Homeಮುಖಪುಟಅಸಾಧಾರಣ ಫಲಿತಾಂಶ: ನಾಲ್ಕು ಪಾಠಗಳು, ಅಪಾಯ ಮತ್ತ ಪರ್ಯಾಯದ ಅಗತ್ಯ

ಅಸಾಧಾರಣ ಫಲಿತಾಂಶ: ನಾಲ್ಕು ಪಾಠಗಳು, ಅಪಾಯ ಮತ್ತ ಪರ್ಯಾಯದ ಅಗತ್ಯ

ಸತ್ಯವೇನೆಂದರೆ, ನರೇಂದ್ರ ಮೋದಿಯವರಿಂದ ಮೋಹಭಂಗದ ಪ್ರಕ್ರಿಯೆ ಶುರುವಾಗಿತ್ತು. ಆದರೆ ಅವರ ಪರ್ಯಾಯವಾಗಿ ಯಾವುದೇ ವಿಶ್ವಾಸಾರ್ಹ ಮುಖ ಕಾಣಿಸಲಿಲ್ಲ.

- Advertisement -
- Advertisement -

| ಯೋಗೇಂದ್ರ ಯಾದವ್ |

ಒಂದು ಅಸಾಮಾನ್ಯ ಅಸಾಧಾರಣ ಚುನಾವಣೆಯ ಅಸಾಧಾರಣ ಫಲಿತಾಂಶ ನಮ್ಮೆದುರಿಗಿದೆ. ಬಿಜೆಪಿಯ ಗೆಲುವಿನ ಅಂತರ ಎಲ್ಲರನ್ನೂ ಚಕಿತಗೊಳಿಸಿದೆ ಎನ್ನುವ ಕಾರಣಕ್ಕಷ್ಟೇ ಈ ಚುನಾವಣೆ ಅಸಾಧಾರಣವಾಗಿಲ್ಲ. ಮೊದಲ ಬಾರಿ ಕಾಂಗ್ರೆಸ್ಸೇತರ ಸರಕಾರವು ಬಹುಮತದಿಂದ ಆಯ್ಕೆಗೊಂಡಿದ್ದಕ್ಕೂ ಈ ಚುನಾವಣೆ ಅಸಾಧಾರಣವಾಗಿಲ್ಲ. ಈ ಚುನಾವಣೆಯ ಪರಿಣಾಮಗಳು ನಮ್ಮ ಪ್ರಜಾಪ್ರಭುತ್ವದ ದೀರ್ಘಕಾಲೀನ ಭವಿಷ್ಯವನ್ನು ನಿರ್ಧರಿಸಲಿವೆ ಎನ್ನುವ ಕಾರಣಕ್ಕೆ ಈ ಚುನಾವಣೆ ಅಸಾಧಾರಣವಾಗಿದೆ.

ಒಂದಂತೂ ಸುಸ್ಪಷ್ಟ – ಈ ಚುನಾವಣೆಯಲ್ಲಿ ಬಿಜೆಪಿಗಿಂತ ನರೇಂದ್ರ ಮೋದಿಯವರಿಗೆ ಸ್ಪಷ್ಟ ಜನಾದೇಶ ಸಿಕ್ಕಿದೆ. ನಿಸ್ಸಂದೇಹವಾಗಿ ಈ ಚುನಾವಣೆಯಲ್ಲಿ ಬಹಳಷ್ಟು ತಾರತಮ್ಯವಾಗಿದೆ, ನಿಸ್ಸಂದೇಹವಾಗಿಯೂ ಚುನಾವಣಾ ಆಯೋಗವು ಅಂಪೈರ್ ಆಗಿರಬೇಕಾದ ಸಮಯದಲ್ಲಿ ಆಟಗಾರನಾಗಿ ನಿಂತಿದ್ದಿದೆ. ಆದರೆ ಬಿಜೆಪಿಯ ಗೆಲುವಿಗೆ ಈ ನೆಪಗಳನ್ನಷ್ಟೇ ಹೇಳಲಾಗದು. ವಾಸ್ತವವೇನೆಂದರೆ, ಮೋದಿ ಗೆದ್ದಿದ್ದು ಈ ಜನತೆ ಅವರಿಗೆ ಇನ್ನೊಂದು ಅವಕಾಶ ನೀಡಲಿಚ್ಛಿಸುತ್ತಾರೆ ಎನ್ನುವ ಕಾರಣದಿಂದ. ಈ ಜನಾದೇಶ ಕಲಿಸಿದ ಪಾಠಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಿದೆ ಅದರೊಂದಿಗೆ ಇದರಿಂದ ಆಗುವ ಅಪಾಯಗಳನ್ನೂ ನೋಡಬೇಕಿದೆ.

