕೆಲವು ತಪ್ಪು ನಡೆ ಮತ್ತು ಅತೀ ಆತ್ಮವಿಶ್ವಾಸದಿಂದ ಆ ಅವಕಾಶವನ್ನು ಹಾಳುಮಾಡಿದರು. ಮೊದಲಿಗೆ ತಮ್ಮ ಸ್ವಂತ ಕ್ಷೇತ್ರವಾದ ವರುಣಾದಲ್ಲಿ ರಾಜಕೀಯದ ಆಸಕ್ತಿಯೇ ಇಲ್ಲದಿದ್ದ ತಮ್ಮ ಮಗನನ್ನು ಸ್ಥಾಪಿಸಲು ಹೊರಟಿದ್ದರು. ತಾವು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹಾರಿದ್ದು ಒಂದೆಡೆಯಾದರೆ, ಬಾದಾಮಿಯಲ್ಲಿ ಸ್ಪರ್ಧಿಸಿದ್ದು ಪಕ್ಷಕ್ಕೆ ದೊಡ್ಡ ಹೊಡೆತ ಕೊಟ್ಟಿತು. ಜೊತೆಗೆ ರಾಜ್ಯದಲ್ಲಿ ಪ್ರಬಲ ಕೋಮುಗಳ ಧೃವೀಕರಣದ ಸ್ಪಷ್ಟ ಸೂಚನೆಗಳಿದ್ದರು, ಅದಕ್ಕೆ ಪ್ರತಿ ತಂತ್ರ ಹೆಣೆಯುವುದನ್ನು ಬಿಟ್ಟು ದೊಡ್ಡಗೌಡರನ್ನು ಏಕವಚನದಲ್ಲಿ ನಿಂದಿಸುತ್ತಾ ಸಾಗಿದ್ದು ಪಕ್ಷಕ್ಕೆ ಇನ್ನಷ್ಡು ಹೊಡೆತ ಕೊಟ್ಟಿತು’.

‘ಪಕ್ಷ ಬಹುಮತ ಪಡೆಯದೆ JDS ಜೊತೆ ಅಧಿಕಾರ ಹಂಚಿಕೊಳ್ಳಬೇಕಾಗಿ ಬಂದಿದ್ದರಿಂದ ಇನ್ನಾದರು ಸಿದ್ದು ನಡೆಗಳಿಗೆ ಬ್ರೇಕ್ ಬೀಳುತ್ತೆ ಅಂತ ಅಂದುಕೊಂಡಿದ್ದ ಅವರ ಅಭಿಮಾನಿಗಳಿಗೆ ಭಾರಿ ನಿರಾಶೆ ಕಾದಿತ್ತು. ದೋಸ್ತಿ ಸರಕಾರದಲ್ಲಿ ಬಂಡಾಯವೆದ್ದ ಕಾಂಗ್ರೆಸ್ ಪಕ್ಷದ ಶಾಸಕರ ಬೆನ್ನಿಗೆ ಸಿದ್ದು ಕೈ ಇದ್ದದ್ದು ಹೈಕಮಾಂಡ್ ಗಮನಿಸಲೇ ಇಲ್ಲ.’ ಇಲ್ಲಿಂದಾಚೆಗೆ ಹೇಳುವ ಮಾತುಗಳು ಆಶ್ಚರ್ಯಕರವಾಗಿದೆ. ‘ಇಷ್ಟಾದರು ಸುಮ್ಮನಾಗದ ಸಿದ್ಧರಾಮಯ್ಯ ರಾಜ್ಯ ಕಾಂಗ್ರೆಸ್ ಪಕ್ಷದ ಪಕ್ಷಾತೀತ ನಾಯಕನಾಗಲು ಹೊರಟರು. ಅದರ ಭಾಗವಾಗಿ ಅವರ ಮುಂದಿನ ಗುರಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ.

