ವಾಜಪೇಯಿ
PC: HNP

‘ನ್ಯೂಸ್ ಚಾನೆಲ್’ ಒಂದರಲ್ಲಿ ಮಹಿಳೆಯೊಬ್ಬರು ಕೇಂದ್ರ ಸರ್ಕಾರವನ್ನು ಟೀಕಿಸುವ ವಿಡಿಯೋವೊಂದು, ಆ ಮಹಿಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೊಸೆ’ ಎಂದು ವೈರಲ್ ಆಗಿದೆ.

ಆದರೆ ವೀಡಿಯೊದಲ್ಲಿರುವ ಮಹಿಳೆಯು ವಾಸ್ತವವಾಗಿ ಸಮಾಜಿಕ ಕಾರ್ಯಕರ್ತೆ ಅತಿಯಾ ಅಲ್ವಿ ಎಂಬವರಾಗಿದ್ದು, ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಜಂತರ್ ಮಂತರ್‌ನಲ್ಲಿ ‘ಎಚ್‌ಎನ್‌ಪಿ ನ್ಯೂಸ್’ ಚಾನೆಲ್‌ನಲ್ಲಿ ಮಾತನಾಡುತ್ತಿದ್ದರು.

ಇದನ್ನೂ ಓದಿ: ನರೇಂದ್ರ ಮೋದಿ ಗುಜರಾತ್‌ನಲ್ಲಿ ಕ್ರೂಸ್ ಹಡಗು ಸೇವೆಯನ್ನು ಪ್ರಾರಂಭಿಸಿದ್ದಾರೆಯೇ? ಇಲ್ಲಿದೆ ವಿವರ

ಕಾಂಗ್ರೆಸ್ ನಾಯಕಿ, ನಟಿ ನಗ್ಮಾ ”ಅಟಲ್‌‌ ಅವರ ಸೋದರ ಸೊಸೆ ಬಿಜೆಪಿಯ ಆಡಳಿತದ ಬಗ್ಗೆ ಮಾತನಾಡುತ್ತಿದ್ದಾರೆ, ಪುರುಷರು ನಿರುದ್ಯೋಗಿಗಳಾಗಿದ್ದಾರೆ ಮತ್ತು ಮಹಿಳೆಯರು ಅಸುರಕ್ಷಿತರಾಗಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಕ್ಲಿಪ್‌ಅನ್ನು ಹಂಚಿಕೊಂಡಿದ್ದಾರೆ.

ಇದರ ಆರ್ಕೈವ್ ಇಲ್ಲಿದೆ

ಸಾಮಾಜಿಕ ಜಾಲತಾಣದ ಬಳಕೆದಾರರು 2020 ರ ಜನವರಿಯಿಂದಲೂ ಈ ವಿಡಿಯೋವನ್ನು, ’ವಾಜಪೇಯಿ ಅವರ ಸೋದರ ಸೊಸೆ ಅಂತಿಮವಾಗಿ ಮೌನವನ್ನು ಮುರಿದಿದ್ದಾರೆ’ ಎಂಬ ಶೀರ್ಷಿಕೆಯಲ್ಲಿ ಹಂಚುತ್ತಲೇ ಇದ್ದಾರೆ.

ಇದರ ಆರ್ಕೈವ್ ಇಲ್ಲಿದೆ
ಇದರ ಆರ್ಕೈವ್ ಇಲ್ಲಿದೆ
ಇದರ ಆರ್ಕೈವ್ ಇಲ್ಲಿದೆ

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಎಡಿಟೆಡ್‌ ವಿಡಿಯೋ ಹಂಚಿದ ಮಧ್ಯಪ್ರದೇಶ ಕಾಂಗ್ರೆಸ್‌!

ಫ್ಯಾಕ್ಟ್‌‌ಚೆಕ್

ವೀಡಿಯೊದಲ್ಲಿರುವ ಮಹಿಳೆಯು ಅತಿಯಾ ಅಲ್ವಿಯಾ ಎಂಬವರಾಗಿದ್ದು, ಇವರು ವಾಜಪೇಯಿ ಅವರ ಸೋದರ ಸೊಸೆ ಅಲ್ಲ.

‘ಎಚ್‌ಎನ್‌ಪಿ ನ್ಯೂಸ್’ ಎಂಬ ಕೀವರ್ಡ್ ಮೂಲಕ ಹುಡುಕಾಡಿದಾಗ ಜನವರಿ 3 ರಂದು ಅಪ್‌ಲೋಡ್ ಮಾಡಲಾದ ಯೂಟ್ಯೂಬ್ ವೀಡಿಯೊವನ್ನು ಕಂಡುಕೊಳ್ಳಬಹುದು. ಅಲ್ಲಿಂದ ಈ ವಿಡಿಯೋವನ್ನು ತೆಗೆದುಕೊಳ್ಳಲಾಗಿದೆ.

ಜಂತರ್ ಮಂತರ್‌ನಲ್ಲಿ ನಡೆದ ಸಿಎಎ/ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯಲ್ಲಿ ಇವರು ಭಾಗಿಯಾಗಿದ್ದರು. ತಾನು ವಾಜಪೇಯಿ ಅವರ ಸೋದರ ಸೊಸೆ ಅಲ್ಲ ಎಂದು ಎಂದು ಸ್ವತಃ ಅತಿಯಾ ಅಲ್ವೀ ಹೇಳಿದ್ದಾರೆಂದು ದಿ ಕ್ವಿಂಟ್ ವರದಿ ಮಾಡಿದೆ.

ವಾಜಪೇಯಿ ಅವರ ಸೋದರ ಸೊಸೆ ಕರುಣಾ ಶುಕ್ಲಾ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವುದು ನಿಜ. ಆದರೆ ಅವರು 68 ವರ್ಷದವರಾಗಿದ್ದು, ವೈರಲ್ ವೀಡಿಯೊದಲ್ಲಿರುವ ಮಹಿಳೆಯು ಕಡಿಮೆ ವಯಸ್ಸಿನವರಾಗಿದ್ದಾರೆ.

ಮಧ್ಯದಲ್ಲಿರುವ ಮಹಿಳೆ ಕರುಣಾ ಶುಕ್ಲಾ ಆಗಿದ್ದು ಇವರು ಮಾಜಿ ಪ್ರಧಾನಿ ವಾಜಪೇಯಿ ಅವರ ಸೋದರ ಸೊಸೆ.(PC:PTI)

ಸ್ಪಷ್ಟವಾಗಿ ಹೇಳಬೇಕೆಂದರೆ ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸುವ ಮಹಿಳೆಯನ್ನು ಮಾಜಿ ಪ್ರಧಾನಿ ವಾಜಪೇಯಿ ಅವರ ಸೋದರ ಸೊಸೆ ಎಂದು ತಪ್ಪಾಗಿ ಹೇಳಲಾಗುತ್ತಿದೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್: ಕಂಗನಾ ರಾಣಾವತ್‌ ಚುನಾವಣೆಯಲ್ಲಿ ಬಲವಂತವಾಗಿ ಶಿವಸೇನೆಗೆ ಮತ ಚಲಾಯಿಸಿದರೆ?

ವಿಡಿಯೋನೋಡಿ: ಕುಮಾರಸ್ವಾಮಿಯಂಥ ಪೆದ್ದ ಯಾರೂ ಇಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ

LEAVE A REPLY

Please enter your comment!
Please enter your name here