ಮೊದಲ ಪಾಠ ವಿರೋಧಪಕ್ಷಗಳಿಗಾಗಿ ಇದೆ. ಪ್ರಶ್ನೆ ಇರುವುದು, ಜನರು ಮೋದಿಗೆ ಇನ್ನೊಂದು ಅವಕಾಶ ಕೋಡಬೇಕೆಂದು ಯಾವ ಕಾರಣಕ್ಕೆ ಇಚ್ಛಿಸಿದರು? ಗೆಲುವಿನ ಅಂತರ ನೋಡಿದರೆ ಈ ಜನಾದೇಶ ಮೋದಿ ಸರಕಾರದ 5 ವರ್ಷಗಳ ರೆಕಾರ್ಡ್ ಮೇಲೆ ಸ್ವೀಕೃತಿಯ ಮೊಹರ್ ಹಾಕಿದಂತೆ ಎಂಬ ಭ್ರಮೆ ಉಂಟಾಗಬಹುದು. ಆದರೆ ಇದು ಸತ್ಯವಲ್ಲ. 2014 ಮತ್ತು 2019ರ ಗೆಲುವುಗಳು ಒಂದೆ ತರಹದ್ದು ಅನಿಸುತ್ತವೆ. ಆದರೆ ಈ ಎರಡೂ ಚುನಾವಣೆಗಳ ಇತಿಹಾಸದಲ್ಲಿ ಬಹಳ ದೊಡ್ಡ ಅಂತರವಿದೆ. 2014ರಲ್ಲಿ ಜನರ ಮನಸ್ಸಿನಲ್ಲಿ ಮತ್ತೊಂದು ಕಾಂಗ್ರೆಸ್‍ನ ಭ್ರಷ್ಟ ಮತ್ತು ನಿರುಪಯುಕ್ತ ಸರಕಾರದ ಬಗ್ಗೆ ಆಕ್ರೋಶವಿತ್ತು. ಹಾಗೂ ಎರಡನೆಯದಾಗಿ, ಮೋದಿಯವರ ಬಗ್ಗೆ ಆಶಾಭಾವನೆ ಇತ್ತು. ಈ ಸಲ ಮೋದಿ ಸರಕಾರದೊಂದಿಗೆ ಆಶಾಭಂಗ ಶುರು ಆಗಿತ್ತು, ಸಂದೇಹಗಳಿದ್ದವು, ಆತಂಕಗಳೂ ಇದ್ದವು. ಆದರೆ ಮತದಾರರು ವಿರೋಧಪಕ್ಷಗಳ ಕಡೆ ನೋಡಿದಾಗ ಅಲ್ಲಿ ಯಾವ ಭರವಸೆಯೂ ಕಂಡುಬರುತ್ತಿಲ್ಲ.

ಕೊನೆಗೆ ಮೋದಿ ವಿರುದ್ಧದ ಅಸಂತೋಷ ಮುಚ್ಚಿಹೋಯಿತು ಹಾಗೂ ವಿರೋಧಪಕ್ಷಗಳ ಮೇಲಿನ ಅವಿಶ್ವಾಸ ಕೆಲಸ ಮಾಡಿತು. ಈ ಜನಾದೇಶ ಎಷ್ಟು ಮೋದಿಯವರದ್ದಾಗಿದೆಯೋ ಅಷ್ಟೇ ವಿರೋಧಪಕ್ಷಗಳ ನಿರುಪಯುಕ್ತತೆಯ ವಿರುದ್ಧದ್ದೂ ಆಗಿದೆ.

