Homeಮುಖಪುಟಅಟಲ್ ಸುರಂಗದಿಂದ ಸೋನಿಯಾ ಗಾಂಧಿ ಹೆಸರು ನಾಪತ್ತೆ: ಪ್ರತಿಭಟನೆ ಎಚ್ಚರಿಕೆ

ಅಟಲ್ ಸುರಂಗದಿಂದ ಸೋನಿಯಾ ಗಾಂಧಿ ಹೆಸರು ನಾಪತ್ತೆ: ಪ್ರತಿಭಟನೆ ಎಚ್ಚರಿಕೆ

2010ರ ಜುಲೈ 28ರಂದು ಈ ಸುರಂಗಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಡಿಗಲ್ಲು ಹಾಕಿದ್ದರು. ಈ ವೇಳೆ ಸೋನಿಯಾ ಅವರ ಹೆಸರಿದ್ದ ಫಲಕವನ್ನ ಇಲ್ಲಿ ಹಾಕಲಾಗಿತ್ತು.

- Advertisement -
- Advertisement -

ಅಕ್ಟೋಬರ್ 3 ರಂದು ಲೋಕಾರ್ಪಣೆಗೊಂಡ ಹಿಮಾಚಲಪ್ರದೇಶದ ರೋಹ್ಟಂಗ್​ನ ಅಟಲ್ ಸುರಂಗದಲ್ಲಿ, ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರಿದ್ದ ಫಲಕವನ್ನ ತೆಗೆದುಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹಿಮಾಚಲ ಪ್ರದೇಶದ ಕಾಂಗ್ರೆಸ್ ಮುಖಂಡರು ಶ್ರೀಮತಿ ಸೋನಿಯಾ ಗಾಂಧಿಯವರ ಹೆಸರನ್ನು ಹೊಂದಿರುವ ಅಡಿಪಾಯ ಫಲಕವನ್ನು ಅದರ ಉದ್ಘಾಟನೆಗೆ ಮುನ್ನ ಸುರಂಗದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಈ ಘಟನೆ ವಿರುದ್ಧ ಹಿಮಾಚಲ ಪ್ರದೇಶದ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯ ಎಚ್ಚರಿಕೆ ನೀಡಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರಿಗೆ ಪತ್ರ ಬರೆದಿದ್ದಾರೆ.

ಮನಾಲಿಯನ್ನು ಲಾಹೌಲ್-ಸ್ಪಿತಿ ಕಣಿವೆಯೊಂದಿಗೆ ಸಂಪರ್ಕಿಸುವ ಮತ್ತು ಲಡಾಖ್‌ನ ಲೇಹ್‌ಗೆ ಪ್ರಯಾಣದ ಸಮಯವನ್ನು ಐದು ಗಂಟೆಗಳವರೆಗೆ ಕಡಿಮೆ ಮಾಡುವ ಮಹತ್ವದ ಅಟಲ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅ.3ರಂದು ಉದ್ಘಾಟಿಸಿದರು.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್: ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸುತ್ತಿರುವ ಈ ಮಹಿಳೆ ವಾಜಪೇಯಿಯವರ ಸೊಸೆ ಅಲ್ಲ

ಅಟಲ್ ಸುರಂಗ
PC: Onmanorama

ಆದರೆ 2010ರ ಜುಲೈ 28ರಂದು ಈ ಸುರಂಗಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಡಿಗಲ್ಲು ಹಾಕಿದ್ದರು. ಈ ವೇಳೆ ಸೋನಿಯಾ ಅವರ ಹೆಸರಿದ್ದ ಫಲಕವನ್ನ ಇಲ್ಲಿ ಹಾಕಲಾಗಿತ್ತು. ಆದರೆ ಸುರಂಗ ಉದ್ಘಾಟನೆಗೂ ಮುನ್ನ ಫಲಕವನ್ನ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಈ ಕುರಿತು ಹಿಮಾಚಲಪ್ರದೇಶದ ಕಾಂಗ್ರೆಸ್​ ಅಧ್ಯಕ್ಷ ಕುಲ್ದೀಪ್ ಸಿಂಗ್​ ರಾಥೋಡ್, ಹಿಮಾಚಲಪ್ರದೇಶದ ಮುಖ್ಯಮಂತ್ರಿ ಜೈರಾಮ್​ ಠಾಕೂರ್ ಅವರಿಗೆ ಪತ್ರ ಬರೆದು, ಫಲಕ ತೆಗೆದುಹಾಕಿದ್ದರ ವಿರುದ್ಧ ಪ್ರತಿಭಟನೆ ಮಾಡುವುದಾಗಿ ​ಎಚ್ಚರಿಕೆ ನೀಡಿದ್ದಾರೆ. ಕಾಣೆಯಾಗಿರುವ ಅಡಿಪಾಯದ ಫಲಕವನ್ನ ಪುನಃ ಸ್ಥಾಪನೆ ಮಾಡದಿದ್ದರೆ, ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್​ ಪ್ರತಿಭಟನೆ ನಡೆಸಲಿದೆ. “ಇದು ಪ್ರಜಾಪ್ರಭುತ್ವ ವಿರೋಧಿ, ಅಸಾಂಪ್ರದಾಯಿಕ ಮತ್ತು ಕಾನೂನುಬಾಹಿರ ಹೆಜ್ಜೆಯಾಗಿದೆ” ಎಂದು ಪತ್ರದಲ್ಲಿ ಬರೆದಿದ್ದಾರೆ.

ಅಡಿಪಾಯದ ಫಲಕ ಕಾಣೆಯಾಗಿರುವ ಬಗ್ಗೆ ತನಿಖೆ ಮಾಡುವಂತೆ ಪಕ್ಷದ ಮುಖಂಡರಾದ ಗಿಯಾಲ್ಚನ್ ಠಾಕೂರ್ ಹಾಗೂ ಹರಿಚಂದ್​ ಶರ್ಮಾ ಕೀಲಾಂಗ್ ಹಾಗೂ ಮನಾಲಿಯಲ್ಲಿ ಪೊಲೀಸ್​ ಪ್ರಕರಣ ದಾಖಲಿಸಿದ್ದಾರೆ.

ಹಿಮಾಚಲದಲ್ಲಿ ರೋಹ್ಟಾಂಗ್‌ನಲ್ಲಿ ಸುರಂಗ ನಿರ್ಮಿಸುವ ನಿರ್ಧಾರವನ್ನು ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದಾಗ 2000ರ ಜೂನ್ 3 ರಂದು ತೆಗೆದುಕೊಳ್ಳಲಾಗಿತ್ತು. ಮಾಜಿ ಪ್ರಧಾನಿ ನೀಡಿದ ಕೊಡುಗೆಯನ್ನು ಗೌರವಿಸಲು ರೋಹ್ಟಾಂಗ್ ಸುರಂಗವನ್ನು ಅಟಲ್ ಸುರಂಗ ಎಂದು ಹೆಸರಿಸಲು ಕೇಂದ್ರ ಸಚಿವ ಸಂಪುಟ 2019 ರಲ್ಲಿ ನಿರ್ಧರಿಸಿತ್ತು.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಉದ್ಘಾಟಿಸಿದ ಅಟಲ್ ಸುರಂಗ ಎಂದು ಅಮೇರಿಕಾ ಸುರಂಗದ ಚಿತ್ರ ಹಂಚಿಕೊಂಡ ಮಾಧ್ಯಮಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...