ಅದಕ್ಕಾಗಿ ಬತ್ತಳಿಕೆಯಿಂದ ಹೊರಬಿದ್ದ ಬಾಣವೇ ಉಮೇಶ್ ಜಾಧವ್. ಧರ್ಮಸಿಂಗ್ ಸಾವಿನ ನಂತರ ಅನಾಥವಾಗಿದ್ದ ಜಾಧವರನ್ನು ಬಳಸಿ ಮಲ್ಲಿಕಾರ್ಜುನ ಖರ್ಗೆ ಬಗ್ಗುಬಡೆಯುವ ಪ್ಲಾನ್ ಮಾಡಿದರು. ಕಲಬುರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ಧರಾಮಯ್ಯ ದ್ರೋಹ ಬಗೆದರು. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಖರ್ಗೆ ಅವರು ಸಿದ್ಧರಾಮಯ್ಯರ ಜೊತೆಗೆ ನಿಂತಿದ್ದರು. ಖರ್ಗೆ ಅವರ ವಿರುದ್ಧ ಉಮೇಶ್ ಜಾಧವ ಅವರನ್ನು ಕಳಿಸುವ ಆಟ ಆಡಲು ಪ್ರಯತ್ನಿಸಿದರು. ಅದು ಕೈಮೀರಿ ಹೋದ ನಂತರ ಡ್ಯಾಮೇಜ್ ಕಂಟ್ರೋಲ್ ಮಾಡಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬಿಜೆಪಿ ಸೇರಲಿಕ್ಕೆ ಜಾರಕಿಹೊಳಿ ಜೊತೆ ಮುಂಬೈಗೆ ಹೋದ ಜಾಧವ್ ನಂತರ ಕಾಂಗ್ರೆಸ್ಸಿಗರ ಕೈಗೆ ಸಿಗಲಿಲ್ಲ.’

‘ಮಂಡ್ಯದಲ್ಲಿ ಗೌಡರ ಕುಟುಂಬವನ್ನು ಹತೋಟಿಯಲ್ಲಿ ಇಡುವುದಕ್ಕಾಗಿ ಚಿತ್ರನಟ ಅಂಬರೀಶ ಅವರ ಪತ್ನಿ ಸುಮಲತಾ ಅವರನ್ನು ಕಣಕ್ಕೆ ಇಳಿಯುವಂತೆ ನೋಡಿಕೊಂಡರು. ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಸಿದ್ಧರಾಮಯ್ಯ ಅವರ ಬಣದ ಕಾಂಗ್ರೆಸ್ಸಿಗರು ಅವರ ಜೊತೆಗಿದ್ದರು ಎಂಬುದು ಗುಟ್ಟಿನ ಸಂಗತಿಯೇನಲ್ಲ. ಸುಮಲತಾ ಅವರಿಗೆ ದೊರೆತ ಕಾಂಗ್ರೆಸ್ ಬೆಂಬಲದ ಕಾರಣದಿಂದ ಮೈಸೂರು ಮತ್ತಿತರ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‍ಗೆ ಜೆಡಿಎಸ್ ತನ್ನ ಸಂಪೂರ್ಣ ಸಹಕಾರ ನೀಡಲು ಸಾಧ್ಯವಾಗಲಿಲ್ಲ. ಕಲಬುರ್ಗಿಯ ಖರ್ಗೆಯವರ ಹಿನ್ನಡೆ ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ ಕ್ಷೇತ್ರಗಳ ಮೇಲೆಯೂ ಪರಿಣಾಮ ಬೀರಿತು. ಜೆಡಿಎಸ್ ತನ್ನ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಹೆಣಗಾಡುವಂತೆ ಮಾಡಿದ ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯ ಅದಕ್ಕಾಗಿ ಬೆಲೆ ತೆರಬೇಕಾಯಿತು.’

ಮೇಲಿನ ಮಾತುಗಳೆಲ್ಲವೂ ಸತ್ಯ ಎಂದು ಹೇಳಲಾಗದೇ ಇದ್ದರೂ, ಸಂಪೂರ್ಣ ಅಲ್ಲಗಳೆಯುವುದೂ ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯನವರ ನಡೆಗಳಿವೆ. ಮೋದಿ ಎದುರು ಸಮರ್ಥವಾದ ಸೈದ್ಧಾಂತಿಕ ನಾಯಕತ್ವ ನೀಡುವರೆಂಬ ನಿರೀಕ್ಷೆ ಹುಟ್ಟಿಸಿದ್ದ ಸಿದ್ದರಾಮಯ್ಯನವರು ಹೀಗೆ ಮಾಡಿದ್ದು ಹೌದೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...