ಎರಡನೆಯ ಪಾಠ, ಚುನಾವಣೆ ಗೆಲ್ಲುವ ಹಳೆಯ ತಂತ್ರಗಳು ಈಗ ಕೆಲಸ ಮಾಡುವುದಿಲ್ಲ. ಬರೀ ಮೋದಿ ವಿರೋಧದ ರಾಜಕೀಯ ಜನತೆ ಸ್ವೀಕರಿಸುವುದಿಲ್ಲ. ಇದರಿಂದ ನರೇಂದ್ರ ಮೋದಿಯವರಿಗಿಂತ ಮೋದಿ ವಿರೋಧಗಳಿಗೇ ಹೆಚ್ಚಿನ ನಷ್ಟವಿದೆ. ಅತ್ತ ಉತ್ತರಪ್ರದೇಶದ ಫಲಿತಾಂಶದಿಂದ ಸ್ಪಷ್ಟವಾಗಿದ್ದೇನೆಂದರೆ, ಜಾತಿಯ ಲೆಕ್ಕಾಚಾರಗಳನ್ನು ಮಾಡಿ ಜನರ ವಿಶ್ವಾಸವನ್ನು ಗಳಿಸುವುದು ಅಸಾಧ್ಯ. ಕೇವಲ ದಲಿತ, ಮುಸ್ಲಿಮ್ ಹಾಗೂ ಯಾದವ್ ಸಮೀಕರಣದ ಮಾತುಗಳನ್ನಾಡಿದರೆ ಈ ಜಾತಿಗಳ ಮತಗಳೂ ದಕ್ಕುವುದಿಲ್ಲ. ಪಕ್ಷಗಳ ಮೈತ್ರಿ ಉಪಯುಕ್ತ ಹಾಗೂ ಅವಶ್ಯಕವೂ ಇದೆ, ಆದರೆ ಬರೀ ಮೈತ್ರಿ ರಚಿಸುವುದರಿಂದ ಸಾಕಾಗುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಹಾಳೆಯ ಮೇಲೆ ಎಷ್ಟು ಬಲಶಾಲಿಯಾಗಿ ತೋರುತ್ತಿತ್ತು, ಮಹಾರಾಷ್ಟ್ರದ ಮೈತ್ರಿಯೂ ಗಟ್ಟಿಯಾಗಿತ್ತು, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿಯ ಮೈತ್ರಿಗಳೂ ತುಂಬಾ ದೊಡ್ಡವು, ಆದರೆ ಇವ್ಯಾವೂ ಕೆಲಸ ಮಾಡಲಿಲ್ಲ.

ಮೂರನೇ ಪಾಠ, ಜನಾದೇಶದ ನಿರ್ಮಾಣ ಮಾಡಬೇಕೆಂದರೆ, ಜನತೆಯನ್ನು ದೇಶದೊಂದಿಗೆ ಬೆಸೆಯುವುದು ಅತ್ಯವಶ್ಯಕ. ಮೋದಿಯವರು ದೇಶದ ಸರಾಸರಿ ನಾಗರಿಕನೊಂದಿಗೆ ಸಂವಾದ ಮಾಡಿದರು. ನಿಸ್ಸಂದೇಹವಾಗಿಯೂ ಅವರ ಸಂವಾದದಲ್ಲಿ ಸುಳ್ಳೇ ಹೆಚ್ಚಿತ್ತು. ನಿಸ್ಸಂದೇಹವಾಗಿಯೂ ಸಕಾರಾತ್ಮಕ ಅಂಶಗಳಿಗಿಂತ ನಕಾರಾತ್ಮಕ ಮಾತುಗಳೇ ಹೆಚ್ಚಿದ್ದವು. ಈ ಸಲ ಅವರ ಮಾತುಗಳಲ್ಲಿ ನಿರೀಕ್ಷೆಗಳಿಗಿಂತ ಆತಂಕವನ್ನು ಸೃಷ್ಟಿಸುವ ಪ್ರಯತ್ನವೇ ಹೆಚ್ಚಿತ್ತು, ಒಡೆದು ಆಳುವ ನೀತಿಯೂ ಇತ್ತು. ಪ್ರಧಾನ ಮಂತ್ರಿಯವರು ನಿಸ್ಸಂದೇಹವಾಗಿಯೂ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯ ಹುದ್ದೆಗೆ ಶೋಭೆಗೆ ತಕ್ಕದ್ದಲ್ಲದ್ದ ಬಹಳಷ್ಟು ಮಾತುಗಳನ್ನಾಡಿದರು. ನಿಸ್ಸಂದೇಹವಾಗಿಯೂ ದೇಶದ ಹೆಚ್ಚಿನ ಮಾಧ್ಯಮಗಳು ಮೋದಿಯವರ ಪರವಾಗಿ ಕೆಲಸ ಮಾಡಿದ್ದವು. ಆದರೆ ಈ ಎಲ್ಲವುಗಳ ಸಹಾಯದಿಂದ ಮೋದಿಯವರು ಒಬ್ಬ ಸರಾಸರಿ ಮತದಾರನಿಗೆ ಅವನು/ಳು ತನ್ನ ಲಾಭ-ನಷ್ಟಗಳಿಗಾಗಿ ಅಲ್ಲದೇ, ದೇಶಕ್ಕಾಗಿ ಮತ ನೀಡುತ್ತಿದ್ದಾರೆ ಎಂದು ಭಾವಿಸುವಂತೆ ಮಾಡಿದರು. ವಿರೋಧಪಕ್ಷಗಳ ಬಳಿ ಮತದಾರರ ಸಲುವಾಗಿ ಇಂತಹ ಯಾವುದೇ ದೊಡ್ಡ ಸಂದೇಶವೂ ಇದ್ದಿಲ್ಲ, ಯಾವ ದೊಡ್ಡ ಕನಸೂ ಇದ್ದಿಲ್ಲ ಮತ್ತು ಯಾವ ನಿರೀಕ್ಷೆಯೂ ಇದ್ದಿಲ್ಲ.

ನಾಲ್ಕನೇ ದೊಡ್ಡ ಪಾಠವೆಂದರೆ, ಜನರು ಇಂತಹ ಆಸೆಯ, ನಿರೀಕ್ಷೆಗಳ ಒಂದು ಸಗುಣ ಮುಖವನ್ನು ನೋಡಲಿಚ್ಛಿಸುತ್ತಾರೆ. ತಾವು ಭರವಸೆ ಇಡಬಲ್ಲಂತಹ ಒಬ್ಬ ನಾಯಕನನ್ನು ಬಯಸುತ್ತಾರೆ. ಜನರು ಒಂದು ವೇಳೆ ನರೇಂದ್ರ ಮೋದಿ ಅವರನ್ನು ಇಂತಹ ಮುಖದ ರೂಪದಲ್ಲಿ ಸ್ವೀಕರಿಸುತ್ತಾರೆ ಎಂದರೆ ಅದಕ್ಕೆ ಕಾರಣ ಅವರ ಕೆಲಸ ಜನರಿಗೆ ಇಷ್ಟ ಎಂದು ಇಲ್ಲ. ಸತ್ಯವೇನೆಂದರೆ, ನರೇಂದ್ರ ಮೋದಿಯವರಿಂದ ಮೋಹಭಂಗದ ಪ್ರಕ್ರಿಯೆ ಶುರುವಾಗಿತ್ತು. ಆದರೆ ಅವರ ಪರ್ಯಾಯವಾಗಿ ಯಾವುದೇ ವಿಶ್ವಾಸಾರ್ಹ ಮುಖ ಕಾಣಿಸಲಿಲ್ಲ. ಮೋದಿಯಿಂದ ನಿರಾಸೆಗೊಂಡ ಜನರು ರಾಹುಲ್ ಗಾಂಧಿಯ ಕಡೆ ನೋಡಿದಾಗ ಹೆದರಿಕೊಂಡು ಮತ್ತೇ ಮೋದಿಯವರಲ್ಲೇ ಸದ್ಗುಣಗಳನ್ನು ಹುಡುಕತೊಡಗುತ್ತಾರೆ. ಅಲ್ಲಿ ಸತ್ಯ ಕಾಣದಿದ್ದರೂ ಗಟ್ಟಿತನವಂತೂ ಅವರಿಗೆ ಕಾಣಿಸುತ್ತದೆ. ವಿರೋಧಪಕ್ಷಗಳ ಬಳಿ ಸಂದೇಶವೂ ಇರಲಿಲ್ಲ, ಸಂದೇಶಕಾರರೂ ಇರಲಿಲ್ಲ. ನಾವು ನೀವು ಇಷ್ಟಪಡಬಹುದು ಅಥವಾ ಬಿಡಬಹುದು ಆದರೆ, ವಿಶ್ವಾದ್ಯಂತ ನೇರವಾಗಿ ವ್ಯಕ್ತಿತ್ವಗಳ ಸ್ಪರ್ಧೆ ಆಗುತ್ತಿವೆ. ಹಾಗೂ ಇಂದು ದೇಶವು ಒಂದು ವಿಶ್ವಾಸಾರ್ಹ ಮುಖದ ಹುಡುಕಾಟದಲ್ಲಿದೆ.

ಈ ಜನಾದೇಶವು ಹೇಳಿದ ಪಾಠಗಳೊಂದಿಗೆ ಇದರ ಅಪಾಯಗಳನ್ನೂ ತಿಳಿದುಕೊಳ್ಳಬೇಕಿದೆ. ಇಂತಹ ಜನಾದೇಶ ಅಹಂಕಾರ ಹುಟ್ಟಿಸಬಲ್ಲುದು. ಹಿಂದು-ಮುಸ್ಲಿಮ್ ದ್ವೇಷ ಹುಟ್ಟಿಸಿ ಗೆದ್ದುಕೊಂಡ ಚುನಾವಣೆ ಭಯವನ್ನೂ ಹುಟ್ಟಿಸುತ್ತದೆ. ಮುಂದಿನ ಐದು ವರ್ಷಗಳಲ್ಲಿ ದೇಶದ ಸ್ವಧರ್ಮದ ಎರಡು ದೊಡ್ಡ ಆಧಾರಸ್ತಂಭಗಳಾದ ಲೋಕತಂತ್ರ ಮತ್ತು ವಿವಿಧತೆಗಳಿಗೆ ದೊಡ್ಡ ಅಪಾಯವಿದೆ. ಪ್ರಶ್ನೆ ಇರುವುದು ಈ ಪ್ರಶ್ನೆಗಳನ್ನು ಮುಖಾಮುಖಿ ಎದುರಿಸುವವರ್ಯಾರು? ಸದ್ಯದ ವಿರೋಧಪಕ್ಷಗಳು ಈ ಸ್ಪರ್ಧೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ದೇಶದ ಪ್ರಮುಖ ರಾಷ್ಟ್ರೀಯ ವಿರೋಧ ಪಕ್ಷದ ರೂಪದಲ್ಲಿ ಕಾಂಗ್ರೆಸ್ ಅಂತೂ ಈ ಕೆಲಸದಲ್ಲಿ ಅಪ್ರಸ್ತುತವಷ್ಟೇ ಅಲ್ಲ, ಆ ಕಾರ್ಯಕ್ಕೆ ಒಂದು ಅಡ್ಡಿಯಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಸ್ವಧರ್ಮದ ರಕ್ಷಣೆಗೆ ಒಂದು ಹೊಸ ಪರ್ಯಾಯದ ಅವಶ್ಯಕತೆ ಇದೆ. ಈ ಪರ್ಯಾಯದ ದಾರಿ ಸುಗಮವಾಗಿರುವುದಿಲ್ಲ. ಅದಕ್ಕೆ ಅಧಿಕಾರ, ಹಣ ಮತ್ತು ಮಾಧ್ಯಮ, ಈ ಮೂರರೊಂದಿಗೂ ಸೆಣಸುವ ಸವಾಲು ಎದುರಾಗುವುದು. ಆದರೆ, ಸ್ವಧರ್ಮದ ರಕ್ಷಣೆಯಲ್ಲಿ ತೊಡಗಿರುವ ಸಿಪಾಯಿಗಳೊಂದಿಗೆ ಈ ದೇಶದ ಮಣ್ಣಿದೆ, ದೇಶದ ಸಂವಿಧಾನವಿದೆ, ರಾಷ್ಟ್ರಪಿತ ಗಾಂಧೀಜಿಯ ಪರಂಪರೆಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...